Asianet Suvarna News Asianet Suvarna News

ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ... ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ

  • ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ
  • ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ
  • ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಘಟನೆ
Groom Takes JCB Ride to Reach Wedding Venue Amid Heavy Snowfall In Shimla akb
Author
Bangalore, First Published Jan 27, 2022, 6:37 PM IST

ಶಿಮ್ಲಾ(ಜ.27): ತಮ್ಮ ಮದುವೆಯನ್ನು  ಸದಾ ಕಾಲ ಸ್ಮರಣೀಯವಾಗಿಸಿಟ್ಟುಕೊಳ್ಳುವ ಸಲುವಾಗಿ ವಧು ವರರು ಮದುವೆ ಹಾಲ್‌ಗೆ ಬರುವ ವೇಳೆ ಎಲ್ಲಾ ಹಳೆಯ ಸಂಪ್ರದಾಯಗಳನ್ನು ಮುರಿದು ಬುಲೆಟ್ ಏರಿ ಟ್ರಾಕ್ಟರ್‌ ಏರಿ ಕುದುರೆ ಏರಿ ಬರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ವರ ಜೆಸಿಬಿ ಏರಿ ಬಂದಿದ್ದಾನೆ. ಹಾಗಂತ ಈತ ಬೇಕು ಎಂದೋ ಅಥವಾ ತನ್ನ ಮದುವೆಯನ್ನು ವಿಭಿನ್ನವಾಗಿಸಲೋ ಅಥವಾ ಗ್ರ್ಯಾಂಡ್ ಎಂಟ್ರಿ ಕೊಡುವ ಉದ್ದೇಶದಿಂದ ಈ ಸಾಹಸ ಮಾಡಿಲ್ಲ. ತಾನು ವಿವಾಹ (Wedding) ಮಂಟಪಕ್ಕೆ ಹೋಗುವ ದಾರಿಯುದ್ಧಕ್ಕೂ ಭಾರಿ ಹಿಮಪಾತವಾಗಿದ್ದರಿಂದ ಅನಿವಾರ್ಯವಾಗಿ ಯುವಕ ಈ ನಿರ್ಧಾರ ಮಾಡಬೇಕಾಯಿತು. 

ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾ (Shimla)ದಲ್ಲಿ ಈ ಘಟನೆ ನಡೆದಿದೆ. ಮದುವೆಯ ವಿಧಿ ವಿಧಾನ ನಡೆಸಲು ಮಂಟಪಕ್ಕೆ ಹೋಗುತ್ತಿದ್ದಾಗ ಭಾರೀ ಹಿಮಪಾತದಿಂದ ಅಡ್ಡಿ ಉಂಟಾದ ಕಾರಣ ಅವರು ಜೆಸಿಬಿ ಯಂತ್ರದಲ್ಲಿ ಸವಾರಿ ಮಾಡಲು ಬಯಸಿದರು. ಭಾರೀ ಹಿಮಪಾತ (Snowfall) ದಿಂದಾಗಿ, ಹಿಮಾಚಲ ಪ್ರದೇಶದಾದ್ಯಂತ ಎತ್ತರದ ಪ್ರದೇಶಗಳಲ್ಲಿನ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ. ಹೀಗಾಗಿ ವರನಿಗೆ ಜೆಸಿಬಿ ಯಂತ್ರವನ್ನು ಆಯ್ಕೆ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. 

@Anilkimta2 ಎಂಬ ಹೆಸರಿನ ಟ್ವಿಟ್ಟರ್‌(Twitter) ಬಳಕೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಮಾಚಲದಲ್ಲಿ ಭಾರೀ ಹಿಮಪಾತವಾಗುತ್ತಿರುವ ಕಾರಣ, ಹಿಮಾಚಲದ ಶಿಮ್ಲಾ ಜಿಲ್ಲೆಯಲ್ಲಿ ಎರಡು ಜೆಸಿಬಿ ಯಂತ್ರಗಳಲ್ಲಿ ಮದುವೆ ದಿಬ್ಬಣ ಸಾಗಿ ಬಂತು. ಜೆಸಿಬಿಗಳಲ್ಲಿ ದಿಬ್ಬಣ ಬಂತು ಎಂದು ಬರೆದಿರುವ ಅವರು 'ಹಿಮಾಚಲಿಸ್‌ ರಾಕ್ಸ್‌' ಎಂದು ಬರೆದಿದ್ದಾರೆ. 

ವೀಡಿಯೊದಲ್ಲಿ, ವರ ಮತ್ತು ಅವನ ದಿಬ್ಬಣ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮದುವೆಯ ಸ್ಥಳವನ್ನು ತಲುಪುವುದನ್ನು ಕಾಣಬಹುದು. ಈ ವಿಡಿಯೋದ ಹಿನ್ನೆಲೆಯಲ್ಲಿ ಹಿಮಾಚಲಿ ಹಾಡು  ಪ್ಲೇ ಆಗುತ್ತಿರುವುದನ್ನು ಕೇಳ ಬಹುದು. 

ಕೊರೋನಾ ಇರದಿದ್ರೂ ಜೆಸಿಬಿಯಲ್ಲಿ ಸಾಗಿಸಿ ಮಹಿಳೆ ಶವಸಂಸ್ಕಾರ..!

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿ ಹೀಗೆಯೇ ಒಂದು ಮದುವೆ ನಡೆದಿತ್ತು. ವಧು ಮತ್ತು ವರರು ತಮ್ಮ ಮದುವೆಯ ಸ್ಥಳವನ್ನು ತಲುಪಲು ಜೆಸಿಬಿ (JCB) ವಾಹನವನ್ನು ಬಳಸಿದ್ದರು. ಆದರೆ ವಧು-ವರರು ಐಷಾರಾಮಿ ಕಾರು ಸವಾರಿ ಮಾಡುವುದನ್ನು ಬಿಟ್ಟು ಮಣ್ಣು ಅಗೆಯುವ ಜೆಸಿಬಿ ಯಂತ್ರದ ಮೇಲೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಪಾಕಿಸ್ತಾನದ ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ( Ghulam Abbas Shah) ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. 

ಕೆಲ ದಿನಗಳ ಹಿಂದೆ ವಧುವೊಬ್ಬರು ಕುದುರೆ ಏರಿ ಮದುವೆ ಮಂಟಪಕ್ಕೆ ಬರುವ ಮೂಲಕ ಗಂಡು ಹೈಕಳ ಹುಬ್ಬೇರುವಂತೆ ಮಾಡಿದ್ದರು. ಹಾಗೆಯೇ ಗುರುಗ್ರಾಮದಲ್ಲಿ ಇಂಟಿರಿಯರ್‌ ಡಿಸೈನರ್ ವೊಬ್ಬರು ತಮ್ಮ ಸಖತ್‌ ಆಗಿ ಡಾನ್ಸ್‌ ಮಾಡುತ್ತಾ ಮದುವೆ ಮಂಟಪವನ್ನು ಪ್ರವೇಶಿಸಿ ಸೆನ್ಶೇಷನ್‌ ಕ್ರಿಯೇಟ್ ಮಾಡಿದ್ದರು. ಸಂಪ್ರದಾಯಬದ್ಧವಾದ ವಧುವಿನ ಆಗಮನದ ಸಂಪ್ರದಾಯವನ್ನು ಮುರಿದ ಈ ಇಂಟಿರಿಯರ್‌ ಡಿಸೈನರ್ ಸಬಾ ಕಪೂರ್‌, ಕೆಳಗೆ ಹಸಿರು ಹಾಸು ಹಾಗೂ ಮೇಲೆ ಹೂವಿನ ಅಲಂಕಾರದ ಚಪ್ಪರದ ಕೆಳಗೆ ಡಾನ್ಸ್‌ ಮಾಡುತ್ತಾ ಮದುವೆ ಸ್ಥಳವನ್ನು ಪ್ರವೇಶಿಸಿದ್ದರು.

ಬುಲೆಟ್ ಏರಿ ಬಂದ್ಲು ವಧು... ವಿಡಿಯೋ ವೈರಲ್‌

Follow Us:
Download App:
  • android
  • ios