ಈ ರಾಶಿಯವರು Dreamiest proposal ಮಾಡುವುದರಲ್ಲಿ ನಿಪುಣರು!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಹಿರಿಯರು ಹೇಳುತ್ತಾರೆ. ಹಾಗೆಯೇ ತಮ್ಮ ಮದುವೆ ಪ್ರಸ್ತಾಪವನ್ನು ತಮ್ಮ ಸಂಗಾತಿ ಸ್ವರ್ಗದಂತಹ ಜಾಗದಲ್ಲಿ ಮಾಡಬೇಕು ಎಂಬ ಕನಸನ್ನು ಹಲವರು ಕಂಡಿರುತ್ತಾರೆ. ಈ ರಾಶಿಯವರು ನಿಮ್ಮ ಕನಸನ್ನು ನನಸಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮನ್ನು ಮದುವೆಯಾಗುವ ಅಥವಾ ತಮ್ಮೊಂದಿಗೆ ಜೀವನ ಸಾಗಿಸುವ ವ್ಯಕ್ತಿ ತಮಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಬೇಕು ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂದೆಲ್ಲಾ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಎಲ್ಲರಿಗೂ ಇಂತಹ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡುವ ಸಂಗಾತಿ ಸಿಗುವುದಿಲ್ಲ. ಇಂತಹ ಮಧುರ ಕ್ಷಣಗಳ ಸವಿ ನೆನಪು ಮಾತ್ರ ಶಾಶ್ವತವಾಗಿ ನಮ್ಮಲ್ಲಿಯೇ ಉಳಿದುಕೊಂಡು ಇರುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ಪ್ರೀತಿಯನ್ನು ಸ್ವಪ್ನಮಯ (Dream) ರೀತಿಯಲ್ಲಿ ಒಪ್ಪಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಅಂತಹ ವ್ಯಕ್ತಿಗಳು ತಮ್ಮ ಪಾಲುದಾರರನ್ನು ನಿಜವಾಗಿಯೂ ಅದೃಷ್ಟವಂತರನ್ನಾಗಿ ಮಾಡುತ್ತಾರೆ. ಕರ್ಕಾಟಕದಿಂದ ಕನ್ಯಾರಾಶಿಯವರೆಗೆ, ಈ ರಾಶಿಚಕ್ರದ ಚಿಹ್ನೆಗಳು ಯಾರೆಂದು ಇಲ್ಲಿ ನೋಡಿ ಇವರು ತಮ್ಮ ಸಂಗಾತಿಯ ಕನಸನ್ನು ನನಸು ಮಾಡುವುದರಲ್ಲಿ ಅನುಮಾನ ಬೇಡ.
ಕರ್ಕಾಟಕ ರಾಶಿ (Cancer)
ಕರ್ಕಟಕ ರಾಶಿಯ ಗೆಳೆಯ ಅಥವಾ ಗೆಳತಿ ತಮ್ಮ ಸಂಗಾತಿಯನ್ನು ಓಲೈಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಅವರು ತಮ್ಮ ಸಂಗಾತಿಯ ಪ್ರೀತಿಯಲ್ಲಿ ಬಿದ್ದರೆ ಅವರಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಾಗಿ ಬಿಡುತ್ತಾರೆ. ಅವರು ತಮ್ಮ ಪಾಲುದಾರರ ಅಗತ್ಯಗಳಿಗೆ ನಂಬಲಾಗದಷ್ಟು ಗಮನಹರಿಸುತ್ತಾರೆ, ಇದರರ್ಥ ಅವರು ತಮ್ಮ ಸಂಗಾತಿಯ ಇಷ್ಟಗಳ ಕುರಿತು ಆಗಾಗ ಕೇಳಿಕೊಳ್ಳುತ್ತಾರೆ ಮತ್ತು ಅವರು ಹೇಗೆ ಪ್ರೇಮ (Love) ಪ್ರಸ್ತಾಪವನ್ನು ಇಷ್ಟಪಡುತ್ತಾರೆ ಎಂಬುದನ್ನು ನಿಖರವಾಗಿ ಗ್ರಹಿಸಿ ಸುಂದರವಾದ ಪ್ರಸ್ತಾಪವನ್ನು ಸಲ್ಲಿಸುವ ಮೂಲಕ ಸಂಗಾತಿಯ ಮನಸ್ಸನ್ನು ಗೆಲ್ಲುತ್ತಾರೆ.
