ಜನರು ಸುತ್ತುವರೆದ್ರೂ, ಪೊಲೀಸಪ್ಪ ಎಂಟ್ರಿ ಕೊಟ್ರೂ ನಡು ರಸ್ತೆಯಲಿ ಮೈಮರೆತ ಪ್ರೇಮಿಗಳು! ವಿಡಿಯೋ ವೈರಲ್​

ನಡು ರಸ್ತೆಯಲ್ಲಿ ಪ್ರೇಮಿಗಳು ಮೈಮರೆತು ಅಪ್ಪಿಕೊಂಡಿರುವ ವಿಡಿಯೋ ಒಂದು ವೈರಲ್​  ಆಗಿದ್ದು, ಸೋಷಿಯಲ್​  ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.

A video of lovers in the middle of the road has gone viral and is creating a stir on social media suc

ಪ್ರೀತಿ ಕುರುಡು ಎನ್ನುವ ಮಾತಿದೆ. ಕೆಲವರು ಅದು ಬರೀ ಕುರುಡಲ್ಲ, ಕುಂಟು, ಕಿವುಡು ಎಂದೆಲ್ಲಾ ಹೇಳುತ್ತಾರೆ. ಅದೇನೇ ಇರಲಿ. ಆದರೆ ಪ್ರೀತಿಯ ಹೆಸರಿನಲ್ಲಿ ಇದೀಗ ಯುವಕರಲ್ಲಿ ಆಗುತ್ತಿರುವುದು ಬರೀ ದೈಹಿಕ ಆಕರ್ಷಣೆಗಳಷ್ಟೇ. ಪ್ರೈಮರಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ವಯೋಮಾನದ ಹಂಗಿಲ್ಲದೇ ಈ ಆಕರ್ಷಣೆಯಿಂದ ವಿಪರೀತ ಮಟ್ಟಕ್ಕೆ ಹೋಗುವುದೂ ಇದೆ. ನಗರ ಪ್ರದೇಶಗಳಲ್ಲಿನ ಉದ್ಯಾನಗಳಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು, ಪೊದೆಯ ಮರೆಯಲ್ಲಿ ಅಬ್ಬಾ ಎನ್ನುವಷ್ಟರ ಮಟ್ಟಿಗೆ ಚಿಕ್ಕ ಚಿಕ್ಕ ಮಕ್ಕಳ ಚೆಲ್ಲಾಟವೇ ನಡೆದಿರುತ್ತದೆ. ಮನೆಯಲ್ಲಿನ ಸಂಸ್ಕಾರವೋ, ಮೊಬೈಲ್​ ಮಾಯೆಯೋ, ಇನ್ನೇನೋ, ಮತ್ತೇನೋ... ಒಟ್ಟಿನಲ್ಲಿ ಮಕ್ಕಳಲ್ಲಿ ಇಂಥದ್ದೊಂದು ಪ್ರವೃತ್ತಿ ಆತಂಕಕಾರಿ ಹಾಗೂ ಕಳವಳಕಾರಿ ಎನ್ನುವ ನಡುವೆಯೇ ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋ ಅನ್ನು ಬಾಗಲಕೋಟೆ ಮಂಡಿ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​  ಮಾಡಲಾಗಿದೆ. ಈ ದೃಶ್ಯ ಬಾಗಲಕೋಟೆಯದ್ದೋ ಅಥವಾ ಇನ್ನೆಲ್ಲಿಯದ್ದೋ ಗೊತ್ತಿಲ್ಲ. ಒಟ್ಟಿನಲ್ಲಿ ಹದಿಹರೆಯದ ಗಂಡು ಮತ್ತು ಹೆಣ್ಣು ಮಗಳೊಬ್ಬಳು ನಡು ರಸ್ತೆಯಲ್ಲಿಯೇ  ಬಿಗಿದಪ್ಪಿಕೊಂಡು ಲೋಕವನ್ನೇ ಮರೆತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು... ಎನ್ನುವ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಪ್ರೇಮಲೋಕದ ಹಾಡಿನ ಹಿನ್ನೆಲೆಯಲ್ಲಿ ಲವರ್ಸ್​ ವಿಡಿಯೋ  ವೈರಲ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಇದು ಹಲ್​ಚಲ್​ ಸೃಷ್ಟಿಸಿದೆ. ಈ ಹಾಡು ಇದೀಗ ಸಕತ್​ ಮ್ಯಾಚ್​ ಆಗ್ತಿದೆ ಎನ್ನುವ ಶೀರ್ಷಿಕೆ ಕೊಡಲಾಗಿದೆ.

