ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ಜಗತ್ತಿನ ಶ್ರೀಮಂತ ವ್ಯಕ್ತಿಯ ಸರಳತೆಗೆ ನೆಟಿಜನ್ಸ್ ಫಿದಾ
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಜಗತ್ತಿನ ಪ್ರಸ್ತುತ 7ನೇ ಶ್ರೀಮಂತ ಹಾಗೂ ದಾನ ಕಾರ್ಯಗಳಿಗಾಗಿ ಹೆಸರುವಾಸಿಯಾಗಿರುವ ಬಿಲ್ ಗೇಟ್ಸ್ ಸಧ್ಯ ಭಾರತದಲ್ಲಿದ್ದು, ರಸ್ತೆ ಬದಿ ಟೀ ಕುಡಿದು ಸರಳತೆ ಮರೆದಿದ್ದಾರೆ. ಈ ಟೀ ಬಗ್ಗೆ ಅವರೇನಂದಿದ್ದಾರೆ ಗೊತ್ತಾ?
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಭಾರತಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ವೈವಿಧ್ಯಮಯ ವಿಹಾರಗಳು ಅಂತರ್ಜಾಲದಲ್ಲಿ ವ್ಯಾಪಕ ಆಸಕ್ತಿ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ.
ಇತ್ತೀಚೆಗೆ ಗೇಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ದಾರಿ ಬದಿಯಲ್ಲಿ ಚಹಾ ಸವಿಯುವುದನ್ನು ಕಾಣಬಹುದು. ಈ ಬಗ್ಗೆ ಪೋಸ್ಟ್ ಜೊತೆ ಬರೆದುಕೊಂಡಿರುವ ಗೇಟ್ಸ್, 'ಭಾರತದಲ್ಲಿ ನೀವು ಎಲ್ಲಿ ನೋಡಿದರಲ್ಲಿ ನಾವೀನ್ಯತೆಯನ್ನು ಕಾಣಬಹುದು. ಸರಳ ಚಹಾ ತಯಾರಿಕೆಯಲ್ಲಿ ಕೂಡಾ' ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಡಾಲಿ ಚಾಯ್‌ವಾಲಾ ಬಳಿ ಹೋಗಿ 'ಒನ್ ಚಾಯ್ ಪ್ಲೀಸ್' ಎನ್ನುತ್ತಾರೆ ಬಿಲ್ ಗೇಟ್ಸ್. ನಂತರ ಚಾಯ್‌ವಾಲಾ ತನ್ನ ವಿಶಿಷ್ಟ ವಿಧಾನ ಬಳಸಿ ಚಹಾವನ್ನು ತಯಾರಿಸುತ್ತಾನೆ. ಬಳಿಕ ಗೇಟ್ಸ್ ಒಂದು ಕಪ್ ಚಾಯ್ ಅನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಡಾಲಿ ಚಾಯ್‌ವಾಲಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿ, ತಾವು ಬಹಳಷ್ಟು ಚಾಯ್ ಪೇ ಚರ್ಚಾಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಗೇಟ್ಸ್ ಭಾರತ ಭೇಟಿಯ ಈ ಸಮಯದಲ್ಲಿ ಹೆಚ್ಚಿನ ಮುಖಾಮುಖಿಗಳು ಮತ್ತು ಸಂಭಾಷಣೆಗಳನ್ನು ಎದುರು ನೋಡುತ್ತಿದ್ದಾರೆ ಎಂದು ಇದು ಸೂಚಿಸುತ್ತದೆ.
