Social Media Trending Video: ಒಬ್ಬ ಗಂಡ ತನ್ನ ಹೆಂಡತಿಯ ಜೊತೆ ಸ್ನಾನ ಮಾಡುವ ಕನಸು ಕಾಣುತ್ತಾನೆ, ಆದರೆ ಅವನಿಗೆ ದೊಡ್ಡ ಶಾಕ್ ಕಾದಿರುತ್ತದೆ. ಹೆಂಡತಿ ತನ್ನದೇ ಆದ ಉದ್ದೇಶಕ್ಕಾಗಿ ಗಂಡನನ್ನು ಸ್ನಾನ ಮಾಡಲು ಪ್ರೇರೇಪಿಸುತ್ತಾಳೆ.

Husband Wife Relationship: ಇಂದು ಯಾರ ಬಳಿಯೂ ಎರಡರಿಂದ ಮೂರು ಗಂಟೆ ಕುಳಿತು ಸಿನಿಮಾ ನೋಡಲು ಸಮಯವೇ ಇಲ್ಲ. ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡು ಕಿರುಚಿತ್ರಗಳು ಬರಲಾರಂಭಿಸಿದವು. ಕೇವಲ 10 ರಿಂದ 15 ನಿಮಿಷದ ಈ ವಿಡಿಯೋಗಳು ನೋಡುಗರಿಗೆ ಒಳ್ಳೆಯ ಮನಂಜನೆಯನ್ನು ನೀಡುತ್ತಿವೆ. ಇತ್ತೀಚೆಗೆ ಕನ್ನಡದಲ್ಲಿ ಕೆಲ ಕಲಾವಿದರು ಜೊತೆಯಾಗಿ ಇಂತಹ ಕಿರುಚಿತ್ರಗಳನ್ನು ಮಾಡುತ್ತಿದ್ದು, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷ ಲಕ್ಷ ವ್ಯೂವ್ ಪಡೆದುಕೊಳ್ಳುತ್ತವೆ. ಇದೀಗ ಇಂತಹುವುದೇ ಒಂದು ಹಾಸ್ಯಮಯ ಕಿರುಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗಂಡ-ಹೆಂಡತಿಯ ನಡುವಿನ ಹಾಸ್ಯಮಯ ರೊಮ್ಯಾಂಟಿಕ್ ವಿಡಿಯೋ ನೋಡುಗರಿಗೆ ಇಷ್ಟವಾಗುತ್ತಿದೆ. 

ಫೇಸ್‌ಬುಕ್‌ನಲ್ಲಿ 5.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಸಾಖಿಬ್ ಸೈಫಿ (Saqib Saifi - The Storyteller) ತಮ್ಮ ವಿಡಿಯೋಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಸಾಖಿಬ್ ಸೈಫಿ ಅವರ ವಿಡಿಯೋವೊಂದು 18 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಏಪ್ರಿಲ್ 9ರಂದು ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಆಗಿದ್ದು, ಭಾಷೆಯ ಗಡಿಯನ್ನು ಮೀರಿ ಹೆಚ್ಚು ವೀಕ್ಷಣೆಗೆ ಒಳಗಾಗುತ್ತಿದೆ. ಹಾಗಾದ್ರೆ ಈ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.

ವೈರಲ್ ವಿಡಿಯೋ!
ಗಂಡ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಬಂದ ಪತ್ನಿ ಟವೆಲ್ ಎಸೆದು ಇವತ್ತು ನಾವಿಬ್ಬರು ಜೊತೆಯಾಗಿ ಸ್ನಾನ ಮಾಡೋಣವಾ ಎಂದು ಹೇಳುತ್ತಾಳೆ. ಹೆಂಡತಿಯ ಮಾತು ಕೇಳುತ್ತಿದ್ದಂತೆ ಒಳಗೊಳಗೆ ಖುಷಿಯಾದ ಗಂಡ, ಈ Naughty ಪ್ಲಾನ್ ಯಾವಾಗ ಬಂತು? ಜೊತೆಯಾಗಿ ಸ್ನಾನ ಮಾಡಿದ್ರೆ ಒಳಗೆ ತುಂಬಾನೇ ನಡೆಯುತ್ತದೆ ಎಂದು ಹೇಳುತ್ತಾನೆ. ಇದಕ್ಕೆ ಪತ್ನಿ, ಜೊತೆಯಾಗಿ ಸ್ನಾನ ಮಾಡುವಾಗ ಏನು ನಡೆಯದಿದ್ದರೆ ಏನು ಲಾಭ? ಸಮಯ ಉಳಿಯುತ್ತೆ, ಸಾಬೂನು-ಶ್ಯಾಂಪು ಬಳಸಬಹುದು. ತುಂಬಾ ಸಮಯದಿಂದ ನೀವು ನನ್ನೊಂದಿಗೆ ಸ್ನಾನ ಮಾಡಬೇಕೆಂದು ಅನ್ನಿಸುತ್ತಿತ್ತು. ಆದ್ರೆ ಹೇಳಲು ಆಗಿರಲಿಲ್ಲ. ಅದಕ್ಕೆ ನಿನ್ನೆ ರಾತ್ರಿಯೇ ದೃಢ ನಿರ್ಧಾರ ಮಾಡಿಕೊಂಡೆ ಎಂದು ಹೇಳುತ್ತಾನೆ. 

