ಪ್ರಶ್ನೆ: ನಾನು ಹದಿನೇಳು ವರ್ಷದ ಯುವಕ. ಪದವಿ ಓದುತ್ತಿದ್ದೇನೆ. ಮೂರು ವರ್ಷದ ಹಿಂದೆ ನನ್ನ ಪಕ್ಕದ ಮನೆಗೆ ಒಂದು ಫ್ಯಾಮಿಲಿ ಬಂತು. ಸುಮಾರು ಮೂವತ್ತೈದು ವರ್ಷದ ಗಂಡ ಮತ್ತು ಹೆಂಡತಿ. ನನಗೆ ಪರಿಚಯವಾದರು, ಆತ್ಮೀಯರಾದರು. ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಒಂದು ತಿಂಗಳ ಹಿಂದೆ ಅವರ ಮನೆಗೆ ಹೋದಾಗ ಅಂಕಲ್ ಮನೆಯಲ್ಲಿರಲಿಲ್ಲ. ಆಂಟಿ ಮಾತ್ರ ಇದ್ದರು. ನನ್ನ ಜೊತೆ ತುಂಬಾ ಜಾಲಿಯಾಗಿ ಮಾತಾಡುತ್ತಾ ಪಕ್ಕ ಬಂದು ಕೂತರು. ಸಲಿಗೆಯಿಂಧ ಮೈಕೈ ಮುಟ್ಟಿದರು. ಹಿತವೆನಿಸಿತು. ನಂತರ ಆಗಾಗ ಅವರ ಮನೆಗೆ ಹೋದರೂ ಆಂಟಿ ಏಕಾಂಗಿಯಾಗಿ ಸಿಗಲಿಲ್ಲ. ಈಗ ಸಾಮಾನ್ಯವಾಗಿ ಅಂಕಲ್ ಮನೆಯಲ್ಲೇ ಇರುತ್ತಾರೆ. ಆದರೆ ಮನಸ್ಸು ಅವರಿಲ್ಲದ ಸಮಯ ಹುಡುಕಿ ಹೋಗು ಎನ್ನುತ್ತದೆ. ಆಂಟಿ ಕೂಡ ಬಾ ಎನ್ನುತ್ತಾರೆ. ನಾನು ಮಾಡುತ್ತಿರುವುದು ತಪ್ಪಾ? ಏನು ಮಾಡಲಿ?

ಉತ್ತರ: ನೀವು ಮಾಡುತ್ತಿರುವುದು ಖಂಡಿತವಾಗಿಯೂ ತಪ್ಪು. ಒಂದು ಸುಂದರವಾದ ಸಂಸಾರದಲ್ಲಿ ಒಡಕನ್ನು ನೀವು ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ. ಈಗ ನೀವು ಮಾಡುತ್ತಿರುವುದು ನಿಮಗೆ ಹಿತವಾಗಿ ಕಾಣಬಹುದು. ಆದರೆ ಅದು ದೇಹದ ಬಯಕೆಯಿಂದ ಹುಟ್ಟಿದ ಹಿತ ಅಷ್ಟೇ. ಅದರಲ್ಲಿ ನಿಮ್ಮ ಯಾರ ನೈಜ ಹಿತವೂ ಇಲ್ಲ. ಅಷ್ಟಕ್ಕೂ ನಿಮ್ಮ ಪಕ್ಕದ ಮನೆಯ ವಿವಾಹಿತೆಯ ನಿಜ ಉದ್ದೇಶ ಏನು ಎಂಬುದನ್ನು ನೀವು ಅರ್ಥ ಮಾಡಿಕೊಂಡಿರಲಿಕ್ಕಿಲ್ಲ. ಅವರ ಮಗನ ಪ್ರಾಯದವರಾದ ನಿಮ್ಮಲ್ಲಿ ಅದೇ ಭಾವನೆ ಅವರಿಗೆ ಮೂಡಿರಬಹುದು. ಅದನ್ನು ನೀವು ತಪ್ಪು ಅರ್ಥ ಮಾಡಿಕೊಂಡಿರಬಹುದು ಅಲ್ಲವೇ. ಹಾಗಾಗಿ ಅವರ ವಿಶ್ವಾಸ ನಂಬಿಕೆ ಪ್ರೀತಿಗೆ ಕೊಳ್ಳಿ ಇಡುವ ಕೆಲಸ ನೀವು ಮಾಡತಕ್ಕದ್ದಲ್ಲ. ಹಾಗೇ ಅಂಕಲ್‌ ಕೂಡ ನಿಮ್ಮಲ್ಲಿ ನಂಬಿಕೆಯಿಟ್ಟಿದ್ದಾರಲ್ಲವೇ. ಅದನ್ನು ಹಾಳು ಮಾಡಿಕೊಳ್ಳುತ್ತೀರಾ?

#Feelfree: ಮಗುವಾದ ಮೇಲೆ ಸೆಕ್ಸ್‌ನಲ್ಲಿ ಆಸಕ್ತಿ ಸೋರಿ ಹೋಗುತ್ತಾ? 

ಒಂದು ವೇಳೆ ನೀವು ಆಂಟಿಯ ಜೊತೆ ದೈಹಿಕ ಸಂಬಂಧ ಬೆಳೆಸಿದಿರೆಂದೇ ಇಟ್ಟುಕೊಳ್ಳಿ. ಮುಂದೇನಾಗುತ್ತದೆ? ಅದು ಅವರಿಬ್ಬರ ದಾಂಪತ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಇದು ಗೊತ್ತಾದರೆ ಅವರಲ್ಲಿ ಬಿರುಕು ಉಂಟಾಗಿ ವಿಚ್ಛೇದನದ ವರೆಗೆ ಹೋಗಬಹುದು. ಅಥವಾ ಅಂಕಲ್ ಸ್ವಲ್ಪ ಕಠೋರ ಸ್ವಭಾವದವರಾಗಿದ್ದರೆ ನೀವು ದೈಹಿಕವಾಗಿಯೂ ಮಾನಸಿಕವಾಗಿಯೂ ಏಟು ತಿನ್ನಬೇಕಾದೀತು. ನಿಮ್ಮ ಮನೆಯಲ್ಲಿ ನಿಮ್ಮ ಅಪ್ಪ- ಅಮ್ಮ ನಿಮ್ಮ ಬಗ್ಗೆ ಇಟ್ಟುಕೊಂಡು ನಂಬಿಕೆ- ಪ್ರೀತಿಯ ಗತಿ ಏನಾಗುತ್ತದೆ ಎಂಬುದನ್ನೂ ಯೋಚಿಸಿ. ಅವರ ಪುತ್ರ ಇಂಥದೊಂದು ಅನೈತಿಕ ಸಂಬಂಧವನ್ನು ಹೊಂದುವುದು ಅವರಿಗೆ ಕರ್ಣಕಠೋರ ಮಾತ್ರವಲ್ಲ, ಊಹಿಸಲಸಾಧ್ಯ ಆದೀತು. ಅದರಿಂದ ನಿಮ್ಮ ಹೆತ್ತವರ ಮಧ್ಯೆ ಜಗಳ, ಮನಸ್ತಾಪ ಉಂಟಾದೀತು. ನಿಮ್ಮ ಓದು, ಶಿಕ್ಷಣವೂ ಈ ಅನೈತಿಕ ಸಂಬಂಧದ ಪರಿಣಾಮ ಕುಂಠಿತಗೊಂಡೀತು. ಇಂಥ ಸಂಬಂಧಗಳಿದ್ದಾಗ ಓದಿನಲ್ಲಿ ಮನಸ್ಸು ನಿಲ್ಲುವುದಿಲ್ಲ. ಆಗ ಏನು ಮಾಡುತ್ತೀರಿ?
ಸದ್ಯ ನೀವು ಆಂಟಿ ಮನೆಗೆ ಭೇಟಿ ಕೊಡುವುದನ್ನು ನಿಲ್ಲಿಸಿ. ಅಲ್ಲಿಗೆ ಹೋಗಬೇಕು ಎಂದು ತೀವ್ರವಾಗಿ ಅನ್ನಿಸಿದರೆ ಓದು, ಸಿನಿಮಾ ವೀಕ್ಷಣೆ ಮುಂತಾದ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. 

ಸೆಕ್ಸಲ್ಲಿ ಆಡಗಿರೋ ಆರೋಗ್ಯ ಗುಟ್ಟುಗಳ ಬಗ್ಗೆ ಗೊತ್ತಾ ನಿಮ್ಗೆ? 

ಪ್ರಶ್ನೆ: ನನ್ನ ಶಿಶ್ನ ಒಂದು ಕಡೆಗೆ ಬಾಗಿದಂತೆ ಇದೆ. ನಿಮಿರಿದಾಗ ಸುಮಾರು ಐದು ಇಂಚು ಉದ್ದವಾಗುತ್ತಿದ್ದರೂ, ಬಾಗಿಕೊಂಡೇ ಇರುತ್ತದೆ. ನನಗಿನ್ನೂ ಮದುವೆಯಾಗಿಲ್ಲ. ಹೀಗಿದ್ದರೆ, ಮದುವೆಯ ನಂತರ ಪತ್ನಿಯನ್ನು ಸುಖಪಡಿಸಲು ಸಾಧ್ಯವೇ? ಚಿಂತೆ ಕಾಡುತ್ತಿದೆ.

ಉತ್ತರ: ಚಿಂತಿಸಬೇಡಿ. ಜಗತ್ತಿನಲ್ಲಿ ನೂರಕ್ಕೆ ಇಪ್ಪತ್ತೈದು ಗಂಡಸರ ಶಿಶ್ನ ಹೀಗೆ ಬಾಗಿಕೊಂಡೇ ಇರುತ್ತದೆ ಎಂಧು ತಜ್ಞರು ಹೇಳುತ್ತಾರೆ. ಇದು ಚಿಂತೆಗೆ ಕಾರಣವಾದ ವಿಷಯವಲ್ಲ. ಹಾಗೇ ನಿಮ್ಮ ಶಿಶ್ನ ಬಾಗಿಕೊಂಡಿರುವುದರಿಂದ ನಿಮ್ಮ ಪತ್ನಿಯನ್ನು ಖುಷಿಪಡಿಸುವ ನಿಮ್ಮ ಸಾಮರ್ಥ್ಯದಲ್ಲಾಗಲೀ, ನೀವು ಖುಷಿಪಡುವ ನಿಮ್ಮ ಸಾಮರ್ಥ್ಯದಲ್ಲಾಗಲೀ ಏನೂ ವ್ಯತ್ಯಾಸ ಆಗುವುದಿಲ್ಲ. 

#Feelfree: ಗೆಳತಿ ಜೊತೆ ತಮ್ಮನ ಸಂಬಂಧ, ಹೇಗೆ ಸಹಿಸಲಿ?