50 ಪೈಸೆಗೊಂದು ಲೋಟ ಕಾಫಿ ಮಾರುತ್ತಿದ್ದ ಈಕೆ ಇಂದು 100 ಕೋಟಿ ರೂ.ಗಳ ಒಡತಿ
ವೀಡಿಯೊ ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನವನ್ನು ಸೆಳೆದಿದೆ ಮತ್ತು ನೆಟಿಜನ್‌ಗಳು ಗೇಟ್ಸ್‌ನ ಸರಳತೆಗೆ ಫಿದಾ ಆಗಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಅರಿಯುವ, ಅದರೊಂದಿಗೆ ಬೆರೆಯುವ ಗೇಟ್ಸ್ ಗುಣ ಬಹಳ ವಿಶೇಷವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು.
ಈಗಾಗಲೇ Instagram ನಲ್ಲಿ ಸುಮಾರು 1.1 ಮಿಲಿಯವ್ ಲೈಕ್‌ಗಳು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸುಮಾರು 6 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.
ಸ್ವಿಗ್ಗಿ ಪ್ರತಿಕ್ರಿಯಿಸಿ, 'ಬಿಲ್ ಎಷ್ಟು' ಎಂದು ಕೇಳಿದ್ದರೆ, ನೆಟ್ಟಿಗರೊಬ್ಬರು, 'ಡಾಲಿ ಚಾಯ್‌ವಾಲಾನೇ ಅದೃಷ್ಟವಂತ. ಆತನ ಅದೃಷ್ಟ ಇನ್ನು ಬದಲಾದಂತೆಯೇ' ಎಂದಿದ್ದಾರೆ.
ಡಾಲಿ ಚಾಯ್‌ವಾಲಾ ಯಾರು?
ವಿಶಿಷ್ಠ ಶೈಲಿ ಹೊಂದಿರುವ ಡಾಲಿ ಚಾಯ್‌ವಾಲಾ ಸೆಲೆಬ್ರಿಟಿ ಚಾಯ್‌ವಾಲಾಗಿಂತ ಕಡಿಮೆಯಿಲ್ಲ. ಅವರ ಶೈಲಿ, ಕ್ರಮಗಳು ಮತ್ತು ಚಹಾವನ್ನು ಹಾಕುವ ರೀತಿಯನ್ನು ಬಜನರು ಕೂಲ್ ಎನ್ನುತ್ತಿದ್ದಾರೆ. ಅವರ ಲುಕ್‌ಗೆ ಜನರು ದೇಸಿ ಜಾನಿ ಡೆಪ್ ಎಂದೂ ಹೆಸರಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದ ರವೀಂದ್ರ ನಾಥ್ ಟ್ಯಾಗೋರ್ ಮಾರ್ಗದಲ್ಲಿರುವ ಸ್ಥಳೀಯ ಟೀ ಜಾಯಿಂಟ್ 'ಡಾಲಿ ಕಿ ತಾಪ್ರಿ' ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ.
ನಟನೆಯಲ್ಲ, ಬಿಸ್ನೆಸ್ ಮಾಡಿ ಕೋಟಿ ಕೋಟಿ ಗಳಿಸ್ತಿದಾರೆ ಈ ಬಾಲಿವುಡ್ ಸ್ಟಾರ್ ಕಿಡ್ಸ್
ಟೀ ಅಂಗಡಿಗೆ ಭೇಟಿ ನೀಡುವ ಮುನ್ನ ಬಿಲ್ ಗೇಟ್ಸ್, ಮೈಕ್ರೋಸಾಫ್ಟ್‌ನ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್ ಮತ್ತು ಭುವನೇಶ್ವರದಲ್ಲಿರುವ ಸ್ಲಮ್‌ಗೆ ಭೇಟಿ ನೀಡಿದರು. ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್ನಗರದಲ್ಲಿ ನಡೆಯಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ.
ಅವರ ಕೊನೆಯ ಭೇಟಿಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಯೂಟ್ಯೂಬರ್ ಪ್ರಜಕ್ತಾ ಕೋಲಿ ಅವರನ್ನು ಭೇಟಿಯಾಗಿದ್ದ ಗೇಟ್ಸ್, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಸವಾರಿ ಮಾಡಿದ್ದರು.