Parenting Tips: ಏನೇ ಹೇಳಿದರೂ ಮಕ್ಕಳು ಸಿಡುಕುತ್ತಿರುವುದ್ಯಾಕೆ?

ಕೊರೋನಾ ನಂತರದ ದಿನಗಳಲ್ಲಿ ಅನಿರೀಕ್ಷಿತ ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ, ಮಕ್ಕಳಲ್ಲಿ ಮೊಬೈಲ್ ಗೀಳು, ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿವೆ. ಈಗ ಶಾಲೆಗೆ ಹೋಗುತ್ತಿದ್ದರೂ ಹಠಮಾರಿತನ, ಜಗಳ ಮಾಡುವ ಪ್ರವೃತ್ತಿ ಹೆಚ್ಚಾಗಿರುವುದು ಕಂಡುಬರುತ್ತಿದೆ. ಜತೆಗೆ, ಕಲಿಯುವ ಸಾಮರ್ಥ್ಯವೂ ಕುಂಠಿತವಾಗಿದೆ.  
 

Aggressiveness in children increasing after Corona pandemic hit world

ಪಾಲಕರ (Parent) ಸಹನೆ (Patience)ಗೆ ಅತಿ ಹೆಚ್ಚು ಸವಾಲೊಡ್ಡಿದ ಸಮಯವಾಗಿದ್ದವು ಕೊರೋನಾ (corona) ದಿನಗಳು. ಲಾಕ್ ಡೌನ್ ಅವಧಿಯನ್ನು ಹೇಗೋ ಕಳೆದರೂ ನಂತರದ ದಿನಗಳಲ್ಲಿ ಪಾಲಕರು ಹೈರಾಣಾಗಿದ್ದರು. ಮಕ್ಕಳಿಗೆ ಶಾಲೆ (School) ಯಿಲ್ಲ, ಮನೆಯಲ್ಲೇ ಎಲ್ಲ, ಮನೆಯೇ ಎಲ್ಲ. ಆಟದ ಗ್ರೌಂಡ್ ಆಗಿದ್ದೂ ಮನೆಯೇ, ಪಾಠದ ತಾಣವಾಗಿದ್ದೂ ಮನೆಯೇ. ಒಬ್ಬರೇ ಇರುವ ಮಕ್ಕಳು ಪಾಡು ಹೇಳತೀರದು, ಇಬ್ಬರು ಅಥವಾ ಮೂವರಿರುವ ಮಕ್ಕಳ ಮನೆಯಲ್ಲಿ ಪಾಲಕರ ಪಾಡು ಹೇಳುವಂತಿಲ್ಲ!  ಆ ಸಮಯ ಮುಗಿದುಹೋಗಿದೆ, ಈಗೇಕೆ ಆ ವಿಚಾರ ಎನ್ನುವಂತಿಲ್ಲ. ಏಕೆಂದರೆ, ಆ ದಿನಗಳ ಪರಿಣಾಮ (Effect)ಗಳು, ವರ್ಷಾನುಗಟ್ಟಲೆ ಮಕ್ಕಳು ಮನೆಯಲ್ಲಿ ಆನ್ ಲೈನ್ ಪಾಠದಲ್ಲಿ ಕುಳಿತುಕೊಂಡಿದ್ದುದರ ಫಲಿತಾಂಶಗಳು ಈಗ ಗೋಚರವಾಗುತ್ತಿವೆ. ಮಕ್ಕಳ ಮನೋಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅನೇಕ ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಹಠಮಾರಿತನ (Aggressiveness) ಹೆಚ್ಚಾಗಿದೆ. 
ನಮ್ಮ ರಾಜ್ಯದ ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಮಕ್ಕಳ ಮಾನಸಿಕ ಸಮಸ್ಯೆಗಳ ತಜ್ಞರಾಗಿರುವ ಡಾ. ನಿರ್ಮಲಾ ಬಟ್ಟಲ ಅವರು ಹೇಳುವ ಪ್ರಕಾರ “ಬಹಳಷ್ಟು ಮಕ್ಕಳಲ್ಲಿ ಅಭದ್ರತೆ (Insecurity) ಹೆಚ್ಚಾಗಿದೆ. ಹಠಮಾರಿತನ, ಮೊಂಡುಬುದ್ಧಿಯೂ ಹೆಚ್ಚಾಗಿದ್ದು, ಶೈಕ್ಷಣಿಕ ಹಿಂದುಳಿದಿರುವುದು (Difficulty in Learning) ಕಂಡುಬರುತ್ತಿದೆ’. 

ಮೊದಲ ಲಾಕ್ ಡೌನ್ ಅವಧಿಯನ್ನು ಕೆಲವೇ ಕೆಲವು ವರ್ಗವನ್ನು ಹೊರತುಪಡಿಸಿ ಉಳಿದೆಲ್ಲ ಜನರು ಎಂಜಾಯ್ ಮಾಡಿದರು. ಅಪರೂಪಕ್ಕೆ ಮನೆಯವರೊಂದಿಗೆ ಸಮಯ ಕಳೆಯಲು ಸಮಯ ಸಿಕ್ಕಂತೆ ಭಾವಿಸಿದರು. ಹಾಗೆಯೇ, ಜನರಲ್ಲಿ ಭಯವೂ ಹೆಚ್ಚಿತ್ತು. ಮಕ್ಕಳಂತೂ ಅಕ್ಷರಶಃ ಯಾವುದೇ ಗೊತ್ತು ಗುರಿ ಇಲ್ಲದೆ ಸಮಯಯಾಪನೆ ಮಾಡಿದರು. ಆದರೆ, ಎರಡನೇ ಲಾಕ್ ಡೌನ್ ವೇಳೆಗೆ ಪಾಲಕರ ಸಹನೆ ಮಿತಿಮೀರಿತ್ತು. ಕೊರೋನಾ ಎರಡನೇ ಅಲೆ ಎಲ್ಲರಲ್ಲೂ ಭಯ, ಆತಂಕ ಮೂಡಿಸಿತು. ಕಣ್ಣೆದುರೇ ಅವಘಡ ನಡೆದವು, ನಾಳೆ ನಮ್ಮ ಬದುಕು ಇದೆಯೋ ಇಲ್ಲವೋ ಎನ್ನುವ ಅಭದ್ರತೆ ಸೃಷ್ಟಿಯಾಯಿತು, ದುಗುಡ, ಆತಂಕ(tension)ಗಳು ಹಿಂಸೆ ಮಾಡಿದವು. ಆಂತರಿಕ, ಬಾಹ್ಯ ಒತ್ತಡದಿಂದ ಆತ್ಮವಿಶ್ವಾಸಕ್ಕೆ ಕುಂದಾಯಿತು. ಒಂದು ರೀತಿಯಲ್ಲಿ ಎಲ್ಲರೂ ಚೈತನ್ಯಹೀನರಾದರು. ಈ ಮಾನಸಿಕತೆಯೇ ಮಕ್ಕಳ ಮೇಲೆ ಬಹಳಷ್ಟು  ಪರಿಣಾಮ ಬೀರಿತು ಎಂದು ಅವರು ವಿಶ್ಲೇಷಿಸುತ್ತಾರೆ. 

ವ್ಯಕ್ತಿತ್ವಕ್ಕೇ ಕುತ್ತು ತರುತ್ತೆ ಮೊಬೈಲ್ ವ್ಯಸನ

ಆರ್ಥಿಕ (financial) ಸಮಸ್ಯೆ, ಪಾಲಕರಲ್ಲಿರುವ ವೈಮನಸ್ಯ (Family Problem), ಕುಟುಂಬದ ಕಿರಿಕಿರಿಗಳು ಮಕ್ಕಳ ಅನುಭವಕ್ಕೆ ಬಂದವು. ದಿನದ ದುಡಿಮೆ ನೆಚ್ಚಿಕೊಂಡವರಿಗೆ ಆರ್ಥಿಕವಾಗಿ, ಮಾನಸಿಕವಾಗಿ ತೀವ್ರ ಘಾಸಿಯಾಗಿದ್ದರಿಂದ ಇದರ ನೇರವಾದ ಪರಿಣಾಮ ಮಕ್ಕಳ ಮೇಲಾಯಿತು. ಮಕ್ಕಳು ತಮ್ಮ ವಾರಗೆಯ ಮಕ್ಕಳೊಂದಿಗೆ ಆಟವಾಡಿಕೊಂಡಿರಬೇಕು, ಅವರೊಂದಿಗೆ ಒಡನಾಡಬೇಕು. ಆಗ ಮಾತ್ರವೇ ಅವರು ಖುಷಿಯಾಗಿರುತ್ತಾರೆ. ಆದರೆ, ಯಾವುದೂ ಇಲ್ಲದೆ ಅವರಲ್ಲಿ ಮೊಂಡುತನ ಹೆಚ್ಚಾಗಿದೆ ಎನ್ನುವುದು ಬಹುತೇಕರ ಅನುಭಕ್ಕೆ ಬಂದಿರುವ ಸಂಗತಿ. 'ಪಾಲಕರಿಗೆ ಮಕ್ಕಳನ್ನು ದಿನವಿಡೀ ಎಂಗೇಜ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರು ಮೊಬೈಲ್ ಗಳಲ್ಲಿ ಎಂಗೇಜ್ ಆದರು. ಆನ್ ಲೈನ್ ಪಾಠ ಮುಗಿದ ಬಳಿಕವೂ ಮೊಬೈಲ್ ಅವರ ಸಂಗಾತಿಯಾಯಿತು. ಜಗಳ ಮಾಡುವ ಬುದ್ಧಿ, ಕೋಪದ ಪ್ರವೃತ್ತಿ ಹೆಚ್ಚಿದೆ’ ಎನ್ನುವುದು ಶಿಕ್ಷರೊಬ್ಬರ ಅಭಿಪ್ರಾಯ. ಈ ಬದಲಾವಣೆಯಿಂದಾಗಿ, “ಮಕ್ಕಳು ಮನೆಯಲ್ಲಿ ಹೇಳಿದ ಮಾತು ಕೇಳುವುದಿಲ್ಲ. ಟಿವಿ, ಮೊಬೈಲ್ ಗಾಗಿ ಹಠ ಮಾಡುತ್ತಾರೆ’ ಎನ್ನುವ ದೂರುಗಳು ಶಾಲೆಯವರೆಗೂ ಬರುತ್ತಿವೆ. ಮಕ್ಕಳ ಬುದ್ಧಿಮಟ್ಟವೂ ಕಡಿಮೆಯಾಗಿದೆ. ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕು ಎನ್ನುತ್ತಾರೆ ಶಿಕ್ಷಕರು.  

ಸೆಕ್ಸ್‌ಗಿಂತಲೂ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿರುವುದು ಮೊಬೈಲ್‌ಗೆ

ಮಕ್ಕಳೊಂದಿಗೆ ನಲಿಯುವ ಪಾಲಕರು ಕಡಿಮೆ
ಪಾಲಕರು ಮಕ್ಕಳೊಂದಿಗೆ ಖುಷಿಖುಷಿಯಾಗಿ ಮಾತನಾಡಬೇಕು. ಮನೆಯಲ್ಲಿ ಭಯದ ವಾತಾವರಣ ನಿರ್ಮಿಸಬಾರದು. ಅವರೊಂದಿಗೆ ಆಟವಾಡಬೇಕು. ಮೊಬೈಲ್ ಗೇಮ್ ಗೆ ಸಮಯ ನಿಗದಿ ಮಾಡಬೇಕು, ಅನೇಕ ಪಾಲಕರು ಮಕ್ಕಳ ವರ್ತನೆ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಬಳಿಕ ಶಾಲೆಯಿಂದ ದೂರು ಬಂದಾಗ ಹೊಡೆದುಬಡಿದು ಮಾಡುತ್ತಾರೆ. ಹಾಗೆ ಮಾಡದೆ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಸಮಾಧಾನದಿಂದ ಕುಳಿತು ಮಾತನಾಡಬೇಕು, ಭರವಸೆ ತುಂಬಬೇಕು. ಹೊಡೆದು-ಬಡಿದು ಮಾಡಿದರೆ ಅವರ ಸಮಸ್ಯೆ ಹೆಚ್ಚಾಗುತ್ತದೆ. 

Latest Videos
Follow Us:
Download App:
  • android
  • ios