ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ- ಸುಷ್ಮಿತಾ ಜೋಡಿ! ಅವರ ಬಾಯಲ್ಲೇ ಸಿಹಿ ಸುದ್ದಿ ಕೇಳಿಬಿಡಿ....

ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಮೂಲಕ ಮತ್ತೆ ಕಮ್​ಬ್ಯಾಕ್​ ಆಗಿರೋ ಚಂದನ್​ ಶೆಟ್ಟಿ ಹಾಗೂ ನಟಿ ಸುಷ್ಮಿತಾ ಗುಡ್​ ನ್ಯೂಸ್​ ನೀಡಿದೆ. ಏನದು ನೋಡಿ!
 

Cotton Candy stars Chandan Shetty and  Sushmita Sen have given good news for fans suc

ನಿವೇದಿತಾ ಗೌಡ ಅವರ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಿದ ಬಳಿಕ ಗಾಯಕ ಚಂದನ್​ ಶೆಟ್ಟಿ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್​ ಆಗಿರೋ ಚಂದನ್​ ಅವರು ಇದಾಗಲೇ ಹಲವಾರು ಹಿಟ್​ ಹಾಡುಗಳನ್ನು ನೀಡಿದ್ದಾರೆ.  '3 ಪೆಗ್', 'ಟಕಿಲಾ', 'ಪಕ್ಕಾ ಚಾಕೋಲೆಟ್ ಗರ್ಲ್' ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್​, ರೆಸಾರ್ಟ್​ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್​ ಆಗಿವೆ.  ಇದೀಗ ಅವರ  ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸಕತ್​ ಸೌಂಡ್​ ಮಾಡುತ್ತಿದೆ.  ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ ಈ ವಿಡಿಯೋ.

 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ, ಮೇಡ್ ಫಾರ್ ಈಚ್ ಅದರ್' ಎಂಬಂತೆ ಚಿಂದಿ ಮಾಡಿದ್ದಾರೆ.   ಡಿಸೆಂಬರ್ 27ರಂದು  ಈ ಮ್ಯೂಸಿಕ್​ ವಿಡಿಯೋ ರಿಲೀಸ್​ ಆಗಿದೆ.  ಇದನ್ನು  ಅದ್ದೂರಿಯಾಗಿ ಶೂಟ್ ಮಾಡಲಾಗಿದ್ದು, ಇದನ್ನು ಖುದ್ದು ಚಂದನ್ ಶೆಟ್ಟಿಯವರೇ ನಿರ್ದೇಶನ ಮಾಡಿರುವುದು ಕೂಡ ವಿಶೇಷವಾಗಿದೆ. ಇದಾಗಲೇ ಈ ಮ್ಯೂಸಿಕ್​ ವಿಡಿಯೋ ಬಗ್ಗೆ  ಚಂದನ್ ಶೆಟ್ಟಿ ಮಾತನಾಡಿದ್ದರು.  'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್ ರಿಯಾಕ್ಷನ್ ಹೇಗಿರಬಹುದು ಎಂಬ ಬಗ್ಗೆ ನನಗೆ ಕುತೂಹಲವಿದೆ. ಇದು ನ್ಯೂ ಈಯರ್‌ಗೆ ಗಿಫ್ಟ್' ಎಂದಿದ್ದರು. 

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

ಇದೀಗ ಚಂದನ್​ ಶೆಟ್ಟಿಯವರು, ನಟಿ ಸುಷ್ಮಿತಾ ಜೊತೆ ಗುಡ್​ ನ್ಯೂಸ್​ ನೀಡಿದ್ದಾರೆ. ಅದೇನೆಂದರೆ, ಕಾಟನ್​ ಕ್ಯಾಂಡಿ ಟೀಮ್​ನಿಂದ ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಯಾರ್ಯಾರು ಕಾಟನ್​ ಕ್ಯಾಂಡಿ ಫ್ಯಾನ್ಸ್​ ಇದ್ದೀರಾ, ನಿಮ್ಮ ಊರಿಗೆ ಬರಬೇಕು ಎಂದು ಅನ್ನಿಸಿದರೆ, ನಿಮ್ಮ ಊರಿನ ಹೆಸರನ್ನು ಕಮೆಂಟ್​ ಮಾಡಿ. ಯಾರ ಕಮೆಂಟಿಗೆ ಅತಿ ಹೆಚ್ಚು ಲೈಕ್​ ಬರುತ್ತದೆಯೋ, ಆ ಊರಿಗೆ ನಮ್ಮ ತಂಡ ಬರುತ್ತದೆ ಎಂದಿದ್ದಾರೆ. ಇದಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋಗೆ ಲೈಕ್​ ಮಾಡಿದ್ದಾರೆ. ಇದರಿಂದ ನಟ ಚಂದನ್​ ಶೆಟ್ಟಿ ಮತ್ತು ಸುಷ್ಮಿತಾ ಜೋಡಿಯನ್ನು ನೋಡಲು ಅಭಿಮಾನಿಗಳು ಎಷ್ಟು ಕಾತರರಾಗಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಎಲ್ಲಾ ಕಮೆಂಟ್ಸ್​ ನೋಡಿದ ಮೇಲೆ ಈ ಟೀಮ್​ ಯಾವ ಊರಿಗೆ ಹೋಗಬೇಕು ಎನ್ನುವುದನ್ನು ಡಿಸೈಡ್​  ಮಾಡಲಿದೆ. 
 
 ಇನ್ನು ಚಂದನ್​ ಶೆಟ್ಟಿ ಕುರಿತು ಹೇಳುವುದಾದರೆ, ಇವರು  2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ ಮೂಲಕ ಇವರು ಫೇಮಸ್​ ಆಗಿದ್ದು, ಇದಾಗಲೇ  15ಕ್ಕಿಂತ ಹೆಚ್ಚು ಹಾಡುಗಳನ್ನು  ಕಂಪೋಸ್ ಮಾಡಿದ್ದಾರೆ. ಇವೇ ಹಾಡಿದ್ದಾರೆ ಕೂಡ.   ಇದೀಗ ಹೊಸ ವರ್ಷಕ್ಕೆ 'ಕಾಟನ್ ಕ್ಯಾಂಡಿ' ಹೆಸರಿನ ಹೊಸ ಹಾಡಿನೊಂದಿಗೆ ಫ್ಯಾನ್ಸ್‌ ಮುಂದೆ ಬಂದಿದ್ದು, ಅಭಿಮಾನಿಗಳನ್ನು ಮೀಟ್​ ಆಗಲು ಎದುರು ನೋಡುತ್ತಿದ್ದಾರೆ. 

ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ಹೊಸ ವರ್ಷದ ವಿಡಿಯೋಗೆ ಇನ್ನಿಲ್ಲದ ಕಮೆಂಟ್ಸ್​

Latest Videos
Follow Us:
Download App:
  • android
  • ios