ಲೈಕ್ಸ್ ಮತ್ತು ಕಮೆಂಟ್ಸ್‌ಗಾಗಿ ಜನರು ಪ್ರಾಣವನ್ನೇ ಪಣಕ್ಕಿಡುವಷ್ಟು ರೀಲ್ಸ್‌ಗಳ ಹುಚ್ಚು ಮಿತಿಮೀರಿದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡುವುದರಿಂದ ಸಾವುಗಳು ಸಂಭವಿಸಿವೆ. ಇದಲ್ಲದೆ, ಕೆಲವರು ವೈಯಕ್ತಿಕ ವಿಡಿಯೋಗಳನ್ನು, ಮೊದಲ ರಾತ್ರಿಯ ದೃಶ್ಯಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ. ಫುಡ್ ವ್ಲಾಗರ್ ಅಮರ್ ಸಿರೋಹಿ ತಮ್ಮ ಮೊದಲ ರಾತ್ರಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಟೀಕೆಗೆ ಗುರಿಯಾಗಿದೆ. ಇಂತಹ ವರ್ತನೆಗಳು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
ರೀಲ್ಸ್ನಲ್ಲಿ ಲೈಕ್, ಕಮೆಂಟ್ಸ್ ಪಡೆಯಲು ಜೀವ ಬೇಕಾದ್ರೆ ಬಿಡ್ತಾರೆ ಎನ್ನುವಂತೆ ಅತಿರೇಕದ ವರ್ತನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಇದಾಗಲೇ ರೀಲ್ಸ್ ಹುಚ್ಚಿನಲ್ಲಿ ಜೀವ ಕೂಡ ಕಳೆದುಕೊಂಡಿದ್ದಾರೆ. ಸೆಲ್ಫಿ, ರೀಲ್ಸ್ ಮಾಡಲು ಹಳಿಗಳ ಮೇಲೆ ನಿಂತು ಟ್ರೇನ್ ಅಡಿ ಆದವರು ಅದೆಷ್ಟೋ ಮಂದಿ. ಬೆಟ್ಟದ ತುದಿಯಲ್ಲಿ, ನದಿಯ ನಡುವೆ, ಜಲಪಾತದ ಬಳಿ... ಹೀಗೆ ರೀಲ್ಸ್ ಹುಚ್ಚಿನಲ್ಲಿ ಪ್ರಾಣ ಕಳೆದುಕೊಂಡವರಿಗೂ ಲೆಕ್ಕವೇ ಇಲ್ಲ. ಅವರು ಅಂದುಕೊಂಡಂತೆ ಆ ರೀಲ್ಸ್ ಹೆಚ್ಚು ಓಡುತ್ತದೆ ನಿಜ. ಆದರೆ, ಆ ಓಡುವ ರೀಲ್ಸ್ ನೋಡಲು ರೀಲ್ಸ್ ಮಾಡಿದವರು ಜೀವಂತ ಇರುವುದಿಲ್ಲ ಅಷ್ಟೇ ಎನ್ನುವ ಸ್ಥಿತಿ ಇಂದಿನದ್ದು. ಇವೆಲ್ಲವೂ ಅತಿರೇಕದ ಪರಮಾವಧಿಯಾಗಿದೆ.
ರೀಲ್ಸ್, ಪ್ರಚಾರಕ್ಕಾಗಿ ಪ್ರಾಣ ಪಡಕ್ಕಿಡುವುದು ಒಂದೆಡೆಯಾದರೆ, ಮಾನ-ಮರ್ಯಾದೆ ಬಿಡುವವರೂ ಇದ್ದಾರಾ? ಹಾಗೆಂದು ಬಟ್ಟೆ ಬಿಚ್ಚಿ ತಿರುಗುವ ಕೆಲವು ನಟಿಯರು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಅವರಿಂದ ಪ್ರೇರೇಪಿತರಾದವರು ಅಂಥ ಡ್ರೆಸ್ ಮಾಡಿ ತಾವೂ ನಟಿಯರಂತೆ ಕಾಣಿಸುತ್ತೇವೆ ಅಂದುಕೊಳ್ಳುವುದು ಇದ್ದೇ ಇದೆ ಬಿಡಿ. ಆದರೆ ಇದೀಗ ಲೈಕ್ಸ್ ಹುಚ್ಚಿಗಾಗಿ ಮೊದಲ ರಾತ್ರಿಯ ವಿಡಿಯೋ ಶೇರ್ ಮಾಡಿಕೊಳ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದೊಂದು ರೀತಿಯಲ್ಲಿ ಟ್ರೆಂಡ್ ಆಗಿ ಬೆಳೆದುಬಿಟ್ಟಿದೆ. ಈ ಮೊದಲು ಕೂಡ ಕೆಲವರು ಇದೇ ರೀತಿಯ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದೀಗ ಫುಡ್ಡಿ ಇನ್ಕಾರ್ನೆಟ್ ಎನ್ನುವ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊದಲ ರಾತ್ರಿಯ ವಿಡಿಯೋ ಎಂದು ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಇದು ಅಮರ್ ಸಿರೋಹಿ ಎನ್ನುವವರಿಗೆ ಸೇರಿದ್ದಾಗಿದೆ. ತಮ್ಮನ್ನು ತಾವು ಫುಡ್ ವ್ಲಾಗರ್ ಎಂದು ಕರೆದುಕೊಂಡಿರುವ ಅವರು ಮೊದಲ ಮದುವೆಯ ರಾತ್ರಿಯ ವಿಡಿಯೋ ಶೇರ್ ಮಾಡಿದ್ದಾರೆ. ಮದುವೆ ಮುಗಿದ ಬಳಿಕ ತಮ್ಮ ಮೊದಲ ರಾತ್ರಿ ಇದು ಎಂದು ಬೆಡ್ರೂಮ್ನಲ್ಲಿ ಪತಿಯ ಜೊತೆ ಇರುವ ವಿಡಿಯೋ ಶೇರ್ ಮಾಡಿದ್ದಾರೆ.
ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್? ಛಿದ್ರವಾಗ್ತಿದೆ ಮದುವೆಯ ಕನಸು...
“10 ವರ್ಷಗಳ ಪ್ರೀತಿ, ಹೋರಾಟಗಳು ಮತ್ತು ಏಳುಬೀಳುಗಳ ನಂತರ ನಾವು ಈ ಕ್ಷಣವನ್ನು ಅನುಭವಿಸುತ್ತೇವೆʼ ಎಂದು ಶೀರ್ಷಿಕೆ ನೀಡಿದ್ದಾರೆ. ಇದರಲ್ಲಿ ಮೊದಲ ರಾತ್ರಿಯ ಮಂಚವನ್ನು ನೋಡಬಹುದಾಗಿದೆ. ಇದರಲ್ಲಿ ನೂತನ ದಂಪತಿ ಇದ್ದಾರೆ. ಗಂಡ ಪತ್ನಿಗೆ ಕಿಸ್ ಮಾಡುವುದನ್ನು ಇದರಲ್ಲಿ ನೋಡಬಹುದು. 2-3 ಸೆಕೆಂಡ್ಗಳ ವಿಡಿಯೋ ಅಷ್ಟೇ ಇದು. ಯಾವುದೇ ಸಭ್ಯತೆ ಮೀರಿಲ್ಲ ಎನ್ನುವುದಷ್ಟೇ ಸಮಾಧಾನ. ಆದರೆ ಕ್ಯಾಪ್ಷನ್ ಮಾತ್ರ ಮೊದಲ ರಾತ್ರಿ ಎಂದು ಕೊಟ್ಟಿರುವ ಕಾರಣ, ಇದೀಗ ಸಕತ್ ವೈರಲ್ ಆಗುತ್ತಿದೆ. ಕೊನೆಗೆ ಇಷ್ಟೇನಾ ಎಂದು ಕ್ಯಾಪ್ಷನ್ನಲ್ಲಿ ಹಲವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ಹಸನಾ ಜರೂರಿ ಹೈ (ನಗುವುದು ಕಡ್ಡಾಯ) ಹೆಸರಿನ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿತ್ತು. ಇದರಲ್ಲಿ ನವ ದಂಪತಿಯ ಫಸ್ಟ್ ನೈಟ್ಗೆಂದು ಕೋಣೆಯನ್ನು ಸಿಂಗರಿಸಿ ಇಟ್ಟಿರುವುದನ್ನು ನೋಡಬಹುದು. ಆರಂಭದಲ್ಲಿ ವರ, ವಧುವಿನ ಆಭರಣ ತೆಗೆಯುತ್ತಾನೆ. ಆಗ ವಧು ನಾಚುವಂತೆ ಪೋಸ್ ಕೊಟ್ಟಿದ್ದಾಳೆ. ಇದಾದ ಬಳಿಕ ಮದುಮಗ ಆಕೆಯ ಬ್ಲೌಸ್ ತೆಗೆಯುವಂತೆ ಮಾಡುವಲ್ಲಿಗೆ ವಿಡಿಯೋ ಕಟ್ ಆಗಿದೆ. ಇವಿಷ್ಟನ್ನೂ ವಿಡಿಯೋ ಮಾಡಿಕೊಂಡಿರುವ ಈ ಜೋಡಿ ಅದನ್ನು ಯಾವುದೇ ಅಂಜಿಕೆ, ಅಳುಕು ಇಲ್ಲದೆಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇದಕ್ಕೆ ಇನ್ನಿಲ್ಲದಂತೆ ಟೀಕೆಗಳು ವ್ಯಕ್ತವಾಗುತ್ತಿವೆ. ಅಸಹ್ಯ, ಅಸಭ್ಯ ಎನ್ನುತ್ತಲೇ ಈ ವಿಡಿಯೋ ನೋಡುತ್ತಿದ್ದಾರೆ ಬಹುತೇಕ ನೆಟ್ಟಿಗರು. ವಿಡಿಯೋ ನೋಡಿದ ಬಳಿಕ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದರು. ಪ್ರಚಾರದ ಹುಚ್ಚು, ಇದು ಅತಿಯಾಯ್ತು, ಮಾನ-ಮರ್ಯಾದೆ ಇಲ್ಲ, ನಮ್ಮ ಸಂಸ್ಕೃತಿ ಎಲ್ಲಿಗೆ ಬಂದಿತು, ಇದನ್ನು ನೋಡುವ ಮುನ್ನ ನನ್ನ ಕಣ್ಣು ಯಾಕೆ ಕಿತ್ತುಕೊಳ್ಳಲಿಲ್ಲಪ್ಪಾ ಎಂದೆಲ್ಲಾ ಹಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವು ತರ್ಲೆ ನೆಟ್ಟಿಗರು ತೋರಿಸೋದು ತೋರಿಸಿದ್ರಿ... ಪೂರ್ತಿಯಾದ್ರೂ ವಿಡಿಯೋ ಹಾಕಬಾರದಾ ಎಂದೂ ಕೇಳಿದ್ದರು!
ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್ ಮುಂದಿನ ಸೀತೆ ಯಾರು?
