ಇಂಥ ವಿಷ್ಯವನ್ನು ಅಪ್ಪಿತಪ್ಪಿಯೂ ಗಂಡಸರು ಪತ್ನಿ ಹತ್ರ ಶೇರ್ ಮಾಡಿಕೊಳ್ಳೋಲ್ಲ

ಪುರುಷರು ಕೂಡ ಮಹಿಳೆಯರಂತೆ ಕೆಲ ವಿಷ್ಯಗಳನ್ನು ಮುಚ್ಚಿಡ್ತಾರೆ. ಅಪ್ಪಿತಪ್ಪಿಯೂ ಸಂಗಾತಿಗೆ ಇದನ್ನು ಅವರು ಹೇಳೋದಿಲ್ಲ. ಎಂತೆಂಥಾ ವಿಷ್ಯವನ್ನು ಪುರುಷರು ಮರೆಮಾಚ್ತಾರೆ ಎಂಬುದನ್ನು ನಾವಿಂದು ಹೇಳ್ತೇವೆ. 
 

Men Do These Things Behind Womens Back Which They Never Know

ಮನಸ್ಸು (Mind), ಸಂತೋಷ (Happiness), ಭಾವನೆ ವಿಷ್ಯ ಬಂದಾಗ ನಾವು ಮಾತನಾಡೋದು ಮಹಿಳೆಯರ ಬಗ್ಗೆ. ಸಾಮಾನ್ಯವಾಗಿ ಪುರುಷರ ಭಾವನೆ (Emotion) ಗಳಿಗೆ ಹೆಚ್ಚು ಮಹತ್ವ ನೀಡಲು ಹೋಗುವುದಿಲ್ಲ. ಪುರುಷರು ತಮ್ಮ ಭಾವನೆಗಳನ್ನು ಎಲ್ಲರ ಮುಂದೆ ವ್ಯಕ್ತಪಡಿಸದೆ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಸಂಗಾತಿಯಾದವಳು ತನ್ನ ಪತಿ (Husband) ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ ಎಂದುಕೊಳ್ತಾಳೆ. ಪತಿ ತನಗೆ ಸಂಪೂರ್ಣವಾಗಿ ಅರ್ಥವಾಗಿದ್ದಾನೆ ಎಂದು ಭಾವಿಸಿರ್ತಾಳೆ. ಆದ್ರೆ  ಅವಳು ಎಂದಿಗೂ ತಿಳಿದಿರದ ಕೆಲವು ವಿಷಯಗಳಿವೆ. ಮಹಿಳೆ (Woman) ಯರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ ಎನ್ನುತ್ತೇವೆ. ಇದು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರಲ್ಲೂ ಅನೇಕ ರಹಸ್ಯ (secret) ಗಳಿರುತ್ತವೆ. ಪುರುಷರು ಈ ವಿಷಯಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ಆದ್ರೆ ಸಂಗಾತಿ (Partner ) ಮುಂದೆ ಎಂದೂ ಹೇಳುವುದಿಲ್ಲ. ಸಂಗಾತಿಗೆ ಈ ವಿಷ್ಯಗಳು ತಿಳಿದಿರೋದೇ ಇಲ್ಲ. ಇಂದು ಪುರುಷರು ಸಂಗಾತಿಯಿಂದ ಮುಚ್ಚಿಡುವ ವಿಷ್ಯಗಳು ಯಾವುವು ಎಂಬುದನ್ನು ಹೇಳ್ತೇವೆ.

ಕದ್ದು ಮುಚ್ಚಿ ಅಳು (Cry) : ಪುರುಷರು ಅಳುವುದು ಬಹಳ ಅಪರೂಪ. ಸಣ್ಣ ಜಗಳವಾದ್ರೂ ಮಹಿಳೆಯರ ಕಣ್ಣಲ್ಲಿ ನೀರು ಬರುತ್ತದೆ. ಆದ್ರೆ ಪುರುಷರ ಕಣ್ಣಲ್ಲಿ ನೀರು ಬರುವುದು ಬಹಳ ಅಪರೂಪ. ಎಷ್ಟೇ ನೋವಾಗಿದ್ದರೂ ಅದನ್ನು ಅವರು ಯಾರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ. ವಿಶೇಷವಾಗಿ ಸಂಗಾತಿ ಮುಂದೆಯಂತೂ ಅಳುವುದಿಲ್ಲ. ಸಂಗಾತಿಯ ಮುಂದೆ ಅಳುವುದು ತಮ್ಮ ದೌರ್ಬಲ್ಯ ಎಂದು ಪರಿಗಣಿಸುತ್ತಾರೆ. ಹಾಗಾಗಿಯೇ ತಾನು ಅಳ್ತೇನೆ ಎಂಬುದನ್ನು ಎಂದೂ ಹೇಳುವುದಿಲ್ಲ. ಸಂಗಾತಿ ಮುಂದೆ ತಾನು ಸ್ಟ್ರಾಂಗ್ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡ್ತಾನೆ. 