Haircut ದಿನ ನಿಗದಿ ಮಾಡುವ ಮುನ್ನ, ಶುಭ-ಅಶುಭಗಳ ಕಡೆ ಇರಲಿ ಗಮನ
ಮಿಥುನ ರಾಶಿ (Gemini)
ಮಿಥುನ ರಾಶಿಯವರು ಜನರನ್ನು ಸಂತೋಷಪಡಿಸುತ್ತಾರೆ ಮತ್ತು ವಿಸ್ತಾರವಾದ (Elaborate) ಯೋಜನೆಯನ್ನು ಬಳಸಿಕೊಂಡು ತಮ್ಮ ಪ್ರೇಮಿಯೊಂದಿಗೆ ಮದುವೆಯನ್ನು ಪ್ರಸ್ತಾಪವನ್ನು ಮಾಡುತ್ತಾರೆ. ಇದಕ್ಕಾಗಿ ತಮ್ಮ ಪ್ರೇಮಿಯ ಕನಸಿನ ಪ್ರಸ್ತಾಪ (Praposal) ಹೇಗಿರಬೇಕು ಎಂದು ತಿಳಿದುಕೊಳ್ಳಲು ಅವರ ಆತ್ಮೀಯ ಸ್ನೇಹಿತರನ್ನು ಸಂಪರ್ಕಿಸುತ್ತಾರೆ. ಸಂಗಾತಿಗೆ ಇಷ್ಟವಾಗುವಂತ ಉಡುಗೊರೆಗಳನ್ನು ತರುತ್ತಾರೆ. ಅದಕ್ಕಾಗಿ ಸಂಗಾತಿಯ ಹತ್ತಿರದವರ ಸಹಾಯವನ್ನು ಕೋರುತ್ತಾರೆ. ಸಂಗಾತಿಯ ಸ್ನೇಹಿತರನ್ನು ಪ್ರಸ್ತಾಪಕ್ಕಾಗಿ ಸ್ಥಳಕ್ಕೆ ಕರೆತರುವಂತೆ ಕೇಳಬಹುದು.
ಕನ್ಯಾರಾಶಿ (Virgo)
ಕನ್ಯಾ ರಾಶಿಯ ಜನರು ತಮ್ಮ ಪ್ರತಿ ಪ್ರಯತ್ನಕ್ಕೂ ಬದ್ಧರಾಗಿರುತ್ತಾರೆ (Commit), ಕನ್ಯಾ ರಾಶಿಯವರು ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅವರು ಯಾರಿಗಾದರೂ ತಮ್ಮ ಪ್ರೀತಿಯನ್ನು ಹೇಳಿ ಒಪ್ಪಿಸಬೇಕು ಎಂದು ನಿರ್ಧರಿಸಿದಾಗ, ಆ ಕ್ಷಣವನ್ನು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿಸಲು ಸಾಕಷ್ಟು ಶ್ರಮಿಸುತ್ತಾರೆ. ತಮ್ಮ ಕೆಲಸದ ಸಾಧನೆಗಾಗಿ ಇಡೀ ರೆಸ್ಟಾರೆಂಟ್ (Restaurant) ಅನ್ನು ಬುಕ್ ಮಾಡುತ್ತಿರಲಿ, ಪಿಕ್ನಿಕ್ ಗೆ ವ್ಯವಸ್ಥೆ ಮಾಡುವುದು ಅಥವಾ ಸಂಗಾತಿಯ ಜೊತೆ ಸಮಯ (Time) ಕಳೆಯಲು ರಜೆಯನ್ನು ಬುಕ್ ಮಾಡುವುದು ಹೀಗೆ ಇಂತಹ ಹಲವಾರು ಸರ್ಕಸ್ ಮಾಡಲು ಸಿದ್ಧರಾಗಿರುತ್ತಾರೆ. ಒಟ್ಟಿನಲ್ಲಿ ಅವರ ಸಂಗತಿ ಇವರ ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು ಮಾತ್ರವೇ ಮುಖ್ಯವಾಗಿರುತ್ತದೆ.
ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದಾರ ? ಸರಿಯಾದ ಸಂಗಾತಿಯ ಆಯ್ಕೆ ಮಾಡಿದ್ದೀರಾ ತಿಳ್ಕೊಂಡು ಬಿಡಿ
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ತಮ್ಮ ಮದುವೆಯ (Wedding) ಬಗ್ಗೆ ಯೋಚಿಸಲು ಮತ್ತು ತಮ್ಮ ಸಂಗಾತಿಗೆ ಪ್ರೇಮ ಪ್ರಸ್ತಾಪಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಸಂಗಾತಿಯ ಮನವೊಲಿಸಲು ವಿಭಿನ್ನ ರೀತಿಯ ಯೋಜನೆಗಳನ್ನು ರೂಪಿಸುತ್ತಾರೆ. ಸಂಗಾತಿಯ ಇಷ್ಟ ಕಷ್ಟಗಳ ಕುರಿತಾಗಿ ಅವರಿಗೇ ತಿಳಿಯದ ಹಾಗೆ ಲಿಸ್ಟ್ (List) ತಯಾರಿಸಿ, ಅವರ ಕನಸಿನ ರೀತಿಯ ಮದುವೆ ಪ್ರಸ್ತಾಪದ ಬಗ್ಗೆ ತಿಳಿದುಕೊಂಡು ಅದನ್ನು ನೆರವೇರಿಸುವ ಮೂಲಕ ತಮ್ಮ ಸಂಗಾತಿಯನ್ನು ಮದುವೆಗೆ ಒಪ್ಪಿಸುತ್ತಾರೆ.
ತಮ್ಮ ಸಂಗಾತಿಯ ಖುಷಿ ಹಾಗೂ ಸಂತೋಷಕ್ಕಾಗಿ ಇಷ್ಟೊಂದು ಕಷ್ಟಪಡುವ ವ್ಯಕ್ತಿಗಳನ್ನು ಪಡೆದಿರುವವರೇ ಅದೃಷ್ಟವಂತರು.