ಸಿಎಂ ವಿಜಯ್ ದಾಂಪತ್ಯ ಕೋಲಾಹಲ ಬಳಿಕ ಸಚಿವ ಆಧವ್ ಸಂಸಾರದಲ್ಲಿ ಬಿರುಕು, ಡಿವೋರ್ಸ್ ಅಧಿಕೃತ
ತಮಿಳುನಾಡು ಸಿಎಂ, ನಟ ವಿಜಯ್ ಸಂಸಾರದ ಕೋಲಾಹಲ ಸದ್ಯಕ್ಕೆ ತಣ್ಣಗಾಗಿದೆ. ಆದರೆ ವಿಜಯ್ ಸರ್ಕಾರದಲ್ಲಿ ಸಚಿವರಾಗಿರುವ ಆಧವ್ ಅರ್ಜುನ್ ದಾಂಪತ್ಯ ಮುರಿದು ಬಿದ್ದಿದೆ. ಡಿವೋರ್ಸ್ ಕುರಿತು ಪತ್ನಿ ಡೈಸಿ ಬಹಿರಂಗಪಡಿಸಿದ್ದೇನು?

ವಿಜಯ್ ಬಳಿಕ ಆಧವ್ ದಾಂಪತ್ಯದಲ್ಲಿ ಬಿರುಕು
ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪತ್ನಿ ಜೊತೆಗಿನ ದಾಂಪತ್ಯ ಮನಸ್ತಾಪ ತೀವ್ರಗೊಂಡಿತ್ತು. ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಪ್ರಕರಣ ತಣ್ಣಗಾಗಿತ್ತು. ಇದೀಗ ವಿಜಯ್ ಸರ್ಕಾರ ಸಚಿವ ಆಧವ್ ಅರ್ಜುನಾ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಆಧವ್ ಅರ್ಜುನ ಹಾಗೂ ಪತ್ನಿ ಡೈಸಿ ಮಾರ್ಟಿನ್ ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗಿದ್ದಾರೆ.
14 ವರ್ಷದ ದಾಂಪತ್ಯ ಜೀವನ ಅಂತ್ಯ
ಆಧವ್ ಅರ್ಜುನ ಹಾಗೂ ಡೈಸಿ ಮಾರ್ಟಿನ್ ಮದುವೆಯಾಗಿ 14 ವರ್ಷ ಉರುಳಿದೆ. ಇದೀಗ ಇಬ್ಬರು ಬೇರೆಯಾಗಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರನಿದ್ದಾನೆ. ವಿಚ್ಚೇದನ ಕುರಿತು ಅಧಿಕೃತ ಘೋಷಣೆ ಮಾಡಿರುವ ಡೈಸಿ, ನಾವಿಬ್ಬರು ಬೇರೇ ಬೇರೆ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಹಲವು ಹಂತಗಳನ್ನು ಒಟ್ಟಿಗೆ ಸಾಗಿದ್ದೇವೆ. ಇದೀಗ ಬೇರೆ ಬೇರೆಯಾಗುತ್ತಿದ್ದೇವೆ. ಆಧವ್ ಅರ್ಜುನ್ ಮೇಲಿರುವ ಗೌರವ ಹಾಗೇ ಇರಲಿದೆ ಎಂದು ಡೈಸಿ ಸ್ಪಷ್ಟಪಡಿಸಿದ್ದಾರೆ.
ಮಗುವಿನ ಪಾಲನೆ ನಮ್ಮ ಅದ್ಯತೆ
ನಾವು ಬೇರೆಯಾಗುತ್ತಿದ್ದೇವೆ, ಆದರೆ ಮದುವಿನ ಪಾಲನೆ, ಆರೈಕೆ ನಮ್ಮ ಆದ್ಯತೆಯಾಗಿದೆ. ನಾವಿಬ್ಬರು ಜೀವನ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಆದರೆ ನಮ್ಮ ಮಗುವಿಗೆ ನಾವು ಸಹ ಪೋಷಕರಾಗಿದ್ದೇವೆ. ಮಗುವಿನ ಸಂತೋಷ, ಆರೈಕೆ, ಪಾಲನೆಯಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಎಂದು ಡೈಸಿ ಮಾರ್ಟಿನ್ ಹೇಳಿದ್ದಾರೆ.
ಲಾಟರಿ ಕಿಂಗ್ ಪುತ್ರಿ ಡೈಸಿ ಮಾರ್ಟಿನ್
ಲಾಟರಿ ಕಿಂಗ್ ಎಂದೇ ಜನಪ್ರಿಯವಾಗಿರುವ ಉದ್ಯಮಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರಿ ಡೈಸಿ ಮಾರ್ಟಿನ್ ಮ್ಯೂಚ್ಯುವಲ್ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆಧವ್ ಅರ್ಜು ಅವರಿಗೆ ಶುಭ ಹಾರೈಸುತ್ತಿದ್ದೇನೆ. ಅವರ ಪ್ರತಿ ಹೆಜ್ಜೆ, ದಾರಿಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿದೆ. ಅವರ ಪ್ರತಿ ಕೆಲಸಕ್ಕೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಡೈಸಿ ಮಾರ್ಟಿನ್ ಹೇಳಿದ್ದಾರೆ.
ಭಾವುಕ ಪೋಸ್ಟ್
ಅರೈಸ್ ಇನ್ವೆಸ್ಟ್‌ಮೆಂಟ್ಸ್ ಆ್ಯಂಡ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಉದ್ಯಮದ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಡೈಸಿ ಮಾರ್ಟಿನ್ ಪ್ರಮುಖ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಶ್ರೀಮಂತ ಕುಟುಂಬದ ಡೈಸಿ ಮಾರ್ಟಿನ್ ಹಾಗೂ ಆಧವ್ ಅರ್ಜುನ್ ಡಿವೋರ್ಸ್ ಭಾರಿ ಚರ್ಚೆಯಾಗುತ್ತಿದೆ. ಡಿವೋರ್ಸ್‌ಗೆ ಕಾರಣಗಳು ಬಹಿರಂಗವಾಗಿಲ್ಲ. ತಮ್ಮ ಅಧಿಕೃತ ಘೋಷಣೆಯಲ್ಲಿ ಭಾವುಕರಾಗಿ ವಿಚ್ಚೇದನ ಕುರಿತು ಹೇಳಿಕೊಂಡಿದ್ದಾರೆ.
ಮೌನಕ್ಕೆ ಜಾರಿದ ಆಧವ್ ಅರ್ಜನ್
ತಮಿಳುನಾಡಿನ ಟಿವಿಕೆ ಸರ್ಕಾರದಲ್ಲಿ ಸಚಿವ ಆಧವ್ ಅರ್ಜುನ್ ವಿಚ್ಚೇದನ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ತಮಿಳುನಾಡು ಚುನಾವಣಯಲ್ಲಿ ವಿಸಿಕೆ ಪಕ್ಷದಲ್ಲಿದ್ದ ಆಧವ್ ಅರ್ಜುನ್, ಫಲಿತಾಂಶ ಬಳಿಕ ವಿಜಯ್ ನೇತೃತ್ವದ ಟಿವಿಕೆ ಸೇರಿಕೊಂಡು ತಮಿಳುನಾಡು ಸರ್ಕಾರದ ಸಚಿನಾಗಿದ್ದಾರೆ. ಸದ್ಯ ವಿಜಯ್ ಸರ್ಕಾರದ ಪ್ರಮುಖ ಸಚಿವ ಹಾಗೂ ಪ್ರಬಲ ನಾಯಕನಾಗಿ ಬೆಳೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.









