ವಿದೇಶ ಪ್ರವಾಸದಲ್ಲಿರುವ ನಿವೇದಿತಾ ಗೌಡ, ಪ್ರಾಣಿಯೊಂದಿಗಿನ ವಿಡಿಯೋದಲ್ಲಿ "ನಾನು ಭೇಟಿಯಾದವರಿಗಿಂತ ಲೇಸು" ಎಂಬ ಶೀರ್ಷಿಕೆ ಬಳಸಿ ಮಾಜಿ ಪತಿ ಚಂದನ್ ಶೆಟ್ಟಿಗೆ ಟಾಂಟ್ ಕೊಟ್ಟಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿದೆ. ಕ್ರಿಸ್‌ಮಸ್ ಆಚರಣೆ, ವೈನ್ ಸೇವನೆ ಹಾಗೂ ಹೊಸ ವರ್ಷಾಚರಣೆಯ ವಿಡಿಯೋಗಳು ಟ್ರೋಲ್‌ಗೂ ಒಳಗಾಗಿವೆ. ಸ್ವತಂತ್ರ ಬದುಕಿನ ಬಗ್ಗೆ ನಿವೇದಿತಾ ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿವೆ.

ಸದ್ಯ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಹೊಸ ವರ್ಷ ಎಂಜಾಯ್​ ಮಾಡುತ್ತಿದ್ದಾರೆ. ವಿದೇಶದಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಒಂದು ದಿನ ನ್ಯೂಯಾರ್ಕ್​, ಲಂಡನ್​ ಎಂದೆಲ್ಲಾ ನಟಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ವಿದೇಶದಲ್ಲಿಯೇ ಇರುವ ನಿವೇದಿತಾ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಯೊಂದನ್ನು ಮೈಮೇಲೆ ಬಿಟ್ಟುಕೊಂಡಿದ್ದಾರೆ. ಇದು ಅವರ ಮೈಮೇಲೆ ಓಡಾಡಿದೆ. ಆದರೆ ಎಲ್ಲರ ಗಮನ ಹೋಗಿದ್ದು ನಿವೇದಿತಾ ಕೊಟ್ಟಿರುವ ಶೀರ್ಷಿಕೆಗೆ! ಈ ಪ್ರಾಣಿ ನಾನು ಭೇಟಿಯಾಗಿರುವವರಿಗಿಂತಲೂ ಲೇಸು ಎಂದು ಟಾಂಟ್​ ಕೊಟ್ಟಿದ್ದಾರೆ ನಿವೇದಿತಾ. ತಮ್ಮ ಜೀವನದಲ್ಲಿ ಬಂದಿರುವ ಕೆಲವು ವ್ಯಕ್ತಿಗಳು ಎನ್ನುವ ಅರ್ಥದಲ್ಲಿ ನಿವೇದಿತಾ ಹೀಗೆ ಬರೆದಿದ್ದರೂ, ಇದು ಯಾರೋ ಒಬ್ಬ ವ್ಯಕ್ತಿಗೆ ಕೊಟ್ಟಿರೋ ಟಾಂಟ್​ ಎಂಬ ಚರ್ಚೆ ಶುರುವಾಗಿದೆ. ಇದು ಖಂಡಿತವಾಗಿಯೂ ಮಾಜಿ ಗಂಡ ಚಂದನ್​ ಶೆಟ್ಟಿಯವರಿಗೆ ಕೊಟ್ಟಿರೋ ಟಾಂಟ್​ ಆಗಿದೆ ಎನ್ನುತ್ತಿರುವವರೇ ಹೆಚ್ಚು. 

ಇನ್ನು ಕೆಲವರು ಈ ವಿಡಿಯೋಗೂ ಮಾಮೂಲಿನಂತೆ ಟ್ರೋಲ್​ ಮಾಡುತ್ತಿದ್ದಾರೆ. ಜೋಪಾನ ಕಣಮ್ಮಿ, ಎಲ್ಲೆಲ್ಲೋ ಬಿಟ್ಕೊಬೇಡ ಎಂದು ಹಲವರು ಅಸಹ್ಯ ಎನ್ನುವಂಥ ಕಮೆಂಟ್ಸ್​ಗಳನ್ನೂ ಮಾಡಿದ್ದಾರೆ. ಇನ್ನು ಈ ಶೀರ್ಷಿಕೆ ಕೊಟ್ಟಿದ್ದು ಯಾರಿಗೆ ಎನ್ನುವುದನ್ನು ಸ್ವಲ್ಪ ಬಿಡಿಸಿ ಹೇಳು ಎಂದಿದ್ದಾರೆ ಮತ್ತೆ ಕೆಲವರು. ಮೊನ್ನೆಯಷ್ಟೇ ನಟಿ, ತಾವು ನ್ಯೂಯಾರ್ಕ್​ನಲ್ಲಿ ಇದ್ದಿರುವ ವಿಡಿಯೋ ಶೇರ್​ ಮಾಡಿದ್ದರು. ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್​ ಮಾಡಿದ್ದರು. ಕ್ರಿಸ್​ಮಸ್​ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡಿದ್ದರು. ಸಾಲದು ಎನ್ನುವುದಕ್ಕೆ ಈ ಹೊಸ ಹುಡುಗ ಯಾರು ಎನ್ನುವ ಬಗ್ಗೆ ಇನ್ನೂ ತಡಕಾಟ ನಡೆಯುತ್ತಿದೆ. 

ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ಹೊಸ ವರ್ಷದ ವಿಡಿಯೋಗೆ ಇನ್ನಿಲ್ಲದ ಕಮೆಂಟ್ಸ್​

ಇದರ ನಡುವೆಯೇ, ಈಗ ಈ ರೀತಿಯ ಶೀರ್ಷಿಕೆ ಕೊಟ್ಟು ಮತ್ತಷ್ಟು ತಲೆ ಕೆಡಿಸಿದ್ದಾರೆ ನಟಿ. ಇದಾಗಲೇ ಕ್ರಿಸ್​ಮಸ್​ನಲ್ಲಿ ವೈನ್​ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್​ಲೋಡ್​ಮಾಡಿದ್ದರು. ಇದೀಗ ಕ್ರಿಸ್​ಮಸ್​ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ನಿನ್ನೆ ಹೊಸ ವರ್ಷದ ಸೆಲಬ್ರೇಷನ್​ ವೇಳೆ ಕಂಬವನ್ನು ಏರಿರುವ ವಿಡಿಯೋ ಶೇರ್​ ಮಾಡಿ ಸಕತ್​ ಟ್ರೋಲ್​ಗೂ ಒಳಗಾಗಿದ್ದರು. 

ನಿವೇದಿತಾ ಇದೀಗ ಸ್ವತಂತ್ರಳಾಗಿದ್ದಾಳೆ. ಸಂಸಾರದ ಬಂಧನವಿಲ್ಲ. ಇದೇ ಕಾರಣಕ್ಕೆ ಜಾಲಿ ಮೂಡ್​ನಲ್ಲಿ ಇದ್ದಾಳೆ. ತನಗೆ ಇಷ್ಟದಂತೆ ಆಕೆ ಏನಾದರೂ ಮಾಡಬಹುದಾಗಿದೆ. ಅವಳು ಎಲ್ಲಿಯಾದರೂ ಹೋಗಬಹುದು. ಸಂಸಾರವೆಂಬ ಬಂಧನದಲ್ಲಿ ಸಿಲುಕಿದರೆ ಹೆಣ್ಣುಮಕ್ಕಳು ಇಷ್ಟು ಫ್ರೀ ಆಗಿ ಇರಲು ಆಗುವುದಿಲ್ಲ. ಏನೇಮಾಡುವುದಿದ್ದರೂ ಎಲ್ಲರ ಒಪ್ಪಿಗೆ ಪಡೆದು ಮಾಡಬೇಕು. ಹೀಗೆ ಸ್ವತಂತ್ರವಾಗಿ ಟ್ರಿಪ್​-ಟೂರ್​ ಎನ್ನುವುದು ಕನಸಿನ ಮಾತೇ ಎಂದೆಲ್ಲಾ ಹೇಳುವ ಮೂಲಕ ನಿವೇದಿತಾ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇಂಥ ಕಮೆಂಟ್​ಗಳಿಗೆ ಹಲವರು ರಿಪ್ಲೈ ಮಾಡಿದ್ದಾರೆ. ಅದರಲ್ಲಿ ಕೆಲವರು ಈ ಪರಿಯ ಕಮೆಂಟ್​ಗಳನ್ನು ವಿರೋಧಿಸಿದ್ದರೆ, ಮತ್ತೆ ಕೆಲವರು ಇದು ನಿಜ ನಿಜ ಎನ್ನುತ್ತಿದ್ದಾರೆ. ಕೆಲವರು, ನಿನಗೆ ಇಷ್ಟೊಂದು ಫ್ರೀ ಬೇಕಿದ್ದರೆ ಚಂದನ್ ಶೆಟ್ಟಿಯನ್ನು ಯಾಕೆ ಮದ್ವೆಯಾಗಬೇಕಿತ್ತು ಅಂತ ಕೇಳಿದ್ರೆ, ಮತ್ತೆ ಕೆಲವರು ಎರಡನ್ನೂ ಬ್ಯಾಲೆನ್ಸ್​ ಮಾಡ್ಬೋದಿತ್ತಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಫಾರಿನ್​ ಟೂರ್​, ಹಲವರ ಮನಸ್ಸನ್ನು ಪರಿವರ್ತನೆ ಮಾಡಿದ್ದಂತೂ ನಿಜ. 

ನ್ಯೂಯಾರ್ಕ್​ ಬಳಿಕ ಲಂಡನ್ ನೈಟ್​ ಕ್ಲಬ್​ನಲ್ಲಿ ನಿವೇದಿತಾ! ನೀನೇ ಸರಿ ಬಿಡು ಕಣಮ್ಮಾ ಎನ್ನೋದಾ ಮಹಿಳೆಯರು?

View post on Instagram