ಮಗಳ ಭಾವಿ ಗಂಡನ ಜೊತೆ ಓಡಿಹೋಗಿದ್ದ ಮಹಿಳೆ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ ಆಕೆ ಯಾಕೆ ಹೀಗೆ ಮಾಡಿದ್ದಾಳೆ ಎಂಬುದನ್ನು ಆಕೆಯ ವಿವರಿಸಿದ್ದಾಳೆ ಕೇಳಿ.

ಅಲಿಘರ್‌: ಭಾವಿ ಅಳಿಯನ ಜೊತೆ ಓಡಿ ಹೋಗಿದ್ದ ಮಹಿಳೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ತಾನು ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಎರಡು ವಾರಗಳ ಹಿಂದೆ ಅಂದರೆ ಏಪ್ರಿಲ್ 6 ರಂದು ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಘಟನೆ ನಡೆದಿತ್ತು. ಮಹಿಳೆಯೊಬ್ಬಳು ತನ್ನ ಮಗಳ ಭಾವಿ ಗಂಡನ ಜೊತೆ ಓಡಿ ಹೋಗಿದ್ದಳು. ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ದೇಶಾದ್ಯಂತ ಸುದ್ದಿಯಾಗಿತ್ತು. ಮಗಳ ಮದುವೆ ಕಾಗದ ಪ್ರಿಂಟ್ ಮಾಡಿ ನೆಂಟರು ಊರವರಿಗೂ ಹಂಚಲಾಗಿತ್ತು. ಮದುವೆಗೆ ಇನ್ನೇನು 10 ದಿನಗಳಿವೆ ಎನ್ನುವಷ್ಟರಲ್ಲಿ ಮಹಿಳೆ ತನ್ನ ಮಗಳ ಭಾವಿ ಗಂಡ ರಾಹುಲ್ ಎಂಬಾತನ ಜೊತೆ ಓಡಿ ಹೋಗಿದ್ದರಿಂದ ಮನೆ ಮಂದಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಮನೆಯವರು ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಈಗ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಮಹಿಳೆ ಸ್ವಪ್ನಾ ತಾನು ಆತನನ್ನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾಳೆ. 

ತನ್ನ ಗಂಡ ಕುಡಿದು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ, ಇದರ ಜೊತೆಗೆ ಮಗಳು ಕೂಡ ನನ್ನ ಜೊತೆ ಆಗಾಗ ಜಗಳ ಮಾಡುತ್ತಿದ್ದಳು ಇದೇ ಕಾರಣಕ್ಕೆ ತಾನು ಈ ನಿರ್ಧಾರ ಮಾಡಿದೆ ಎಂದು ಆಕೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ನಾನು ಆತನನ್ನು ಮದುವೆಯಾಗುತ್ತೇನೆ ಏನೇ ಆದರೂ ನಾನು ರಾಹುಲ್ (ಭಾವಿ ಅಳಿಯ) ಜೊತೆ ಬದುಕುತ್ತೇನೆ ಎಂದು ಸಪ್ನಾ ಹೇಳಿದ್ದಾಳೆ. ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ನಂತರ ತಾನು ಮತ್ತೆ ಬರಲು ನಿರ್ಧರಿಸಿದೆ ಎಂದು ಆಕೆ ಹೇಳಿದ್ದಾಳೆ. 

ರೀ... ಜೊತೆಯಾಗಿ ಸ್ನಾನ ಮಾಡೋಣ ಎಂದ ಪತ್ನಿ: ಶರ್ಟ್ ಕಳಚಿ ತಯಾರಾದ ಗಂಡನ ...

ಇದೇ ವೇಳೆ ರಾಹುಲ್ ಕುಮಾರ್ ಕೂಡಾ ಪೊಲೀಸರಿಗೆ ಶರಣಾಗಿದ್ದಾನೆ. ಎಲ್ಲವೂ ಸರಿಯಾಗಿದ್ದರೆ ಇದೇ ದಿನ ರಾಹುಲ್ ಮದುವೆ ಸ್ವಪ್ನಾಳ ಮಗಳ ಜೊತೆ ನಡೆಯಬೇಕಿತ್ತು. ಆದರೆ ಸ್ವಪ್ನಾ ಮಾಡಿದ ಕಿತಾಪತಿಯಿಂದಾಗಿ ಆಕೆಯ ಇಡೀ ಕುಟುಂಬವೇ ತಲೆತಗ್ಗಿಸುವಂತಾಗಿದೆ. ಅಲಿಘರ್‌ನ ದಾದೊನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಸ್ವಪ್ನಾ ಏಪ್ರಿಲ್ 6 ರಂದು ರಾಹುಲ್ ಜೊತೆ ಓಡಿ ಹೋಗಿದ್ದಳು. ಇದರಿಂದ ಆಘಾತಗೊಂಡ ಸ್ವಪ್ನಾಳ ಗಂಡ ಜಿತೇಂದ್ರಕುಮಾರ್ ಹಾಗೂ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಆಕೆ ಮನೆಯಿಂದ ಓಡಿ ಹೋಗುವ ವೇಳೆ 3.5 ಲಕ್ಷ ರೂಪಾಯಿ ಹಣ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣದೊಂದಿಗೆ ಓಡಿ ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸ್ವಪ್ನಾ ತಾನು ಮನೆ ಬಿಡುವಾಗ ತನ್ನ ಬಳಿ ಇದ್ದಿದ್ದು ಬರೀ 200 ರೂಪಾಯಿ ಹಾಗೂ ಮೊಬೈಲ್ ಫೋನ್ ಎಂದಿದ್ದಾಳೆ. 

ಈ ಘಟನೆ ಬಗ್ಗೆ ರಾಹುಲ್ ಮಾತನಾಡಿದ್ದು, ತಾನು ಓಡಿ ಹೋಗಲು ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ವಪ್ನಾ ಬೆದರಿಸಿದ್ದಳು. ಅಲಿಘರ್ ಬಸ್ ನಿಲ್ದಾಣಕ್ಕೆ ಬರದಿದ್ದರೆ ಆಕೆ ಸಾಯುತ್ತಿದ್ದಳು ಹೀಗಾಗಿ ಆಕೆಯ ಜೊತೆ ಹೋದೆ, ಮೊದಲಿಗೆ ನಾವು ಲಕ್ನೋಗೆ ಹೋಗಿ ಅಲ್ಲಿಂದ ಮುಜಾಫರ್‌ಪುರಗೆ ಬಂದೆವು. ಆದರೆ ಪೊಲೀಸರು ನಮಗಾಗಿ ಹುಡುಕಾಟ ನಡೆಸುತ್ತಿರುವುದ ತಿಳಿಯಿತು ಹೀಗಾಗಿ ವಾಪಸ್ ಬಂದೆವು. ಸ್ವಪ್ನಾಗೆ ಆಕೆಯ ಗಂಡ ಹಾಗೂ ಆಕೆಯ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ಇದೇ ವೇಳೆ ನೀವು ಸ್ವಪ್ನಾಳನ್ನು ಮದುವೆಯಾಗುವಿರಾ ಎಂದು ರಾಹುಲ್‌ನನ್ನು ಕೇಳಿದಾಗ ಆ ತರ ಏನೂ ಇಲ್ಲ ಎಂದು ಹೇಳಿದ್ದಾನೆ. ಆದರೆ ಮತ್ತೆ ಸ್ವಲ್ಪ ಹೊತ್ತಿನ ನಂತರ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ಇತ್ತ ಸ್ವಪ್ನಾಳ ಮನೆಯವರು ಸ್ವಪ್ನಾಳನ್ನು ಮತ್ತೆ ಮನೆಗೆ ಸೇರಿಸುವುದಿಲ್ಲ ಎಂದು ಹೇಳಿದ್ದಾರೆ.

Crash Diet: ಶ್ರೀದೇವಿ ಸಾವು ಸಂಭವಿಸಿದ್ದು ಹೇಗೆ? ಸುಳ್ಳು ಪತ್ತೆ ಪರ ...

ನಮಗೆ ಆಕೆ ಬೇಡ, ಆಕೆ ಮನೆಯಿಂದ ಕದ್ದೊಯ್ದ ವಸ್ತು ಬೇಕು ಎಂದು ಆಕೆಯ ಭಾವ ದಿನೇಶ್ ಎಂಬುವವರು ಹೇಳಿದ್ದಾರೆ. ಅಲ್ಲದೇ ಆಕೆಗೆ ಗಂಡ ಹಲ್ಲೆ ಮಾಡುತ್ತಿದ್ದ ಎಂಬ ಆಕೆಯ ಆರೋಪವನ್ನು ಆತ ನಿರಾಕಸಿದ್ದಾರೆ.