ಪತ್ನಿಯ ಈ ತರಹದ ಮಾತುಗಳಿಂದ ಆಕೆಯ ಗಂಡನಲ್ಲಿಯ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತದೆ. ಬೇಗ ಹೋಗಿ ಸ್ನಾನ ಮಾಡೋಣ ಎಂದು ಲ್ಯಾಪ್‌ಟಾಪ್ ಪಕ್ಕದಲ್ಲಿಟ್ಟು ಶರ್ಟ್ ಕಳಚುತ್ತಾ ಬಾತ್‌ರೂಮ್‌ನತ್ತ ಓಡೋಡಿ ಬರುತ್ತಾನೆ. ಕೊರಳಿಗೆ ಟವೆಲ್ ಹಾಕಿಕೊಂಡು ಬಾತ್‌ರೂಮ್ ಬಂದು, ಸ್ನಾನಕ್ಕೆ ಹೋಗೋಣ ಬಾ ಎಂದು ಪತ್ನಿಯನ್ನು ಕರೆಯುತ್ತಾನೆ. ಈ ಸಮಯದಲ್ಲಿ ಆತ ಊಹಿಸದ ರೀತಿಯಲ್ಲಿ ಬಿಗ್ ಶಾಕ್ ಎದುರಾಗುತ್ತದೆ.

ಇದನ್ನೂ ಓದಿ: ಮಷಿನ್​ ಮೇಲೆ ಮಲಗಿಸಿ ಗಗನಸಖಿಯರಿಗೆ ಮಾಡ್ತಿರೋದೇನು? ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​!

ಗಂಡನಿಗೆ ಹೆಂಡ್ತಿಯಿಂದ ಪಾಠ
ಗಂಡ ಸ್ನಾನಕ್ಕೆ ರೆಡಿಯಾಗುತ್ತಿದ್ದಂತೆ ನೀವು ಆ ಬಾತ್‌ರೂಮ್‌ನಲ್ಲಿ ಮತ್ತು ನೀನು ಮತ್ತೊಂದು ಬಾತ್‌ರೂಮ್‌ನಲ್ಲಿ ಸ್ನಾನ ಮಾಡೋಣ ಎಂದು ಪತಿಗೆ ಶಾಕ್ ಕೊಡುತ್ತಾಳೆ. ಇದರಿಂದ ಕೋಪಗೊಂಡ ಈ ಮಾತನ್ನು ನೀನು ಹೇಳಲೇ ಇಲ್ಲವಲ್ಲ ಎಂದು ಸಿಟ್ಟು ಮಾಡಿಕೊಳ್ಳುತ್ತಾನೆ. ಜೊತೆಯಾಗಿ ಎಂದಿದ್ದೇನೆ ಹೊರತು ಒಂದೇ ಬಾತ್‌ರೂಮ್ ಅಂತಾ ನಾನು ಎಲ್ಲಿಯೋ ಹೇಳಿಲ್ಲ ಎಂದು ಪತ್ನಿ ತಿರುಗೇಟು ಕೊಡುತ್ತಾಳೆ. ಬೇಸಿಗೆ ಆರಂಭವಾಗಿದ್ದು, ಮೂರು ದಿನವಾದ್ರೂ ನೀವು ಸ್ನಾನ ಮಾಡುತ್ತಿಲ್ಲ. ಸ್ನಾನ ಮಾಡಿದ್ಮೇಲೆ ಓಡಾಡಿ ಟೈಲ್ಸ್ ಎಲ್ಲಾ ಗಲೀಜು ಮಾಡುತ್ತೀರಿ. ನಾನು ಮತ್ತೆ ಅದನ್ನ ಸ್ವಚ್ಛಗೊಳಿಸಬೇಕಾಗುತ್ತದೆ. ಇನ್ಮುಂದೆ ಜೊತೆಯಾಗಿ ಸ್ನಾನ ಮಾಡಿದ್ರೆ ಈ ಸಮಸ್ಯೆ ದೂರವಾಗುತ್ತದೆ ಎಂದು ಗಂಡನಿಗೆ ಪಾಠ ಮಾಡುತ್ತಾಳೆ.

ಏನೇನೋ ಹೇಳಿ ನನ್ನ ಮೂಡ್ ಎಲ್ಲಾ ಹಾಳು ಮಾಡಿದೆ. ಮುಂದೆ ಇದಕ್ಕೆ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಅವಾಜ್ ಹಾಕಿ ಸ್ನಾನಕ್ಕೆ ಒಳಗೆ ಹೋಗುತ್ತಾನೆ. ಇದಕ್ಕೆ ಛೀ ನಿಮ್ಮ ಜೊತೆ ಅದು ಒಂದೇ ಬಾತ್‌ರೂಮ್‌ನಲ್ಲಿ ನಾನು ಸ್ನಾನ ಮಾಡೋದಾ ಎಂದು ಪತ್ನಿ ಮೂಗು ಮುರಿಯುತ್ತಾಳೆ. ಕೊನೆಗೆ ವಾತಾವರಣ ಬದಲಾಗಿದ್ದು, ಸ್ನಾನ ಮಾಡುತ್ತೀರಿ ಎಂಬ ಸಾಲು ಬರುತ್ತದೆ.

ಇದನ್ನೂ ಓದಿ: ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