Viral News: ಮದುವೆಗೆ ಮುನ್ನ ಬಯಲಾಯ್ತು ಸೀಕ್ರೆಟ್..! ವೇಸ್ಟ್ ಆಯ್ತು 30 ಲಕ್ಷ
Wedding went wrong: ಮದುವೆಗಿಂತ ಮೊದಲು ಪರಸ್ಪರ ಇಬ್ಬರೂ ಅರಿತಿರಬೇಕು. ಮದುವೆಯಾದ್ಮೇಲೆ ಗುಟ್ಟು ರಟ್ಟಾದ್ರೆ ಕಷ್ಟವಾಗುತ್ತದೆ. ಎಷ್ಟು ಸಾಧ್ಯವೂ ಅಷ್ಟು ಸಂಗಾತಿ ವಿಷ್ಯವನ್ನು ತಿಳಿಯಬೇಕು. ತಿಳಿಯದೆ ಮುಂದೆ ಹೆಜ್ಜೆಯಿಟ್ಟರೆ ಮನಸ್ಸಿನ ಜೊತೆ ಹಣವನ್ನೂ ಕಳೆದುಕೊಳ್ತೀರಿ.
ಮದುವೆ (Marriage) ಬಗ್ಗೆ ಪ್ರತಿಯೊಬ್ಬರೂ ಕನಸು (Dream) ಕಾಣ್ತಾರೆ. ಮದುವೆ ಜೀವನ (Life) ದಲ್ಲಿ ನಡೆಯುವ ಮಹತ್ವದ ಘಟ್ಟ. ವಿವಾಹವಾದ್ಮೇಲೆ ಜೀವನ ಸಂಪೂರ್ಣ ಬದಲಾಗುತ್ತದೆ. ಎರಡು ಹೃದಯಗಳ ಜೊತೆ ಎರಡು ಕುಟುಂಬಗಳು ಬೆರೆಯುತ್ತವೆ. ಬೇಡವೆಂದಾಗ ಎಸೆಯಲು ಮದುವೆ ಹರಿದ ಬಟ್ಟೆಯಲ್ಲ. ಅದೇ ಕಾರಣಕ್ಕೆ ಮದುವೆಯಾಗುವ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಬಯಸ್ತಾರೆ. ಮದುವೆಯಾಗುವ ವ್ಯಕ್ತಿಯ ಆಸಕ್ತಿ (Interest) ಯಿಂದ ಹಿಡಿದು ಅವರಿಗೆ ಇಷ್ಟವಾಗುವ ತಿಂಡಿಯವರೆಗೆ ಎಷ್ಟು ಸಾಧ್ಯವೋ ಅಷ್ಟು ತಿಳಿಯಲು ಯತ್ನಿಸುತ್ತಾರೆ. ಹಾಗೆ ಮದುವೆಗಿಂತ ಮೊದಲು ಅವ್ರ ಹಿನ್ನೆಲೆ, ಅವರ ಹಳೆ ಸಂಬಂಧದ ಬಗ್ಗೆ ತಿಳಿಯುವುದು ಕೂಡ ಮಹತ್ವ ಪಡೆಯುತ್ತದೆ. ಸರಿಯಾದ ಮಾಹಿತಿ ಇಲ್ಲದೆ ಮದುವೆಗೆ ಸಿದ್ಧವಾದ್ರೆ ಆಮೇಲೆ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಈ ಹುಡುಗಿ ಉತ್ತಮ ನಿದರ್ಶನ. ನಿಶ್ಚಿಂತೆಯ ವಿಷ್ಯವೆಂದ್ರೆ ಆಕೆ ಇನ್ನೂ ಮದುವೆಯಾಗಿಲ್ಲೆ ಎನ್ನುವುದು. ಸಾಮಾಜಿಕ ಜಾಲತಾಣದಲ್ಲಿ (social media) ಸಮಸ್ಯೆ ಹೇಳಿಕೊಂಡಿರುವ ಹುಡುಗಿ (Girl)ಗೆ ಅನೇಕರು ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಹೇಳಿಕೊಂಡ ಹುಡುಗಿ ಪ್ರಕಾರ, ಆಕೆ ಮದುವೆಗೆ ಸಿದ್ಧವಾಗಿದ್ದಾಳೆ. ಇದಕ್ಕಾಗಿ ಎಲ್ಲ ತಯಾರಿ ನಡೆದಿದೆ. ಮದುವೆ ಮಂಟಪ, ತಿಂಡಿಯಿಂದ ಹಿಡಿದು ಸಂಬಂಧಿಕರು, ಸ್ನೇಹಿತರಿಗೆ ಕರೆಯೋಲೆ ಹೋಗಿದೆಯಂತೆ. ಆದ್ರೆ ಈಗ ಸಮಸ್ಯೆ ಶುರುವಾಗಿ ಎನ್ನುತ್ತಾಳೆ ಹುಡುಗಿ.
ಇನ್ನೂ ವಿಚ್ಛೇದನ ನೀಡಿಲ್ಲ ಭಾವಿ ಪತಿ : ಪಾಪ ಹುಡುಗಿ ಮದುವೆಗೆ ಎಲ್ಲ ತಯಾರಿ ನಡೆಸಿದ್ದಾಳೆ. ಆದ್ರೆ ಆಕೆ ಕೈ ಹಿಡಿಯಬೇಕಿದ್ದ ಪತಿ ಮಾತ್ರ ಇನ್ನೂ ಮೊದಲ ಹೆಂಡತಿಗೆ ವಿಚ್ಛೇದನ ನೀಡಿಲ್ಲ. ಮೊದಲ ಪತ್ನಿ ಜೊತೆಯೇ ವಾಸ ಮುಂದುವರೆಸಿದ್ದಾನೆ. ಈ ವಿಷ್ಯವನ್ನು ಭಾವಿ ಪತಿ,ಹುಡುಗಿಗೆ ಹೇಳಿಲ್ಲವಂತೆ. ಆತನ ಪತ್ನಿ ವಿಷ್ಯ ತಿಳಿಸಿದ್ದಾಳಂತೆ.
30 ಲಕ್ಷ ಖರ್ಚು ಮೈ ಮೇಲೆ : ಮೊದಲೇ ಹೇಳಿದಂತೆ ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅನೇಕರು ಅದ್ಧೂರಿ ಮದುವೆಯನ್ನು ಇಷ್ಟಪಡ್ತಾರೆ. ಈ ಹುಡುಗಿ ಕೂಡ ಮದುವೆಗೆ ಮೊದಲೇ ಸಾಕಷ್ಟು ಖರ್ಚು ಮಾಡಿದ್ದಾಳೆ. ಈಗಾಗಲೇ 30 ಲಕ್ಷ ರೂಪಾಯಿ ಖರ್ಚಾಗಿದೆಯಂತೆ. ಆದ್ರೀಗ ಭಾವಿ ಪತಿಯ ಮೋಸದಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುತ್ತಾಳೆ ಹುಡುಗಿ.
ವಿಚ್ಛೇದನದ ಬಗ್ಗೆ ಏನು ಹೇಳ್ತಾನೆ ಪತಿ : ಮದುವೆಯಾಗಿ ಹೆಂಡತಿಯಿಂದ ದೂರ ಹೋಗಿ, ಇನ್ನೊಬ್ಬಳ ಜೊತೆ ಮದುವೆಯಾಗ್ಬೇಕೆಂದ್ರೆ ವಿಚ್ಛೇದನ ಅಗತ್ಯ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಈ ವ್ಯಕ್ತಿ ಹೇಳೋದೆ ಬೇರೆ. ಆತನಿಗೆ ತಾನು ವಿಚ್ಛೇದನ ಪಡೆದಿದ್ದೇನೋ ಇಲ್ಲವೋ ಎಂಬುದೇ ನೆನಪಿಲ್ಲವಂತೆ. ನಾನು ಪತ್ನಿ ಜೊತೆ ಇಲ್ಲ. ವರ್ಷದಿಂದ ಇಬ್ಬರ ವಾಸ ಬೇರೆಯಾಗಿದೆ. ವಿಚ್ಛೇದನ ಪಡೆದ ಬಗ್ಗೆ ನನಗೆ ನೆನಪಿಲ್ಲ. ಅದನ್ನು ವಿಚಾರಿಸ್ತೇನೆ ಎನ್ನುತ್ತಾನಂತೆ ಭಾವಿ ಪತಿ.
ನಿಮ್ಮ BIRTH ORDER ಸ್ವಭಾವ ಹೇಳುತ್ತೆ !
ಮದುವೆ ಮುರಿಯುವ ನಿರ್ಧಾರ : ಕಣ್ಣೆದುರಲ್ಲೇ ಭಾವಿ ಪತಿಯ ಮೋಸ ಹುಡುಗಿಗೆ ಗೊತ್ತಾಗಿದೆ. ಪತ್ನಿ ಜೊತೆಗಿದ್ದೂ ವಿಚ್ಛೇದನವಾಗಿದೆ ಎನ್ನುತ್ತಿರುವ ವ್ಯಕ್ತಿ ಜೊತೆ ಮದುವೆ ಮಾಡಿಕೊಳ್ಬೇಕಾ ಎಂಬ ಗೊಂದಲ ಆಕೆಗಿದೆ. ಮದುವೆ ಮುರಿದುಕೊಳ್ಳುವುದು ಸೂಕ್ತವೆನ್ನಿಸುತ್ತಿದೆ. ಆದ್ರೆ 30 ಲಕ್ಷ ರೂಪಾಯಿ ದಂಡವಾಯ್ತು ಎನ್ನುತ್ತಿದ್ದಾಳೆ ಹುಡುಗಿ.
Parenting Tips : ಮಕ್ಕಳ ಖಿನ್ನತೆ ಕಾರಣವಾಗುತ್ತೆ ಪಾಲಕರ ಈ ವರ್ತನೆ
ಸಾಮಾಜಿಕ ಜಾಲತಾಣ ಬಳಕೆದಾರರ ಕಮೆಂಟ್ : ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ತೋಡಿಕೊಳ್ತಿದ್ದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಮೂಲತಃ ನಿನ್ನನ್ನು ಆತ ಪ್ರೀತಿ ಮಾಡ್ತಿಲ್ಲ. ನಿನ್ನ ಮದುವೆಯಾಗುವ ಆಸಕ್ತಿ ಕೂಡ ಆತನಲ್ಲಿ ಇದ್ದಂತೆ ಕಾಣ್ತಿಲ್ಲ ಎಂದಿದ್ದಾರೆ ಕೆಲವರು. ನಾನು ನಿನ್ನ ಜಾಗದಲ್ಲಿದ್ದರೆ ಮದುವೆಯಾಗ್ತಿರಲಿಲ್ಲವೆಂದು ಮತ್ತೆ ಕೆಲವರು ಸಲಹೆ ನೀಡಿದ್ದಾರೆ.