ಈ ವೃದ್ಧೆ ಮನೆ ಸೇರಲು ಹಂಬಲಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಯಾರೂ ಇಲ್ಲ, ಈಕೆಯನ್ನು ಮತ್ತೆ ಒಂಟಿಯಾಗಿ ಬಿಡಬೇಕೆ? ಇದು ಪ್ರಶ್ನೆ ಸಮಾಜ ಸೇವಕ  ವಿಶು ಶೆಟ್ಟಿ  ಅವರನ್ನು ಕಾಡುತ್ತಿದೆ.

ಉಡುಪಿ (ಜೂನ್ 20): ಈಕೆ ಒಂಟಿ ವೃದ್ಧೆ , ಹೆಸರು ನರ್ಸಿ ಮೊಗವೀರ. ಕಳೆದ ವರ್ಷ ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿ ಎಂಟು ತಿಂಗಳು ಇನ್ನಿಲ್ಲದ ಯಾತನೆಗೆ ಒಳಗಾದಾಕೆ. ಅದು ಹೇಗೋ ಸಮಾಜಸೇವಕ ವಿಶು ಶೆಟ್ಟಿಯವರ ಕಣ್ಣಿಗೆ ಬಿದ್ದಿದ್ದರು. ಬಳಿಕ ದುರಂತ ಜೀವನ ಸಾಗಿಸುತ್ತಿದ್ದ ಈಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಸುಮಾರು 15 ತಿಂಗಳು ಈಕೆಗೆ ಆರೈಕೆ ನೀಡಿದ ಬಳಿಕ ಇವರು ಗುಣಮುಖರಾಗಿದ್ದಾರೆ. ಈಕೆಗೆ ಆರೈಕೆಯನ್ನೇನೋ ನೀಡಿ ಗುಣಮುಖ ಮಾಡಲಾಗಿದೆ , ಆದರೆ ದೂರವಾದ ಸಂಬಂಧಿಕರನ್ನು ಮರಳಿ ನೀಡಲು ಸಾಧ್ಯವೇ? 

Tumakuruನಲ್ಲಿ ಕಾರು - ಸರಕಾರಿ ಬಸ್ ಭೀಕರ ಅಪಘಾತ, ಇಬ್ಬರು ಬಲಿ

ಸದ್ಯ ಈ ವೃದ್ಧೆ ಮನೆ ಸೇರಲು ಹಂಬಲಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಯಾರೂ ಇಲ್ಲ, ಈಕೆಯನ್ನು ಮತ್ತೆ ಒಂಟಿಯಾಗಿ ಬಿಡಬೇಕೆ? ಇದು ಪ್ರಶ್ನೆ ಸಮಾಜ ಸೇವಕ ವಿಶು ಶೆಟ್ಟಿ ಅವರನ್ನು ಕಾಡುತ್ತಿದೆ.

ಕೋಟದ ಕಾಜರವಳ್ಳಿ ಈಕೆಯ ಹುಟ್ಟೂರು. ವಿಶು ಶೆಟ್ಟಿಯವರು ಕಾಡಿಬೇಡಿ , ಒಂದು ತಿಂಗಳು ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಿಸಿ ತಜ್ಞ ವೈದ್ಯರಿಂದ ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 3 ತಿಂಗಳ ಕಾಲ ವೃದ್ಧೆಗೆ ವಿಶ್ರಾಂತಿ ನೀಡಬೇಕೆಂದು ವೈದ್ಯರು ತಿಳಿಸಿದ ಕಾರಣ ಸಂಬಂಧಿಕರಾಗಲೀ ಇಲಾಖೆಯಾಗಲಿ ಸಹಕರಿಸದ ಕಾರಣ ವಿಶು ಶೆಟ್ಟಿ ಅಂಬಲಪಾಡಿಯವರ ಮನವಿಗೆ ಸ್ಪಂದಿಸಿ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ವೈದ್ಯರಾದ ರಾಮಚಂದ್ರ ಭಾರ್ಗವಿ ಐತಾಳ್ ದಂಪತಿ ತಮ್ಮ ಖಾಸಗಿ ವೃದ್ಧಾಶ್ರಮದಲ್ಲಿ ಮೂರು ತಿಂಗಳು ಉಚಿತ ಆಶ್ರಯ ನೀಡಿದ್ದರು.

1500 ಕೋಟಿಯಲ್ಲಿ 171 ಕಿ.ಮೀ. ಬೆಂಗಳೂರು Rajakaluve ಅಭಿವೃದ್ಧಿ

 ಇದೀಗ ಮೂರು ತಿಂಗಳು ಕಳೆದು 15 ತಿಂಗಳಾದರೂ ಸಂಬಂಧಿಕರಾಗಲೀ ಇಲಾಖೆಯಾಗಲಿ ಸ್ಪಂದಿಸುತ್ತಿಲ್ಲ. ವೃದ್ದೆಯು ತನ್ನ ಮನೆಯಾದ ಕೋಟ ಠಾಣಾ ವ್ಯಾಪ್ತಿಯ ತನ್ನೂರಿಗೆ ಹೋಗಲು ಹಂಬಲಿಸುತ್ತಿದ್ದಾರೆ.

ಈಕೆಗೆ ಮನೆ ಇದೆ. ಮನೆಗೆ ಬಿಟ್ಟು ಬಂದರೆ ,ಒಂಟಿ ವೃದ್ಧೆಯ ಮುಂದಿನ‌ ಜೀವನ ಹೇಗೆ? ಸಂಬಂಧಪಟ್ಟ ಇಲಾಖೆ ಈಕೆಗೊಂದು ವ್ಯವಸ್ಥೆ ಮಾಡಿಕೊಡಬೇಕಿದೆ. ಹಿರಿಯನಾಗರಿಕರ ಅನುಕೂಲಕ್ಕೆಂದು‌ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಹಿರಿಯ ನಾಗರಿಕರ ಮಾತ್ರ ತಮ್ಮ ಹಕ್ಕುಗಳಿಗಾಗಿ ಜೀವನ ಪರ್ಯಂತ ಹೋರಾಟ ನಡೆಸುವ ಸ್ಥಿತಿ ಇದೆ.

Ballari Drinking Water Crisis ಬಳ್ಳಾರಿ ಜನರಿಗೆ ಕುಡಿಯಲು ಆಂಧ್ರದ ಫಿಲ್ಟರ್ ನೀರು!

ಅಂಗವಿಕಲ ಮಗನ ಬಾವಿಗೆ ತಳ್ಳಿ ತಂದೆ ನೇಣಿಗೆ ಶರಣು: ಅಂಗವಿಕಲ ಮಗನನ್ನು ಬಾವಿಗೆ ತಳ್ಳಿದ ತಂದೆ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ.

ಪಾಚರಬೆಟ್ಟು ಕೃಷ್ಣ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ತನ್ನ ಅಂಗವಿಕಲ ಪುತ್ರ 26 ವರ್ಷದ ದೀಪೇಶ್‌ ಎಂಬಾತನನ್ನು ಮನೆ ಸಮೀಪದ ಬಾವಿಗೆ ತಳ್ಳಿದ್ದಾರೆ. ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೀಡಾಗಿದ್ದು, ಇದ್ದ ಒಬ್ಬ ಮಗನೂ ಅಂಗವಿಕಲನಾಗಿದ್ದರಿಂದ ಮನನೊಂದು ಈ ಕೃತ್ಯವೆಸಗಿದ್ದಾರೆಂದು ತಿಳಿದುಬಂದಿದೆ. 

ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್‌, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಅಜೆಕಾರು ಎಸ್‌ಐ ಶುಭಕರ್‌, ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.