9 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಗಳ ಮರಳಿ ಮನೆ ಸೇರಿಸಿದ 'ಸೀಲ್ '
9 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಕಳೆದು ಹೋಗಿದ್ದ ಮಹಿಳೆಯೊಬ್ಬರು ಮತ್ತೆ ಗೂಡು ಸೇರಿದ್ದಾರೆ. ಮಾನಸಿಕ ಅಸ್ವಸ್ಥರಾಗಿದ್ದ 34 ವರ್ಷದ ಮಹಿಳೆಯೊಬ್ಬರು ಮತ್ತೆ ತಮ್ಮ ಕುಟುಂಬವನ್ನು ಸೇರಿದ್ದು, ಇದರಿಂದ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ.
ಮುಂಬೈ: 9 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಕಳೆದು ಹೋಗಿದ್ದ ಮಹಿಳೆಯೊಬ್ಬರು ಮತ್ತೆ ಗೂಡು ಸೇರಿದ್ದಾರೆ. ಮಾನಸಿಕ ಅಸ್ವಸ್ಥರಾಗಿದ್ದ 34 ವರ್ಷದ ಮಹಿಳೆಯೊಬ್ಬರು ಮತ್ತೆ ತಮ್ಮ ಕುಟುಂಬವನ್ನು ಸೇರಿದ್ದು, ಇದರಿಂದ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮಹಾರಾಷ್ಟ್ರದ ಮುಂಬೈ ಮಹಾನಗರಿಯಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ 34 ವರ್ಷದವರಾಗಿರುವ ಪಲ್ಲವಿ ಸಾಳ್ವಿ ಎಂಬುವವರು 9 ವರ್ಷಗಳ ಹಿಂದೆ ಗುಡಿಪಾಡ್ವಾದಂದು ಆಯೋಜಿಸಲಾಗಿದ್ದ ಮೆರವಣಿಗೆ ವೇಳೆ ಗುಂಪಿನಲ್ಲಿ ನಾಪತ್ತೆಯಾಗಿದ್ದರು. ಇದಾದ ಬಳಿಕ ನ್ಯೂ ಪನ್ವೆಲ್‌ನಲ್ಲಿರುವ (New Panwel) ಪುನರ್ವಸತಿ ಕೇಂದ್ರವೊಂದರ ಸಿಬ್ಬಂದಿ ಕೈಗೆ ಈಕೆ ಹತಾಶ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಂತರ ಪುನರ್ವಸತಿ ಕೇಂದ್ರದವರು ಕರೆದೊಯ್ದು ಆಕೆಗೆ ಆಶ್ರಯ ನೀಡಿದ್ದರು.
ಪ್ರಸ್ತುತ ತನ್ನ ಹಳೆ ಕುಟುಂಬ (FamilY) ಹಾಗೂ ತನ್ನ ಒಡಹುಟ್ಟಿದವರನ್ನು (Siblings)ಸೇರಿರುವ ಪಲ್ಲವಿಗೆ ಇದೊಂದು ಪವಾಡದಂತೆನಿಸಿದೆ. ಆತ್ಮಹತ್ಯೆಗೆ ಯತ್ನ (Suicide), ಮಾನಸಿಕ ದೌರ್ಬಲ್ಯತೆ ಇವೆಲ್ಲವುದರ ಜೊತೆಗೆ ಮನೆಯವರಿಂದಲೂ ದೂರಾಗಿ ಸಂಕಷ್ಟ ಅನುಭವಿಸಿದ ಪಲ್ಲವಿ ಸಾಳ್ವಿಗೆ ಮನೆಯವರ ಪುನರ್ಮಿಲನದಿಂದ ಮನೆಯವರು ಕೂಡ ಫುಲ್ ಖುಷ್ ಆಗಿದ್ದಾರೆ. ನಮ್ಮ ಸುಪರ್ದಿಯಲ್ಲಿ ಆಶ್ರಯ ಪಡೆದಿದ್ದ ಆಕೆ ತನ್ನ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬದಲಾವಣೆಗೆ ಪ್ರಯತ್ನಿಸಿದ್ದಳು. ಹೀಗಾಗಿಯೇ ಆಕೆ ತಾನು ಮೊದಲಿದ್ದ ಮನೆಯ ಪ್ರದೇಶದ ವಿಳಾಸವನ್ನು ಅರೆಬರೆಯಾಗಿ ಹೇಳಿದ್ದಳು. ಇದರಿಂದ ಆಕೆಯ ಸಹೋದರಿ ಅಶ್ವಿನಿ ಮಹಾದಿಕ್ (Ashwini Mahadik) ಹಾಗೂ ಕಿರಣ್ ಸಾಳ್ವಿ (Kiran salvi) ಅವರನ್ನು ಸಂಪರ್ಕಿಸಲು ಸಾಧ್ಯವಾಯ್ತು ಎಂದು ಪುನರ್ವಸತಿ ಕೇಂದ್ರದ ಮುಖ್ಯಸ್ಥ ಕೆ.ಎಂ ಫಿಲಿಪ್ ಅವರು ಮಾಧ್ಯಮಗಳಿಗೆ ತಿಳಿಸಿದರು.
Udupi; ಈ ಒಂಟಿ ವೃದ್ದೆಯನ್ನು ಮರಳಿ ಗೂಡಿಗೆ ಸೇರಿಸುವವರಾರು?
ಕಂದೇಶ್ವರದ ಪೊಲೀಸರು (Kundeshwar Police) ಹಾಗೂ ಪಿಂಕು ರಾಥೋಡ್ (Pinku Rathod) ಹಾಗೂ ರೂಪೇಶ್ ಕದಂ (Rupesh kadam) ಎಂಬುವವರು ಈಕೆಯ ಬಗ್ಗೆ ಸಾಮಾಜಿಕ ಮತ್ತು ಇವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ (SEAL) ಎಂಬ ಸಂಸ್ಥೆಗೆ ಮಾಹಿತಿ ನೀಡಿದ್ದರು. ಅವಳನ್ನು ಸಂಸ್ಥೆ ಮೊದಲ ಬಾರಿ ಭೇಟಿ ಮಾಡಿದಾಗ, ಆಕೆ ಬಹಳ ಶೋಚನೀಯ ಸ್ಥಿತಿಯಲ್ಲಿದ್ದಳು. ಆಕೆಯ ಚರ್ಮ ಹಾಗೂ ಕಿವಿಯಿಂದ ಹುಳುಗಳು ಹೊರ ಬರುತ್ತಿದ್ದವು. ಆಕೆ ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಕಾರಣ ಆಕೆಯ ದೇಹದ ಮೇಲ್ಭಾಗದ ಚರ್ಮದಲ್ಲಿ ಸುಟ್ಟ ಗಾಯಗಳಿದ್ದವು, ಇದರಿಂದ ಹುಳುಗಳಾಗಿದ್ದವು. ನಾವು ಆಕೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ವೈದ್ಯಕೀಯ ಚಿಕಿತ್ಸೆ ನೀಡಿ, ನಂತರ ಆಕೆಗೆ ಕೌನ್ಸೆಲಿಂಗ್ ಮಾಡಿದೆವು ಎಂದು ಆಕೆಯನ್ನು ನೋಡಿಕೊಂಡಿದ್ದ ಸೀಲ್ ಸಂಸ್ಥೆಯ ಮುಖ್ಯಸ್ಥ ಕೆ.ಎಂ. ಫಿಲಿಪ್ ಹೇಳಿದರು.
ಇದರ ಪರಿಣಾಮ ಬರೋಬ್ಬರಿ 9 ವರ್ಷಗಳ ಬಳಿಕ ಪಲ್ಲವಿ (Pallavi) ತಾನು ವಾಸವಿದ್ದ ಸ್ಥಳದ ಬಗ್ಗೆ ಹೇಳಿದ್ದು, ಜೊತೆಗೆ ತಾನು ವಾಸವಿದ್ದ ಮನೆ ಸಮೀಪದಲ್ಲಿದ್ದ ದಿನಸಿ ಅಂಗಡಿಯೊಂದರ ಹೆಸರನ್ನು ಕೂಡ ಹೇಳಿದ್ದಳು. ಅಲ್ಲದೇ ಅಲ್ಲಿ ಗಣೇಶನ ದೇಗುಲ ಹಾಗೂ ಸಮೀಪದಲ್ಲೇ ದರ್ಗಾ ಇರುವುದಾಗಿಯೂ ಆಕೆ ಹೇಳಿದ್ದಳು. ಆಕೆ ನೀಡದ ಕೆಲ ಸುಳಿವುಗಳೊಂದಿಗೆ ನಾನು ಪರೇಲ್ ಸೆವ್ರಿ ಪ್ರದೇಶಕ್ಕೆ ಭೇಟಿ ನೀಡಿ ಆಕೆಯ ಕುಟುಂಬ ಇರುವುದನ್ನು ಪತ್ತೆ ಮಾಡಿದೆ.
Girl friend Deport ಬಾಯ್‌ಫ್ರೆಂಡ್ ಜೊತೆಗಿರಲು ಸ್ವೀಡನ್‌ನಿಂದ ಮಂಬೈಗೆ ಬಂದಳಿದ 16ರ ಬಾಲಕಿ ಮರಳಿ ಗೂಡಿಗೆ!
ಮನೆ ಬಾಗಿಲು ತೆರೆದ ಆಕೆಯ ಕಿರಿಯ ಸಹೋದರಿ ಕಿರಣ್, ಪಲ್ಲವಿ ಜೀವಂತವಿರುವುದನ್ನು ಕೇಳಿ ಅಚ್ಚರಿಗೊಂಡಿದ್ದಳು. ನಂತರ ಪಲ್ಲವಿ ಸಹೋದರಿಯರಾದ ಅಶ್ವಿನಿ ಹಾಗೂ ಕಿರಣ್ (Kiran) ಪುನರ್ವಸತಿ ಕೇಂದ್ರಕ್ಕೆ ಬಂದಿದ್ದು, ಕೂಡಲೇ ಪಲ್ಲವಿ ಅವರನ್ನು ಗುರುತಿಸಿದಳು. ಈ ವೇಳೆ ಎಲ್ಲರೂ ಭಾವುಕರಾಗಿದ್ದರು.
ಮಾನಸಿಕ ಅಸ್ವಸ್ಥತೆಯಿಂದಾಗಿ ಪಲ್ಲವಿ 2009ರಲ್ಲಿ 4 ನೇ ತರಗತಿಯಲ್ಲಿರುವಾಗಲೇ ಶಾಲೆ ಬಿಟ್ಟಿದ್ದಳು. ಇದಾದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ತನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಳು. ಆದರೆ 2014ರಲ್ಲಿ ಗುಡಿಪಡ್ವಾ ಮೆರವಣಿಗೆ ವೇಳೆ ಕುಟುಂಬದವರಿಂದ ತಪ್ಪಿಸಿಕೊಂಡಿದ್ದಳು. ನಾವು ಆಕೆಗಾಗಿ ಹುಡುಕಾಟ ನಡೆಸಿದ್ದವು. ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದೆವು. ಆದರೆ ಇಷ್ಟು ವರ್ಷಗಳಲ್ಲಿ ನಮಗೆ ಆಕೆಯನ್ನು ಪತ್ತೆ ಮಾಡಲಾಗಲಿಲ್ಲ. ನಾವು ಇದಕ್ಕಾಗಿ ಸೀಲ್ ಸಂಸ್ಥೆಗೆ ಕೃತಜ್ಞರಾಗಿದ್ದೇವೆ. ನಮ್ಮ ಅಕ್ಕ ಮೊದಲಿಗಿಂತ ತುಂಬಾ ಸುಧಾರಿಸಿದ್ದಾಳೆ. ಆಕೆಯನ್ನು ಚೆನ್ನಾಗಿ ನೋಡಿಕೊಂಡ ಸೀಲ್ ಸಂಸ್ಥೆಗೆ ಧನ್ಯವಾದ ಎಂದು ಆಕೆಯ ಸಹೋದರಿಯರು ಹೇಳಿದ್ದು, ಆಕೆಯನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ.