Asianet Suvarna News Asianet Suvarna News

ಡಿವೋರ್ಸ್‌ ನಂತರ ಮಗನ ಹಾರ್ದಿಕ್ ಪಾಂಡ್ಯ ಮನೆಗೆ ಬಿಟ್ಟು ಬಂದ ನತಾಶ

ಸರ್ಬಿಯಾದಿಂದ ವಾಪಸ್ ಬಂದಿರುವ ನತಾಶಾ ತಮ್ಮ ಮಗ ಆಗಸ್ತ್ಯನನ್ನು ಆತನ ಅಪ್ಪನ ಮನೆಗೆ ಅಂದರೆ ಹಾರ್ದಿಕ್ ಪಾಂಡ್ಯಾ ಮನೆಗೆ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ. 

After the divorce, Natash left her son agastya to Hardik Pandya home akb
Author
First Published Sep 4, 2024, 7:21 PM IST | Last Updated Sep 6, 2024, 4:17 PM IST

ಸರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್‌ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಪರಸ್ಪರ ವಿಚ್ಚೇದನ ಪಡೆದು ತಮ್ಮ ದಾಂಪತ್ಯ ಜೀವನಕ್ಕೆ ಗುಡ್‌ ಬಾಯ್ ಹೇಳಿದ್ದರು. ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಘೋಷಿಸಿದ ನಂತರ ನಟಿ ನತಾಶಾ ತಮ್ಮ ಮಗ ಅಗಸ್ತ್ಯ ಜೊತೆ ಸರ್ಬಿಯಾಗೆ ತೆರಳಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಈಗ ಸರ್ಬಿಯಾದಿಂದ ವಾಪಸ್ ಬಂದಿರುವ ನತಾಶಾ ತಮ್ಮ ಮಗ ಆಗಸ್ತ್ಯನನ್ನು ಆತನ ಅಪ್ಪನ ಮನೆಗೆ ಅಂದರೆ ಹಾರ್ದಿಕ್ ಪಾಂಡ್ಯಾ ಮನೆಗೆ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಅವರ ಸೋದರ  ಕೃನಾಲ್ ಪಾಂಡ್ಯಾ ಪತ್ನಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ಮಗ ಕಯಿರ್‌ನೊಂದಿಗೆ ನತಾಶಾ ಹಾಗೂ ಹಾರ್ದಿಕ್ ಪುತ್ರ ಆಗಸ್ತ್ಯನೂ ಇರುವುದನ್ನು ಕಾಣಬಹುದು. ಇಬ್ಬರನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪಂಕುರಿ ಶರ್ಮಾ ಪುಸ್ತಕವನ್ನು ಮಕ್ಕಳಿಗೆ ಓದಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ನತಾಶಾ ಮಗನೊಂದಿಗೆ ಸರ್ಬಿಯಾಗೆ ತೆರಳಿದಾಗ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಹಾರ್ದಿಕ್ ಪಾಂಡ್ಯನಿಗೆ ಮಗನ ಮಿಸ್ ಮಾಡ್ಕೋತಿರಬಹುದು. ಆತನಿಗೆ ಇನ್ನು ಮಗನನ್ನು ನೋಡಲು ಸಿಗಲ್ಲ ಎಂದೆಲ್ಲಾ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈಗ ಹಾರ್ದಿಕ್ ಪುತ್ರ ಆಗಸ್ತ್ಯ ಮತ್ತೆ ಭಾರತಕ್ಕೆ ಬಂದಿದ್ದು, ಸದ್ಯ ಅಪ್ಪ ಹಾರ್ದಿಕ್ ಪಾಂಡ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ನತಾಶಾ ಔಟ್, ಬಾಲಿವುಡ್ ಹಾಟ್ ಬೆಡಗಿ ಇನ್: ಹೊಸ ಸಂಬಂಧ ಬೆಳೆಸಲು ರೆಡಿಯಾದ್ರಾ ಹಾರ್ದಿಕ್ ಪಾಂಡ್ಯ..!

2020 ರಲ್ಲಿ ವಿವಾಹವಾಗಿದ್ದ ನತಾಶ ಹಾಗೂ ಹಾರ್ದಿಕ್ ಪಾಂಡ್ಯ ಕಳೆದ ಜುಲೈನಲ್ಲಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇಬ್ಬರೂ ತಮ್ಮ ವಿಚ್ಛೇದನದ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಗಸ್ಟ್‌ನಲ್ಲಿ ನತಾಶ ಅವರು ಹಾರ್ದಿಕ್ ಜೊತೆಗಿನ ವಿಚ್ಚೇದನಕ್ಕೆ ಕಾರಣ ತಿಳಿಸಿದ್ದರು. 

ಆಗಸ್ಟ್‌ನಲ್ಲಿ, ನತಾಶ ಅವರು ಹಾರ್ದಿಕ್ ಅವರದ್ದು, ತನ್ನ(ಆತನ) ಬಗ್ಗೆ ಮಾತ್ರ ಯೋಚನೆ ಮಾಡುವ ತನ್ನದೇ ನಡೆಯಬೇಕು ಎಂದು ಬಯಸುವ ವ್ಯಕ್ತಿತ್ವ ಆತನದ್ದಾಗಿದ್ದು, ಆತನ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಬ್ಬರ ಹಿತದೃಷ್ಟಿಯಿಂದ ದೂರಾಗುವುದೇ ಉತ್ತಮ ಎಂದು ಭಾವಿಸಿ ವಿಚ್ಚೇದನ ಪಡೆದಿದ್ದಾರೆ ಎಂದು ವರದಿ ಆಗಿತ್ತು. ಇದರ ಹೊರತಾಗಿ ಕೆಲ ವರದಿಗಳ ಪ್ರಕಾರ ಹಾರ್ದಿಕ್ ಗಾಯಕ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಇತ್ತ ಮಗ ಆಗಸ್ತ್ಯನಿಗೆ ನತಾಶಾ ಹಾಗೂ ಹಾರ್ದಿಕ್ ಇಬ್ಬರು ಸಹ ಪೋಷಕರಾಗಿದ್ದಾರೆ. 

ಪರಸ್ಪರ ಸಮ್ಮತಿಯಿಂದಲೇ ಬೇರ್ಪಟ್ಟ ಪಾಂಡ್ಯ-ನತಾಶಾ: ಮುದ್ದಾದ ಮಗ ಅಗಸ್ತ್ಯ ಜವಾಬ್ದಾರಿ ಯಾರ ಹೆಗಲಿಗೆ?

Latest Videos
Follow Us:
Download App:
  • android
  • ios