Cricketer Autobiography: ಕ್ರಿಕೆಟಿಗ ತಮ್ಮ ಆತ್ಮಚರಿತ್ರೆಯಲ್ಲಿ 600 ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದಾರೆ. ಪತ್ನಿಯಿಂದಾಗಿ ಪ್ಲೇಬಾಯ್ ಆದೆ ಎಂದು ಹೇಳಿಕೊಂಡಿದ್ದಾರೆ.
ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟಿಗರು ತುಂಬಾ ಕೂಲ್ ಅಗಿರುತ್ತಾರೆ ಮತ್ತು ಆರಾಮದಾಯಕ ಜೀವನ ನಡೆಸುತ್ತಾರೆ. ಜೀವನದ ಪ್ರತಿಯೊಂದು ಕ್ಷಣವನ್ನು ವೆಸ್ಟ್ ಇಂಡೀಸ್ ಆಟಗಾರರು ಆನಂದಿಸುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿಪಡಿಸಲ್ಲ ಎಂದು ಹೇಳಿಕೊಳ್ಳುತ್ತಾರೆ. ಕ್ರಿಕೆಟಿಗ ಬ್ರಾವೋ ಮದುವೆಯಾಗಿಲ್ಲ. ಆದ್ರೆ ಬ್ರಾವೋಗೆ ಮಕ್ಕಳು ಮತ್ತು ಅನೇಕ ಗೆಳತಿಯರಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಹಾಸ್ಯ ಕಲಾವಿದ ಕಪಿಲ್ ಶರ್ಮಾ, ತಮ್ಮ ಶೋದಲ್ಲಿ ಕ್ರಿಸ್ ಗೇಲ್ ಅವರ ಆನಂದಕರ ಮತ್ತು ವಿಲಾಸಿಮಯ ಜೀವನದ ಬಗ್ಗೆ ಹೇಳಿದ್ದರು. ಈಜುಕೊಳದಲ್ಲಿ ಪತ್ನಿ ಸಮ್ಮುಖದಲ್ಲಿಯೇ ಗೆಳತಿಯರೊಂದಿಗೆ ಗೇಲ್ ಎಂಜಾಯ್ ಮಾಡುತ್ತಾರೆ. ನಿಜವಾಗಿ ಜೀವನವನ್ನು ಗೇಲ್ ಆನಂದಿಸುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟಿಗನೋರ್ವ, ತಾನು 600 ಯುವತಿಯರೊಂದಿಗೆ ಸಂಬಂಧದಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ.
ನಾವು ಹೇಳುತ್ತಿರುವ ಆಟಗಾರನ ಹೆಸರು ಟಿನೋ ಬೆಸ್ಟ್. ವೆಸ್ಟ್ ಇಂಡೀಸ್ ತಂಡಕ್ಕಾಗಿ 26 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿನೋ ತಮ್ಮ ಆತ್ಮಚರಿತ್ರೆ 'ಮೈಂಡ್ ದಿ ವಿಂಡೋಸ್ ಮೈ ಸ್ಟೋರಿ'ಯಲ್ಲಿ ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಅನೇಕ ದೇಶಗಳಲ್ಲಿ ನೂರಾರು ಹುಡುಗಿಯರೊಂದಿಗೆ ಸಂಬಂಧ ಹೊಂದಿರುವ ವಿಷಯವನ್ನು ಟಿನೋ ಬೆಸ್ಟ್ ಬಹಿರಂಗಪಡಿಸಿದ್ದಾರೆ.
ನಾನು ಸುಂದರವಾದ ಬೋಳು ತಲೆಯ ವ್ಯಕ್ತಿ
ಹುಡುಗಿಯರು ನನ್ನನ್ನು ಇಷ್ಟಪಡುತ್ತಾರೆ ಮತ್ತು ನಾನು ಕೂಡ ಅವರನ್ನು ಇಷ್ಟಪಡುತ್ತೇನೆ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಟಿನೋ ಬೆಸ್ಟ್ ತಮ್ಮನ್ನು ಜಗತ್ತಿನಲ್ಲೇ ಅತ್ಯಂತ ಸುಂದರವಾಗಿ ಕಾಣುವ ಬೋಳು ತಲೆಯ ವ್ಯಕ್ತಿ ಎಂದು ಕರೆದುಕೊಂಡಿದ್ದಾರೆ. ನಾನು ಕ್ರಿಕೆಟ್ ಆಡಲು ಎಲ್ಲಿಗೆ ಹೋದರೂ ಅಲ್ಲಿಯ ಹುಡುಗಿಯರೊಂದಿಗೆ ಡೇಟ್ ಮಾಡುತ್ತಿದ್ದ ಮತ್ತು ಅವರೊಂದಿಗೆ ರಾತ್ರಿ ಕಳೆಯುತ್ತಿದ್ದೆ. ಹಾಗಾಗಿ ವಿದೇಶ ಪ್ರವಾಸ ಸೇರಿದಂತೆ ಸುಮಾರು 500 ರಿಂದ 600 ಹುಡುಗಿಯರೊಂದಿಗೆ ನಾನು ಸಂಬಂಧ ಹೊಂದಿದ್ದೇನೆ ಎಂದು ಟಿನೋ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಹೆಂಡ್ತಿಯಿಂದಾಗಿ ಪ್ಲೇಬಾಯ್ ಆದೆ!
