Asianet Suvarna News Asianet Suvarna News

Relationship Tips: ಬಾಯ್‌ಫ್ರೆಂಡ್‌ನ್ನು ಮನೆಯವರಿಗೆ ಪರಿಚಯಿಸುವುದು ಹೇಗೆ ?

ಮನೆಯಲ್ಲಿ ಮದುವೆ (Marriage) ಮಾತುಕತೆ ಮಾಡ್ತಿದ್ದಾರೆ. ಆದ್ರೆ ನೀವೋ ಅದೆಷ್ಟೋ ವರ್ಷದಿಂದ ಅವನನ್ನು ಲವ್ (Love) ಮಾಡ್ತಿದ್ದೀರಿ. ಆದ್ರೆ ಮನೆಯವರ ಮುಂದೆ ಹೋಗಿ ಪರಿಚಯ ಮಾಡಿಕೊಡೋಕೆ ಭಯ. ಹೀಗಿದ್ದಾಗ ಏನ್ಮಾಡೋದು ? ಬಾಯ್‌ಫ್ರೆಂಡ್‌ (Boyfriend), ಗರ್ಲ್‌ಫ್ರೆಂಡ್‌ನ್ನು ಮನೆಯವರಿಗೆ ಪರಿಚಯಿಸುವುದು ಹೇಗೆ ?

Steps To Introduce Your Partner To Your Family
Author
Bengaluru, First Published Feb 24, 2022, 12:51 PM IST

ಈಗಿನ ಕಾಲದಲ್ಲಿ ಎಲ್ರಿಗೂ ಬಾಯ್‌ಫ್ರೆಂಡ್‌ (Boyfriend), ಗರ್ಲ್‌ಫ್ರೆಂಡ್ ಅಂತೂ ಇದ್ದೇ ಇರ್ತಾರೆ. ಕೆಲವೊಂದು ಜಸ್ಟ್ ಟೈಂ ಪಾಸ್ ರಿಲೇಶನ್ ಶಿಪ್ (Relationship) ಆಗಿದ್ರೆ, ಇನ್ನು ಕೆಲವು ಮದುವೆಯಲ್ಲೇ ಒಂದಾಗುವ ಸುಂದರ ಅನುಬಂಧ. ಆದ್ರೆ ಮದುವೆಯಾಗೋದೇನೋ ಸರಿ. ಆದ್ರೆ ತಾನೇ ಆಯ್ಕೆ ಮಾಡಿದ ಬಾಳಸಂಗಾತಿಯನ್ನು ಕುಟುಂಬಕ್ಕೆ(Family) ಪರಿಚಯಿಸುವುದು ಹೇಗೆ ಅನ್ನೋದು ಹಲವರ ಚಿಂತೆ. ಹುಡುಗ ಅಥವಾ ಹುಡುಗಿ ಎಷ್ಟೇ ಸುಂದರವಾಗಿದ್ದರೂ, ಉತ್ತಮ ಉದ್ಯೋಗದಲ್ಲಿದ್ದರೂ ಪ್ರತಿಯೊಬ್ಬರೂ ಮನೆಯಲ್ಲಿ ಪ್ರೀತಿಯ ವಿಷಯವನ್ನು ಹೇಳಲು ಭಯಪಡುತ್ತಾರೆ. ಆದರೆ ರಿಲೇಶನ್ ಶಿಪ್‌ನ್ನು ಮದುವೆಯೆಂಬ ಸ್ಟೇಜ್‌ಗೆ ಕೊಂಡೊಯ್ಯಲು ನಿರ್ಧರಿಸಿದಾಗ ಎಲ್ಲರೂ ಪರಸ್ಪರ ತಿಳಿದುಕೊಳ್ಳುವುದು ಮುಖ್ಯ.

ಕುಟುಂಬಕ್ಕೆ ನಿಮ್ಮ ಸಂಗಾತಿಯನ್ನು ಪರಿಚಯಿಸುವುದು ದೊಡ್ಡ ನಿರ್ಧಾರ. ನಿಮ್ಮಂತೆಯೇ ನಿಮ್ಮ ಕುಟುಂಬವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಆದರೆ ಈ ರೀತಿ ಸಂಗಾತಿಯನ್ನು ಪರಿಚಯಿಸುವಾಗ ಮನೆಯವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯೇ ಹೆಚ್ಚು. ಹೀಗಿದ್ದಾಗ ಗರ್ಲ್‌ಫ್ರೆಂಡ್ (Girlfriend) ಅಥವಾ ಬಾಯ್ ಫ್ರೆಂಡ್‌ನ್ನು ಮನೆಯರಿಗೆ ಹೇಗೆ ಪರಿಚಯಿಸಬೇಕು ? ಪರಿಚಯಿಸುವ ಸಂದರ್ಭದಲ್ಲಿ ಯಾವುದೆಲ್ಲಾ ವಿಚಾರವನ್ನು ಪಾಲಿಸಬೇಕು ಎಂಬುದನ್ನು ತಿಳಿಯೋಣ. 

Arranged Marriage: ಮೊದಲ ಭೇಟಿಯಲ್ಲೇ ಈ ಪ್ರಶ್ನೆ ಕೇಳ್ಬೇಡಿ

ಮೊದಲಿಗೆ ನಿಮ್ಮ ಸಂಗಾತಿಯನ್ನು ಸಿದ್ಧಪಡಿಸಿ
ನಿಮ್ಮ ಗರ್ಲ್‌ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ ಮನೆಗೆ ಕರೆದುಕೊಂಡು ಹೋಗುವ ಮೊದಲು ಮನೆಯವರ ಇಷ್ಟ-ಕಷ್ಟಗಳನ್ನು ವಿವರಿಸಿ ಅವರನ್ನು ಸಿದ್ಧಪಡಿಸಿ. ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಎಂಬಂತೆ ವ್ಯಕ್ತಿ ಮೊತ್ತ ಮೊದಲ ಬಾರಿಗೆ ಹೆಚ್ಚು ಮುಖ್ಯವಾಗುತ್ತದೆ. ಹೀಗಾಗಿ ಮೊದಲ ಬಾರಿ ಮನೆಮಂದಿಯನ್ನು ಭೇಟಿಯಾದಾಗ ಅವರಿಗಿಷ್ಟವಾಗುವ ರೀತಿಯಲ್ಲಿ ವರ್ತಿಸುವಂತೆ ಹೇಳಿ ಕೊಡಿ.

ಮನೆಯವರ ಮೂಡ್ ಹೇಗಿದೆ ನೋಡಿಕೊಳ್ಳಿ
ಸಂಬಂಧವೆಂಬ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಮನೆಮಂದಿಯ ಮೂಡ್ ಸಹ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಅದರಲ್ಲೂ ಮದುವೆಯಂಥಾ ಗಂಭೀರ ವಿಚಾರಗಳ ಬಗ್ಗೆ ಮಾತನಾಡಲು ಮನೆಮಂದಿ ಸಿದ್ಧರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಸಿಟ್ಟಿನಲ್ಲಿ, ಒತ್ತಡದಲ್ಲಿರುವ ಸಂದರ್ಭದಲ್ಲಿ ನಿಮ್ಮ ಸಂಗಾತಿಯನ್ನು ಕರೆತಂದು ಪರಿಚಯಿಸುವುದನ್ನು ಮಾಡದಿರಿ. ಇದು ಹಿರಿಯರು ಸಂಬಂಧವನ್ನು ನಿರಾಕರಿಸಲು ಸಹ ಕಾರಣವಾಗಬಹುದು. ಮನೆಯವರು ಶಾಂತವಾಗಿ ಮತ್ತು ಖುಷಿಯಾಗಿದ್ದ ಸಂದರ್ಭದಲ್ಲಿ ನಿಮ್ಮ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್‌ನ್ನು ಮನೆಗೆ ಕರೆದು ತನ್ನಿ.

Lavender Marriage ಅಂದ್ರೇನು? ಗೇ ಜೊತೆ ನಡೆಯುತ್ತೆ ಲೆಸ್ಬಿಯನ್ ಮದುವೆ

ಸಂಗಾತಿ ಯಾಕೆ ಬೆಸ್ಟ್ ಎಂದು ತಿಳಿಸಿ
ಮನೆಯವರಿಗೆ ಸಂಗಾತಿಯನ್ನು ಪರಿಚಯಿಸುವಾಗ ಆಕೆಯ ಸದ್ಗುಣಗಳ ಬಗ್ಗೆ ಹೇಳಿ. ಅವಳು ಅಥವಾ ಅವನು ಯಾಕೆ ಬೆಸ್ಟ್. ಅವರನ್ನೇ ಸಂಗಾತಿಯನ್ನಾಗಿ ಪಡೆಯಲು ನೀವು ಯಾಕೆ ಬಯಸುತ್ತಿದ್ದೀರಿ ಎಂಬುದನ್ನು ಪೋಷಕರಿಗೆ ತಿಳಿಸಿ. ಮಾತ್ರವಲ್ಲ ಅವರ ಸಾಮೀಪ್ಯದಲ್ಲಿ ನೀವು ಸೇಫ್ ಆಗಿರುವ ಭಾವನೆಯನ್ನು ಹೊಂದಿರುತ್ತೀರಿ ಎಂಬುದನ್ನು ಮನವರಿಕೆ ಮಾಡಿಕೊಡಿ. ಅಪ್ಪ-ಅಮ್ಮ ಯಾವತ್ತೂ ತಮ್ಮ ಮಕ್ಕಳ ಸಂಗಾತಿ ನಮಗಿಂತ ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂದೇ ಬಯಸುತ್ತಾರೆ. ಇಂಥಹಾ ಮಾತುಗಳ ಅವರಿಗೆ ಖುಷಿ ನೀಡುತ್ತವೆ. 

ಸಮುದಾಯ ಮತ್ತು ಸಂಸ್ಕೃತಿಯನ್ನು ಪರಿಚಯಿಸಿ
ಅಂತರ್ಜಾತಿ (Intercaste), ಅಂತರ್ ಧರ್ಮೀಯ ವಿವಾಹ ಈಗ ಸಾಮಾನ್ಯವಾಗಿದ್ದರೂ ಹಿರಿಯರು ಅದನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಹೀಗಾಗಿ ನಿಮ್ಮ ಸಂಗಾತಿಯ ಜಾತಿ, ಸಂಸ್ಕೃತಿಯನ್ನು ಬಿಡಿಸಿ ಹೇಳಿ. ಆಚರಣೆಗಳು, ಹಬ್ಬಗಳ ಬಗ್ಗೆ ಮಾತನಾಡಿ. ಈ ರೀತಿಯ ಸಂಭಾಷಣೆ ಪರಸ್ಪರ ಆಪ್ತತೆ ಮೂಡುವಂತೆ ಮಾಡುತ್ತದೆ. 

ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರಿ
ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಈ ರೀತಿ ಎಲ್ಲಾ ಸಿದ್ಧತೆಯೊಂದಿಗೆ ಪರಿಚಯಿಸಿದಾಗ ಅವರು ನಿರಾಕರಿಸುವ ಸಾಧ್ಯತೆ ಕಡಿಮೆ. ಹೀಗಿದ್ದರೂ ಪೋಷಕರು ನಿಮ್ಮ ಸಂಬಂಧವನ್ನು ವಿರೋಧಿಸಿದರೆ ಏನು ಮಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. 

Follow Us:
Download App:
  • android
  • ios