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

ಅಲ್ಲಿ ಜನರು ಈ ಲವರ್ಸ್​ ಸುತ್ತ ನೆರೆದಿದ್ದರೂ, ಕೊನೆಗೆ ಪೊಲೀಸಪ್ಪನೇ ಬಂದು ವಾರ್ನ್​  ಮಾಡುತ್ತಿದ್ದರೂ ಈ ಪ್ರೇಮಿಗಳು ಅಲ್ಲಿಂದ ಕದಲುತ್ತಿಲ್ಲ. ಕೊನೆಯ ಪಕ್ಷ ತಮ್ಮ ಸುತ್ತಲೂ ಏನಾಗುತ್ತಿದೆ ಎನ್ನುವುದೂ ಅವರಿಗೆ ಅರಿವಿಲ್ಲ. ಇದನ್ನು ರೀಲ್ಸ್​ಗಾಗಿ ಮಾಡಿದ್ದಾರೋ, ತಮಾಷೆಯೋ, ನಿಜನೋ ಗೊತ್ತಿಲ್ಲ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿರುವ ಕಾರಣ, ಅದಕ್ಕಾಗಿ ಮಾನ ಮರ್ಯಾದೆಗೂ ಅಂಜದ ಹಲವು ಯುವಕ- ಯುವತಿಯರು ಇದ್ದಾರೆ. ಆದರೆ ಈ ವಿಡಿಯೋ ಮೇಲ್ನೋಟಕ್ಕೆ ಆ ರೀತಿ ಅನ್ನಿಸುತ್ತಿಲ್ಲ. ಲವರ್ಸ್​ ಇದ್ದಿರಬಹುದು ಎಂದೇ ಹೇಳಲಾಗುತ್ತಿದೆ.

ಈ ವಿಡಿಯೋಗೆ ನೆಟ್ಟಿಗರು ಬಿಡ್ತಾರಾ? ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ವಿಡಿಯೋ ಮಧ್ಯೆ ಉಪೇಂದ್ರ ಅವರ ನಗುವನ್ನು ಅಟ್ಯಾಚ್​ ಮಾಡಿರುವ ಕಾರಣದಿಂದ ಇವರಿಬ್ಬರೂ ಉಪೇಂದ್ರ ಅವರ ಶಿಷ್ಯರೇ  ಇರಬೇಕು ಎಂದು ಹಲವರು ತಮಾಷೆ  ಮಾಡಿದರೆ, ಮತ್ತೆ  ಕೆಲವರು ಪ್ರೀತಿ ಮಾಡಬಾರದು, ಮಾಡಿದರೆ ರೋಡ್​ ಬ್ಲಾಕ್​  ಮಾಡಬಾರದು ಎಂದು ತಮ್ಮದೇ ಆದ ಹಾಡನ್ನು ರಚಿಸಿದ್ದಾರೆ. ಒಟ್ಟಿನಲ್ಲಿ, ಟೈಮ್​ ಪಾಸ್​ ಮಾಡುವವರಿಗೆ ಇದು ಎಂಜಾಯ್​ಮೆಂಟ್​ ನೀಡುತ್ತಿದ್ದರೆ, ಇಷ್ಟು ಚಿಕ್ಕ ಮಕ್ಕಳು ಈ ವಯಸ್ಸಿನಲ್ಲಿ ಯಾರ ಅರಿವೇ ಇಲ್ಲದೇ ಈ ಪರಿಯಲ್ಲಿ ಮೈಮರೆತಿರುವುದಕ್ಕೆ ಹಲವರು ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. 

ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ- ಸುಷ್ಮಿತಾ ಜೋಡಿ! ಅವರ ಬಾಯಲ್ಲೇ ಸಿಹಿ ಸುದ್ದಿ ಕೇಳಿಬಿಡಿ....

Latest Videos
Follow Us:
Download App:
  • android
  • ios