ಇನ್ನು ಆತ್ಮಚರಿತ್ರೆಯಲ್ಲಿ ಪತ್ನಿಯ ಬಗ್ಗೆಯೂ ಟಿನೋ ಬೆಸ್ಟ್ ಬರೆದುಕೊಂಡಿದ್ದಾರೆ. ನನ್ನ ಮೊದಲ ಪ್ರೀತಿ ಮೆಲಿಸ್ಸಾ. ನಮ್ಮಿಬ್ಬರಿಗೂ ತಮಾನಿ ಎಂಬ ಮಗಳಿದ್ದಾಳೆ. ಆದರೆ ಮೆಲಿಸ್ಸಾ ಮತ್ತು ನನ್ನ ನಡುವಿನ ಸಂಬಂಧ ಪದೇ ಪದೇ ಹದಗೆಡುತ್ತಲೇ ಇತ್ತು. ಬಾರ್ಬಡೋಸ್ ಪರ ವಿಕೆಟ್ ಪಡೆದುಕೊಂಡ್ರೆ ನಿನ್ನ ಹೆಂಡ್ತಿ ಹಿಂದಿರುಗುತ್ತಾಳೆ ಎಂದು ನನ್ನ ಗೆಳೆಯರು ಹೇಳಿದ್ದರು. ವಿಕೆಟ್ ಪಡೆದುಕೊಂಡರೂ ಮೆಲಿಸ್ಸಾ ಹಿಂದಿರುಗಿ ಬರಲಿಲ್ಲ. ನನ್ನ ಗೆಳೆಯರ ಮಾತು ಸುಳ್ಳಾಯ್ತು. ಹೆಂಡತಿ ಹಿಂದಿರುಗಿ ಬರದ ಕಾರಣ ನಾನು ಪ್ಲೇಬಾಯ್ ಆದೆ. ಅದು ಯಾರೇ ಆಗಿರಲಿ ಇಷ್ಟಪಡುವ ಹುಡುಗಿ ಜೊತೆ ಮಾತನಾಡುತ್ತಿದ್ದೆ. ಒಪ್ಪಿದ್ರೆ ಡೇಟ್ ಹೋಗಿ ಜೊತೆಯಾಗಿ ರಾತ್ರಿ ಕಳೆಯತ್ತಿದ್ದೆ ಎಂದು ಟಿನೋ ಬೆಸ್ಟ್ ಹೇಳಿದ್ದಾರೆ.
ವಾರಕ್ಕೆ 5 ರಿಂದ 6 ಬಾರಿ ಡೇಟ್
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಟಿನೋ ಬೆಸ್ಟ್ ತಮ್ಮ ಆತ್ಮಚರಿತ್ರೆಯಲ್ಲಿ, "ನಾನು ಬೇರೆ ಬೇರೆ ಹುಡುಗಿಯರೊಂದಿಗೆ ವಾರಕ್ಕೆ 5 ಅಥವಾ 6 ಬಾರಿ ಡೇಟಿಂಗ್‌ಗೆ ಹೋಗುತ್ತಿದ್ದೆ. ನಾನು ನಿರಂತರವಾಗಿ ಪ್ರಯಾಣಿಸಬೇಕಾಗಿತ್ತು, ಒಂದು ದಿನ ಇಲ್ಲಿ ಮತ್ತು ಮರುದಿನ ಬೇರೆಡೆಗೆ. ನಾನು ಆ ಸಮಯದಲ್ಲಿ ತುಂಬಾ ಚಿಕ್ಕವನಾಗಿದ್ದೆ ಮತ್ತು ಅಂದು ಆ ಜೀವನಶೈಲಿಯನ್ನು ನಾನು ಇಷ್ಟಪಟ್ಟೆ. ಅತ್ಯುತ್ತಮ ಹುಡುಗಿಯರು ಆಸ್ಟ್ರೇಲಿಯಾದವರು, ಅವರು ತಮ್ಮ ಫಿಟ್‌ನೆಸ್‌ಗೆ ಗಮನ ಕೊಡುತ್ತಾರೆ ಮತ್ತು ಅವರು ಸುಂದರವಾದ ದೇಹವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
