60 ಸಾವಿರ ನೀಡಿ ಆನ್‌ಲೈನ್‌ನಲ್ಲಿ ಬಾಯ್‌ಫ್ರೆಂಡ್‌ ಖರೀದಿಸಿದ ಮಹಿಳೆ

  • ವಿಮಾನವನ್ನೇ ಬಾಯ್‌ಫ್ರೆಂಡ್‌ ಆಗಿಸಿಕೊಂಡು ಮಹಿಳೆ
  • ಹೇಗಿದ್ದಾನೆ ನೋಡಿ ಈಕೆಯ ಸ್ಪೆಷಲ್‌ ಬಾಯ್‌ಫ್ರೆಂಡ್‌
  • ಬಾಯಿ ಬರಲ್ಲ ಜಗಳವಿಲ್ಲ ಈಕೆ ಹೇಳಿದ್ದೇ ಎಲ್ಲ
A Hungarian woman Sandra claims she is in love with her toy plane akb

ಹಂಗೇರಿ(ಮಾ.8): ಬಾಯ್‌ಫ್ರೆಂಡ್ ಮಾಡಿಕೊಳ್ಳೋದು ಸುಲಭದ ಕೆಲಸವೇನೆಲ್ಲ. ಜೊತೆಗೆ ಆತನೊಂದಿಗೆ ಸಂಬಂಧವನ್ನು ನಾಜೂಕಾಗಿ ನಿರ್ವಹಿಸುವುದು ಇನ್ನೂ ಕಷ್ಟದ ಕೆಲಸ ಸಂಬಂಧದ ಆರಂಭವಂತೂ ಪ್ರತಿ ಮಾತನ್ನು ಯೋಚಿಸಿಯೇ ಆಡಬೇಕಾಗುತ್ತದೆ. ಸ್ವಲ್ಪ ಅಪಾರ್ಥವಾದರೂ ಇದು ಸಂಬಂಧಕ್ಕೆ ಕುತ್ತು ತರುವುದು. ಆದರೆ ಇಲ್ಲೊಬ್ಬಾಕೆಗೆ ಅದ್ಯಾವ ಸಮಸ್ಯೆಯೂ ಇಲ್ಲ ಏಕೆಂದರೆ ಆಕೆಯ ಬಾಯ್‌ಫ್ರೆಂಡ್ ಫುಲ್‌ ಡಿಫರೆಂಟ್‌ ಆತನಿಗೆ ಮಾತು ಬರಲ್ಲ. ಇಬ್ಬರು ಕಿತ್ತಾಡುವ ಪ್ರಮೇಯವೇ ಇಲ್ಲ. ಈಕೆ ಹೇಳಿದ್ದಕ್ಕೆಲ್ಲ ಎಸ್‌ ಅಂದರೆ ಅಲ್ಲಿಗೆ ಮುಗಿತ್ತು. ಇವಳಿಗೂ ಖುಷಿ ಅವನಿಗೂ ನೆಮ್ಮದಿ. ಇದ್ಯಾವ ರೀತಿ ಯಾರಿರಬಹುದು ಹೇಳಿದ್ದಕ್ಕೆಲ್ಲ ಹೂ ಅನ್ನೋ ಗಂಡಸು ಅಂತ ಕುತೂಹಲದಲ್ಲಿದ್ದೀರಾ... ಆದರೆ ಈತ ವ್ಯಕ್ತಿಯಲ್ಲ. ವಿಮಾನದ ರೂಪದಲ್ಲಿರುವ ಆಟದ ಸಾಮಾನು.

ಹೌದು ವಿಚಿತ್ರವೆನಿಸಿದರು ಸತ್ಯ ಹಂಗೇರಿಯ (Hungary) ಮಹಿಳೆಯೊಬ್ಬಳು ಆಟದ ಸಾಮಾನಾಗಿರುವ ವಿಮಾನವನ್ನೇ ತನ್ನ ಬಾಯ್‌ಫ್ರೆಂಡ್‌ ಎಂದು ಹೇಳಿಕೊಳ್ಳುತ್ತಿದ್ದು, ಅದರೊಂದಿಗೆ ಈಕೆ ಜೀವನ ನಡೆಸುತ್ತಿದ್ದಾಳೆ. 28 ವರ್ಷದ ಸಂಡ್ರಾ (Sandra) ಹಂಗೇರಿಯಾ ಬೂಡಪೆಸ್ಟ್‌ನವಳಾಗಿದ್ದು (Budapest) ಈಕೆ ತನ್ನ ಬಾಯ್‌ಫ್ರೆಂಡ್ ಎಂದು ಹೇಳಿಕೊಂಡಿರುವ ಈ ವಿಮಾನದ ಆಟಿಕೆಯನ್ನು 600 ಪೌಂಡ್ ಹಣ ನೀಡಿ ಆನ್‌ಲೈನ್‌ನಲ್ಲಿ ಖರೀದಿಸಿದ್ದಾಳೆ.  600 ಪೌಂಡ್ ಎಂದರೆ ಸ ರಿಸುಮಾರು  60,796 ರೂಪಾಯಿಗಳಾಗುತ್ತವೆ. ಈಕೆ ಈ ವಿಶೇಷ ಬಾಯ್‌ಫ್ರೆಂಡ್‌ಗೆ ಲುಫಾನ್ಸ್ ಎಂಬ ಹೆಸರಿನಿಂದ ಕರೆಯುತ್ತಾಳೆ. 

ಟಿಕೆಟ್ ಇಲ್ದೇ ವಿಮಾನದಲ್ಲೋಗೊದು ಹೇಗೆ : ಗೂಗಲ್ ಸರ್ಚ್ ಮಾಡಿ ವಿಮಾನ ಏರಿದ 9ರ ಪೋರ

ವಾಯುಯಾನ ಸೇವೆಯಲ್ಲಿ ಕೆಲಸ ಮಾಡುವ ಈಕೆ ತನ್ನ ವಿಮಾನದ ಮೇಲಿನ ಪ್ರೀತಿಯನ್ನು ಈ ಮೂಲಕ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾಳೆ. ಈಕೆ ತನಗೆ ಈ ಆಟಿಕೆ ವಿಮಾನದ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಯಿತು ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ಈಕೆ ಇದುವರೆಗೆ ಹೊಂದಿದ್ದ ಬಾಯ್‌ಫ್ರೆಂಡ್‌ಗಳಲ್ಲೇ ಅತ್ಯಂತ ಉತ್ತಮ ಎನಿಸಿದ ಬಾಯ್‌ಫ್ರೆಂಡ್‌ ಈ ಆಟಿಕೆ ವಿಮಾನವಂತೆ. ನಾನು ಏಕೆ ಅವನನ್ನು ಪ್ರೀತಿಸುತ್ತೇನೋ ಗೊತ್ತಿಲ್ಲ. ಆದರೆ ನಾನು ಅವನನ್ನು ಪ್ರೀತಿಸುತ್ತೇನೆ. ಎಂದು ಸಂಡ್ರಾ 'ದಿ ಮಿರರ್‌'ಗೆ ಹೇಳಿದ್ದಾರೆ. 

