ಇನ್ನೂ ವಯಸ್ಸಾಗಲಿ ಅಂತ ಕಾಯ್ಬೇಡಿ, 30 ಆಗುತ್ತಿದ್ದಂತೆ ಇವನ್ನೆಲ್ಲಾ ಬಿಟ್ಬಿಡಿ!

30ನೇ ವರ್ಷಕ್ಕೆ ಕಾಲಿಡುವುದು ಎಂದರೆ ಜೀವನದಲ್ಲಿ ಹೊಸ ಮೈಲಿಗಲ್ಲು ಪ್ರವೇಶಿಸಿದಂತೆ. ಈ ಹೊತ್ತಿನಲ್ಲಿ ನೀವು ಕೈಬಿಡಬೇಕಾದ ಕೆಲವು ದುರಭ್ಯಾಸಗಳು, ಅದರ ಬದಲಿಗೆ ರೂಢಿಸಿಕೊಳ್ಳಬೇಕಾದ ಸದಭ್ಯಾಸಗಳು ಇಲ್ಲಿವೆ.

All should leave bad habits before reaching 30

ಇಪ್ಪತ್ತರಿಂದ ಮೂವತ್ತು ಎಂಬುದು ನೀವು ಭಾವನಾತ್ಮಕವಾಗಿ ಬೆಳೆಯುವ, ಕೆರಿಯರ್‌ನಲ್ಲಿ ನಿಮ್ಮ ಬದುಕನ್ನು ಕಂಡುಕೊಳ್ಳುವ, ಮುಂದೆ ಜೀವನದಾದ್ಯಂತ ಚೆನ್ನಾಗಿ ಉಳಿಯುವ ಗೆಳೆಯರನ್ನು ಕಂಡುಕೊಳ್ಳುವ ಕಾಲ. ಈ ಸಮಯದಲ್ಲಿ ನೀವು ಒಳ್ಳೆಯ ರೂಢಿಗಳನ್ನು ಹೊಂದಿದ್ದರೆ, ನಿತ್ಯ ಸತ್ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಮುಂದೆ ಇಡೀ ಜೀವನದಲ್ಲಿ ಚೆನ್ನಾಗಿರುತ್ತೀರಿ. ಹಾಗಿದ್ದರೆ ಬಿಡಬೇಕಾದ ಕೆಟ್ಟ ರೂಢಿಗಳು ಯಾವುವು? ರೂಪಿಸಿಕೊಳ್ಳಬೇಕಾದ ಒಳ್ಳೆಯ ಅಭ್ಯಾಸಗಳು ಯಾವುವು? ಇಲ್ಲಿದೆ ನೋಡಿ...

ಬೆಳಗಿನ ಉಪಾಹಾರ ನಿಮ್ಮ ಉತ್ತಮ ಸ್ನೇಹಿತ (Breakfast)
ನೀವು ತುಂಬಾ ಬ್ಯುಸಿಯಾಗಿದ್ದೀರಿ ಎಂದು ಬೆಳಗಿನ ಬ್ರೇಕ್‌ಫಾಸ್ಟ್ ತ್ಯಜಿಸುವುದು ಅತ್ಯಂತ ಅನಾರೋಗ್ಯಕರ ಅಭ್ಯಾಸವಾ. 'ದಿ 30-ಡೇ ಹಾರ್ಟ್ ಟ್ಯೂನ್-ಅಪ್' ನ ಲೇಖಕ ಡಾ ಸ್ಟೀವನ್ ಮಾಸ್ಲೆ ಪ್ರಕಾರ, ನೀವು ಉಪಾಹಾರವನ್ನು ತ್ಯಜಿಸಿದರೆ, ದೀರ್ಘಕಾಲದ ಉಪವಾಸವು ನಿಮ್ಮ ಚಯಾಪಚಯ ಮತ್ತು ಪ್ರತಿರೋಧ ಶಕ್ತಿಯನ್ನು ಮಂದಗೊಳಿಸುತ್ತದೆ. ಇದು ತೂಕ ಹೆಚ್ಚಾಗಲು ಮತ್ತು ಆಗಾಗ್ಗೆ ಸೋಂಕುಗಳಿಗೆ ಕಾರಣವಾಗುತ್ತದೆ. ನಿತ್ಯ ಬ್ರೇಕ್‌ಫಾಸ್ಟ್ ಮಾಡಿ.

