ಗಂಡನಿಗೆ ಬಾಲ್ಯದ ಗೆಳತಿ ಕಳುಹಿದ ಮೆಸೇಜ್ ನೋಡಿ ಪತ್ನಿ ಶಾಕ್..!
ಸಣ್ಣ ವಿಷ್ಯ ಮಂಡೆ ಬಿಸಿ ಮಾಡುತ್ತೆ. ಅದ್ರಲ್ಲೂ ಪತಿ – ಪತ್ನಿ ಮಧ್ಯೆ ಯಾವುದೋ ಹುಡುಗಿ ಪ್ರವೇಶವಾಗಿದೆ ಎಂಬ ಸಂಶಯ ಬಂದ್ರೆ ಇಡೀ ದೇಹ ಕೋಪದಲ್ಲಿ ಕುದಿಯುತ್ತೆ. ಏನು ಮಾಡ್ಬೇಕೆಂಬ ಗೊಂದಲ ಶುರುವಾಗುತ್ತೆ. ಈ ಮಹಿಳೆ ಕೂಡ ಈಗ ಇದೇ ಸ್ಥಿತಿಯಲ್ಲಿದ್ದಾಳೆ.
ದಾಂಪತ್ಯದಲ್ಲಿ ಸಂಶಯ ಬಹಳ ಅಪಾಯಕಾರಿ. ಒಮ್ಮೆ ಸಂಗಾತಿ ಮೇಲೆ ಸಂದೇಹ ಶುರುವಾದ್ರೆ ಅದನ್ನು ತಲೆಯಿಂದ ತೆಗೆದು ಹಾಕೋದು ಸುಲಭದ ಕೆಲಸವಲ್ಲ. ಸಂದೇಹ ದಾಂಪತ್ಯವನ್ನು ಹಾಳು ಮಾಡುತ್ತದೆ. ಕುಳಿತ್ರೂ, ನಿಂತ್ರೂ ಮನಸ್ಸು ಅವರ ಬಗ್ಗೆ ಆಲೋಚನೆ ಮಾಡಲು ಶುರು ಮಾಡುತ್ತದೆ. ಇದ್ರಿಂದ ದಾಂಪತ್ಯದಲ್ಲಿ ಪ್ರೀತಿ ಮಾಯವಾಗುತ್ತದೆ. ಯಾವುದೇ ಚಿಕ್ಕ ಅನುಮಾನ ಬಂದ್ರೂ ಅದನ್ನು ತಕ್ಷಣ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಅನುಮಾನ ಹೆಮ್ಮರವಾಗಿ ಬೆಳೆಯಲು ಬಿಡದೆ ಹೋದ್ರೆ ಸಮಸ್ಯೆಯಿಂದ ಹೊರಗೆ ಬರುವುದು ಸುಲಭವಾಗುತ್ತದೆ. ಇಲ್ಲೊಬ್ಬ ಮಹಿಳೆ ಕೂಡ ಪತಿ ಮೇಲೆ ಅನುಮಾನ ಪಡ್ತಿದ್ದಾಳೆ. ಆಕೆ ಅನುಮಾನಕ್ಕೆ ಆಕೆಯ ಬಾಲ್ಯದ ಗೆಳತಿ ಕಳುಹಿಸಿದ ಒಂದು ಸಂದೇಶ ಕಾರಣವಾಗಿದೆ. ಬಾಲ್ಯದ ಗೆಳತಿ ತನ್ನ ಪತಿಗೆ ಕಳುಹಿಸಿದ ಮೆಸ್ಸೇಜ್ ನೋಡಿದ್ಮೇಲೆ ಮಹಿಳೆ ನಿದ್ರೆ ಕಳೆದುಕೊಂಡಿದ್ದಾಳೆ. ಗಂಡನ ಮೇಲೆ ಸಂಶಯ ಕಾಡ್ತಿದೆ. ಮುಂದೇನು ಮಾಡ್ಬೇಕೆಂಬ ಚಿಂತೆ ಆಕೆಯದ್ದಾಗಿದೆ. ಬಾಲ್ಯದ ಗೆಳತಿ ಪತಿಗೆ ಕಳುಹಿಸಿದ ಸಂದೇಶವೇನು ಎಂಬುದನ್ನು ನಾವಿಂದು ಹೇಳ್ತೇವೆ. ಆಕೆಗೆ ಮದುವೆಯಾಗಿ ಕೆಲವೇ ವರ್ಷಗಳ ಕಳೆದಿವೆ. ಕೆಲ ದಿನಗಳವರೆಗೂ ಆಕೆಯ ಜೀವನ ಸುಖಕರವಾಗಿ ಸಾಗಿತ್ತಂತೆ. ದಾಂಪತ್ಯ ಸಂತೋಷದಿಂದ ಕೂಡಿತ್ತಂತೆ. ಆದ್ರೆ ಈಗ ಆಕೆ ಮನಸ್ಸು ಗೊಂದಲದ ಗೂಡಾಗಿದೆ.
ಲಾಕ್ ಡೌನ್ (Lock Down) ಸಂದರ್ಭದಲ್ಲಿ ಮನೆಗೆ ಬಂದ ಗೆಳತಿ : ಮಹಿಳೆ, ತನ್ನ ಬಾಲ್ಯದ ಗೆಳತಿ (Friend) ಜೊತೆ ಈಗಲೂ ಸಂಪರ್ಕದಲ್ಲಿದ್ದಾಳೆ. ಆಕೆ ಪತಿ ಕೆಲಸದ ಮೇಲೆ ವಿದೇಶಕ್ಕೆ ಹೋಗ್ತಿರುತ್ತಾನಂತೆ. ಲಾಕ್ ಡೌನ್ ನಲ್ಲಿ ಗೆಳತಿ ಹಾಗೂ ಆಕೆ ಮಗ ಇಬ್ಬರೇ ಇದ್ದ ಕಾರಣ ಮಹಿಳೆ, ತನ್ನ ಗೆಳತಿಯನ್ನು ಮನೆಗೆ ಕರೆಸಿಕೊಂಡಿದ್ದಳಂತೆ. ಮನೆಯಲ್ಲಿಯೇ ಉಳಿದ ಬಾಲ್ಯದ ಗೆಳತಿ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದಳಂತೆ. ಮಹಿಳೆ ಪತಿ ಕೂಡ ಇದಕ್ಕೆ ಒಪ್ಪಿದ್ದನಂತೆ. ಫ್ಯಾಮಿಲಿ ಫ್ರೆಂಡ್ ರೀತಿಯಲ್ಲಿ ಇಬ್ಬರೂ ಎಂಜಾಯ್ ಮಾಡಿದ್ದರಂತೆ. ಆದ್ರೆ ಒಂದು ದಿನ ಪತಿ ಮೊಬೈಲ್ ನಲ್ಲಿದ್ದ ಮೆಸೇಜ್ (Message) ನೋಡಿ ಮಹಿಳೆ ದಂಗಾಗಿದ್ದಾಳಂತೆ.
ಪತಿಗೆ ಗೆಳತಿ ಕಳುಹಿಸಿದ ಮೆಸೇಜ್ ಏನು ? : ಮೆಸೇಜ್ ನೋಡುವವರೆಗೂ ನಾನು ಖುಷಿಯಾಗಿಯೇ ಇದ್ದೆ. ಆದ್ರೆ ಒಂದು ದಿನ ನಮ್ಮ ಪತಿಗೆ ಗೆಳತಿ ಮೆಸೇಜ್ ಕಳುಹಿಸಿದ್ದನ್ನು ನೋಡಿದೆ. ನೀನ್ಯಾಕೆ ಇಂದು ಇಲ್ಲಿಗೆ ಬರ್ಬಾರದು ಎಂದು ಆಕೆ ಮೆಸೇಜ್ ಮಾಡಿದ್ದಳು. ಅದನ್ನು ನೋಡಿ ನನಗೆ ಶಾಕ್ ಆಯ್ತು. ನೂರಾರು, ಸಾವಿರಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹುಟ್ಟಿಕೊಂಡಿವೆ. ಪತಿ, ಗೆಳತಿ ಮೇಲೆ ಸಂಶಯ ಶುರುವಾಗಿದೆ. ಆದ್ರೆ ನಾನು ಅವರನ್ನು ಎಂದಿಗೂ ಕೇಳಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
ಅಬ್ಬಬ್ಬಾ ಎಂತೆಥಾ ಕೆಲಸ ಇರುತ್ತೆ ನೋಡಿ: ತಬ್ಬಿ ಮುದ್ದಾಡಿ ಗಂಟೆಗೆ ಏಳು ಸಾವಿರ ಸಂಪಾದಿಸೋ ಭೂಪ
ತಜ್ಞರ ಸಲಹೆ : ಮಹಿಳೆ ಮಾತುಗಳನ್ನು ಆಲಿಸಿದ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. ಸಂಬಂಧ ಬಹಳ ಸೂಕ್ಷ್ಮವಾಗಿರುತ್ತದೆ. ಕಣ್ಣಾರೆ ಕಂಡಿದ್ದನ್ನು ಪರಾಮರ್ಶಿಸಿ ನೋಡು ಎನ್ನುವ ಮಾತಿದೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಗೆಳತಿ ಜೊತೆ ಮಾತನಾಡಿ ಎಂದು ತಜ್ಞರು ಹೇಳಿದ್ದಾರೆ.
ಇಲ್ಲಿ, ತಂದೆಯನ್ನೇ ಮಗಳು ಮದುವೆಯಾಗೋ ಸಂಪ್ರದಾಯವಿದೆ
ಪತಿ ಜೊತೆ ಮಾತುಕತೆ : ಒತ್ತಡಕ್ಕೆ (Stress) ಒಳಗಾಗದೆ ಈ ವಿಷ್ಯವನ್ನು ಪತಿಗೆ ಹೇಳಿ ಎಂದು ತಜ್ಞರು ಹೇಳಿದ್ದಾರೆ. ನೀವು ಈವರೆಗೂ ಈ ಬಗ್ಗೆ ಪತಿಗೆ ಕೇಳಿಲ್ಲ. ಮಾತುಕತೆಯಿಂದ ಎಲ್ಲ ಪರಿಹಾರ ಸಾಧ್ಯ. ಹಾಗಾಗಿ ಮೊದಲು ಪತಿಗೆ ಮೆಸೇಜ್ ಅರ್ಥವೇನು ಎಂಬುದನ್ನು ಕೇಳಿ. ಅವರಿಬ್ಬರ ಮಧ್ಯೆ ಯಾವುದೇ ಅಕ್ರಮ ಸಂಬಂಧವಿಲ್ಲವೆಂದಾದ್ರೆ ಅವರು ನಿಮ್ಮನ್ನು ಅರ್ಧ ಮಾಡಿಕೊಳ್ತಾರೆ. ಸಂಬಂಧವಿದೆ ಎಂದಾದ್ರೆ ಮಾತು ಮರೆಸುವ ಪ್ರಯತ್ನ ಮಾಡ್ತಾರೆ. ಮೆಸೇಜ್ ನಿಂದ ನೀವು ಏನೆಲ್ಲ ಮಾನಸಿಕ ಗೊಂದಲ ಎದುರಿಸುತ್ತಿದ್ದೀರಿ ಎಂಬುದನ್ನು ಹೇಳಿ. ಅವರಿಂದ ಬರುವ ಉತ್ತರದ ನಂತ್ರ ನಿರ್ಧಾರ ತೆಗೆದುಕೊಳ್ಳಿ. ವಿನಃ ಆಲೋಚನೆ ಮಾಡಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ ಎಂದು ತಜ್ಞರು ಹೇಳಿದ್ದಾರೆ.