Asianet Suvarna News Asianet Suvarna News

ಡಿವೋರ್ಸಿ ಮಹಿಳೆಗೆ 800 ಬಾಯ್ ಫ್ರೆಂಡ್ಸ್! ಅಚ್ಚರಿ ಮೂಡಿಸಿತ್ತು ಅದ್ರಲ್ಲೊಬ್ಬನ ಗಿಫ್ಟ್

ಪ್ರೀತಿಯನ್ನು ವ್ಯಕ್ತಪಡಿಸೋಕೆ ಗಿಫ್ಟ್ ಒಂದು ಉತ್ತಮ ಮಾರ್ಗ. ಜನರು ತಮ್ಮವರನ್ನು ಖುಷಿಪಡಿಸಲು ಉಡುಗೊರೆ ನೀಡ್ತಾರೆ. ಕೆಲವರ ಉಡುಗೊರೆ ಹುಬ್ಬೇರಿಸುವಂತೆ ಮಾಡುತ್ತೆ. ಸಿಕ್ಕ ಗಿಫ್ಟ್ ಎಲ್ಲಿಡೋದು ಎಂಬ ಚಿಂತೆ ಶುರುವಾಗುತ್ತೆ.
 

A Man Who Offered Four Hundred Goats As A Gift To His Lover roo
Author
First Published Dec 12, 2023, 3:14 PM IST

ಪ್ರೇಮಿಗಳ ಮಧ್ಯೆ ಗಿಫ್ಟ್ ಎಕ್ಸಚೇಂಜ್ ಆಗೋದು ಮಾಮೂಲಿ. ಹಣ ಇರೋರು ವಜ್ರ, ವಾಹನ, ಮನೆ ಉಡುಗೊರೆ ನೀಡಿದ್ರೆ, ಹಣ ಇಲ್ಲದಿರೋರು ಸಾಲ ಮಾಡಿಯಾದ್ರೂ ಸಣ್ಣಪುಟ್ಟ ಉಡುಗೊರೆ ನೀಡಿ ಸಂಗಾತಿಯನ್ನು ಖುಷಿಪಡಿಸ್ತಾರೆ. ಮಾರುಕಟ್ಟೆಯಲ್ಲಿ ಗಿಫ್ಟ್ ಐಟಂಗಳು ಸಾಕಷ್ಟು ಸಿಗುತ್ವೆ. ಆದ್ರೆ ಕೆಲವರು ಚಿತ್ರವಿಚಿತ್ರ ಉಡುಗೊರೆಗಳನ್ನು ನೀಡಲು ಮುಂದಾಗ್ತಾರೆ. ಅವರು ನೀಡುವ ಉಡುಗೊರೆ, ಗಿಫ್ಟ್ ಪಡೆದ ವ್ಯಕ್ತಿಯನ್ನು ಮಾತ್ರವಲ್ಲ ಸುತ್ತಮುತ್ತಲಿನವರನ್ನು ಅಚ್ಚರಿಗೊಳಿಸುತ್ತೆ. ಕೆಲವೊಂದು ವಸ್ತುವನ್ನು ಗಿಫ್ಟ್ ರೂಪದಲ್ಲಿ ಪಡೆದ್ರೆ ಅದನ್ನು ಕಾಪಾಡಿಕೊಳ್ಳೋದು ಕಷ್ಟವಾಗುತ್ತದೆ. ಈ ವ್ಯಕ್ತಿ ಕೂಡ ಅಚ್ಚರಿ ಗಿಫ್ಟ್ ನೀಡಲು ಮುಂದಾದ ಜನರ ಪಟ್ಟಿಗೆ ಸೇರ್ತಾನೆ.

ಪ್ರೇಯಸಿಗೆ ಆಡಿನ (Goat) ಹಾಲು (Milk) ಇಷ್ಟ ಎನ್ನುವ ಕಾರಣಕ್ಕೆ ಒಂದಲ್ಲ ಎರಡಲ್ಲ ನಾಲ್ಕು ನೂರು ಆಡುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದ ಈ ವ್ಯಕ್ತಿ. ಇದು ಸತ್ಯ. ವಿಚ್ಛೇದಿತ ಮಹಿಳೆ, ಬಾಡಿ ಬಿಲ್ಡರ್ (Body Builder) ತನ್ನ ಬಾಯ್ ಫ್ರೆಂಡ್ ಆಡುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದ ವಿಷ್ಯವನ್ನು ಹೇಳಿಕೊಂಡಿದ್ದಾಳೆ.

ಕೊಹ್ಲಿಯಂಥ ಗಂಡನೇ ಇಲ್ಲವೆಂದ ಅನುಷ್ಕಾ, ನನ್ನ ಮಡದಿಯೇ ಬೆಸ್ಟ್ ಅಂದ ಕೊಹ್ಲಿ!

ಈ ಬಾಡಿ ಬಿಲ್ಡರ್ ಮಹಿಳೆ ಸಾಮಾನ್ಯದವಳಲ್ಲ. ಆಕೆ ಹೆಸರು ಆಂಡ್ರಿಯಾ ಸನಶೈನ್. ಸುಮಾರು 800 ಪುರುಷರಿಗೆ ಗರ್ಲ್ ಫ್ರೆಂಡ್ ಆಗಿದ್ದ ಆಂಡ್ರಿಯಾ, ಆಡಿನ ಹಾಲನ್ನು ಕುಡಿಯುತ್ತಾಳೆ. ಇದನ್ನು ತಿಳಿದ ಆಕೆಯ ಬಾಯ್ ಫ್ರೆಂಡ್ ಒಬ್ಬ, ಆಂಡ್ರಿಯಾಗಳನ್ನು ಮೆಚ್ಚಿಸಲು ಆಡುಗಳನ್ನು ಉಡುಗೊರೆಯಾಗಿ ನೀಡುವ ಆಲೋಚನೆ ಮಾಡಿದ್ದ. ಆಂಡ್ರಿಯಾ ಪ್ರೀತಿಗೆ ಬಿದ್ದಿದ್ದ ವ್ಯಕ್ತಿ, ಮದುವೆ ಆಗುವಂತೆ ಆಕೆಯನ್ನು ಪ್ರಪೋಸ್ ಮಾಡಿದ್ದ. ಮದುವೆ ಆದ್ಮೇಲೆ 400 ಆಡುಗಳನ್ನು ನೀಡೋದಾಗಿ ಹೇಳಿದ್ದ. 

ಡಿಪ್ಪಿ ಪ್ರೀತಿಯಲ್ಲಿ ರಣವೀರ್ ಹುಚ್ಚನಾಗಿದ್ರೆ, ರಣಬೀರ್ ಧ್ಯಾನಿಸುತ್ತಿದ್ದಳಾ ದೀಪಿಕಾ ಪಡುಕೋಣೆ?

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಂಡ್ರಿಯಾ ಈ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ 512,000 ಫಾಲೋವರ್ಸ್ ಹೊಂದಿರುವ ಆಂಡ್ರಿಯಾ, ಆತನ ಈ ಗಿಫ್ಟ್ ಐಡಿಯಾ ಕೇಳಿ ನನಗೆ ಅಚ್ಚರಿಯಾಗಿತ್ತು ಎಂದಿದ್ದಾಳೆ. ನನ್ನ ಅಪಾರ್ಟ್ಮೆಂಟ್ ನಲ್ಲಿ 2೦೦ ಆಡುಗಳನ್ನು ಸಾಕಲು ಜಾಗವಿಲ್ಲ. ಇನ್ನು 400 ಆಡುಗಳನ್ನು ಎಲ್ಲಿ ಸಾಕೋದು ಎಂದು ಕೇಳಿದ್ದಾಳೆ.

ಇಷ್ಟೊಂದು ಜನರ ಜೊತೆ ಡೇಟ್ ಮಾಡಿದ್ದಾಳೆ ಆಂಡ್ರಿಯಾ: 18 ವರ್ಷಗಳ ಹಿಂದೆಯೇ ಆಂಡ್ರಿಯಾ ತನ್ನ ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದಾಳೆ. ಆದಾದ್ಮೇಲೆ 800ರಷ್ಟು ಹುಡುಗರ ಜೊತೆ ಡೇಟ್ ಮಾಡಿದ್ದಾಳೆ ಆಂಡ್ರಿಯಾ. ಇಷ್ಟಾದ್ರೂ ಆಂಡ್ರಿಯಾಗೆ ಈಗ್ಲೂ ಆಕೆ ಬಯಸಿದ ಬಾಯ್ ಫ್ರೆಂಡ್ ಸಿಕ್ಕಿಲ್ಲ. ಈಕೆಗೆ ಈಗ 53 ವರ್ಷ ವಯಸ್ಸು. ಫಿಟ್ನೆಸ್ ವಿಷ್ಯದಲ್ಲಿ ಆಕೆ ಮುಂದಿದ್ದಾಳೆ. ಎಲ್ಲ ವಯಸ್ಸಿನ ಜನರಿಗೆ ಫಿಟ್ನೆಸ್ ನಲ್ಲಿ ಆಂಡ್ರಿಯಾ ಮಾದರಿ ಅಂದ್ರೆ ತಪ್ಪಾಗೋದಿಲ್ಲ. ಆಕೆ ನೋಡಿದ್ರೆ 53 ವರ್ಷ ವಯಸ್ಸಾಗಿದೆ ಅನ್ನೋಕೆ ಸಾಧ್ಯವೇ ಇಲ್ಲ. ಯಂಗ್ ಆಗಿರುವ ಆಂಡ್ರಿಯಾ ವೈಯಕ್ತಿಕ ಜೀವನ ಚೆನ್ನಾಗಿಲ್ಲ. ಇದೇ ಕಾರಣಕ್ಕೆ ಪ್ರತಿ ದಿನ ಮದ್ಯ ಸೇವನೆ ಮಾಡ್ತಾಳೆ ಆಂಡ್ರಿಯಾ. 

ಆಡಿನ ಹಾಲು ಕುಡಿಯೋದು ಏಕೆ? : ಆಡಿನ ಹಾಲು, ಚರ್ಮವನ್ನು ಹೈಡ್ರೇಟ್ ಮಾಡುವ ಕಾರಣದಿಂದ ನಾನು ಆಡಿನ ಹಾಲನ್ನು ಇಷ್ಟಪಡುತ್ತೇನೆ ಎಂದು ಆಂಡ್ರಿಯಾ ಹೇಳಿದ್ದಾಳೆ. ಇದರಲ್ಲಿ ವಿಟಮಿನ್ ಎ ಇದ್ದು, ಇದು ಚರ್ಮವನ್ನು ಮೃದುಗೊಳಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಾದ ಕಾರಣ ನಾನು ಆಡಿನ ಹಾಲನ್ನು ಕುಡಿತೇನೆ ಎಂದು ಆಂಡ್ರಿಯಾ ಹೇಳಿದ್ದಾಳೆ.

ಆಂಡ್ರಿಯಾಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಡ್ತಾರೆ. ಆಕೆ ಅನೇಕ ಹಾಟ್ ಫೋಟೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಳ್ತಿರುತ್ತಾಳೆ. ಒಮ್ಮೆ ನ್ಯೂಡ್ ಫೋಟೋವನ್ನು ಆಂಡ್ರಿಯಾ ಹಂಚಿಕೊಂಡಿದ್ದಳು. ಆಗ ಆಕೆ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. 

Follow Us:
Download App:
  • android
  • ios