ಮದ್ವೆ ಮಂಟಪಕ್ಕೆ ಟ್ರಾಕ್ಟರ್ ಡ್ರೈವ್ ಮಾಡ್ತಾ ಬಂದ ವಧು: ಸಹೋದರರ ಸಾಥ್
ಮಧ್ಯಪ್ರದೇಶದಲ್ಲಿ ವಧುವೊಬ್ಬಳು ಟ್ರ್ಯಾಕ್ಟರ್ ಏರಿ ಮದ್ವೆ ಮಂಟಪಕ್ಕೆ ಬಂದಿದ್ದಾಳೆ. ಇದರ ವಿಡಿಯೋವೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೋಪಾಲ್: ಇತ್ತೀಚೆಗೆ ವಧು ವರರು ಮದುವೆ ಮಂಟಪಕ್ಕೆ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ನೂತನ ವಧು ಕುದುರೆ ಮೇಲೆ ಮೇಲೆ ಬುಲೆಟ್ ಮೇಲೆ ಸಾಗಿ ಬಂದಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ಈಗಾಗಲೇ ಗಮನಿಸಿದ್ದೀರಿ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ವಧು ಟ್ರಾಕ್ಟರ್ ಚಲಾಯಿಸುತ್ತ ಮದುವೆ ಮಂಟಪಕ್ಕೆ ಬಂದಿದ್ದಾಳೆ ಈಕೆಗೆ ಈಕೆಯ ಇಬ್ಬರು ಸಹೋದರರು ಸಾಥ್ ನೀಡಿದ್ದಾರೆ.
ಮಧ್ಯಪ್ರದೇಶದ (Madhya Pradesh) ಬೇತುಲ್‌ನಲ್ಲಿ (Betul) ಈ ಘಟನೆ ನಡೆದಿದೆ. ವಧು ತನ್ನ ಮದುವೆಗೆ ಟ್ರ್ಯಾಕ್ಟರ್‌ನಲ್ಲಿ ಆಗಮಿಸುತ್ತಿದ್ದು, ಈಕೆಗೆ ಸಹೋದರರಿಬ್ಬರು ಸಾಥ್ ನೀಡುತ್ತಿದ್ದಾರೆ. ವೀಡಿಯೊದಲ್ಲಿ, ವಧು, ಭಾರತಿ ತಾಗ್ಡೆ ಅವರು ಕಪ್ಪು ಕನ್ನಡಕವನ್ನು ಧರಿಸಿ ಟ್ರಾಕ್ಟರ್ ಚಾಲನೆ ಮಾಡುತ್ತಾ ಮದುವೆ ಮಂಟಪಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.
ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಕೂಡ ಇದ್ದಾರೆ. ಟ್ರಾಕ್ಟರ್ (Tractor) ಚಾಲನೆ ಮಾಡುತ್ತಾ ಬಂದ ವಧುವಿನ ಆಗಮನ ನೋಡಿ ಎಲ್ಲರನ್ನು ಆಶ್ಚರ್ಯಗೊಂಡಿದ್ದಾರೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ (Javra village) ಈ ಮದುವೆ ನಡೆದಿದೆ. ಪಲ್ಲಕ್ಕಿ ಅಥವಾ ಕಾರಿನಲ್ಲಿ ವಧು ಮದುವೆ ಮಂಟಪ ಪ್ರವೇಶಿಸುವ ಕ್ರಮ ಹಳೆಯದಾಗಿದೆ ಹೀಗಾಗಿ ತಾವು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದಾಗಿ ವಧು ಭಾರತಿ ತಗ್ಡೆ ಹೇಳಿದರು.
ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ... ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ
ಮದುವೆ ದಿನ ರಾಣಿಯಂತೆ ಕಂಗೊಳಿಸಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಕನಸು. ಎಲ್ಲರ ಮದುವೆಗಿಂತ ತಮ್ಮ ಮದುವೆ ವಿಭಿನ್ನವಾಗಿರಬೇಕು ಎಂದು ಬಹುತೇಕರು ಬಯಸುತ್ತಾರೆ. ಅಲ್ಲದೇ ಎಲ್ಲರಿಗಿಂತ ಡಿಫರೆಂಟ್ ಆಗಿ ಮದುವೆ ಆಗೋದು ಇಂದಿನ ಟ್ರೆಂಡ್. ಅದಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಮದುವೆ ಹೆಣ್ಣು ಹೆಲಿಕಾಪ್ಟರ್‌ನಲ್ಲಿ, ಬುಲೆಟ್‌ನಲ್ಲಿ, ಎತ್ತಿನಗಾಡಿಯಲ್ಲಿ ಹೀಗೆ ವರ ಜೆಸಿಬಿಯಲ್ಲಿ ಬಂದಂತಹ ಹಲವು ವಿಡಿಯೋಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಅಲ್ಲದೇ ವಧು ಡಾನ್ಸ್ ಮಾಡುತ್ತಾ ಮದ್ವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೀರಿ. ಇದು ಕೂಡ ಅದೇ ತರಹದ ಒಂದು ವಿಡಿಯೋ, ವಧುವೊಬ್ಬಳು ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು, ಬೇಷ್ ಎಂದ ನೆಟ್ಟಿಗರು!
ಕಪ್ಪು ಬಣ್ಣದ ಕನ್ನಡಕ ಧರಿಸಿರುವ ವಧು ಕೆಂಪು ಬಣ್ಣದ ಲೆಹೆಂಗಾ ಹಾಗೂ ಚಿನ್ನಾಭರಣವನ್ನು ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದು, ತನ್ನ ಸಹೋದರಿಯರು ಹಾಗೂ ಸಹೋದರರು ಮತ್ತು ಕುಟುಂಬದವರೊಂದಿಗೆ ಹೂವಿನ ಹಾಸಿನ ಮೇಲೆ ಡಾನ್ಸ್ ಮಾಡುತ್ತಾ ನಡೆದು ಬರುತ್ತಿದ್ದಾಳೆ. ಈ ವೇಳೆ ಬಾಲಿವುಡ್ ಹಾಡೊಂದಕ್ಕೆ ಆಕೆ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾಳೆ.