MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
Teacher's Day Wishes 2026
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Life
  • Relationship
  • ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸೂತ್ರಗಳಿವು

ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸೂತ್ರಗಳಿವು

ಮದುವೆ (Marriage)ಯಾಗುವುದು ಸುಲಭ, ಆದರೆ ಅದನ್ನು ನಿಭಾಯಿಸುವುದು ತುಂಬಾ ಕಷ್ಟ. ಮದುವೆಯ ನಂತರ ಜೀವನವು (Life) ಇದ್ದಕ್ಕಿದ್ದಂತೆ ಬದಲಾಗುತ್ತದೆ. ಜವಾಬ್ಧಾರಿ ಕೂಡ ಹೆಚ್ಚುತ್ತದೆ. ಕೆಲವೊಮ್ಮೆ ಈ ಬದಲಾವಣೆ ಜೋಡಿಗಳ ಜೀವನದಲ್ಲಿ ಸಾಮರಸ್ಯದ ಕೊರತೆಗೆ ಕಾರಣವಾಗಬಹುದು. ಹಾಗಾದರೆ ವೈವಾಹಿಕ ಜೀವನ (Married life)ವನ್ನು ಉತ್ತಮಗೊಳಿಸಲು ಏನು ಮಾಡಬೇಕು ನೋಡೋಣ... 

1 Min read
Author : Suvarna News
| Updated : May 14 2022, 05:30 PM IST
Share this Photo Gallery
  • FB
  • TW
  • Linkdin
  • Whatsapp
17

ವೈವಾಹಿಕ ಜೀವನವನ್ನು(Married life) ಯಶಸ್ವಿಗೊಳಿಸಲು ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕು. ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ನೀವು ಸಹ ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸಲು ಬಯಸಿದರೆ, ಆಗ ಕೆಲವು ವಿಶೇಷ ರಹಸ್ಯಗಳು ನಿಮಗೆ ಸಹಾಯಕ್ಕೆ ಬರಬಹುದು. ಈ ವಿಷಯಗಳು ಪ್ರತಿದಿನ ನಿಮ್ಮ ವೈವಾಹಿಕ ಜೀವನವನ್ನು ಉತ್ತಮಗೊಳಿಸುತ್ತವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಒಬ್ಬರನ್ನೊಬ್ಬರು ತಿಳಿದುಕೊಳ್ಳಿ - ವೈವಾಹಿಕ ಜೀವನದಲ್ಲಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೀಗೆ ಮಾಡುವುದರಿಂದ, ಪರಸ್ಪರರ ಬಗ್ಗೆ ಪ್ರೀತಿ(Love) ಮತ್ತು ಸ್ನೇಹ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಅವರು ಪರಸ್ಪರರ ಬಗ್ಗೆ ಹೆಚ್ಚು ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಾರೆ, ಇದರಿಂದ ಸಂಬಂಧವು ಆಳವಾಗಿರುತ್ತದೆ. 

37

ಸಂಬಂಧದಲ್ಲಿ ಸ್ನೇಹವಿಲ್ಲದಿದ್ದರೆ(Friendship), ಪ್ರೀತಿಯ ಕೊರತೆ ಇರುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಸ್ನೇಹದ ಸಂಬಂಧವನ್ನು ಹೊಂದಿರುವುದು ಸಹ ಬಹಳ ಮುಖ್ಯ. ಉತ್ತಮ ಗಂಡ ಮತ್ತು ಹೆಂಡತಿಯಾಗಲು, ಮೊದಲನೆಯದಾಗಿ, ಒಬ್ಬರು ಪರಸ್ಪರ ಉತ್ತಮ ಸ್ನೇಹಿತರಾಗಿರಬೇಕು. ಸ್ನೇಹಿತರಾಗಿ ಮೋಜು ಮಾಡುವುದು ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

47

ವೈವಾಹಿಕ ಜೀವನದಲ್ಲಿ, ಪ್ರತಿಯೊಂದು ವಿಷಯದ ಬಗ್ಗೆ ಪರಸ್ಪರ ಮುಕ್ತವಾಗಿ ಮಾತನಾಡುವುದು ಮುಖ್ಯ. ನಿಜವಾದ ಪರಿವರ್ತನೆಯು ಯಾವಾಗಲೂ ವೈವಾಹಿಕ ಜೀವನದಲ್ಲಿ ಆಕ್ಸಿಜನ್ ನಂತೆ(Oxygen) ಕೆಲಸ ಮಾಡುತ್ತದೆ. ಮುಕ್ತವಾಗಿ ಮಾತನಾಡಿದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದರಿಂದ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. 

57

ಒಬ್ಬರಿಗೊಬ್ಬರು ಮಾಡಿದ ಸಣ್ಣ ಮತ್ತು ದೊಡ್ಡ ಪ್ರಯತ್ನಗಳನ್ನು ಯಾವಾಗಲೂ ಮೆಚ್ಚಿ. ಸಣ್ಣ ವಿಷಯಗಳಲ್ಲಿ ಉಂಟಾಗುವ ಸಂತೋಷವನ್ನು(Hapiness) ದೊಡ್ಡದಾಗಿರುತ್ತದೆ ಎಂದು ಹೇಳಲಾಗುತ್ತದೆ. ಸಣ್ಣ ಕ್ಷಣಗಳನ್ನು ಮುಕ್ತವಾಗಿ ಎಂಜಾಯ್ ಮಾಡಿ ಮತ್ತು ಸಂತೋಷವಾಗಿರಿ. ಇದರಿಂದ ನಿಮ್ಮ ಜೀವನ ನಿಜವಾಗಿಯೂ ಸುಖವಾಗಿರುತ್ತದೆ. 

67

ನಾವು ಸಂಗಾತಿಯೊಂದಿಗೆ ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿ(Emotional) ಮತ್ತು ಮಾನಸಿಕವಾಗಿಯೂ ಸಂಪರ್ಕ ಹೊಂದುವುದು ಮುಖ್ಯ. ಭಾವನಾತ್ಮಕವಾಗಿ ಸಂಬಂಧ ಹೊಂದಿದರೆ ಅದರಿಂದ ಅನ್ಯೋನ್ಯವಾಗಿ ಬಾಳಲು ಸಹಾಯ ಮಾಡುತ್ತದೆ. ಸಂಬಂಧವೂ ಉತ್ತಮವಾಗಿರುತ್ತದೆ. 

77

ಸಾಧ್ಯವಾದಷ್ಟು ಸಮಯವನ್ನು(Time) ಜೊತೆಯಾಗಿ ಕಳೆಯಲು ಪ್ರಯತ್ನಿಸಿ. ಯಾಕೆಂದರೆ ಇಬ್ಬರು ಜೊತೆಯಾಗಿ ಸಮಯ ಕಳೆದಷ್ಟು ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಇದರಿಂದ ಉತ್ತಮ ದಾಂಪತ್ಯ ಜೀವನ ನಿಮ್ಮದಾಗುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಸಂಬಂಧಗಳು

Latest Videos
Recommended Stories
Recommended image1
ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್​ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ
Recommended image2
ಮಗ ಬಂದು ನಾವು ಮುಸ್ಲಿಮರೇ ಕೇಳಿದ; ಆ ದಿನದ ಘಟನೆ ನೆನೆದ ಗೀತರಚನೆಕಾರ ಜಾವೇದ್‌ ಅಖ್ತರ್‌
Recommended image3
ನಿಮ್ಮ ಮಕ್ಕಳು ಹಿಂದಿನ ಜನ್ಮದಲ್ಲಿ ಏನಾಗಿದ್ದರು? Garuda Purana ಬಿಚ್ಚಿಟ್ಟ 7 ರಹಸ್ಯ ಸಂಕೇತ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved