ಫಸ್ಟ್ ಡೇಟಿಂಗ್‌ನಲ್ಲಿ ಜನರು ತಮ್ಮ ಸಂಗಾತಿಯಿಂದ ಇದನ್ನು ಬಯಸುತ್ತಾರೆ!
ಫಸ್ಟ್ ಡೇಟಿಂಗ್ ಅಂದ್ರೆ ತುಂಬಾನೆ ಭಯ ಇರುತ್ತೆ. ಹೇಗಿರುತ್ತಪ್ಪಾ ಡೇಟಿಂಗ್? ಅವರು ಏನು ಕೇಳಬಹುದು? ಯಾವ ರೀತಿ ಮಾತನಾಡೋದು? ಹೀಗೆ ಸಾಲು ಸಾಲು ಪ್ರಶ್ನೆಗಳು ತಲೆಯಲ್ಲಿರುತ್ತೆ. ನಿಮ್ಮ ಡೌಟ್ ಕ್ಲಿಯರ್ ಮಾಡೋಕೆ ನಾವಿಲ್ಲಿ ಫಸ್ಟ್ ಡೇಟಿಂಗ್ ನಲ್ಲಿ ಸಾಮಾನ್ಯವಾಗಿ ಸಂಗಾತಿಯಿಂದ ಜನರು ಏನನ್ನು ನಿರೀಕ್ಷಿಸುತ್ತಾರೆ ಅನ್ನೋದನ್ನು ತಿಳಿಸುತ್ತೇವೆ.
ಮೊದಲ ಡೇಟಿಂಗ್ (first dating) ನಿಮ್ಮನ್ನು ಸ್ವಲ್ಪ ನರ್ವಸ್ ಮಾಡಬಹುದು. ನೀವು ಮೊದಲ ಬಾರಿಗೆ ಡೇಟಿಂಗ್ ಗೆ ಹೋಗುವ ಹಿಂದಿನ ರಾತ್ರಿ ನೀವು ನಿದ್ರೆ ಮಾಡೋದೆಇಲ್ಲ. ನೀವು ಅದರ ಬಗ್ಗೆ ಯೋಚಿಸುತ್ತಲೇ ಇರುತ್ತೀರಿ. ವಿಶೇಷವಾಗಿ ಎದುರಿಗಿರುವ ಸಂಗಾತಿಯಿಂದ ಏನನ್ನು ನಿರೀಕ್ಷಿಸಬೇಕೆಂದು ನಿಮಗೆ ತಿಳಿದಿಲ್ಲದಿದ್ದಾಗ ಹೀಗೆಲ್ಲಾ ಆಗೋದು ಸಾಮಾನ್ಯ. 'ಅವರು ನನ್ನನ್ನು ಇಷ್ಟಪಡುತ್ತಾರೆಯೇ?, ಮೊದಲ ಡೇಟಿಂಗ್ ನಲ್ಲಿ ಕಿಸ್ ಮಾಡಬಹುದೇ?', ಮತ್ತು 'ದಿನಾಂಕದ ಬಗ್ಗೆ ನಾನು ಯಾವಾಗ ಫಾಲೋ ಅಪ್ ಮಾಡಬೇಕು?' ಎಂಬಂತಹ ಅನೇಕ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ನಿಮಗೂ ಹೀಗೆ ಆಗುತ್ತಿದ್ದರೆ, ನಿಮ್ಮ ಸಂಶಯ ನಿವಾರಿಸೋ ಒಂದಿಷ್ಟು ವಿಷ್ಯಗಳು ಇಲ್ಲಿವೆ.
ಡೇಟಿಂಗ್ ಗೆ ಮೊದಲು ಅಷ್ಟೊಂದು ನರ್ವಸ್ ಆಗೋದು ಯಾಕೆ? ಈ ಸಮಯದಲ್ಲಿ ಯಾವ ರೀತಿ ಮಾತನಾಡಬಹುದು ಅನ್ನೋದು ತುಂಬಾನೆ ಮುಖ್ಯ. ಯಾಕೆಂದರೆ ಮೊದಲ ಡೇಟಿಂಗ್ ನಲ್ಲಿ ನೀವು ಇಂಪ್ರೆಸ್ ಮಾಡಿದ್ರೆ ಮಾತ್ರ ಎರಡನೆ ಭಾರಿ ಡೇಟಿಂಗ್ ಮಾಡಲು ಸಾಧ್ಯವಾಗುತ್ತೆ. ಹೆಚ್ಚಾಗಿ ಫಸ್ಟ್ ಡೇಟಿಂಗ್ ನಲ್ಲಿ ಏನೇನು ನಡೆಯುತ್ತೆ ಅನ್ನೋದರ ಬಗ್ಗೆ ತಿಳಿಯೋಣ.
ಫಸ್ಟ್ ಡೇಟಿಂಗ್ ಮೊದಲು ಕಾಡುವ ಭಯ: ನಿಮ್ಮ ಡೇಟ್ ನಿಮ್ಮನ್ನು ಇಷ್ಟಪಡದಿದ್ದರೆ ಏನು ಮಾಡುವುದು? ಮತ್ತು ಡೇಟಿಂಗ್ ಭಯ ಹುಟ್ಟಿಸಿದರೆ ಏನು ಮಾಡುವುದು? ಎಂದೆಲ್ಲಾ ಯೋಚಿಸಬಹುದು ಅಲ್ವಾ? ಆದ್ರೆ ನಮ್ಮ ಸಲಹೆ ಏನೆಂದರೆ ಹೆಚ್ಚು ಭಯ ಪಡೋ ಅವಶ್ಯಕತೆ ಇಲ್ಲ. ನೀವು ಹೇಗಿದ್ದೀರೋ ಹಾಗೆ ಅವರ ಮುಂದೆ ಇರಿ. ಇ ಡೇಟಿಂಗ್ ಅನ್ನೋದು ಹೊಸ ಅನುಭವ ನೀಡೋದು ಸುಳ್ಳಲ್ಲ. .
ಯಾವುದಕ್ಕೂ ಭಯ ಪಡೋ ಅವಶ್ಯಕತೆ ಇಲ್ಲ. ಏನಾಗುತ್ತದೆ?: ಏನಾಗುತ್ತದೆ ಎಂದು ಯೋಚನೆ ಮಾಡುತ್ತಲೇ ಇದ್ದರೆ ಅದರಿಂದ ಆ ಸಂದರ್ಭವನ್ನು ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಕೇವಲ್ ಆ ಮೂಮೆಂಟ್ ನ್ನು ಎಂಜಾಯ್ ಮಾಡಿ, ರಿಸಲ್ಟ್ ಏನಾಗುತ್ತದೆ ಅನ್ನೊದು ಬೇಡ (do not worry about result). ಎಲ್ಲವೂ ಆಗೋದು ಅನುಭವಕ್ಕೆ, ಅದಕ್ಕಾಗಿ ಎಲ್ಲವನ್ನು ಧೈರ್ಯದಿಂದ ಫೇಸ್ ಮಾಡಲು ಕಲಿಯಿರಿ.
ಡೇಟಿಂಗ್ ನಿಂದ ನೀವು ಏನು ಬಯಸುತ್ತೀರಿ ಅನ್ನೋ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿ (what you expect from date)
ಮೊದಲ ಡೇಟಿಂಗ್ ಗೆ ಹೋಗುವ ಮೊದಲು ಮತ್ತೊಂದು ಪ್ರಮುಖ ಹಂತವೆಂದರೆ ಡೇಟಿಂಗ್ ನಿಂದ ನೀವು ಏನನ್ನು ಬಯಸುತ್ತೀರಿ ಎಂದು ನಿಮಗೆ ನಿಖರವಾಗಿ ತಿಳಿದಿದೆಯೇ ಎಂದು ನೋಡುವುದು. ನೀವು ಸಿರಿಯಸ್ ರಿಲೇಶನ್ ಶಿಪ್ ಹುಡುಕುತ್ತಿದ್ದೀರಾ, ಅಥವಾ ನೀವು ಸ್ವಲ್ಪ ಮೋಜು ಮಾಡಲು ಬಯಸುವಿರಾ? ಕೆಲವು ಜನರು ಕೇವಲ ಮೋಜಿಗಾಗಿ ಮಾತ್ರ ಡೇಟಿಂಗ್ ಮಾಡಲು ಬಯಸುತ್ತಾರೆ, ಆದರೆ ಇಂದಿನ ಸಮಯದಲ್ಲಿ, ಡೇಟಿಂಗ್ ಕೇವಲ ಮೋಜಿಗಾಗಿ ಅಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು.
ತಜ್ಞರ ಪ್ರಕಾರ, ನಿಮ್ಮ ಡೇಟಿಂಗ್ ನ ಎಷ್ಟು ಆರಾಮದಾಯಕವಾಗಿದೆ ಅನ್ನೋದನ್ನು ನೋಡಬೇಕು. ನೀವು ಇಬ್ಬರೂ ಫ್ರೀ ಆಗಿ ಮನಸು ಬಿಚ್ಚಿ ಮಾತನಾಡಿದರೆ ಇಬ್ಬರಿಗೂ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಆಸೆ ಇದೆ ಅಂತಾ ಆಯ್ತು. ಒಂದು ವೇಳೆ ಒಬ್ಬರು ಸರಿಯಾಗಿ ಮಾತನಾಡದೇ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಅಂದ್ರೆ, ಇದೇ ಲಾಸ್ಟ್ ಡೇಟಿಂಗ್ ಆಗೋದು ಉತ್ತಮ.
ಫಸ್ಟ್ ಡೇಟಿಂಗ್ ನಲ್ಲಿ ಕಿಸ್ ಮಾಡಬಹುದೇ?: ಈ ಒಂದು ಪ್ರಶ್ನೆ ಕೂಡ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತೆ. ಇಷ್ಟು ಸಮಯದಿಂದ ದಿನ ರಾತ್ರಿ ಎಲ್ಲಾ ಮಾತನಾಡಿದ್ದೇವೆ, ಫೀಲಿಂಗ್ಸ್ ಹಂಚಿಕೊಂಡಿದ್ದೇವೆ. ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ. ಹಾಗಾದ್ರೆ ಫಸ್ಟ್ ಡೇಟಿಂಗ್ ನಲ್ಲಿ ಕಿಸ್ ಮಾಡಬಹುದೇ?
ಫಸ್ಟ್ ಡೇಟಿಂಗ್ ನಲ್ಲಿ ಕಿಸ್ ಮಾಡಬೇಕೆ?: ಬೇಡವೇ ಅನ್ನೋ ಬಗ್ಗೆ ನೀವು ಎರಡು ಯೋಚನೆ ಮಾಡುವ ಅಗತ್ಯವೇ ಇಲ್ಲ. ಒಂದು ವೇಳೆ ನಿಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿದ್ದರೆ, ನಿಮಗೆ ಕಂಫರ್ಟೇಬಲ್ ಎನಿಸಿದರೆ ಖಂಡಿತವಾಗಿಯೂ ಕಿಸ್ ಮಾಡಬಹುದು. ಆದರೆ ಒಂದು ವೇಳೆ ನೀವಿಬ್ಬರೂ ಇನ್ನೂ ಒಬ್ಬರಿಗೊಬ್ಬರು ಸರಿಯಾಗಿ ತಿಳಿದುಕೊಳ್ಳದಿದ್ದರೆ, ಕಂಫರ್ಟೇಬಲ್ ಆಗಿಲ್ಲದಿದ್ದರೆ ಕಿಸ್ ಮಾಡದೇ ಇರೋದು ಬೆಸ್ಟ್.