Real Story: ಅಪರಿಚಿತನೊಂದಿಗೆ ಕಳೆದಿದ್ದು ಒಂದೇ ರಾತ್ರಿ, ತಪ್ಪಿನಿಂದ ಇಡೀ ಜೀವನವೇ ಕತ್ತಲು

ಬೇರೆ ಹುಡುಗಿಯರ ಮೇಲೆ ಕಣ್ಣು : ನಾವು ಬೇರೆ ಹುಡುಗಿಯರನ್ನು ಫ್ಲರ್ಟ್ ಮಾಡ್ತಾರೆ ಎನ್ನುವ ವಿಷ್ಯದ ಬಗ್ಗೆ ಹೇಳ್ತಿಲ್ಲ. ನಿರ್ಮಲ ಮನಸ್ಸಿನಿಂದಲೇ ಅನೇಕ ಪುರುಷರು ಹುಡುಗಿಯರನ್ನು ನೋಡ್ತಾರೆ. ದಾರಿಯಲ್ಲಿ ಸಂಗಾತಿ ಜೊತೆ ಹೋಗ್ತಿದ್ದರೂ ಪಕ್ಕದಲ್ಲಿ ಹೋಗುವ ಮಹಿಳೆಯನ್ನು ಅಡಿಯಿಂದ ಮುಡಿಯವರೆಗೆ ಗಮನಿಸಿರುತ್ತಾರೆ. ಆದ್ರೆ ಇದ್ರ ಬಗ್ಗೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಆ ಹುಡುಗಿಯರ ಬಗ್ಗೆ ಸ್ನೇಹಿತರ ಜೊತೆ ಮಾತನಾಡಿ ನಗ್ತಾರೆಯೇ ವಿನಃ ಮತ್ತೇನನ್ನೂ ಮಾಡುವುದಿಲ್ಲ. ಆದ್ರೆ ಕದ್ದು ನೋಡಿದ ವಿಷ್ಯವನ್ನು ಅಪ್ಪಿತಪ್ಪಿಯೂ ಸಂಗಾತಿ ಮುಂದೆ ಹೇಳುವುದಿಲ್ಲ. ಪತ್ನಿ ಈ ಬಗ್ಗೆ ತಪ್ಪು ತಿಳಿದ್ರೆ ಎಂಬ ಅಂಜಿಕೆ ಅವರಿಗಿರುತ್ತದೆ.

ಹುಡುಗಿಯರನ್ನು ಮಾತ್ರವಲ್ಲ ಹುಡುಗ್ರನ್ನೂ ನೋಡ್ತಾರೆ : ಹುಡುಗ್ರನ್ನು ನಿಮ್ಮ ಸಂಗಾತಿ ನೋಡ್ತಿದ್ದಾರೆ ಅಂದ್ರೆ ಅವರು ಸಲಿಂಗಕಾಮಿ ಎಂದಲ್ಲ. ನೀವು ಮಹಿಳೆಯರನ್ನು ನೋಡಿದಂತೆ ಅವರು ಹುಡುಗ್ರನ್ನು ನೋಡ್ತಾರೆ. ಅವರು ಯಾವ ಡ್ರೆಸ್ ಧರಿಸಿದ್ದಾರೆ, ಅದ್ರ ಬ್ರ್ಯಾಂಡ್, ಅದ್ರ ಸ್ಟೈಲ್, ಅವರ ಹೇರ್ ಸ್ಟೈಲ್ ಸೇರಿದಂತೆ ಅನೇಕ ಸಂಗತಿಯನ್ನು ಗಮನಿಸ್ತಾರೆ. ಈ ಬಗ್ಗೆ ತಮ್ಮ ಸಂಗಾತಿಗೆ ಹೇಳುವುದಿಲ್ಲ. ಬೇರೆಯವರ ಸ್ಟೈಲ್ ಕಾಪಿ ಮಾಡಿ ಸಂಗಾತಿ ಸೆಳೆಯುವ ಪ್ರಯತ್ನ ನಡೆಸುತ್ತಾರೆ.

ಹೆಂಡತಿ ಇಲ್ಲವೆಂದರೆ ಗಂಡಸರು ಮನೇಲಿ ಏನೇನೋ ಮಾಡ್ತಾರಾ?

ಸಾಮಾಜಿಕ ಜಾಲತಾಣದಲ್ಲಿ ಸ್ಪೈ ಕೆಲಸ : ನಿಮ್ಮ ಸಂಗಾತಿ, ನಿಮ್ಮನ್ನು ಕುರುಡಾಗಿ ನಂಬುತ್ತೇನೆ ಎಂದು ಬಾಯಲ್ಲಿ ಹೇಳ್ಬಹುದು. ಆದ್ರೆ ಅವರು ನಿಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹುಡುಕುತ್ತಾರೆ. ನೀವು ಯಾವಾಗ, ಏನು ಪೋಸ್ಟ್ ಮಾಡುತ್ತೀರಿ, ಯಾರು ಕಾಮೆಂಟ್ ಮಾಡುತ್ತಾರೆ ಎಂಬುದರ ಮೇಲೆ ಪುರುಷರು ಯಾವಾಗಲೂ ಕಣ್ಣಿಟ್ಟಿರುತ್ತಾರೆ. ನೀವು ಯಾರನ್ನು ಅನುಸರಿಸುತ್ತೀರಿ, ನೀವು ಏನು ಇಷ್ಟಪಡುತ್ತೀರಿ, ಯಾರ ಪೋಸ್ಟ್ ಗಳಿಗೆ ಕಾಮೆಂಟ್ ಮಾಡುತ್ತೀರಿ ಎಂಬುದನ್ನು ಸಹ ಅವರು ಗಮನಿಸುತ್ತಾರೆ. ಆದ್ರೆ ನಿಮ್ಮ ಪ್ರೊಫೈಲ್ ನೋಡಿದ್ದೇನೆ ಎಂಬ ಸಂಗತಿಯನ್ನು ಅವರು ಹೇಳುವುದಿಲ್ಲ.

Latest Videos
Follow Us:
Download App:
  • android
  • ios