ಮದುವೆ (Marriage) ದಿನ ದೀಪ ಆರಿ ಹೋದ್ರು ಆತಂಕಗೊಳ್ಳುವ ಜನರು ನಮ್ಮಲ್ಲಿದ್ದಾರೆ. ಆದ್ರೆ ಇಲ್ಲೊಂದು ಜೋಡಿ (Couple) ಮದುವೆ ದಿನವೇ ಮೈಗೆ ಬೆಂಕಿ (Fire) ಹಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social media) ಈ ವಿಡಿಯೋ ವೈರಲ್ (Video viral) ಆಗಿದೆ. 

ಮದುವೆ (Marriage ) ಪ್ರತಿಯೊಬ್ಬರ ಜೀವನ (Life) ದಲ್ಲೂ ಒಮ್ಮೆ ನಡೆಯುವಂತಹದ್ದು. ಆ ದಿನದ ನೆನಪು ಸದಾ ಇರಲಿ ಎಂದು ಎಲ್ಲರೂ ತಯಾರಿ ನಡೆಸ್ತಾರೆ. ತಮಗಿಷ್ಟವಾದ ಉಡುಪಿನಿಂದ ಹಿಡಿದು ಚಪ್ಪಲಿಯವರೆಗೆ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುವ ಜನರು, ಅದನ್ನು ಧರಿಸಿಯೇ ಮದುವೆ ಮಾಡಿಕೊಳ್ಳಲು ಮುಂದಾಗ್ತಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಯತ್ನಗಳು ಮದುವೆ ಸಂದರ್ಭದಲ್ಲಿ ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋ (Photo) ಗಳನ್ನು, ವಿಡಿಯೋ (Video) ಗಳನ್ನು ಜನರು ಹಂಚಿಕೊಳ್ತಿರುತ್ತಾರೆ. ಹಿಂದಿನ ಕಾಲದಂತೆ ಮದುವೆ ಈಗ ಸಾಂಪ್ರದಾಯಿಕವಾಗಿಲ್ಲ. ಮದುವೆ ದಿನ ಪದ್ಧತಿಯಂತೆ ಮದುವೆ ನಡೆಯಬೇಕೆಂಬ ನಿಯಮವೂ ಇಲ್ಲ. ಜನರು ತಮಗೆ ಬೇಕಾದಂತೆ ಮದುವೆ ಪದ್ಧತಿಯನ್ನು ಬದಲಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ಫೋಟೋ ಶೂಟ್ ಮಹತ್ವ ಪಡೆಯುತ್ತಿದೆ. ಈಗ ಮತ್ತೊಂದು ಮದುವೆ ಸುದ್ದಿಯಲ್ಲಿದೆ. ಮದುವೆ ದಿನ ಬೆಂಕಿಯನ್ನು ಅಪಶಕುನ ಎನ್ನುವವರಿದ್ದಾರೆ. ಆದ್ರೆ ದಂಪತಿ ಹುಚ್ಚಾಟಕ್ಕಿಳಿದಿದ್ದಾರೆ. ಜೀವಕ್ಕೆ ಅಪಾಯ ತರುವಂತ ಕೆಲಸ ಮಾಡಿದ್ದಾರೆ. ನವ ಜೋಡಿ ಬೆಂಕಿ ಹಚ್ಚಿಕೊಂಡಿದ್ದಾರೆ. ವಧು – ವರರ ಬಟ್ಟೆಗೆ ಬೆಂಕಿ ಬೀಳ್ತಿದ್ದಂತೆ ನೆರೆದಿದ್ದವರು ದಂಗಾಗಿದ್ದಾರೆ. ಸ್ಥಳದಲ್ಲಿ ಆತಂಕ ಮನೆ ಮಾಡಿದೆ. ಇದೀಗ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಎಲ್ಲರೂ ಅವರನ್ನು ನೋಡಿ ಆಶ್ಚರ್ಯ ಪಡ್ತಿದ್ದಾರೆ. ಇಂದು ಈ ದಂಪತಿ ಬಗ್ಗೆ ನಾವು ಹೇಳ್ತೇವೆ. 

ಮದುವೆ ದಿನ ಬೆಂಕಿ ಹಚ್ಚಿಕೊಂಡ ದಂಪತಿ ಯಾರು? : ಮದುವೆ ದಿನ ಯಾವುದೇ ಅಪಾಯವಾಗದಿರಲಿ ಎಂದು ಎಲ್ಲರೂ ಬಯಸ್ತಾರೆ. ಇಬ್ಬರು ಸುಖವಾಗಿ ನೂರು ಕಾಲ ಬಾಳಲಿ ಎಂದು ಹಿರಿಯರು ಆಶೀರ್ವದಿಸುತ್ತಾರೆ. ಆದ್ರೆ ಈ ದಂಪತಿ ಮದುವೆ ದಿನವೇ ಸಾಹಸಕ್ಕೆ ಕೈಹಾಕ್ತಿದ್ದಾರೆ. ಬೆಂಕಿ ಹಚ್ಚಿಕೊಂಡು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಸಾಹಸ ಕಲಾವಿದರಿಂದ ಸಾಹಸ : ಈ ಸಾಹಸ ಮಾಡಿದ ವಧು-ವರರು ವೃತ್ತಿಯಲ್ಲಿ ಸಾಹಸ ಕಲಾವಿದರು. ಹಾಲಿವುಡ್ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸ್ನೇಹ ನಂತ್ರ ಪ್ರೀತಿಯಾಗಿ ಬದಲಾಗಿತ್ತು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸೂತ್ರಗಳಿವು...

ಸಾಹಸ ಮಾಡಿದ್ದು ಹೇಗೆ? : ಇಬ್ಬರು ಸಾಹಸ ಕಲಾವಿದರಾದ ಕಾರಣ ಯಾವುದೇ ಅಪಾಯವಾಗದಂತೆ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸಿದ್ದರು. ಅದಕ್ಕೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿದ್ದರು. ಮೊದಲು ಇಬ್ಬರು ಹಿಂದಿನ ಭಾಗಕ್ಕೆ ಬೆಂಕಿ ಹಚ್ಚಿಕೊಳ್ತಾರೆ. ವಧು ಬಿಳಿ ಬಣ್ಣದ ಗೌನ್ ನಲ್ಲಿದ್ದರೆ ವರ ಕಪ್ಪು ಬಣ್ಣದ ಕೋಟ್ ಧರಿಸಿದ್ದ. ಇಬ್ಬರ ಬಟ್ಟೆಗೆ ಬೆಂಕಿ ಹಚ್ಚಲಾಗುತ್ತದೆ. ನಂತ್ರ ಇಬ್ಬರೂ ಕೈ ಬೀಸುತ್ತ ಮುಂದೆ ಬರ್ತಾರೆ. ನಂತ್ರ ಮುಂದೆ ಬಂದು ಕುಳಿತುಕೊಳ್ತಾರೆ. ಅವರಿಗೆ ನೀರು ಹಾಕಿ ಬೆಂಕಿಯನ್ನು ನಂದಿಸಲಾಗುತ್ತದೆ. 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ : ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ 13 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಧು – ವರರ ಈ ಸಾಹಸ ನೋಡಿ, ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಇಂಥಾ ಹೆಸರನ್ನಿಟ್ಟರೆ ಮಕ್ಕಳು ಯಾವಾಗ್ಲೂ ಚುರುಕಾಗಿರ್ತಾರೆ

ಮನೆಯಲ್ಲಿ ಮಾಡ್ಬೇಡಿ ಈ ಸಾಹಸ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುವುದು ಮಾತ್ರವಲ್ಲ ವೈರಲ್ ಆದ ವಿಡಿಯೋದಲ್ಲಿ ತೋರಿಸಿದಂತೆ ಹೊಸ ಪ್ರಯತ್ನಕ್ಕೆ ಜನರು ಕೈ ಹಾಕ್ತಾರೆ. ಹಾಗೆ ಮಾಡದಂತೆ ಅನೇಕರು ಸಲಹೆ ನೀಡಿದ್ದಾರೆ. ಏಕೆಂದರೆ ಈ ಸಾಹಸವನ್ನು ಮಾಡುತ್ತಿರುವ ಇಬ್ಬರೂ ವೃತ್ತಿಪರರು ಮತ್ತು ಇದನ್ನು ಸಂಪೂರ್ಣ ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆಯೊಂದಿಗೆ ಮಾಡಲಾಗಿದೆ. ಅವರು ತಮ್ಮ ಕೂದಲು, ಮುಖ ಮತ್ತು ಕೈಗಳಿಗೆ ಆಂಟಿ-ಬರ್ನ್ ಜೆಲ್ ಕೂಡ ಹಚ್ಚಿಕೊಂಡಿದ್ದರು.