Asianet Suvarna News Asianet Suvarna News

ಬೆಂಗಳೂರು ಹೆಂಡ್ತಿ ಹಳ್ಳಿ ಮನೆಗೆ ಬರ್ತಿಲ್ಲಾಂತ ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಗಂಡ

ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ಮದುವೆ ಮಾಡಿಕೊಂಡ ಹೆಂಡ್ತಿ, ಹಳ್ಳಿ ಮನೆಗೆ ಬರುತ್ತಿಲ್ಲವೆಂದು ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

Bengaluru wife is not coming home because Chamarajanagar husband commits self death sat
Author
First Published Dec 11, 2023, 3:24 PM IST

ಚಾಮರಾಜನಗರ (ಡಿ.11): ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ಮದುವೆ ಮಾಡಿಕೊಂಡ ಹೆಂಡ್ತಿ, ಈಗ ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇರುವ ನನ್ನ ಮನೆಗೆ ಬರುತ್ತಿಲ್ಲವೆಂದು ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ಹೌದು, ಇಲ್ಲೊಬ್ಬ ವ್ಯಕ್ತಿ ಪತ್ನಿ ತನ್ನೊಂದಿಗೆ ಹಳ್ಳಿಯಲ್ಲಿರುವ ಮನೆಗೆ ಬರುತ್ತಿಲ್ಲವೆಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಜೀವನವನ್ನೇ ಅಂತ್ಯಗೊಳಿಸಿದ್ದಾರೆ. ಈ ದುರ್ಘಟನೆ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ. ಕುಟುಂಬದಲ್ಲಿ ಯಾವುದೇ ಸಮಸ್ಯೆಯೂ ಇರಲಿಲ್ಲ. ಆದರೆ, ಪತ್ನಿ ಮಾತ್ರ ಬೆಂಗಳೂರನ್ನು ಬಿಟ್ಟು ಹಳ್ಳಿಯಲ್ಲಿರುವ ಮನೆಗೆ ಮಾತ್ರ ಬರುವುದಿಲ್ಲ ಎಂದು ಹೇಳಿದ್ದಾಳೆ. ನೀನೇ ಬಂದು ತನ್ನ ಜೊತೆಯಲ್ಲಿರುವಂತೆ ಹೇಳಿದ್ದಾಳೆ. ಆದರೆ, ಇದಕ್ಕೊಪ್ಪದ ಗಂಡ ನೀನು ಹಳ್ಳಿಗೆ ಬರುವಂತೆ ಪದೇ ಪದೆ ಕರೆದಿದ್ದಾನೆ. ಎಷ್ಟೇ ಕರೆದರೂ ಹೆಂಡ್ತಿ ತನ್ನ ಹಳ್ಳಿಯ ಮನೆಗೆ ಬರಲೊಪ್ಪದ ಕಾರಣ ಮನನೊಂದ ಪತಿ ದುರಂತ ಸಾವಿಗೀಡಾಗಿದ್ದಾರೆ.

ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ವಸಂತಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಸಂತ ಕುಮಾರ್ ಕೆಲಸ ಮಾಡುತ್ತಿದ್ದ ವೇಳೆ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ಕುಟುಂಬವೂ ಚೆನ್ನಾಗಿಯೇ ಇತ್ತು. ಆದರೆ, ವಸಂತ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಹೊನ್ನಹಳ್ಳಿ ಮೂಲದವರಾಗಿದ್ದು, ಅಲ್ಲಿ ಮನೆ ಹಾಗೂ ಜಮೀನು ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಇದ್ದದ್ದು ಸಾಕು ಎಂದು ತಮ್ಮ ಹಳ್ಳಿಗೆ ಹೋಗಿದ್ದಾರೆ. ನಂತರ, ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದು, ಅಲ್ಲಿ ಇರಲಾಗದೇ ಹೆಂಡತಿ ಬೆಂಗಳೂರಿಗೆ ವಾಪಸ್ ಬಂದಿದ್ದಾಳೆ. ಆಕೆಯ ಗಂಡ ಪದೇ ಪದೇ ಕರೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್!
ದಾವಣಗೆರೆ (ಡಿ.11): 
ಬೈಕ್‌ ಮೇಲೆ ಮುಸ್ಲಿಂ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆಂಬ ಕಾರಣಕ್ಕೆ ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. ದಾವಣಗೆರೆ ಜಾಲಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ  ನಡೆದ ಘಟನೆ. ಶ್ರೀನಿವಾಸ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು. ಶ್ರೀನಿವಾಸನಿಗೆ ಮದುವೆ ನಿಶ್ಚಯವಾಗಿತ್ತು. ಆತ ತೆರಳುತ್ತಿರುವಾಗ ನೆರೆಮನೆ ಯುವತಿ ಮನೆವರೆಗೆ ಬಿಡಲು ಕೇಳಿದ್ದರಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ ಯುವಕ ಇದನ್ನು ಕಂಡು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಮೊಂಬತ್ತಿ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿಗೆ ಬೆಂಕಿ; ಚಿಕಿತ್ಸೆ ಫಲಕಾರಿಯಾಗದೇ ಸಾವು

ಯುವಕನಿಗೆ ಪ್ರಜ್ನೆ ಬಂದು ತನ್ನ ಪೋಷಕರಿಗೆ ಪೋನ್ ಮಾಡಿದ‌ ನಂತರ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣಾಂತಿಕ ಹಲ್ಲೆಗೊಳಗೊಗಿ ಚಿಕಿತ್ಸೆಗೆ ದಾಖಲಾಗಿರುವ  ಯುವಕ ಶ್ರೀನಿವಾಸ. ಹಲ್ಲೆ ಮಾಡಿದವರಿಂದಲೇ  ದಾವಣಗೆರೆ ಮಹಿಳಾ ಠಾಣೆಯಲ್ಲಿ  ಮಧ್ಯರಾತ್ರಿ 2.30 ಕ್ಕೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಯುವತಿಯ ಮೇಲೆ  ಅತ್ಯಾಚಾರ ಮಾಡಿದ್ದಾರೆಂದು ದೂರು ನೀಡಿ ಪೋಕ್ಸೋ ಪ್ರಕರಣ ದಾಖಲಿಸಿರುವ ಯುವತಿ ಸಂಬಂಧಿಕರು. ಆದರೆ ವಿಡಿಯೋದಲ್ಲಿ ಯುವತಿ ಅತ್ಯಾಚಾರಕ್ಕೆ ಒಳಗಾದವರಂತೆ ವರ್ತಿಸಿಲಲ್ಲ. ಶ್ರೀನಿವಾಸನಿಗೆ ಹಲ್ಲೆ ಮಾಡದಂತೆ ಕೈಮುಗಿಯುತ್ತಿರುವ ಯುವತಿ. ಯುವತಿಯನ್ನು ದುಷ್ಕರ್ಮಿಗಳು ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

Follow Us:
Download App:
  • android
  • ios