ಕೊಬ್ಬಿನ (Cholesterol) ಆಹಾರವನ್ನು ಕಡಿಮೆ ಮಾಡಿ
30ರಲ್ಲಿ, ಕೊಬ್ಬಿನ ಬರ್ಗರ್ ಎಂದರೆ "ಸ್ಪೇರ್ ಟೈರ್"ಗಿಂತ ಹೆಚ್ಚು! ನಿಮ್ಮ 30ನೇ ಹುಟ್ಟುಹಬ್ಬಕ್ಕೆ ಕಾಲಿಡುವ ಮೊದಲು, ನಿಮ್ಮ ಕಳಪೆ ಆಹಾರ ಪದ್ಧತಿಯನ್ನು ಬದಲಾಯಿಸುವುದು ಉತ್ತಮ. ನಿಮ್ಮ ಆಹಾರದಲ್ಲಿ ಹೆಚ್ಚು ವೈವಿಧ್ಯಮಯತೆಯನ್ನು ಅಳವಡಿಸಿ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿರಿ. ಮನೆಯಲ್ಲಿ ಬೇಯಿಸಿದ ಆರೋಗ್ಯಕರ ಊಟಕ್ಕೆ ಆದ್ಯತೆ ನೀಡಿ. ಸಹಜವಾಗಿ, ಕ್ವಿಕ್ ಆಹಾರವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಅಗತ್ಯವಿಲ್ಲ. ಆದರೆ ಉತ್ತಮ ಆಹಾರ ಆಯ್ಕೆಗಳ ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡುವುದು ಅತ್ಯಗತ್ಯ.

ನಾಳೆಯೇ ಇಲ್ಲ ಎಂಬಂತೆ ಕುಡಿಯುತ್ತಿದ್ದೀರಾ? ನಿಲ್ಲಿಸಿ! (Alcohol)
ಬಿಯರ್ ಹೀರುವುದು , ಟಕೀಲಾ ಸೇವಿಸುವುದು, ಇಪ್ಪತ್ತರ ವಯಸ್ಸಿನ ಗೆಳೆಯರಲ್ಲಿ ಇಂದು ಸಾಮಾನ್ಯವಾಗಿಬಿಟ್ಟಿದೆ. ಈ ಅಭ್ಯಾಸ ಸುತ್ತಿಕೊಳ್ಳುವುದು ಈಗಲೇ. ಬುದ್ಧಿವಂತರ ಸಂಗಕ್ಕೆ ಇದು ಅಗತ್ಯ ಎಂಬ ಭಾವನೆ ತುಂಬಾ ಇದೆ. ಆದರೆ ಇದು ರೋಮಾಂಚನಕಾರಿ ಹೊರತು ಆರೋಗ್ಯಕಾರಿಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವವನು ಬುದ್ಧಿವಂತ. ಇಪ್ಪತ್ತರ ದಶಕದ ಉತ್ತರಾರ್ಧದಲ್ಲಿ ನಿಮ್ಮ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸುವುದು ಉತ್ತಮ. ಅದೇ ಧೂಮಪಾನಕ್ಕೂ ಅನ್ವಯಿಸುತ್ತದೆ.

ಅನಾವಶ್ಯಕ ಜಗಳ ನಿವಾರಿಸಿಕೊಳ್ಳಿ 
ಇಪ್ಪತ್ತಿರಿಂದ ಮೂವತ್ತು ಬಿಸಿರಕ್ತದ ವಯಸ್ಸು, ಈ ಸಂದರ್ಭದಲ್ಲಿ ಗೆಳೆಯ ಗೆಳತಿಯರ ನಡುವೆ, ಕೊಲೀಗ್‌ಗಳ ನಡುವೆ ಬೇಡವೆಂದರೂ ಜಗಳ ಸೃಷ್ಟಿಸಿಕೊಳ್ಳುವ ಮನಸ್ಸಾಗುತ್ತದೆ. ಇದು ತಪ್ಪು. ನೀವು ಬೆಳೆದಂತೆ, ಹೆಚ್ಚಿನ ಸಮಸ್ಯೆಗಳನ್ನು ಸುಸಂಸ್ಕೃತ ಚರ್ಚೆಯ ಮೂಲಕ ಪರಿಹರಿಸಬಹುದು ಅಥವಾ ಗಣನೆಗೇ ತರಬೇಕಿಲ್ಲ ಎಂಬುದನ್ನು ಕಲಿತುಕೊಳ್ಳುತ್ತೀರಿ. 

ಇಂಥ ವಿಷ್ಯವನ್ನು ಅಪ್ಪಿತಪ್ಪಿಯೂ ಗಂಡಸರು ಪತ್ನಿ ಹತ್ರ ಶೇರ್ ಮಾಡಿಕೊಳ್ಳೋಲ್ಲ

ಸಂಬಂಧಕ್ಕೆ ಬದ್ಧರಾಗಲು ಭಯ (relationship)
ತಮ್ಮ 20ರಿಂದ ಮೂವತ್ತರ ಹರೆಯದಲ್ಲಿ ಇಂದು ಹೆಚ್ಚಿನ ಯುವತಿಯರು ಪ್ರೀತಿ ಪ್ರೇಮದಲ್ಲಿ ಬೀಳುತ್ತಾರೆ, ಆದರೆ ಮದುವೆಯಾಗಲು ಅಂಜುತ್ತಾರೆ. ಏಕೆಂದರೆ ಜೀವನದಲ್ಲಿ "ಅನುಭವಿಸಲು ಇನ್ನೂ ತುಂಬಾ ಇದೆ" ಎಂದುಕೊಳ್ಳುತ್ತಾರೆ. ಮೂವತ್ತರ ಒಳಗೆ ಮದುವೆಯಾಗುವುದು ಲೈಂಗಿಕತೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಕೆರಿಯರ್ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಆದರೂ ಈ ಬಗ್ಗೆ ನಿಮ್ಮ ಅನುಭವ ಆಧರಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

ಫೋನ್ ತೆಗೆದುಕೊಂಡು ಕರೆ ಮಾಡಿ!
ಗೆಳೆತನ (friendship) ಅಥವಾ ಕಚೇರಿ ಸಮಸ್ಯೆಗಳು ಬಂದಾಗ ಫೋನ್ ಸಂದೇಶದ ಮೂಲಕ ಅದನ್ನು ಪರಿಹರಿಸಲು ಯತ್ನಿಸುವುದು ಸಲ್ಲದು. ಫೋನ್ ಕರೆಯನ್ನು ತಪ್ಪಿಸುವ ಪ್ರಚೋದನೆಯು ವಾಸ್ತವವಾಗಿ ತುಂಬಾ ಕೆಟ್ಟ ಅಭ್ಯಾಸ. ಪಠ್ಯ ಸಂದೇಶಗಳು ನಿಜವಾದ ಭಾವನೆಗಳನ್ನು ಪ್ರಕಟಿಸುವುದಿಲ್ಲ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಜರ್ನಲ್ ಆಫ್ ಕಪಲ್ ಮತ್ತು ರಿಲೇಶನ್‌ಶಿಪ್ ಥೆರಪಿಯಲ್ಲಿ ಪ್ರಕಟವಾದ ಒಂದು ಸಮೀಕ್ಷೆ ಪ್ರಕಾರ, ಪುರುಷರು ತಮ್ಮ ಸಂಗಾತಿಗೆ ದಿನಕ್ಕೆ ಹಲವಾರು ಬಾರಿ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಬಹಿರಂಗಪಡಿಸಿದೆ. ವಿವಾದಗಳನ್ನು ಪರಿಹರಿಸುವುದು ಅಥವಾ ನಿರ್ಧಾರ ತೆಗೆದುಕೊಳ್ಳುವಂತಹ ವಿಷಯಗಳ ಬಗ್ಗೆ ಇದು ಕಡಿಮೆ ಪ್ರೊಡಕ್ಟಿವ್. ವೈಯಕ್ತಿಕವಾಗಿ ಸಂಭಾಷಣೆ ನಡೆದಾಗ ನೀವು ಹೆಚ್ಚು ಭಾವನಾತ್ಮಕವಾಗಿ ಸ್ಪಂದಿಸುತ್ತೀರಿ.

ಪ್ಯಾಕ್ ಮಾಡಿದ ಆಹಾರ ಎಷ್ಟು ಆರೋಗ್ಯಕರ ಎಂದು ತಿಳಿಯೋದು ಹೇಗೆ ?

ಅಜಾಗರೂಕ ಚಾಲನೆಯನ್ನು ನಿಲ್ಲಿಸಿ (drunk drive)
ಅತಿವೇಗ, ಕುಡಿದು ವಾಹನ ಚಲಾಯಿಸುವುದು ಮತ್ತು ಚಾಲನೆ ಮಾಡುವಾಗ ಫೋನ್ ನೋಡುವುದು ಈಗ ಮಾತ್ರವಲ್ಲ, ಯಾವುದೇ ವಯಸ್ಸಿನಲ್ಲೂ ಸಲ್ಲದು. 30ನೇ ವಯಸ್ಸಿನಲ್ಲಿ ಇದು ಬಹಳ ಹಾನಿಕಾರಕ. ಇದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಇತರರಿಗೂ ತೊಂದರೆ. ಸ್ಟಿಯರಿಂಗ್ ಹಿಂದೆ ಇರುವಾಗ ನಿಮ್ಮನ್ನು ಈ ವಿಷಯದಲ್ಲಿ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಸುಮ್ಮನೇ ಬಸ್ಸಿನಲ್ಲಿ ಹೋಗುವುದು ಸೂಕ್ತ. 

ಯುವಜನರಲ್ಲಿ ಹೆಚ್ಚುತ್ತಿದೆ ಮಾರಣಾಂತಿಕ ಹಾರ್ಟ್‌ಅಟ್ಯಾಕ್ ! ಕಾರಣವೇನು ?
 

Latest Videos
Follow Us:
Download App:
  • android
  • ios