ಪ್ರತಿದಿನ ಸೆಕ್ಸ್ ಮಾಡೋದ್ರಿಂದ ಅದರ ಮೇಲಿನ ಆಸಕ್ತಿ ಕಡಿಮೆಯಾಗುತ್ತೆ ಎಂಬ ನಂಬಿಕೆಯಿದೆ. ಈ ಮಾತು ಸೆಕ್ಸ್ಗೆ ಮಾತ್ರವಲ್ಲ, ಎಲ್ಲ ವಿಚಾರಕ್ಕೂ ಅನ್ವಯಿಸುತ್ತೆ. ಯಾವುದೇ ಆಗಿರಲಿ,ನಿತ್ಯವೂ ಸಿಕ್ಕಿದ್ರೆ ಕ್ರಮೇಣ ಅದರ ಮೇಲಿನ ಆಸಕ್ತಿ ಕುಂದೋದು ಸಹಜ. ಹೀಗಾಗಿ ನಿತ್ಯ ಸೆಕ್ಸ್ ಮಾಡಿದ್ರೆ ಆಸಕ್ತಿ ಕುಂದುತ್ತೆ ಅನ್ನೋದು ನಿಜವೇ ಇರಬಹುದು. ಆದ್ರೆ ಇದ್ರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ ಎನ್ನೋದಂತೂ ಸುಳ್ಳಲ್ಲ. ಸೆಕ್ಸ್ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರಬಲ್ಲದು ಎಂಬುದು ಗೊತ್ತಾ ನಿಮ್ಗೆ?

ಸೇವಿಸುವ ಆಹಾರಕ್ಕೂ ಮನಸಿಗೂ ಸಂಬಂಧವಿದೆ

ರೋಗನಿರೋಧಕ ಶಕ್ತಿ ಹೆಚ್ಚಳ
ಪ್ರತಿದಿನ ಸೆಕ್ಸ್ ಮಾಡೋದ್ರಿಂದ ದೇಹಕ್ಕೆ ಆಯಾಸವಾಗಬಹುದು, ಆದ್ರೆ ಆರೋಗ್ಯಕ್ಕೆ ಪ್ರಯೋಜನವಿದೆ ಎನ್ನುತ್ತಾರೆ ಲೈಂಗಿಕ ತಜ್ಞರು. ಪ್ರತಿದಿನ ಅಥವಾ ವಾರದಲ್ಲಿ ಕನಿಷ್ಠ ಒಂದೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವ್ಯಕ್ತಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇತರರಿಗಿಂತ ಕಡಿಮೆ ಅನ್ನೋದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ ಕೂಡ. ಇದಕ್ಕೆ ಕಾರಣ ಸೆಕ್ಸ್ನಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಳವಾಗೋದು. ಇದೇ ಕಾರಣಕ್ಕೆ ಇಂಥ ವ್ಯಕ್ತಿಗಳು ವೈರಸ್ ಸೇರಿದಂತೆ ರೋಗಕಾರಕ ಕೀಟಾಣುಗಳ ದಾಳಿಗೆ ಬೇಗ ತುತ್ತಾಗೋದಿಲ್ಲ. ಪೆನ್ಸಿಲ್ವೆನಿಯಾದ ವಿಲ್ಕೆಸ್ ವಿಶ್ವವಿದ್ಯಾಲಯದ ಸಂಶೋಧಕರು ಕೈಗೊಂಡ ಅಧ್ಯಯನದಲ್ಲಿ ವಾರದಲ್ಲಿ ಒಂದೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವಿದ್ಯಾರ್ಥಿಗಳ ದೇಹದಲ್ಲಿ ಕೆಲವು ಪ್ರತಿರೋಧಕಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗದ ವಿದ್ಯಾರ್ಥಿಗಳಿಗಿಂತ ಹೆಚ್ಚಿರೋದು ಪತ್ತೆಯಾಗಿದೆ. 

ದೇಹಕ್ಕೆ ವ್ಯಾಯಾಮ
ಲೈಂಗಿಕ ಕ್ರಿಯೆ ಕೂಡ ಒಂದು ರೀತಿಯ ವ್ಯಾಯಾಮ. ಹಾಗಂತ ಇದನ್ನು ಟ್ರೆಡ್‍ಮಿಲ್‍ಗೆ ಹೋಲಿಸಲಾಗದು. ಆದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ದೇಹ ಒಂದಿಷ್ಟು ದಣಿದೇ ದಣಿಯುತ್ತದೆ. ಹಾಗಾಗಿ ಇದನ್ನು ವ್ಯಾಯಾಮ ಅನ್ನೋದ್ರಲ್ಲಿ ತಪ್ಪಿಲ್ಲ. ಸೆಕ್ಸ್ ನಿಮಿಷಕ್ಕೆ 5 ಕ್ಯಾಲೋರಿಯಷ್ಟು ಶಕ್ತಿಯನ್ನು ವ್ಯಯಿಸುತ್ತದೆ. ಅಷ್ಟೇ ಅಲ್ಲ, ವ್ಯಾಯಾಮ ಮಾಡೋವಾಗಲಿನಂತೆ ಸೆಕ್ಸ್ನಲ್ಲಿ ತೊಡಗಿರುವಾಗ ಕೂಡ ಹೃದಯ ಬಡಿತದ ವೇಗ ಹೆಚ್ಚುತ್ತದೆ. ದೇಹದ ವಿವಿಧ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ ಕೂಡ. 

ಈ ಕಾರಣಕ್ಕಾಗಿ ಈರುಳ್ಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ..!

ರಕ್ತದೊತ್ತಡ ತಗ್ಗಿಸುತ್ತೆ
ಕೆಲವು ಅಧ್ಯಯನಗಳ ಪ್ರಕಾರ ಸೆಕ್ಸ್ ಹಾಗೂ ರಕ್ತದೊತ್ತಡ ಕಡಿಮೆಯಾಗೋದರ ನಡುವೆ ಸಂಬಂಧವಿದೆ. ಲೈಂಗಿಕ ಕ್ರಿಯೆ ಸಿಸ್ಟೋಲಿಕ್ ಬ್ಲಡ್ ಫ್ರೆಷರ್ ಅನ್ನು ತಗ್ಗಿಸುತ್ತದೆ.

ಹೃದಯಾಘಾತದ ಅಪಾಯ ಕಡಿಮೆ
ಉತ್ತಮ ಲೈಂಗಿಕ ಜೀವನ ಹೃದಯದ ಆರೋಗ್ಯವನ್ನೂ ಕಾಯುತ್ತೆ. ಸೆಕ್ಸ್ ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟೆರೋನ್ ಹಾರ್ಮೋನ್ ಮಟ್ಟವನ್ನು ಬ್ಯಾಲೆನ್ಸ್ನಲ್ಲಿಡಲು ನೆರವು ನೀಡುತ್ತದೆ. ಇವೆರಡಲ್ಲಿ ಒಂದು ಹಾರ್ಮೋನ್ ಕಡಿಮೆಯಾದ್ರೂ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಅಧ್ಯಯನವೊಂದರ ಪ್ರಕಾರ ವಾರದಲ್ಲಿ ಕನಿಷ್ಠ ಒಂದೆರಡು ಬಾರಿ ಸೆಕ್ಸ್‍ನಲ್ಲಿ ತೊಡಗೋ ವ್ಯಕ್ತಿ ಹೃದಯ ಸಮಸ್ಯೆಗೆ ತುತ್ತಾಗೋ ಸಾಧ್ಯತೆ ಇತರರಿಗಿಂತ ಕಡಿಮೆ. 

ಪ್ರೋಸ್ಟೇಟ್ ಕ್ಯಾನ್ಸರ್‍ಗೆ ತುತ್ತಾಗೋ ಸಾಧ್ಯತೆ ವಿರಳ
ತಿಂಗಳಲ್ಲಿ ಕನಿಷ್ಠ 21 ಬಾರಿ ವೀರ್ಯಾವನ್ನು ಹೊರಹಾಕೋ ಪುರುಷ ಪ್ರೋಸ್ಟೇಟ್ ಕ್ಯಾನ್ಸರ್‍ಗೆ ತುತ್ತಾಗೋ ಸಾಧ್ಯತೆ ಕಡಿಮೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಹಾಗಾಗಿ ಲೈಂಗಿಕ ಕ್ರಿಯೆ ಪ್ರೋಸ್ಟೇಟ್ ಕ್ಯಾನ್ಸರ್ ಸಾಧ್ಯತೆಯನ್ನು ತಗ್ಗಿಸುತ್ತೆ ಎಂದು ಹೇಳಬಹುದು.

ಉತ್ತಮ ನಿದ್ರೆ
ಸೆಕ್ಸ್ ಬಳಿಕ ದೇಹ ದಣಿಯುವ ಕಾರಣ ಉತ್ತಮ ನಿದ್ರೆ ಬರುತ್ತದೆ. ಮನಸ್ಸಿನಲ್ಲಿ ಅದೆಷ್ಟೇ ದುಗುಡ, ಯೋಚನೆಗಳಿದ್ರೂ ಸೆಕ್ಸ್ ಸಮಯದಲ್ಲಿ ಅದೆಲ್ಲ ಮನಸ್ಸಿನಿಂದ ಮರೆಯಾಗುತ್ತವೆ. ಸೆಕ್ಸ್ ಬಳಿಕ ಮನಸ್ಸು ನಿರಾಳವಾಗುತ್ತದೆ. ಇದ್ರಿಂದ ಕಣ್ತುಂಬಾ ನಿದ್ರೆ ಬರುತ್ತದೆ.

ಸೋಂಕಿನಿಂದ ರಕ್ಷಿಸಿ ಇಮ್ಯೂನಿಟಿ ಹೆಚ್ಚಿಸುವ 9 ಆಹಾರಗಳಿವು

ಒತ್ತಡ ತಗ್ಗಿಸುತ್ತೆ
ಸೆಕ್ಸ್ಗೆ ಒತ್ತಡವನ್ನು ತಗ್ಗಿಸೋ ಸಾಮಥ್ರ್ಯವಿದೆ. ಸೆಕ್ಸ್ ಸಮಯದಲ್ಲಿ ಸಂಗಾತಿಯ ಸ್ಪರ್ಶ, ಅಪ್ಪುಗೆ ಮನಸ್ಸಿನ ದುಗುಡವನ್ನು ತಗ್ಗಿಸುತ್ತೆ. ಪ್ರೀತಿಪಾತ್ರರ ಸ್ಪರ್ಶ ಹಾಗೂ ಅಪ್ಪುಗೆ ದೇಹದಲ್ಲಿನ ನಿರಾಳತೆ ಒದಗಿಸುವ ಹಾರ್ಮೋನ್‍ಗಳ ಸ್ರವಿಕೆಯನ್ನು ಹೆಚ್ಚಿಸುತ್ತವೆ. ಇದ್ರಿಂದ ಸೆಕ್ಸ್ ಬಳಿಕ ಒತ್ತಡ ತಗ್ಗಿ ಮನಸ್ಸು ಪ್ರಶಾಂತವಾಗುತ್ತದೆ. 

ಸಂಬಂಧ ಗಟ್ಟಿಗೊಳ್ಳುತ್ತೆ
ದಾಂಪತ್ಯ ಬದುಕಿನ ಯಶಸ್ಸಿಗೆ ಪ್ರೀತಿ, ನಂಬಿಕೆ ಹಾಗೂ ಕಾಳಜಿಯ ಜೊತೆ ಸೆಕ್ಸ್ ಕೂಡ ಅಗತ್ಯ. ಸೆಕ್ಸ್‍ನಲ್ಲಿ ತೊಡಗುವ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಮಧ್ಯೆ ವಿನಿಮಯವಾಗೋ  ಅಪ್ಪುಗೆ, ಚುಂಬನ ಇಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೆ. ಸೆಕ್ಸ್ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನ್ ಅನ್ನು ‘ಲವ್ ಹಾರ್ಮೋನ್’ ಎಂದು ಕೂಡ ಕರೆಯಲಾಗುತ್ತದೆ. ಇದು ಪತಿ ಹಾಗೂ ಪತ್ನಿ ನಡುವೆ ಪ್ರೀತಿ ಹಾಗೂ ನಂಬಿಕೆಯನ್ನು ಹೆಚ್ಚಿಸುತ್ತೆ. 

ಯಂಗ್ ಲುಕ್
ಸೆಕ್ಸ್ ಮುಂದೆ ಆಂಟಿ ಏಜೆಂಗ್ ಕ್ರೀಮ್‍ಗಳು ವೇಸ್ಟ್ ಎನ್ನುತ್ತಾರೆ ಲೈಂಗಿಕ ತಜ್ಞರು. ಸೆಕ್ಸ್ ಸಮಯದಲ್ಲಿ ಬಿಡುಗಡೆಯಾಗೋ ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟೆರೋನ್ ಹಾರ್ಮೋನ್‍ಗಳು ತ್ವಚೆಯ ವಯಸ್ಸನ್ನು ಕಡಿಮೆಗೊಳಿಸುತ್ತವೆ. ಅಧ್ಯಯನವೊಂದರ ಪ್ರಕಾರ ವಾರದಲ್ಲಿ ಕನಿಷ್ಠ 4 ಬಾರಿ ಸೆಕ್ಸ್‌ನಲ್ಲಿ ತೊಡಗೋ ವ್ಯಕ್ತಿಗಳು ತಮ್ಮ ನೈಜ ವಯಸ್ಸಿಗಿಂತ 7-12 ವರ್ಷ ಯಂಗ್ ಆಗಿ ಕಾಣಿಸುತ್ತಾರಂತೆ.