ಮದ್ವೆಯಾಗಿ ಆರು ತಿಂಗಳಾಗಿಲ್ಲ, ಡಿವೋರ್ಸ್ ಕೇಳ್ತಿದ್ದಾನಂತೆ ಪತಿ!
ದಾಂಪತ್ಯ ಸಮಸ್ಯೆಗೆ ಪತಿ – ಪತ್ನಿ ಮಾತ್ರ ಕಾರಣವಾಗಿರೋದಿಲ್ಲ. ಅನೇಕ ಬಾರಿ ನಮ್ಮ ಸುತ್ತಮುತ್ತಲಿನವರ ಕಾರಣಕ್ಕೆ ದಂಪತಿ ದೂರವಾಗ್ತಾರೆ. ಸಂಬಂಧ ಹಾಳು ಮಾಡೋದ್ರಲ್ಲಿ ನಾದಿನಿಯರ ಪಾತ್ರವೂ ಇರುತ್ತೆ ಅನ್ನೋದು ನೂರಕ್ಕೆ ನೂರು ಸತ್ಯ.
ಹೊಸತನವನ್ನು ಒಪ್ಪಿಕೊಳ್ಳುವುದು ಪ್ರತಿಯೊಬ್ಬರಿಗೂ ಕಷ್ಟ. ಅದ್ರಲ್ಲೂ ಸಂಬಂಧದ ವಿಷ್ಯ ಬಂದಾಗ ಮತ್ತಷ್ಟು ಸವಾಲುಗಳು ಎದುರಾಗುತ್ತವೆ. ಬಾಲ್ಯದಿಂದ ಒಟ್ಟಿಗೆ ಇದ್ದ ಸಹೋದರ – ಸಹೋದರಿಯರು ಸಂಗಾತಿ ಬಂದಾಗ ದೂರವಾಗ್ತಾರೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅತ್ತಿಗೆ ಬಂದ್ಮೇಲೆ ಅಣ್ಣ ದೂರವಾಗ್ತಾನೆ ಎನ್ನುವ ಕಾರಣಕ್ಕೆ ಅತ್ತಿ – ಅಣ್ಣನನ್ನೇ ಬೇರೆ ಮಾಡುವ ಪ್ಲಾನ್ ಮಾಡುವವರಿದ್ದಾರೆ. ಪತ್ನಿ ಬಂದ್ಮೇಲೆ ಮಗ ದೂರವಾದ ಎಂದು ಪಾಲಕರು ಹೇಳಿರೋದನ್ನು ನೀವು ಕೇಳಿರಬಹುದು. ಎಲ್ಲ ಸಂಬಂಧದಲ್ಲೂ ಹೊಸಬರ ಪ್ರವೇಶವಾದಾಗ ಈ ಅಂತರ ಸಾಮಾನ್ಯ. ಜನರು ಅದನ್ನು ಅರಿತು ನಡೆಯಬೇಕಾಗುತ್ತದೆ. ಈ ಮಹಿಳೆ ಜೀವನದಲ್ಲಿ ಕೂಡ ಗಂಡನ ಸಹೋದರಿಯರು ಸಮಸ್ಯೆಯಾಗ್ತಿದ್ದಾರೆ. ಹೇಳಲಾಗದೆ, ಬಿಡಲೂ ಆಗದೆ ಮಹಿಳೆ ಉಭಯ ಸಂಕಟ ಅನುಭವಿಸುತ್ತಿದ್ದಾಳೆ. ಅಷ್ಟಕ್ಕೂ ಒಂದೇ ವರ್ಷದಲ್ಲಿ ಪತಿ ವಿಚ್ಛೇದನ ಕೇಳಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೆವೆ.
ಆಕೆಗೆ ಮದುವೆ (Marriage) ಯಾಗಿ ಒಂದು ವರ್ಷ ಕಳೆದಿದೆ. ಮದುವೆಯಾದ 6 ತಿಂಗಳು ಸಂಸಾರ ಸ್ವರ್ಗ (Heaven) ದಂತಿತ್ತಂತೆ. ಆದ್ರೆ ನಂತ್ರ ಸಂಸಾರ ನರಕವಾಗಿದೆಯಂತೆ. ಪತಿಯ ಪಕ್ಕದ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ವಾಸವಾಗಿದ್ದಾರಂತೆ. ಆ ಹೆಣ್ಣು ಮಕ್ಕಳಿಗೆ ತಾಯಿ (Mother) ಇಲ್ಲದ ಕಾರಣ ಪತಿಯ ಅಮ್ಮನೇ ಅವರನ್ನು ಬೆಳೆಸಿದ್ದಾಳಂತೆ. ಇದೇ ಕಾರಣಕ್ಕೆ ಪತಿ ಹಾಗೂ ಆ ಇಬ್ಬರು ಹೆಣ್ಣು ಮಕ್ಕಳ ಮಧ್ಯೆ ಅಣ್ಣ – ತಂಗಿ ಬಾಂಧವ್ಯ ಗಾಢವಾಗಿದೆಯಂತೆ. ಅದೇ ಈಗ ಈಕೆಯ ಮದುವೆಗೆ ಮುಳ್ಳಾಗಿದೆಯಂತೆ. ಮದುವೆಯಾಗಿ ಒಂದು ವರ್ಷವಾಗ್ತಿದ್ದಂತೆ ಪತಿ ವಿಚ್ಛೇದನ (Divorce) ಕೇಳ್ತಿದ್ದಾನಂತೆ. ಆತ ವಿಚ್ಛೇದನ ಕೇಳಲು ಆ ಇಬ್ಬರು ಸಹೋದರಿಯರೇ ಕಾರಣವಂತೆ.
Indonesia: ಈ ಟೂರಿಸ್ಟ್ ತಾಣದಲ್ಲಿ ವಿವಾಹಪೂರ್ವ ಲೈಂಗಿಕತೆ ಅಪರಾಧ, ಪ್ರವಾಸಿಗರಿಗೂ ಅನ್ವಯ!
ಅಣ್ಣ ಹಾಗೂ ಅತ್ತಿಗೆ ಒಟ್ಟಿಗಿದ್ರೆ ಸಹೋದರಿಯರು ಕೋಪ (Anger) ಗೊಳ್ತಾರಂತೆ. ಪತಿ ಜೊತೆ ನಾನು ಸಮಯ ಕಳೆಯುತ್ತಿದ್ದರೆ ಅಥವಾ ಅವರ ಜೊತೆ ನಗ್ತಾ ಮಾತನಾಡಿದ್ರೆ ಸಹೋದರಿಯರು ಜಗಳಕ್ಕೆ ಬರ್ತಾರೆ ಎನ್ನುತ್ತಾಳೆ ಮಹಿಳೆ. ಆರಂಭದಲ್ಲಿ ಇವೆಲ್ಲವನ್ನೂ ಸಹಿಸಿಕೊಂಡಿದ್ದೆ. ಆದ್ರೆ ಈಗ ಅವರ ಕಾಟ ಮಿತಿಮೀರುತ್ತಿದೆ. ನನ್ನ ಬಗ್ಗೆ ನನ್ನ ಗಂಡನಿಗೆ ಇಲ್ಲಸಲ್ಲದ ವಿಷ್ಯ ಹೇಳ್ತಿದ್ದಾರೆ ಎನ್ನುತ್ತಾಳೆ ಮಹಿಳೆ. ಪ್ರತಿ ದಿನ ಚಿತ್ರಹಿಂಸೆಯಾಗ್ತಿದ್ದು, ಮುಖದಲ್ಲಿದ್ದ ನಗು ಮಾಸಿದೆ. ಮುಂದೇನು ಮಾಡ್ಬೇಕು ತಿಳಿಯುತ್ತಿಲ್ಲ ಎನ್ನುತ್ತಾಳೆ ಮಹಿಳೆ.
ತಜ್ಞರ (Experts) ಸಲಹೆ : ಪ್ರತಿಯೊಂದು ಸಂಬಂಧದಲ್ಲೂ ತಾಳ್ಮೆ ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಮದುವೆಯಾಗಿ ಹೊಸ ಮನೆಗೆ ಬಂದಾಗ ಅತ್ತೆ ಮಾವನಿಂದ, ಮೈದುನನಿಂದ ಇಲ್ಲವೆ ನಾದಿನಿಯರಿಂದ ಸಮಸ್ಯೆಗಳು ಬರುತ್ತವೆ. ಸಮಸ್ಯೆಗೆ ನೀವು ಸಮಯ ನೀಡಬೇಕು ಎನ್ನುತ್ತಾರೆ ತಜ್ಞರು.
Successful Marriage: ದಾಂಪತ್ಯ ಜೀವನ ಸುಖಕ್ಕೆ ಗಂಡಸರು ಏನು ಮಾಡಬೇಕು?
ಈ ವಿಷ್ಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಮೊದಲು ಪತಿ ಜೊತೆ ಈ ಬಗ್ಗೆ ಮಾತುಕತೆ ನಡೆಸುವುದು ಮುಖ್ಯ ಎನ್ನುತ್ತಾರೆ ತಜ್ಞರು. ನಿನ್ನ ಹಾಗೂ ನಿನ್ನ ಸಹೋದರಿಯರ ಸಂಬಂಧವನ್ನು ನಾನು ಮೆಚ್ಚುತ್ತೇನೆ. ಎಂದಿಗೂ ನಿನ್ನ ಸಹೋದರಿಯರಿಗೆ ನೋವಾಗದಂತೆ ನಡೆದುಕೊಳ್ಳುತ್ತೇನೆ ಎಂಬ ವಿಶ್ವಾಸ ಪತಿಗೆ ಬರುವಂತೆ ನಡೆದುಕೊಳ್ಳಬೇಕು. ಸಹೋದರಿಯರಿಗೆ ಅವಮಾನ ಮಾಡದಂತೆ, ನಿಧಾನವಾಗಿ ಸಮಸ್ಯೆ ಏನು ಎಂಬುದನ್ನು ಪತಿಗೆ ಹೇಳಿ ಎನ್ನುತ್ತಾರೆ ತಜ್ಞರು. ಒಮ್ಮೆ ನಿಮ್ಮ ಮೇಲೆ ವಿಶ್ವಾಸ ಬಂದ್ರೆ ನಿಮ್ಮ ಮಾತನ್ನು ಪತಿ ನಂಬುತ್ತಾನೆ. ಆಗ ಆತನಿಗೆ ಸಹೋದರಿಯರು ಏನು ಮಾಡ್ತಿದ್ದಾರೆ ಎಂಬುದು ತಿಳಿಯುತ್ತದೆ. ಹಾಗಾಗಿ ಕೂಗಾಟ, ಕಿರುಚಾಟವಿಲ್ಲದೆ ಪ್ರೀತಿಯಿಂದ, ಶಾಂತವಾಗಿ ಅವರಿಗೆ ಮನವರಿಕೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ತಜ್ಞರು. ಇಷ್ಟೇ ಅಲ್ಲದೆ ನಿಮ್ಮ ಮೇಲೆ ವಿಶ್ವಾಸವಿಡಿ. ಧೈರ್ಯವಾಗಿರಿ. ದಿನ ಕಳೆದಂತೆ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ.