Not Sex, ಯುವಕರು ಹೆಚ್ಚು ಅಡಿಕ್ಟ್ ಆಗಿರೋದು ಈ ವಿಷಯಕ್ಕಂತೆ!
ವೈವಾಹಿಕ ಸಂಬಂಧದಲ್ಲಿ ಸೆಕ್ಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದು ಸಂಬಂಧವನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ ಎಂದು ಸಹ ಹೇಳಲಾಗುತ್ತದೆ. ಜೊತೆಗೆ ಪುರುಷರು ಅಥವಾ ಯುವ ಜನಾಂಗ ತಮ್ಮ ಹೆಚ್ಚಿನ ಸಮಯ ಸೆಕ್ಸ್ ಬಗ್ಗೆ ಯೋಚನೆ ಮಾಡುತ್ತಾ, ಅಥವಾ ಲೈಂಗಿಕ ಬಯಕೆ (sexual desire) ಈಡೇರಿಸುವತ್ತ ಹೆಚ್ಚು ಒಲವು ತೋರಿಸುತ್ತಾರೆಂದೂ ಹೇಳುತ್ತಾರೆ. ಆದರೆ, ಇವಲ್ಲವಕ್ಕೂ ವಿಭಿನ್ನವೆನ್ನುವಂತೆ ಯುವಕರ ಸೆಕ್ಸ್ಗಿಂತಲೂ ಮತ್ತೊಂದು ವಿಷಯಕ್ಕೆ ಹೆಚ್ಚು ಮಹತ್ವ ಕೊಡತ್ತಾರಂತೆ! ಏನದು?
ಹೆಚ್ಚಿನ ಜನ ಯೋಚನೆ ಮಾಡುವಂತೆ ಯುವ ಜನಾಂಗ ಸೆಕ್ಸಿಗೆ ಅಡಿಕ್ಟ್ (sex adict) ಆಗಿದೆ ಎಂದು ಹೇಳುತ್ತಾರೆ. ಆದರೆ ನೀವು ಅಂದುಕೊಳ್ಳೋದು ನಿಜವೇ? ಖಂಡಿತಾ ತಪ್ಪು. ಯುವ ಜನತೆ ಸೆಕ್ಸ್ ಗಿಂತ ಹೆಚ್ಚಾಗಿ ಬೇರೆ ವಿಷಯಗಳ ಕಡೆಗೆ ಗಮನ ಹರಿಸುತ್ತಾರೆ. ಹಾಗಿದ್ರೆ ಯಾವುದರ ಬಗ್ಗೆ ಹೆಚ್ಚು ಕ್ರೇಜ್ ಆಗಿದ್ದಾರೆ ಅನ್ನೋದು ಗೊತ್ತಾ?
ಹೌದು, ಸಂಬಂಧದಲ್ಲಿರುವ ಪ್ರತಿಯೊಬ್ಬರೂ ಲೈಂಗಿಕ ಕ್ರಿಯೆಗೆ ಆದ್ಯತೆ ನೀಡುವ ಅಗತ್ಯವಿಲ್ಲ, ಜನರಿಗೆ ಬೇರೆ ಬೇರೆ ರೀತಿಯ ಆಸಕ್ತಿಯೂ ಇರುತ್ತದೆ ಮತ್ತು ಇದನ್ನು ಇತ್ತೀಚಿನ ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ಈ ಸಂಶೋಧನೆಯ (US) ಪ್ರಕಾರ, ಯುವಕರು ವೀಡಿಯೊ ಗೇಮ್ ಗಳಿಗಾಗಿ (Video Game) ಲೈಂಗಿಕ ಕ್ರಿಯೆಯನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.
ಈ ಸಂಶೋಧನೆಯು 2000 ಯುವಕ ಮತ್ತು ಯುವತಿಯರನ್ನು ಒಳಗೊಂಡಿತ್ತು. ಅಧ್ಯಯನದ ಪ್ರಕಾರ, ಅವರ ಹಿಂದಿನ ವರ್ಷದ ಪ್ರಣಯೇತರ ಸೆಕ್ಸುವಲ್ ಎನ್ ಕೌಂಟರ್ (sexual encounter) ಬಗ್ಗೆ ಕೇಳಲಾಯಿತು. ಇದು ಹಿಂದಿನ ವರ್ಷದಲ್ಲಿ ಶೇಕಡಾ 11.7 ಇದ್ದದ್ದು, ಇದೀಗ 15.2 ಕ್ಕೆ ಏರಿದೆ. ದಿ ಟೆಲಿಗ್ರಾಫ್ ಪ್ರಕಾರ, 18 ರಿಂದ 24 ವರ್ಷ ವಯಸ್ಸಿನ ಪುರುಷರಿಗೆ, ಇದು ಶೇಕಡಾ 18.9 ರಿಂದ ಶೇಕಡಾ 30.9 ಕ್ಕೆ ಏರಿದೆ.
ಈ ವಯಸ್ಸಿನ ಮಹಿಳೆಯರ ಸಾಂದರ್ಭಿಕ ಲೈಂಗಿಕ ಜೀವನವು (sexual lide) ಕುಸಿಯಲು ದೊಡ್ಡ ಕಾರಣವೆಂದರೆ ಅವರ ಕುಡಿತ. ಮತ್ತೊಂದೆಡೆ, ಆಲ್ಕೋಹಾಲ್ ಮತ್ತು ಜೂಜಾಟ ಪುರುಷರ ಲೈಂಗಿಕ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.
ಶೇಕಡಾ 10 ರಷ್ಟು ಸ್ಪರ್ಧಿಗಳ ಪ್ರಕಾರ, ಅವರು ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿರುವುದರಿಂದ ಅವರ ಲೈಂಗಿಕ ಜೀವನ ತಟಸ್ಥವಾಗಿದೆ. ಅವರು ಈ ಕುರಿತು ಹೆಚ್ಚು ಸಕ್ರಿಯರಾಗಲು ಸಾಧ್ಯವಾಗಲಿಲ್ಲ ಎಂದು ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಮತ್ತು ರಟ್ಗರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು ವಿವರಿಸುತ್ತದೆ.
ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಸೊಸೈಟಿಯ ಪ್ರೊಫೆಸರ್ ಸೈಮನ್ ಫಾರೆಸ್ಟ್ ಮತ್ತೊಂದು ವಾದವನ್ನು ಮಾಡಿದ್ದಾರೆ. ಅವರ ಪ್ರಕಾರ, ಯುವಕರು ತಮ್ಮ ಕುಟುಂಬಗಳನ್ನು ಆರ್ಥಿಕವಾಗಿ ಅವಲಂಬಿಸಿದ್ದಾರೆ ಮತ್ತು ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಾರೆ, ಇದು ಅವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.
ಕುಟುಂಬದೊಂದಿಗೆ ವಾಸಿಸುವುದರಿಂದ ಸ್ವಾತಂತ್ರ್ಯದ ಕೊರತೆಯು ಒಂದು ಪ್ರಮುಖ ಅಂಶವಾಗಬಹುದು. ಪ್ರಸ್ತುತ ಆನ್ ಲೈನ್ ಸೆಕ್ಸ್ (online sex) ಸುಲಭ ಮತ್ತು ಹೆಚ್ಚಿನ ಪ್ರವೇಶವು ಸಹ ನಿಕಟ ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇವೆಲ್ಲವೂ ಸೆಕ್ಸ್ ಲೈಫ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.