ಅನಿಲ್ ಕುಂಬ್ಳೆ ಅವರ ಕ್ರಿಕೆಟ್ ಸಾಧನೆಗಳನ್ನು ಮೀರಿದ ವೈಯಕ್ತಿಕ ಜೀವನದ ಅಪೂರ್ವ ಪ್ರೇಮಕಥೆ ಇಲ್ಲಿದೆ. ಚೇತನಾ ರಾಮತೀರ್ಥ ಜೊತೆಗಿನ ಅವರ ಪ್ರಣಯ, ಸವಾಲುಗಳು ಮತ್ತು ಕೌಟುಂಬಿಕ ಬದುಕಿನ ಸುಂದರ ಯಾನ.
ಭಾರತದ ಶ್ರೇಷ್ಠ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಮೈದಾನದಲ್ಲಿ ತೋರಿದ ಸಾಧನೆಗಳು ಅವಿಸ್ಮರಣೀಯ. ಒಂದೇ ಪಂದ್ಯದಲ್ಲಿ ದಾಖಲೆಯ 10 ವಿಕೆಟ್ ಪಡೆದದ್ದು ಯಾರಿಂದಲೂ ಮಾಡಲಾಗದ ಸಾಹಸ. ಮೈದಾನದಲ್ಲಿ ತಮ್ಮ ಅಪ್ರತಿಮ ಪ್ರದರ್ಶನಗಳಿಗೆ ಹೆಸರುವಾಸಿ ಅನಿಲ್. ಅವರ ಕ್ರಿಕೆಟ್ ಸಾಧನೆಗಳನ್ನು ಮೀರಿಯೂ ಕುಂಬ್ಳೆ ಅವರ ವೈಯಕ್ತಿಕ ಜೀವನ ಕೂಡ ಅಷ್ಟೇ ಕುತೂಹಲಕಾರಿ. ಅವರ ಲವ್ ಸ್ಟೋರಿ ನಿಮ್ಮಲ್ಲಿ ಕುತೂಹಲ ಮೂಡಿಸದಿರದು. ತಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ಹೆಸರುವಾಸಿಯಾದ ಅನಿಲ್ ಕುಂಬ್ಳೆ, ತಮ್ಮ ವೈಯಕ್ತಿಕ ಜೀವನದಿಂದಲೂ ಹೃದಯಗಳನ್ನು ಗೆದ್ದವರು. ಅವರ ಪತ್ನಿ ಚೇತನಾ ರಾಮತೀರ್ಥ ಹಾಗೂ ಅನಿಲ್ ಲವ್ ಸ್ಟೋರಿ ಇಲ್ಲಿದೆ ನೋಡಿ.
ಚೇತನಾ ರಾಮತೀರ್ಥ ಅನಿಲ್ ಕುಂಬ್ಳೆಗೂ ಮೊದಲು ಬೇರೊಬ್ಬರನ್ನು ಮದುವೆಯಾಗಿದ್ದರು. ಮತ್ತು ಅದರಿಂದ ಒಬ್ಬ ಮಗುವಿನ ತಾಯಿಯಾಗಿದ್ದವರು. ಇವರಿಬ್ಬರ ಆಕಸ್ಮಿಕ ಭೇಟಿಯಿಂದ ಹಿಡಿದು ಮಗಳ ಪಾಲನೆಗಾಗಿ ಹೋರಾಟದವರೆಗೆ, ಕುಂಬ್ಳೆ ಅವರ ಪ್ರೇಮಪ್ರಯಾಣವು ಅವರ ವೃತ್ತಿಜೀವನದಂತೆಯೇ ಸ್ಪೂರ್ತಿದಾಯಕವಾಗಿದೆ. ಈ ಅಸಾಧಾರಣ ಪ್ರೇಮಕಥೆಯ ಕೆಲವು ಮಜಲು ಇಲ್ಲಿವೆ.
ಚೇತನಾ ರಾಮತೀರ್ಥ ಹಾಗೂ ಅನಿಲ್ ಕುಂಬ್ಳೆ ಅವರ ಪ್ರೇಮಕಥೆ ಸವಾಲುಗಳ ನಡುವೆ ತೆರೆದುಕೊಂಡಿತು. ಚೇತನಾ ಅವರೊಂದಿಗಿನ ಕುಂಬ್ಳೆ ಅವರ ಪ್ರಣಯ ಅವರು ಪ್ರಯಾಣ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಾರಂಭವಾಯಿತು. ಆಗಲೇ ಚೇತನಾಗೆ ಮದುವೆಯಾಗಿತ್ತು. ಆದರೆ ದಾಂಪತ್ಯದಲ್ಲಿ ಹಿತವಿರಲಿಲ್ಲ. ಚೇತನಾಳ ಮೊದಲ ಮದುವೆ ಕಷ್ಟದಿಂದ ಕೂಡಿತ್ತು. ಮಗಳೊಬ್ಬಳಿದ್ದಳು. ದಾಂಪತ್ಯದಲ್ಲಿ ದೊರೆಯದ ಸಾಂತ್ವನ, ಸ್ನೇಹ ಆಕೆಗೆ ಕುಂಬ್ಳೆಯವರಿಂದ ದೊರೆಯಿತು. ಕ್ರಮೇಣ ಅದು ಗಾಢವಾದ ಬಂಧವಾಗಿ ಬೆಳೆಯಿತು.
ಅನಿಲ್ ಕುಂಬ್ಳೆ ಜೊತೆಗಿನ ಅವಳ ಗಾಢವಾದ ಪ್ರೀತಿ, ಮೊದಲ ದಾಂಪತ್ಯಕ್ಕೆ ಆಕೆ ವಿಚ್ಛೇದನದ ಅರ್ಜಿ ಸಲ್ಲಿಸಲು ಧೈರ್ಯವನ್ನು ನೀಡಿತು. ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಅವರ ನಿರ್ಧಾರ, ಅವರ ಜೀವನದಲ್ಲಿ ಪ್ರಮುಖ ಕ್ಷಣವಾಗಿತ್ತು. ಆದರೆ ಅವರು ತಮ್ಮ ಮಗಳು ಆರುಣಿಯ ಪಾಲನೆಗಾಗಿ ಕಠಿಣವಾದ ಕಾನೂನು ಹೋರಾಟ ಕೈಗೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿಲ್ ಕುಂಬ್ಳೆ ಚೇತನಾಳೊಂದಿಗೆ ನಿಂತರು. ಈ ಸಮಯದಲ್ಲಿ ಅವರ ಅಚಲ ಬೆಂಬಲವು ಅವರ ಸಂಬಂಧವನ್ನು ಗಟ್ಟಿಗೊಳಿಸಿತು. ಅವರ ಬದ್ಧತೆಯನ್ನು ಬಹಿರಂಗಪಡಿಸಿತು.
ಚೇತನಾಳ ವಿಚ್ಛೇದನ ಮತ್ತು ಪಾಲನಾ ಗೆಲುವಿನ ನಂತರ, ಅನಿಲ್ ಕುಂಬ್ಳೆ ಚೇತನಾ ಮುಂದೆ ತಮ್ಮ ಮದುವೆಯ ಪ್ರಸ್ತಾಪ ಮಾಡಿದರು. ಆರಂಭದಲ್ಲಿ ಚೇತನಾ ಹಿಂಜರಿದರೂ, ಅಂತಿಮವಾಗಿ ಒಪ್ಪಿಕೊಂಡರು. ಕುಂಬ್ಳೆಯೊಂದಿಗೆ ಹೊಸ ಬದುಕಿನ ಆರಂಭವನ್ನು ಸ್ವೀಕರಿಸಿದರು. 1999ರಲ್ಲಿ ಕುಂಬ್ಳೆ ಚೇತನಾಳನ್ನು ವಿವಾಹವಾದಾಗ, ಅವಳ ಮಗಳು ಆರುಣಿಯನ್ನೂ ದತ್ತು ಪಡೆದರು. ಈ ಸ್ವೀಕಾರ ಮತ್ತು ಪ್ರೀತಿಯ ಕ್ರಿಯೆ ಅವರ ಬಂಧವನ್ನು ಗಟ್ಟಿಗೊಳಿಸಿತು.
ಡಿವೋರ್ಸ್ ಬಳಿಕ ವಿವಾಹವಾಗದೇ ಉಳಿದ ಮಹಿಳೆಯ ಜೀವನಾಂಶವನ್ನು ಎರಡೂವರೆ ಪಟ್ಟು ಹೆಚ್ಚಿಸಿದ ಸುಪ್ರೀಂಕೋರ್ಟ್
ತಮ್ಮ ಕ್ರಿಕೆಟ್ ವೃತ್ತಿಜೀವನದ ಬೇಡಿಕೆಯ ಹೊರತಾಗಿಯೂ ಕುಂಬ್ಳೆ ಯಾವಾಗಲೂ ಕುಟುಂಬವನ್ನು ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಕಠಿಣತೆಗಳನ್ನು ವೈಯಕ್ತಿಕ ಬದ್ಧತೆಗಳೊಂದಿಗೆ ಬ್ಯಾಲೆನ್ಸ್ ಮಾಡಿದ್ದಾರೆ. ನಂತರದ ದಿನಗಳಲ್ಲಿ ಅನಿಲ್ ಮತ್ತು ಚೇತನಾ ತಮ್ಮದೇ ಆದ ಇಬ್ಬರು ಮಕ್ಕಳಾದ ಮಾಯಾಸ್ ಮತ್ತು ಸ್ವಸ್ತಿಯನ್ನು ಬದುಕಿಗೆ ಬರಮಾಡಿಕೊಂಡರು.
ಅನಿಲ್ ಮತ್ತು ಚೇತನಾ ಅವರ ಸಂಬಂಧದ ಅಡಿಪಾಯ ನಂಬಿಕೆ ಮತ್ತು ಪರಸ್ಪರ ಗೌರವ, ಪ್ರೀತಿ ಮತ್ತು ನಿಷ್ಠೆಯಲ್ಲಿ ನೆಲೆಗೊಂಡಿದೆ. ಕ್ರಿಕೆಟಿಗರಾಗಿ, ಪತಿ ಮತ್ತು ತಂದೆಯಾಗಿ ಅನಿಲ್ ಕುಂಬ್ಳೆ ಅವರ ಜೀವನ ಪ್ರಯಾಣದ ಯಶಸ್ಸನ್ನು ಕೇವಲ ವಿಕೆಟ್‌ಗಳಲ್ಲಿ ಅಳೆಯಲು ಆಗುವುದಿಲ್ಲ. ಬದಲಾಗಿ ಅವರು ಪೋಷಿಸಿಕೊಂಡು ಬಂದಿರುವ ಮತ್ತು ಪಾಲಿಸುವ ಸಂಬಂಧಗಳಲ್ಲಿಯೂ ಅಳೆಯಬಹುದು ಎಂಬುದನ್ನು ತೋರಿಸಿದೆ.
ನಾನು 600 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದೆ: ಸಂಚಲನ ಸೃಷ್ಟಿಸಿದ ಕ್ರಿಕೆಟಿಗನ ಹೇಳಿಕೆ
