- Home
- Entertainment
- Sandalwood
- ಟೇಪ್ ಕಟ್ ಮಾಡಿ ಮಂಟಪಕ್ಕೆ ಎಂಟ್ರಿ: ಉಪ್ಪಿ ಪುತ್ರನ ಅದ್ಧೂರಿ ವಿವಾಹ- ನಟ ನಿರಂಜನ್ ಮದ್ವೆಗೆ ತಾರೆಗಳ ದಂಡು-Photos
ಟೇಪ್ ಕಟ್ ಮಾಡಿ ಮಂಟಪಕ್ಕೆ ಎಂಟ್ರಿ: ಉಪ್ಪಿ ಪುತ್ರನ ಅದ್ಧೂರಿ ವಿವಾಹ- ನಟ ನಿರಂಜನ್ ಮದ್ವೆಗೆ ತಾರೆಗಳ ದಂಡು-Photos
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಮತ್ತು ಸಂಜನಾ ಬಿ ರಾಜ್ ಅವರ ಮದುವೆ ಅದ್ಧೂರಿಯಾಗಿ ಜರುಗಿದೆ. ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಮುಂದೆ ನಿಂತು ಶಾಸ್ತ್ರಗಳನ್ನು ನೆರವೇರಿಸಿ, ನವಜೋಡಿಗೆ ದುಬಾರಿ ಒಡವೆಗಳನ್ನು ಉಡುಗೊರೆಯಾಗಿ ನೀಡಿದರು. ಈ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾದರು.

ಉಪೇಂದ್ರ ಮನೆಯಲ್ಲಿ ಮದುವೆ ಸಂಭ್ರಮ
ಕಳೆದ ಒಂದು ವಾರದಿಂದ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಮಗ ನಿರಂಜನ್ ಕಲ್ಯಾಣ ಅವರು ಸಂಜನಾ ಬಿ ರಾಜ್ ಅವರ ಕೈಹಿಡಿದಿದ್ದು, ಇದಾಗಲೇ ರಿಸೆಪ್ಷನ್ ಸೇರಿದಂತೆ ಮದುವೆಯ ಸಂಭ್ರಮ ಮನೆ ಮಾಡಿದೆ. ಇಂದು ಸಪ್ತಪದಿ ತುಳಿದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಉಪೇಂದ್ರ ದಂಪತಿ ಮುಂದು
ನಿರಂಜನ್ ಅವರ ಮದುವೆಯಲ್ಲಿ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಸಂಭಮದಿಂದ ಮುಂದೆ ನಿಂತು ಎಲ್ಲಾ ಶಾಸ್ತ್ರಗಳನ್ನ ನೆರವೇರಿಸಿದ್ದಾರೆ.
ಟೇಪ್ ಕಟ್ ಮಾಡಿ ಎಂಟ್ರಿ
ತಮ್ಮದೇ ಮದುವೆಗೆ ನಟ ನಿರಂಜನ್ ಜೋಡಿ ಟೇಪ್ ಕಟ್ ಮಾಡಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿತ್ತು.
ದುಬಾರಿ ಗಿಫ್ಟ್
ಅಣ್ಣನ ಮಕ್ಕಳಂದ್ರೆ ಉಪೇಂದ್ರಗೆ ಅತೀವ ಪ್ರೀತಿ. ಆದ್ದರಿಂದ ರಿಸೆಪ್ಷನ್ ಸಮಯದಲ್ಲಿ ನಿರಂಜನ್ ಅವರಿಗೆ ಉಪೇಂದ್ರ ದುಬಾರಿ ಬೆಲೆಯ ಚಿನ್ನದ ಬ್ರೇಸ್ಲೆಟ್ ತೊಡಿಸಿದರು. ಇನ್ನೂ ಸೊಸೆ ಸಂಜನಾ ಬಿ ರಾಜ್ಗೆ ಪ್ರಿಯಾಂಕಾ ಉಪೇಂದ್ರ ದುಬಾರಿ ಬೆಲೆಯ ಚಿನ್ನದ ನೆಕ್ಲೆಸ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ.
ತಾರೆಗಳ ದಂಡು
ಮದುವೆಗೆ ತಾರೆಗಳ ದಂಡೇ ಬಂದಿದೆ. ಹಿರಿಯ ನಟಿ ಬಿ.ಸರೋಜಾದೇವಿ, ನಟಿಯರಾದ ಮಾಲಾಶ್ರೀ, ಸುಧಾರಾಣಿ, ಮಾಳವಿಕಾ ಅವಿನಾಶ್, ಅಶ್ವಿನಿ ಪುನೀತ್ ರಾಜ್ ಸೇರಿದಂತೆ ಸ್ಯಾಂಡಲ್ವುಡ್ ಮತ್ತು ಕಿರುತೆರೆ ನಟ-ನಟಿಯರು ಆಗಮಿಸಿದ್ದಾರೆ.
ಸಿನಿಮಾಗಳಲ್ಲಿ ನಟನೆ
ನಿರಂಜನ್ ಅವರು, ಸುಧೀಂದ್ರ - ವೀಣಾ ದಂಪತಿಯ ಪುತ್ರನಾಗಿದ್ದಾರೆ. ಇದಾಗಲೇ ಕೆಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಸೆಕೆಂಡ್ ಹಾಫ್’, ‘ಸೀತಾ ಪಯಣಂ’ ಮುಂತಾದ ಸಿನಿಮಾಗಳಲ್ಲಿ ನಟ ನಿರಂಜನ್ ಸುಧೀಂದ್ರ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













