Asianet Suvarna News Asianet Suvarna News

ಒಂಟಿ ಒಂಟಿಯಾಗಿರೋದು ಬೋರೋ ಬೋರು ಅಂತ ಅನ್ಕೋಬೇಡಿ, ಅಂದ್ರಿಂದಾನೂ ಉಪಯೋಗವಿದೆ!

ಜಂಟಿಯಾಗಿರುವ ವ್ಯಕ್ತಿ ನೋಡಿ ಒಬ್ಬಂಟಿಯಾಗಿರುವ ವ್ಯಕ್ತಿ ಅದೆಷ್ಟೋ ಬಾರಿ ಬೇಸರಪಟ್ಟುಕೊಂಡಿರ್ತಾರೆ. ಮತ್ತೆ ಕೆಲವರು ಏಕಾಂಗಿ ಜೀವನ ಎದುರಿಗೆ ಬಂದಾಗ ಭಯಪಟ್ಟುಕೊಳ್ತಾರೆ. ಏಕಾಂಗಿ ಜೀವನದ ಬಗ್ಗೆ ಬೇಸರ, ಭಯದ ಅಗತ್ಯವಿಲ್ಲ. ಅದ್ರಿಂದಲೂ ಸಾಕಷ್ಟು ಲಾಭವಿದೆ.  
 

Benefits Of Being Alone
Author
Bangalore, First Published Jul 18, 2022, 5:21 PM IST

ಕೆಲವೊಮ್ಮೆ ನಾವು ಬಯಸದೆ ಏಕಾಂಗಿ ಜೀವನ ನಡೆಸುವ ಸಮಯ ಬರುತ್ತದೆ. ಮತ್ತೆ ಕೆಲವೊಮ್ಮೆ ಸಂಬಂಧ ಜೈಲಾದಾಗ ಏಕಾಂಗಿಯಾಗಿ ವಾಸಿಸಬೇಕೆಂಬ ಬಯಕೆ ಹುಟ್ಟುತ್ತದೆ. ಕೆಲವರಿಗೆ ಒಂಟಿಯಾಗಿರಲು ಇಷ್ಟ. ಜೀವನದಲ್ಲಿ ನೀವು ಬಯಸಿ ಇಲ್ಲವೆ ಬಯಸದೆ ಒಬ್ಬಂಟಿ ಜೀವನ ನಿಮಗೆ ಬರಲಿ. ಆಗ ಬೇಸರಪಟ್ಟುಕೊಳ್ಳುವುದ್ರಿಂದ ಪ್ರಯೋಜನವಿಲ್ಲ. ಒಂಟಿಯಾಗಿರುವುದ್ರಿಂದಲೂ ಅನೇಕ ಪ್ರಯೋಜನಗಳಿವೆ. ಏಕಾಂಗಿಯಾಗಿದ್ರೆ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನಾವಿಂದು ಹೇಳ್ತೇವೆ. ಸದಾ ಜೊತೆಗಾರರನ್ನು ಬಯಸುವ ಜನರಿಗೆ ಒಂಟಿ (Alone) ಯಾಗಿ ಜೀವನ ನಡೆಸುವುದು ಕಷ್ಟ. ಆದ್ರೆ ಒಬ್ಬಂಟಿಯಾದಾಗ ಚಿಂತಿಸಬೇಡಿ. ಉಸಿರುಗಟ್ಟಿಸುವ ಸಂಬಂಧದಲ್ಲಿ ಬಾಳ್ವೆ ನಡೆಸುವ ಬದಲು ಒಬ್ಬಂಟಿಯಾಗಿರುವುದು ಒಳ್ಳೆಯದು. ಒಂಟಿಯಾಗಿರುವ ಮೂಲಕ ನೀವು ಅನೇಕ ಸಾಧನೆಗಳನ್ನು ಮಾಡಬಹುದು. ಅದು ಜಂಟಿಯಾಗಿದ್ದಾಗ ಸಾಧ್ಯವಿಲ್ಲ.

ಒಂಟಿಯಾಗಿದ್ರೆ ಆಗುವ ಪ್ರಯೋಜನಗಳು (Benefits) :   

ನಿಮಗೆ ನೀವು ಅರ್ಥವಾಗ್ತೀರಿ : ಏಕಾಂಗಿಯಾಗಿ ವಾಸಿಸುವ ಮೊದಲ ಪ್ರಯೋಜನವೆಂದರೆ ಒಬ್ಬಂಟಿಯಾಗಿ ವಾಸಿಸುವ ವ್ಯಕ್ತಿಯು ತನ್ನನ್ನು ತಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ವಾಸಿಸುವಾಗ, ಅವನು ಪ್ರತಿಯೊಂದು ಸಣ್ಣ ವಿಷಯಕ್ಕೂ ಗಮನ ಕೊಡುತ್ತಾನೆ. ಅವನು ಏನು ಮಾಡುತ್ತಾನೆ ಮತ್ತು ಅವನು ಏನು ಮಾಡುವುದನ್ನು ಆನಂದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುತ್ತಾನೆ. ಯಶಸ್ಸ ಸಾಧಿಸಲು ಯಾವಾಗ್ಲೂ ಏಕಾಂಗಿ ಹೋರಾಟ ಹಾಗೂ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. 

ಜೀವನಕ್ಕೆ ಏನು ಬೇಕು ? : ಜಂಟಿಯಾಗಿದ್ದಾಗ ಬೇರೆಯವರ ಬಗ್ಗೆ ಆಲೋಚನೆ ಮಾಡುವುದು ಹೆಚ್ಚು. ನಮಗಿಂತ ಅವರಿಗೆ ಏನು ಬೇಕು ಎಂಬುದನ್ನು ನೋಡಿ ಅದರಂತೆ ನಡೆಯುತ್ತೇವೆ. ಆದ್ರೆ ಒಬ್ಬಂಟಿಯಾಗಿದ್ದಾಗ ನಾನು ನಮಗೆ ಏನು ಬೇಕು ಎಂಬುದನ್ನು ನೋಡ್ತೇವೆ. ನಮ್ಮ ಶಕ್ತಿ, ದೌರ್ಲಲ್ಯ ಅರ್ಥ ಮಾಡಿಕೊಳ್ತೇವೆ. ನಮ್ಮ ಜೀವನದಲ್ಲಿ ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳುತ್ತೇವೆ.

ಗಂಡನಿಗೆ ಬಾಲ್ಯದ ಗೆಳತಿ ಕಳುಹಿದ ಮೆಸೇಜ್ ನೋಡಿ ಪತ್ನಿ ಶಾಕ್..!

ಬೇಗ ಗುರಿ ಮುಟ್ಟಬಹುದು : ಏಕಾಂಗಿಯಾಗಿರುವ ವ್ಯಕ್ತಿ ಬೇಗ ಗುರಿ ತಲುಪುತ್ತಾನೆ. ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ವಾಸಿಸುವಾಗ  ಅವನಿಗೆ ವಿವಿಧ ರೀತಿಯ ಕೆಲಸಗಳಿರುವುದಿಲ್ಲ. ಅವನ ಕೆಲಸ ಮಾತ್ರ ಇರುವ ಕಾರಣ, ಸಾಕಷ್ಟು ಸಮಯ ಸಿಗುತ್ತದೆ. ಗುರಿಯೆಡೆಗೆ ನಡೆಯಲು ಸಮಯ ಮುಖ್ಯ.  

ವರ್ತಮಾನ : ಯಾವುದೇ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿಯಾಗಲು ಅಥವಾ ತನ್ನನ್ನು ತಾನು ಉತ್ತಮಗೊಳಿಸಲು ಬಯಸಿದರೆ, ಅವನು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಬೇಕು. ಪ್ರತಿಯೊಬ್ಬ ಮನುಷ್ಯನಿಗೂ ವರ್ತಮಾನವೇ ಸರ್ವಸ್ವ. ವರ್ತಮಾನದಲ್ಲಿ ಏನೇ ಮಾಡಿದರೂ ಭವಿಷ್ಯದಲ್ಲಿ ಫಲ ಸಿಗುತ್ತದೆ. ವಿಫಲ ವ್ಯಕ್ತಿ ಸಾಮಾನ್ಯವಾಗಿ  ವರ್ತಮಾನವನ್ನು ಮರೆತು ಭವಿಷ್ಯದಲ್ಲಿ ಬದುಕಲು ಪ್ರಾರಂಭಿಸುತ್ತಾನೆ. ಆದರೆ ಯಶಸ್ವಿ ವ್ಯಕ್ತಿ ಈ ತಪ್ಪನ್ನು ಮಾಡುವುದಿಲ್ಲ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯು ವರ್ತಮಾನದಲ್ಲಿ ವಾಸಿಸುತ್ತಾನೆ.  ನಿಮಗೂ ಒಂಟಿಯಾಗಿರಲು ಅವಕಾಶ ಸಿಕ್ಕರೆ ವರ್ತಮಾನದಲ್ಲಿ ಬದುಕಲು ಕಲಿಯಬೇಕು. ನೀವು ಊಹಿಸಲೂ ಸಾಧ್ಯವಾಗದಷ್ಟು ಯಶಸ್ಸು ಗಳಿಸಬಹುದು.

