ಮದುವೆ ಮನೆಯೆಂದರೆ ಅದು ಸದಾ ಗಡಿಬಿಡಿ ಗೊಂದಲದ ಗೂಡು ಲ್ಲವನ್ನು ಜೋಡಿಸುವ ಗೊಂದಲದಲ್ಲಿ ಅಗತ್ಯವಾಗಿರುವುದನ್ನೇ ಮನೆಯವರು ಮರೆತು ಬಿಡುತ್ತಾರೆ. ಇಲ್ಲೂ ಅದೇ ಆಗಿದೆ. ಸಿಂದೂರವನ್ನೇ ಮರೆತು ಕುಟುಂಬ ಮದುವೆ ಮಂಟಪಕ್ಕೆ ಹೋಗಿದೆ.
ನಮ್ಮ ದಕ್ಷಿಣ ಭಾರತದಲ್ಲಿ ಮದುವೆ ದಿನ ಕರಿಮಣಿ ಅಥವಾ ತಾಳಿ ಎಷ್ಟು ಮುಖ್ಯವೋ ಅದೇ ರೀತಿ ಉತ್ತರ ಭಾರತದಲ್ಲಿ ಸಿಂದೂರ ಅಥವಾ ಕುಂಕುಮ ಬಹಳ ಮುಖ್ಯ. ದಕ್ಷಿಣದಲ್ಲಿ ಮಾಂಗಲ್ಯಧಾರಣೆಯ ನಂತರ ಮದುವೆ ಆಗಿದೆ ಎಂಬುದು ಹೇಗೆ ಖಚಿತವಾಗುವುದೋ ಹಾಗೆಯೇ ಉತ್ತರ ಭಾರತದಲ್ಲಿ ಹೆಣ್ಣಿನ ಹಣೆಗೆ ಸಿಂದೂರ ಹಾಕಿದ ಬಳಿಕವೇ ಮದುವೆ ಆಗಿದೆ ಎಂಬುದು ಖಚಿತವಾಗುತ್ತದೆ. ಹೀಗಿರುವಾಗ ಮದುವೆ ಆಯೋಜಿಸಿದ ಕುಟುಂಬವೊಂದು ಮದುವೆ ಮನೆಗೆ ಹೋಗುವ ಗಡಿಬಿಡಿಯಲ್ಲಿ ಅಗತ್ಯವಾಗಿ ಬೇಕಿದ್ದ ಸಿಂದೂರವನ್ನೇ ಮರೆತು ಹೋಗಿದೆ. ಆದರೆ ಬ್ಲಿಂಕಿಟ್‌ನಿಂದಾಗಿ ಅನಾಹುತ ತಪ್ಪಿದೆ.
ಹೌದು ಮದುವೆ ಮನೆಯೆಂದರೆ ಅದು ಸದಾ ಗಡಿಬಿಡಿ ಗೊಂದಲದ ಗೂಡು, ಮನೆಯವರಿಗೆ ಮದುವೆ ಮುಗಿಯುವವರೆಗೂ ನೆಮ್ಮದಿ ಇರುವುದಿಲ್ಲ, ಸರಣಿಯಾಗಿ ನಡೆಯುವ ಮದುವೆ ಸಂಪ್ರದಾಯಗಳು ಅದಕ್ಕೆ ಕಾರಣ. ಹೀಗೆ ಸರಣಿ ಕಾರ್ಯಕ್ರಮಗಳು ನಡೆಯುವಾಗ ಗೊಂದಲ ಸಹಜ. ಎಲ್ಲವನ್ನು ಜೋಡಿಸುವ ಗೊಂದಲದಲ್ಲಿ ಅಗತ್ಯವಾಗಿರುವುದನ್ನೇ ಮನೆಯವರು ಮರೆತು ಬಿಡುತ್ತಾರೆ. ಇಲ್ಲೂ ಅದೇ ಆಗಿದೆ. ಸಿಂದೂರವನ್ನೇ ಮರೆತು ಕುಟುಂಬ ಮದುವೆ ಮಂಟಪಕ್ಕೆ ಹೋಗಿದೆ. ಸಿಂದೂರವನ್ನು ಗಂಡಿನ ಕಡೆಯವರು ತರಬೇಕಾಗುತ್ತದೆ. ಆದರೆ ಇಲ್ಲಿ ಸಿಂದೂರ ಮರೆತು ಬಂದ ಗಂಡಿನ ಕಡೆಯವರಿಗೆ ಹೋಮಕುಂಡಕ್ಕೆ ಏಳು ಸುತ್ತು ಬಂದು ಇನ್ನೇನು ಹಣೆಗೆ ಸಿಂಧೂರವಿಡಬೇಕು ಅನ್ನುವಷ್ಟರಲ್ಲಿ ಸಿಂದೂರ ಮರೆತು ಬಂದಿರುವುದು ಗೊತ್ತಾಗಿದೆ.
ವಧು ಪೂಜಾ ಹಾಗೂ ವರ ಹೃಷಿ ಅವರಿಗೆ ಸಿಂದೂರ್ ಮಿಸ್ ಆಗಿರುವುದರ ಅರಿವಾಗಿದ್ದು, ಇದರಿಂದಾಗಿ ಮದುವೆಯ ಕ್ರಮಗಳು ಕೆಲಕಾಲ ಸ್ಥಗಿತಗೊಂಡಿದೆ. ಗೊಂದಲ ಆತಂಕದ ಮಧ್ಯೆ ಮನೆಯವರನ್ನೇ ಯಾರಾನ್ನಾದರೂ ಶಾಪ್‌ಗೆ ಕಳುಹಿಸುವ ಬದಲು, ಕುಟುಂಬ ಸದಸ್ಯರೊಬ್ಬರಿಗೆ ಬ್ಲಿಂಕಿಟ್ ನೆನಪಾಗಿದ್ದು, ಬ್ಲಿಂಕಿಟ್‌ನಲ್ಲಿ ಅವರು ಸಿಂದೂರ್ ಆರ್ಡರ್ ಮಾಡಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಮದುವೆ ಮನೆಗೆ ಸಿಂದೂರ್ ತಲುಪಿದೆ. ನಂತರ ಮದುವೆ ಸುಗಮವಾಗಿ ನಡೆದಿದೆ.
ಈ ಮಹತ್ವದ ಮೂಹೂರ್ತ ಸಮಯದಲ್ಲಿ ಹೀಗೆ ಆಗಿದ್ದರಿಂದ ಆತಂಕಗೊಂಡಿದ್ದ ಕುಟುಂಬ ಬ್ಲಿಂಕಿಟ್ ಸಿಂದೂರವನ್ನು ಡೆಲಿವರಿ ಮಾಡುತ್ತಿದ್ದಂತೆ ಎಲ್ಲರ ಮುಖದಲ್ಲಿದ್ದ ಆತಂಕ ನಿವಾರಣೆಯಾಗಿದೆ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ vogueshaire ಎಂಬ ಪೇಜ್‌ನಿಂದ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಹೀಗೆ ಬರೆಯಲಾಗಿದೆ. ಇಷ್ಟೆಲ್ಲಾ ಹುಚ್ಚುತನದ ನಡುವೆಯೂ, ಪೂಜಾ ಮತ್ತು ಹೃಷಿ ಒಂದು ಸಣ್ಣ ಆದರೆ ಬಹಳ ಮುಖ್ಯವಾದ ವಿಷಯ ಮಿಸ್ ಆಗಿದೆ ಎಂದು ಅರಿತುಕೊಂಡರು. ಮೂಹೂರ್ತಕ್ಕೆ ಕೆಲ ನಿಮಿಷಗಳಿರುವಾಗ ಗಂಟೆ ಓಡುತ್ತಿದ್ದಾಗ ಬ್ಲಿಂಕಿಟ್‌ನ ಕ್ಲಿಕ್ ಡೆಲಿವರಿ ಅವರ ಸಮಯವನ್ನು ಉಳಿಸಿತು ಎಂದು ಬರೆಯಲಾಗಿದೆ.
ಇದನ್ನೂ ಓದಿ: ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ 5 ಕೋಟಿ ರೂ. ದಾನ ನೀಡಿದ ಅನಂತ್ ಅಂಬಾನಿ
ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ನನ್ನ ಮೈದುನನ ಮದುವೆಯಲ್ಲೂ ನಡೆಯಿತು. ಅಲ್ಲೂ ಬ್ಲಿಂಕಿಟ್ ಡೆಲಿವರಿ ಬಾಯ್ ತಂದು ಕೊಟ್ಟರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದ ಹೊರಗಿನ ವಿವಾಹ ತಾಣಗಳಲ್ಲಿ ಹೀಗೆ ಆದರೆ ಕತೆ ಏನು ಊಹಿಸಿಕೊಳ್ಳಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬ್ಲಿಂಕಿಟ್‌ಗೆ ಇದನ್ನು ಜಾಹೀರಾತು ಮಾಡಿಕೊಳ್ಳಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


