ಸಂಬಂಧಕ್ಕೂ ಬಂತು ವಿಮೆ! ಸಂಗಾತಿ ಮಧ್ಯೆ ಅನ್ಯೋನ್ಯತೆ ಜೊತೆ ಆರ್ಥಿಕ ಭದ್ರತೆ ನೀಡುತ್ತೆ!
ದಿನಕ್ಕೊಂದು ಹೊಸ ವಿಮೆ ಪಾಲಿಸಿಗಳು ಬರ್ತಿರುತ್ತವೆ. ಕೆಲವು ನೀವು ಸತ್ತ ಮೇಲೆ ನಿಮ್ಮವರಿಗೆ ಸಿಕ್ಕಿದ್ರೆ ಮತ್ತೆ ಕೆಲವು ಇದ್ದಾಗ್ಲೇ ನೆರವು ನೀಡುತ್ವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಂಬಂಧ ವಿಮೆ ಒಂದು ಸುದ್ದಿ ಮಾಡ್ತಿದೆ. ಇದ್ರ ಪ್ರಯೋಜನ ಇಲ್ಲಿದೆ.
ಆರೋಗ್ಯ ವಿಮೆ, ವಾಹನ ವಿಮೆ ಬಗ್ಗೆ ನಾವು ಕೇಳಿದ್ದೇವೆ. ಅನೇಕರ ಬಳಿ ಈ ವಿಮೆ ಪಾಲಿಸಿಗಳಿವೆ. ಈಗಿನ ದಿನಗಳಲ್ಲಿ ಸಂಬಂಧದ ವಿಮೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗ್ತಿದೆ. ಅಭದ್ರತೆ ಸಂಬಂಧ ಹೆಚ್ಚಾಗ್ತಿದೆ. ಜನರು ತಾವು ಪ್ರೀತಿಸಿದ ವ್ಯಕ್ತಿ ತಮ್ಮನ್ನೇ ಮದುವೆ ಆಗ್ತಾರೆ ಎಂಬ ದೃಢ ನಂಬಿಕೆಯಲ್ಲಿ ಇರಲು ಸಾಧ್ಯವಾಗ್ತಿಲ್ಲ. ಮೂರ್ನಾಲ್ಕು ವರ್ಷ ಪ್ರೀತಿ ಮಾಡಿದ ಜೋಡಿ ಕೂಡ ಸಣ್ಣ ಕಾರಣಕ್ಕೆ ಬೇರೆ ಆಗ್ತಿದ್ದಾರೆ. ಇದ್ರಿಂದ ಇಬ್ಬರಿಗೂ ಸಾಕಷ್ಟು ನಷ್ಟವಾಗುತ್ತದೆ. ಈ ನಷ್ಟವನ್ನು ತಪ್ಪಿಸಬೇಕು, ಪ್ರೀತಿ ಸಂಬಂಧ ಮದುವೆಗೆ ದಾರಿಯಾಗಬೇಕು ಎನ್ನುವ ಕಾರಣಕ್ಕೆ ಅನೇಕರು ಸಂಬಂಧದ ವಿಮೆಗೆ ಮುಂದಾಗ್ತಿದ್ದಾರೆ. ಕೆಲ ದಿನಗಳ ಹಿಂದೆ ಚೀನಾ ವ್ಯಕ್ತಿಯೊಬ್ಬ ಈ ಪ್ರೀತಿ ವಿಮೆ ವಿಷ್ಯದಲ್ಲಿ ಸುದ್ದಿ ಮಾಡಿದ್ದ. ಆನ್ಲೈನ್ ನಲ್ಲಿ ಜೋಡಿಯೊಂದು ಹಣ ಹೂಡಿಕೆ ಮಾಡಿದ ವಿಷ್ಯವೂ ಚರ್ಚೆಯಾಗಿತ್ತು.
ಸಂಬಂಧ (Relationship) ದ ವಿಮೆ (Insurance) ಅಂದ್ರೇನು? : ನಾವು ಮೊದಲು ಸಂಬಂಧದ ವಿಮೆ ಅಂದ್ರೇನು ಎಂಬುದನ್ನು ತಿಳಿಯಬೇಕು. ನೀವು ವಾಹನ ಅಥವಾ ವಸ್ತುವಿಗೆ ಮಾಡಿದ ವಿಮೆಗಿಂತ ಇದು ಸ್ವಲ್ಪ ಭಿನ್ನವಾಗಿರುತ್ತದೆ. ವಾಹನ ಅಪಘಾತಕ್ಕೊಳಗಾದಾಗ ನಾವು ವಿಮೆ ಹಣಕ್ಕೆ ಕ್ಲೈಮ್ (Claim) ಮಾಡ್ತೇವೆ. ಆದ್ರೆ ಇಲ್ಲಿ ಸಂಬಂಧ ಮುರಿದು ಬಿದ್ರೆ ಹಣ ಸಿಗೋದಿಲ್ಲ. ಪ್ರೀತಿಸುವ ಇಬ್ಬರು ವ್ಯಕ್ತಿಗಳು ವಿಮೆ ಮಾಡಿದ್ದು, ಅವರು ಮದುವೆಯಾದಾಗ ಆ ವಿಮೆ ಹಣ ಅವರಿಗೆ ಸಿಗುತ್ತದೆ. ಇಲ್ಲಿ ಪ್ರೀತಿಸಿದ ವ್ಯಕ್ತಿಗಳು ಮಾತ್ರ ವಿಮೆ ಮಾಡಿಸಬೇಕು ಎಂದೇನಿಲ್ಲ. ಮದುವೆಯಾದ ವರ್ಷ, ಎರಡು ವರ್ಷಕ್ಕೆ ವಿಚ್ಛೇದನವಾಗುತ್ತದೆ. ಹಾಗಾಗಿ ಮದುವೆಯಾದ ವ್ಯಕ್ತಿಗಳೂ ಸಂಬಂಧದ ವಿಮೆ ಮಾಡಿಸಬಹುದು. ಇದು ಐದು, ಹತ್ತು, ಹದಿನೈದು ವರ್ಷದ ಅವಧಿ ಹೊಂದಿರುತ್ತದೆ. ಇದ್ರಲ್ಲಿ ಹೆಚ್ಚಿನ ಬಡ್ಡಿಯನ್ನು ಕೂಡ ನೀಡಲಾಗುತ್ತದೆ.
ಅನಂತ್ ಅಂಬಾನಿ-ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮ, 51,000 ಗ್ರಾಮಸ್ಥರಿಗೆ 'ಅನ್ನಸೇವಾ'
ನೀವು ಐದು ವರ್ಷದ ಪ್ರೀತಿ ವಿಮೆ ಮಾಡಿಸಿದ್ದೀರಿ ಎಂದಾದ್ರೆ ಐದು ವರ್ಷದೊಳಗೆ ಅದೇ ಹುಡುಗಿಯನ್ನು ನೀವು ಮದುವೆ ಆಗಬೇಕು. ಆಗ ನಿಮಗೆ ವಿಮೆ ಹಣ ಹಾಗೂ ಬಡ್ಡಿ ಸಿಗುತ್ತದೆ. ಪಾಲಿಸಿಯ ಸಮಯದ ಚೌಕಟ್ಟು ಕನಿಷ್ಠ ಐದು ವರ್ಷಗಳು. ಇದರಲ್ಲಿ ನೀವು ಪಾಲಿಸಿಯ ನಿಯಮಗಳ ಪ್ರಕಾರ ಹಣವನ್ನು ಹೂಡಿಕೆ ಮಾಡಬೇಕು. ವಿವಾಹಿತರು ಹತ್ತು ವರ್ಷದ ವಿಮೆ ಮಾಡಿಸಿದ್ದು, ಹತ್ತು ವರ್ಷ ಸಂಬಂಧ ಗಟ್ಟಿಯಾಗಿದ್ದರೆ ಠೇವಣಿ ಮಾಡಿದ ಹಣದ ಜೊತೆ ಉತ್ತಮ ಬಡ್ಡಿ ಸಿಗುತ್ತದೆ.
ಸಂಬಂಧದ ವಿಮೆ ಮಾಡಲು ಕಾರಣ ಏನು? : ಅನೇಕ ಯುವಕರು, ವಿಮೆ ಹಣದ ಆಸೆಗಾದ್ರೂ ಹುಡುಗಿ ನನ್ನೊಂದಿಗೆ ಮದುವೆ ಆಗ್ತಾಳೆ ಎನ್ನುವ ಕಾರಣಕ್ಕೆ ಈ ವಿಮೆ ಮಾಡಿಸುತ್ತಿದ್ದಾರೆ. ಸಂಬಂಧಗಳ ಬಗ್ಗೆ ಅಭದ್ರತೆಯ ಕಾರಣದಿಂದಾಗಿ ಜನರು ಈ ರೀತಿಯ ವಿಮೆಯತ್ತ ಆಕರ್ಷಿತರಾಗ್ತಿದ್ದಾರೆ ಎಂದು ಮನೋತಜ್ಞರು ಹೇಳ್ತಾರೆ.
ಪ್ರೀತಿಸುವ ಜೋಡಿ ಸಣ್ಣ ಕೋಪಕ್ಕೆ ಬೇರೆಯಾಗುವ ನಿರ್ಧಾರಕ್ಕೆ ಬರಬಹುದು. ಅದೇ ವಿಮೆ ಮಾಡಿಸಿದ್ದರೆ ಅದ್ರ ಬಗ್ಗೆ ಇನ್ನೊಮ್ಮೆ ಆಲೋಚನೆ ಮಾಡುತ್ತಾರೆ. ಒಂದು ಸಣ್ಣ ವಿರಾಮ ಮತ್ತೆ ಅವರನ್ನು ಹತ್ತಿರಕ್ಕೆ ತರುವ ಸಾಧ್ಯತೆ ಇರುತ್ತದೆ.
ಸಂಬಂಧದ ವಿಮೆ ಯುರೋಪ್, ಅಮೆರಿಕ ಮತ್ತು ಚೀನಾದಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇಲ್ಲಿನ ಅನೇಕ ಕಂಪನಿಗಳು ಸಂಬಂಧಗಳಿಗೆ ಸಂಬಂಧಿಸಿದಂತೆ ವಿಮಾ ಪಾಲಿಸಿಗಳನ್ನು ನೀಡುತ್ತಿವೆ.
ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ಜಗತ್ತಿನ ಶ್ರೀಮಂತ ವ್ಯಕ್ತಿಯ ಸರಳತೆಗೆ ನೆಟಿಜನ್ಸ್ ಫಿದಾ
ಯುವಕರು ತಮ್ಮದೇ ರೀತಿಯಲ್ಲಿ ಪ್ರೀತಿಯನ್ನು ಭದ್ರಗೊಳಿಸುತ್ತಾರೆ. ಕೆಲ ದಿನಗಳ ಹಿಂದೆ ಜೋಡಿಯೊಂದು ಹಾರ್ಟ್ ಬ್ರೇಕ್ ಫಂಡ್ (Heart Break Fund) ಮಾಡಿತ್ತು. ಇಬ್ಬರೂ ಅದಕ್ಕೆ 500 ರೂಪಾಯಿ ಹಾಕುತ್ತಿದ್ದರು. ಒಂದ್ವೇಳೆ ಬ್ರೇಕ್ ಅಪ್ ಆದ್ರೆ ಮೋಸ ಹೋದವರು ಈ ಹಣವನ್ನು ಪಡೆಯಬಹುದಾಗಿತ್ತು. ಯುವಕ, ಗೆಳತಿಯಿಂದ ಮೋಸ ಹೋದಾಗ ಒಟ್ಟೂ ಹಣವನ್ನು ಪಡೆದಿದ್ದ.