ಸಂಪೂರ್ಣ ಸ್ವಾತಂತ್ರ್ಯವಿದೆ : ಏಕಾಂಗಿಯಾಗಿ ಬದುಕುವ ಪ್ರಯೋಜನದಲ್ಲಿ ಇದೂ ಒಂದು. ಸಂಪೂರ್ಣ ಸ್ವಾತಂತ್ರ್ಯ ಇಲ್ಲಿ ಸಿಗುತ್ತದೆ. ಏಕಾಂಗಿಯಾಗಿ ವಾಸಿಸುವ ವ್ಯಕ್ತಿಯು ಯಾವುದೇ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು. ಹಾಗೆ ಯಾವಾಗ ಬೇಕಾದರೂ ಮಲಗಬಹುದು, ಆಹಾರ ಸೇವಿಸಬಹುದು ಇತ್ಯಾದಿ.   

ಅಬ್ಬಬ್ಬಾ ಎಂತೆಥಾ ಕೆಲಸ ಇರುತ್ತೆ ನೋಡಿ: ತಬ್ಬಿ ಮುದ್ದಾಡಿ ಗಂಟೆಗೆ ಏಳು ಸಾವಿರ ಸಂಪಾದಿಸೋ ಭೂಪ

ಶಾಂತಿಯ ಭಾವನೆ : ಏಕಾಂಗಿಯಾಗಿ ವಾಸಿಸುವ ಜನರು ಬಹಳಷ್ಟು ಶಾಂತಿಯನ್ನು ಅನುಭವಿಸುತ್ತಾರೆ. ಇದು ಒಂಟಿಯಾಗಿರುವುದರ ಪ್ರಯೋಜನವೂ ಆಗಿದೆ.  ಜನರು ಶಾಂತಿಗಾಗಿ ಬಹಳಷ್ಟು ಪ್ರಯತ್ನ ಮಾಡ್ತಾರೆ. ಆದರೆ ಶಾಂತಿ ಸಿಗುವುದಿಲ್ಲ. ಆದರೆ ಏಕಾಂಗಿಯಾಗಿ ವಾಸಿಸುವ ವ್ಯಕ್ತಿಯು ಏನನ್ನೂ ಮಾಡದೆ ಶಾಂತಿಯನ್ನು ಕಂಡುಕೊಳ್ಳುತ್ತಾನೆ.

ಆತ್ಮವಿಶ್ವಾಸ ಹೆಚ್ಚಳ : ಏಕಾಂಗಿಯಾಗಿರುವುದರ ಇನ್ನೊಂದು ಪ್ರಯೋಜನವೆಂದರೆ ಆತ್ಮವಿಶ್ವಾಸವು ವೇಗವಾಗಿ ಹೆಚ್ಚುತ್ತದೆ. ಒಂಟಿಯಾಗಿರುವುದರಿಂದ, ನಾವು ನಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ. ಆತ್ಮಸ್ಥೈರ್ಯ ಹೆಚ್ಚಿಸಲು ಜವಾಬ್ದಾರಿ ಅಗತ್ಯ.  

ಖುಷಿ : ನೀವು ಒಂಟಿಯಾಗಿದ್ದಾಗ ನಿಮ್ಮ ಖುಷಿಯನ್ನು ಬೇರೆಯವರು ನಿರ್ಧರಿಸುವುದಿಲ್ಲ. ನಿಮ್ಮ ಖುಷಿ ನಿಮ್ಮ ಕೈನಲ್ಲಿರುತ್ತದೆ.

ಆತ್ಮಸನ್ಮಾನ : ದಾಂಪತ್ಯದಲ್ಲಿ ಅಥವಾ ಗುಂಪಿನಲ್ಲಿ ನಿಮಗೆ ಅಪಮಾನ ಆಗ್ಬಹುದು. ನಿಮ್ಮ ಆತ್ಮಸನ್ಮಾನಕ್ಕೆ ಧಕ್ಕೆಯಾಗ್ಬಹುದು. ಆದ್ರೆ ಒಂಟಿಯಾಗಿದ್ದಾಗ ನಿಮ್ಮ ಗೌರವಕ್ಕೆ ಧಕ್ಕೆ ಬರುವುದಿಲ್ಲ. 

Follow Us:
Download App:
  • android
  • ios