ಅವನು ಸುಂದರವಾಗಿದ್ದು, ಆತ ನನ್ನ ಜೀವದ ಸಂಗಾತಿ, ಆತ ನಾನು ಮುಂಜಾನೆದ್ದು ನೋಡುವ ಹಾಗೂ ರಾತ್ರಿ ನಿದ್ದೆಗೆ ಜಾರುವ ಮುನ್ನ ನೋಡುವ ಮೊದಲ ವಿಷಯ ಎಂದು ಆಕೆ ಹೇಳಿದ್ದಾಳೆ. ಈ ಸಂಡ್ರಾ ಮೂರು ವರ್ಷವಿರುವಾಗಲೇ ವಿಮಾನಗಳಿಂದ ಆಕರ್ಷಿತಳಾಗಿದ್ದಳಂತೆ ಅಲ್ಲದೇ ಅದರೊಂದಿಗೆ ಕೆಲಸ ಮಾಡುವ ಬಗ್ಗೆ ಕನಸು ಕಾಣುತ್ತಿದ್ದಳಂತೆ. ಹೀಗೆ ವಿಮಾನವನ್ನೇ ಆರಾಧಿಸುತ್ತಿದ್ದ ಈಕೆಗೆ 2021ರಲ್ಲಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿತ್ತು, ಆದರೆ ಆ ಕೆಲಸವನ್ನು ತೊರೆದ ಆಕೆ ಮುಂದೆ ಆಟಿಕೆ ವಿಮಾನದೊಂದಿಗೆ ಸಂಬಂಧಲ್ಲಿದ್ದಳಂತೆ. 

Relationship Tips: ಬಾಯ್‌ಫ್ರೆಂಡ್‌ನ್ನು ಮನೆಯವರಿಗೆ ಪರಿಚಯಿಸುವುದು ಹೇಗೆ ?
 

ಈ ಬಾಯ್‌ಫ್ರೆಂಡ್ ಜೊತೆಗೆ ಇದ್ದಾಗ ಆಗುವ ಖುಷಿ ಹಿಂದೆಂದೂ ಆಗಿಲ್ಲವಂತೆ. ನಾನು ಪ್ರೀತಿಯಲ್ಲಿದ್ದೇನೆ. ಸಾಮಾನ್ಯ ವ್ಯಕ್ತಿಯ ಬದಲು ನಾನು ಯಾವಾಗಲೂ ವಿಮಾನವನ್ನು ಪ್ರೀತಿಸುತ್ತೇನೆ. ವಾರಾಂತ್ಯದಲ್ಲಿ ದೂರ ಎಲ್ಲಾದರೂ ಹೋದರೆ ಜೊತೆಯಲ್ಲೇ ಆತನ್ನು ಕರೆದುಕೊಂಡು ಹೋಗುತ್ತೇನೆ. ಆತ ಯಾವಾಗಲೂ ನನ್ನೊಂದಿಗೆ ಇರುತ್ತಾನೆ. ಅಲ್ಲದೇ ನಾನು ಮತ್ತೆ ಮಾನವ ಸಂಬಂಧಕ್ಕೆ ಮರಳುತ್ತೇನೆಯೋ ಎಂಬ ಬಗ್ಗೆ ನಾನು ಈಗೇನು ಹೇಳಲಾರೆ ಎಂದು ಸಾಂಡ್ರಾ ಹೇಳಿದ್ದಾಳೆ. 

ಒಟ್ಟಿನಲ್ಲಿ ಈಕೆಯೇನೋ  ವಿಮಾನದ ಮೇಲಿನ ಪ್ರೀತಿಯಲ್ಲಿ ವಿಮಾನವನ್ನೇ ಬಾಯ್‌ಫ್ರೆಂಡ್‌ ಆಗಿಸಿಕೊಂಡಿದ್ದಾಳೆ. ಆದರೆ ಗಂಡುಹೈಕಳು ಮದುವೆಯಾಗಲು ಒಂದೇ ಒಂದು ಹೆಣ್ಣು ಹುಳವೂ ಸಿಗುತ್ತಿಲ್ಲ ಎಂದು ಪರಿತಪಿಸುತ್ತಿರುವ ಇಂತ ಕಾಲಘಟ್ಟದಲ್ಲಿ ಹೆಣ್ಣೊಬ್ಬಳು ಗಂಡು ಸಮುದಾಯವನ್ನೇ ತಿರಸ್ಕರಿಸಿ ಆಟಿಕೆಯೊಂದನ್ನು ಬಾಯ್‌ಫ್ರೆಂಡ್‌ ಮಾಡಿಕೊಂಡಿರುವುದು ವಿಚಿತ್ರವೇ ಸರಿ. 

 

 

 

Latest Videos
Follow Us:
Download App:
  • android
  • ios