MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್​ ದೇವಗನ್​! Anniversy ದಿನ ರೋಚಕ ಸ್ಟೋರಿ ರಿವೀಲ್​

ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್​ ದೇವಗನ್​! Anniversy ದಿನ ರೋಚಕ ಸ್ಟೋರಿ ರಿವೀಲ್​

ಕಾಜೋಲ್ ಮತ್ತು ಅಜಯ್ ದೇವಗನ್ ಅವರ 27ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಜಯ್‌ಗಾಗಿ ಇಬ್ಬರು ಪ್ರಮುಖ ನಟಿಯರಾದ ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದಿದ್ದ ಜಗಳದ ಹಳೆಯ ಕಥೆಯೊಂದು ಮುನ್ನೆಲೆಗೆ ಬಂದಿದೆ.  

2 Min read
Author : Suchethana D
Published : Feb 25 2026, 08:27 PM IST
Share this Photo Gallery
  • FB
  • TW
  • Linkdin
  • Whatsapp
16
27 ವರ್ಷಗಳ ದಾಂಪತ್ಯದ ಪಯಣ
Image Credit : instagram

27 ವರ್ಷಗಳ ದಾಂಪತ್ಯದ ಪಯಣ

ತಾರಾ ಜೋಡಿಗಳು ಸುದೀರ್ಘವಾಗಿ ದಾಂಪತ್ಯ ಜೀವನ ನಡೆಸುವುದು ಬಲು ಅಪರೂಪ ಎನ್ನಬಹುದು. ಚಿತ್ರ ತಾರೆಯರ ಜೋಡಿ ಎಂದರೆ ಅಲ್ಲಿ ಡಿವೋರ್ಸ್​ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದ್ದು, ಇದರ ನಡುವೆಯೂ ಕೆಲವು ಜೋಡಿಗಳು ಸುದೀರ್ಘ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ನಟಿ ಕಾಜೋಲ್​​ ಮತ್ತು ಅಜಯ್​ ದೇವಗನ್​. ನಿನ್ನೆ ಅರ್ಥಾತ್​ ಫೆ.24ರಂದು ಈ ಜೋಡಿ ಮದುವೆಯಾಗಿ 27 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಇವರ ಕುತೂಲದ ಲವ್​ ಸ್ಟೋರಿಯೂ ರಿವೀಲ್​ ಆಗಿದೆ.

26
ಅಜಯ್​ಗಾಗಿ ಇಬ್ಬರ ಜಗಳ
Image Credit : Social Media

ಅಜಯ್​ಗಾಗಿ ಇಬ್ಬರ ಜಗಳ

ಅದೇನೆಂದರೆ, ಅಜಯ್​ ದೇವಗನ್​ಗಾಗಿ ಇಬ್ಬರು ಬಾಲಿವುಡ್​ ನಾಯಕಿಯರು ಫೈಟ್​ ನಡೆಸಿರುವ ವಿಚಾರ ಇದಾಗಿದೆ. ಈ ನಾಯಕಿಯರಲ್ಲಿ ಒಬ್ಬರಾಗಿರುವ ರವೀನಾ ಟಂಡನ್​ (Raveena Tondon) ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದು, ಅದು ಮತ್ತೆ ಮುನ್ನೆಲೆಗೆ ಬಂದಿದೆ.

Related Articles

Related image1
ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!
Related image2
ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
36
ರವೀನಾ-ಕರಿಷ್ಮಾ
Image Credit : Social Media

ರವೀನಾ-ಕರಿಷ್ಮಾ

ತಾವು ಹಾಗೂ ಇನ್ನೋರ್ವ ಕರಿಷ್ಮಾ ಕಪೂರ್​ ಹೇಗೆ ಅಜಯ್​ ದೇವಗನ್​ ಅವರಿಗಾಗಿ ಹೊಡೆದಾಟ ನಡೆಸಿದ್ವಿ ಎನ್ನುವುದನ್ನು ನಟಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ರವೀನಾ ಟಂಡನ್​, ಕರಿಷ್ಮಾ ಕಪೂರ್ ಅವರ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದರು. ಆಕೆ ತನ್ನ ಇನ್‌ಫ್ಲುಯೆನ್ಸ್ ಬಳಸಿ ನನಗೆ ನಾಲ್ಕು ಸಿನಿಮಾ ಸಿಗದ ಹಾಗೆ ಮಾಡಿದ್ದಳು ಎಂದಿದ್ದರು. ತಮ್ಮ ಬಾಲಿವುಡ್​ ಸ್ನೇಹಿತೆಯ ಹೆಸರು ತೆಗೆದುಕೊಂಡಿದ್ದ ನಟಿ, ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕಾಜೊಲ್, ರಾಣಿ ಮುಖಜರ್ಜಿ, ನೀಲಂ, ಮನೀಷ್ ಕೊಯಿರಾಲಾ (Maneesha Koirala) ಅವರ ಜೊತೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿ ಕರಿಷ್ಮಾ ಅವರ ಹೆಸರನ್ನು ಹೇಳದೇ ಆಕೆ ತಮಗೆ ಅನ್ಯಾಯ ಮಾಡಿದುದಾಗಿ ಹೇಳಿದ್ದರು.

46
ರವೀನಾ ಹೇಳಿದ ವಿಷಯವಿದು!
Image Credit : Social Media

ರವೀನಾ ಹೇಳಿದ ವಿಷಯವಿದು!

ಆಕೆ (ಕರಿಷ್ಮಾ ಕಪೂರ್​) ನನ್ನ ವಿಚಾರವಾಗಿ ತುಂಬ ಅಭದ್ರತೆಯಿಂದ ಇದ್ದಳು. ನಾಲ್ಕು ಸಿನಿಮಾಗಳಿಂದ ನನ್ನನ್ನು ತೆಗೆದು ಹಾಕುವಂತೆ ಮಾಡಿದ್ದಳು. ನಾನು ಆಕೆಯ ಜೊತೆ ಒಂದು ಸಿನಿಮಾ ಮಾಡಬೇಕಾಗಿ ಬಂತು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಈ ತರ ಎಲ್ಲ ಆಗತ್ತೆ, ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿದ್ದರು.

56
ಲವ್​ನಲ್ಲಿ ಬಿದ್ದಿದ್ದ ನಟಿಯರು
Image Credit : Social Media

ಲವ್​ನಲ್ಲಿ ಬಿದ್ದಿದ್ದ ನಟಿಯರು

ಅಷ್ಟಕ್ಕೂ ಆಗಿರೋದು ಏನೆಂದರೆ, ರವೀನಾ ಮತ್ತು ಅಜಯ್​ ದೇವಗನ್​ (Ajay Devagan) ನಡುವೆ ಕುಚ್ ಕುಚ್ ಇತ್ತು. ಇವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದರು. ಆದರೆ ಇದೇ ವೇಳೆ ಅಜಯ್​ ಅವರ ಕಣ್ಣು ಕರಿಷ್ಮಾ ಅವರ ಮೇಲೆ ಬಿತ್ತು. ಅವರು ಕರಿಷ್ಮಾ ಜೊತೆ ಡೇಟಿಂಗ್​ (Dating) ಮಾಡಲು ಶುರು ಮಾಡಿದರು. ಇದರಿಂದಾಗಿ ಈ ಇಬ್ಬರು ನಟಿಯರ ಮಧ್ಯೆ ಪೈಪೋಟಿ, ಅಸೂಯೆಗಳ ಜಗಳ ಶುರುವಾಗಿತ್ತು.

66
ತಾರಕ್ಕೇರಿದ್ದ ಜಗಳ
Image Credit : Social Media

ತಾರಕ್ಕೇರಿದ್ದ ಜಗಳ

ಪಾರ್ಟಿಯೊಂದರಲ್ಲಿ (Party) ರವೀನಾ ಮತ್ತು ಕರಿಷ್ಮಾ ಕ್ಯಾಮೆರಾಕ್ಕೆ ಪೋಸ್ ಕೊಡುವ ಸಂದರ್ಭ ಬಂದಾಗ ಇಬ್ಬರೂ ದೂರ ಹೋಗಿದ್ದಾಗಲೇ ಇಬ್ಬರ ನಡುವಿನ ತಿಕ್ಕಾಟದ ಅರಿವಾಗಿತ್ತು. 'ಅಗತ್ಯ ಬಿದ್ದರೆ ನಾನು ಪೊರಕೆ ಜೊತೆ ಪೋಸ್ ಕೊಡ್ತೀನಿ. ಕರೀಷ್ಮಾ, ನಾನು ಸ್ನೇಹಿತರಲ್ಲ. ಕೆಲಸದ ವಿಷಯ ಬಂದಾಗ ಈ ರೀತಿ ಅಹಂಕಾರದ ಸಮಸ್ಯೆಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ" ಎಂದು ರವೀನಾ ಹೇಳಿದ್ದರು. ಈಗ ಎಲ್ಲವೂ ಸ್ಪಷ್ಟವಾಗಿ ಬಹಿರಂಗಗೊಂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಾಜೋಲ್
ಅಜಯ್ ದೇವಗನ್
ಸಂಬಂಧಗಳು
ಮದುವೆ
ಪ್ರೇಮ ವಿವಾಹ
ಬಾಲಿವುಡ್

Latest Videos
Recommended Stories
Recommended image1
ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ!
Recommended image2
'ಮೈ ಡಾರ್ಲಿಂಗ್ ರುಷಿ' ಎಂದು ಸೊಸೆಯನ್ನು ಕರೆದು ಮುದ್ದಾಡಿದ ಅತ್ತೆ ಮಾಧವಿ; ವಿಜಯ್ ರಿಯಾಕ್ಷನ್ ಏನಿತ್ತು ಗೊತ್ತಾ?
Recommended image3
ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
Related Stories
Recommended image1
ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!
Recommended image2
ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved