ನಟಿ ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುವ ಅನುಕೂಲ್ ಬೇರೆ ರಾಜ್ಯದವರು. 'ಸೀತಾರಾಮ' ಧಾರಾವಾಹಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ವೈಷ್ಣವಿ ಧಾರಾವಾಹಿ ಬಿಡುವ ಸಾಧ್ಯತೆ ಕಡಿಮೆ. ಮದುವೆ ಬಗ್ಗೆ ಹಲವು ಕನಸುಗಳನ್ನು ಹೊಂದಿದ್ದ ವೈಷ್ಣವಿಗೆ ಈಗ ಮದುವೆ ನಿಶ್ಚಯವಾಗಿದೆ.

ಸೀತಾರಾಮ ಸೀತೆಯ ಕಲ್ಯಾಣಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ನಿನ್ನೆಯಷ್ಟೇ ಅದ್ಧೂರಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ನಟಿ ವೈಷ್ಣವಿ ಗೌಡ. ಮದ್ವೆ ಫಿಕ್ಸ್​ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ಸದ್ಯ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಗುಟ್ಟನ್ನು ಅವರೇ ರಿವೀಲ್​ ಮಾಡಿದ್ದು, ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಆದರೆ, ಇದೀಗ ಇರುವ ಪ್ರಶ್ನೆ ಎಂದರೆ, ಸೀತಾರಾಮ ಬಿಟ್ಟು ಹೋಗ್ತಾರಾ ನಟಿ ಎನ್ನುವುದು. ಏಕೆಂದರೆ, ಅವರ ಭಾವಿ ಪತಿ ಹಿಂದಿಯವರು. ಅವರಿಗೆ ಕನ್ನಡ ಬರಲ್ಲ. ಹೊರ ರಾಜ್ಯದವರು ಎಂದಷ್ಟೇ ವಿಷಯವನ್ನು ನಟಿ ರಿವೀಲ್​ ಮಾಡಿದ್ದು, ಅವರ ಬಗ್ಗೆ ಇನ್ನಷ್ಟು ಡಿಟೇಲ್ಸ್​ ಅನ್ನು ಸೀಕ್ರೇಟ್​ ಆಗಿಟ್ಟಿದ್ದಾರೆ. ಅಭಿಮಾನಿಗಳು ಈ ವಿಷಯವನ್ನು ತಿಳಿದುಕೊಳ್ಳಲು ದಿನನಿತ್ಯವೂ ಕಾಯುತ್ತಿರಲಿ ಎನ್ನುವ ಆಸೆಯೂ ನಟಿಯಲ್ಲಿ ಇದ್ದಿರಬಹುದು. ಅದಕ್ಕಾಗಿಯೇ ಹಂತ ಹಂತವಾಗಿ ವಿಷಯವನ್ನು ರಿವೀಲ್​ ಮಾಡುವ ಯೋಚನೆಯಲ್ಲಿದ್ದಾರೆ. ತಮ್ಮ ಪರಿಚಯ ಹೇಗಾಯ್ತು? ಅನುಕೂಲ್​ ಯಾರು? ಮದ್ವೆ ಯಾವಾಗ ಇತ್ಯಾದಿ ವಿಷಯಗಳನ್ನು ಸ್ಟೆಪ್​ ಬೈ ಸ್ಟೆಪ್​ ಹೇಳುವ ಯೋಚನೆಯಲ್ಲಿ ಅವರು ಇದ್ದರೂ, ಹೊರ ರಾಜ್ಯದ ಗಂಡನ ಜೊತೆ ಕರ್ನಾಟಕವನ್ನೇ ಬಿಟ್ಟು ಹೋಗ್ತಾರಾ ನಟಿ ಎನ್ನುವ ಆತಂಕ ಅಭಿಮಾನಿಗಳಿಗೆ ಕಾಡತೊಡಗಿದೆ. 

ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್‌ ವಿಡಿಯೋ? ಏನದು ಭವಿಷ್ಯವಾಣಿ?

ಆದರೆ, ಸದ್ಯ ಅಂಥ ಯಾವುದೇ ವಿಷಯವನ್ನು ವೈಷ್ಣವಿ ರಿವೀಲ್​ ಮಾಡಲಿಲ್ಲ. ಅಷ್ಟಕ್ಕೂ ಸೀತಾರಾಮ ಸೀರಿಯಲ್​ ಇದೀಗ ಬಹುತೇಕ ಮುಗಿದಿದೆ ಎಂದೇ ಹೇಳಬಹುದು. ಭಾರ್ಗವಿ ಚಿಕ್ಕಿಯ ಅಸಲಿಯತ್ತು ಗೊತ್ತಾದರೆ ಎಲ್ಲವೂ ಮುಗಿದಂತೆಯೇ. ಸುಖಾ ಸುಮ್ಮನೇ ಟ್ವಿಸ್ಟ್​ ರೂಪದಲ್ಲಿ ಇನ್ನಷ್ಟು ಎಳೆಯದಿದ್ದರೆ, ಈ ಸೀರಿಯಲ್​ ಕೂಡ ಬಹುಬೇಗನೇ ಮುಗಿಯುತ್ತದೆ. ಆದ್ದರಿಂದ ಸೀತಾ ಅರ್ಥಾತ್​ ವೈಷ್ಣವಿ ಅವರು ಸೀರಿಯಲ್​ ಬಿಡುವ ಛಾನ್ಸ್​ ಅತಿ ಕಡಿಮೆ ಎಂದೇ ಊಹಿಸಲಾಗುತ್ತಿದೆ. ಅಷ್ಟಕ್ಕೂ ಈ ಸೀರಿಯಲ್​​ಗೆ​ ಸಕತ್​ ಟಿಆರ್​ಪಿ ಕೂಡ ಇರುವ ಕಾರಣ, ಅಷ್ಟು ಸುಲಭದಲ್ಲಿ ಆಕೆ ಬಿಟ್ಟು ಹೋಗುವಂತೆ ಕಾಣಿಸುವುದಿಲ್ಲ. ಆದ್ದರಿಂದ ಸೀತಾರಾಮ ಪ್ರೇಮಿಗಳು ಸದ್ಯ ಆತಂಕ ಪಡುವ ಅಗತ್ಯವಂತೂ ಇಲ್ಲ. 

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್​ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಆದ್ದರಿಂದ ಪದೇ ಪದೇ ಎಲ್ಲೇ ಹೋದರೂ ಇವರ ಮದ್ವೆ ವಿಷಯವೇ ಪ್ರಸ್ತಾಪ ಆಗುತ್ತಿತ್ತು. ಇವರ ಸ್ನೇಹಿತೆಯೂ ಆದ ಸೀತಾರಾಮ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಮದುವೆಯಾದ ಮೇಲಂತೂ ಇನ್ನಷ್ಟು ಒತ್ತಡ ಹೆಚ್ಚಾಗಿತ್ತು. ಆದರೆ ಈಗ ಎಲ್ಲರ ಆಸೆ ನೆರವೇರಿದೆ. 

ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು? ಸೀತಾರಾಮ ಸೀತಾ ಹೇಳಿಕೊಟ್ಟರು ಹಲವು ಬಗೆ... ವಿಡಿಯೋ ವೈರಲ್