MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • ಇದು ಭಾರತದ ಅತೀ ದೊಡ್ಡ ಕೂಡು ಕುಟುಂಬ: ಒಂದೇ ಸೂರಿನಡಿ ಬದುಕ್ತಿದ್ದಾರೆ 150ಕ್ಕೂ ಹೆಚ್ಚು ಜನ!

ಇದು ಭಾರತದ ಅತೀ ದೊಡ್ಡ ಕೂಡು ಕುಟುಂಬ: ಒಂದೇ ಸೂರಿನಡಿ ಬದುಕ್ತಿದ್ದಾರೆ 150ಕ್ಕೂ ಹೆಚ್ಚು ಜನ!

ಇಂದಿನ ಕಾಲದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು, ಒಂದು ಕಾಲದಲ್ಲಿ ಕೂಡು ಕುಟುಂಬಕ್ಕೆ ಹೆಸರಾಗಿದ್ದ ಭಾರತದಲ್ಲಿ ಈಗ ಅವಿಭಕ್ತ ಕುಟುಂಬ ತೀರ ವಿರಳ ಎಲ್ಲಿ ನೋಡಿದರಲ್ಲಿ ಬರೀ ವಿಭಕ್ತ ಕುಟುಂಬಗಳೇ ಕಾಣಿಸುತ್ತವೆ. ಒಂದು ಮನೆಯಲ್ಲಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಇದ್ದರೆ ಅದೇ ಹೆಚ್ಚು. ಆದರೆ ಇಲ್ಲೊಂದು ಕಡೆ ಒಂದು ಅವಿಭಕ್ತ ಕುಟುಂಬವಿದೆ. ಇಲ್ಲಿ ಇಂದಿಗೂ ಒಂದೇ ಸೂರಿನಡಿ 200ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. 

2 Min read
Anusha Kb
Published : Nov 28 2023, 04:51 PM IST| Updated : Nov 29 2023, 02:40 PM IST
Share this Photo Gallery
  • FB
  • TW
  • Linkdin
  • Whatsapp
113

ವಿಭಕ್ತ ಕುಟುಂಬದಲ್ಲಿ ಬೆಳೆದವರಿಗೆ ಇದನ್ನು ನಂಬುವುದಕ್ಕೂ ಊಹೆ ಮಾಡುವುದಕ್ಕೂ ಕೂಡ ಕಷ್ಟವಾಗಬಹುದು. ಆದರೆ ಇಲ್ಲೊಂದು ಕುಟುಂಬದಲ್ಲಿ 199 (ಬಹುಶಃ ಈ ಸಂಖ್ಯೆಯಲ್ಲಿ ಹೆಚ್ಚಳ ಇರಬಹುದು) ಜನ ಒಟ್ಟಿಗೆ ವಾಸ ಮಾಡುತ್ತಾರೆ. ಕೆಲವು ಕುಟುಂಬಗಳಲ್ಲಿ ಶುಭ ಸಮಾರಂಭಗಳಲ್ಲಿ ಶುಭ ಸಮಾರಂಭಗಳಿಗೆ 150 ಜನ ಸೇರಿದರೆ ಅದೇ ಹೆಚ್ಚು ಆದರೆ ಇಲ್ಲಿ ಬರೀ ಕುಟುಂಬದವರೇ ಒಟ್ಟು 199 ಜನ ಇದ್ದಾರೆ.

213

ಇಷ್ಟೊಂದು ದೊಡ್ಡದಾದ ಅವಿಭಕ್ತ ಕುಟುಂಬವಿರುವುದು ಈಶಾನ್ಯ ಭಾರತದ ಪುಟ್ಟ ರಾಜ್ಯವಾದ ಮಿಜೋರಾಂನಲ್ಲಿ ಈ ಕುಟುಂಬದಲ್ಲಿ ಬಹುಪತ್ನಿತ್ವ ಚಾಲ್ತಿಯಲ್ಲಿದ್ದು, ಈ ಕುಟುಂಬದ ಹಿರಿಯನೆನಿಸಿದ  ಜಿಯೋನಾ ಛನಾ ಅವರು 39 ಪತ್ನಿಯರನ್ನು ಹೊಂದಿದ್ದಾರೆ. 

313

39 ಪತ್ನಿಯರಿಂದ ಒಟ್ಟು 94 ಮಕ್ಕಳನ್ನು ಪಡೆದಿರುವ ಜಿಯೋನಾ ಛನಾ ಅವರಿಗೆ 14 ಮಂದಿ ಸೊಸೆಯಂದಿರಿದ್ದಾರೆ. 33 ಮೊಮ್ಮಕ್ಕಳನ್ನು ಹೊಂದಿದ್ದು, 4 ಅಂತಸ್ತಿನ ಒಂದೇ ಕಟ್ಟಡದಲ್ಲಿ ವಾಸವಿದ್ದಾರೆ.

413

ಮಿಜೋರಾಂನ ಐಝಾಲ್‌ನಲ್ಲಿ ಈ ಕುಟುಂಬವಿದ್ದು,  ಜಿಯೋನಾ ಛನಾ ಈ ಪಿತೃ ಪ್ರಧಾನ ಕುಟುಂಬದ ಮುಖ್ಯಸ್ಥನಾಗಿದ್ದು ಕ್ರಿಶ್ಚಿಯನ್‌ ಸಮುದಾಯದ ಉಪ ಪಂಗಡವಾದ ಛನಾ ಪಾಲ್‌ನ ಮುಖ್ಯಸ್ಥರೂ ಆಗಿದ್ದರು. ಛನಾ ಪಾಲ್‌ ಪಂಗಡವೂ ಬಹುಪತ್ನಿತ್ವ ಪದ್ಧತಿಯನ್ನು ಹೊಂದಿದೆ. ಇದರಿಂದ ಇವರು ವಿಶ್ವದ ಅತೀ ದೊಡ್ಡ ಕೂಡು ಕುಟುಂಬ ಎಂಬ ಹೆಗ್ಗಳಿಕೆ ಗಳಿಸಲು ಸಾಧ್ಯವಾಗಿದೆ.

513

ಐದು ಆರು ಜನರಿರುವ ಕುಟುಂಬವನ್ನೇ ಸಂಭಾಳಿಸುವುದು ಬಹಳ ಕಷ್ಟದ ಕೆಲಸ ಹಾಗಿರುವಾಗ ಈ ಕುಟುಂಬದಲ್ಲಿ 199 ಜನರಿದ್ದು, ಎಲ್ಲರನ್ನು ಎಲ್ಲವನ್ನು ಬಹಳ ವ್ಯವಸ್ಥಿತವಾಗಿ ಒಗ್ಗಟ್ಟಿನಿಂದ ನಿಭಾಯಿಸುತ್ತಿದೆ ಈ ಕುಟುಂಬ.

613

ದೊಡ್ಡದಾದ  4 ಅಂತಸ್ಥಿನ ಮನೆಯನ್ನು ಈ ಕುಟುಂಬ ಹೊಂದಿದ್ದು, ಇದರಲ್ಲಿ 100 ಬೆಡ್‌ರೂಮ್‌ಗಳಿವೆ. ಒಂದೇ ಸೂರಿನ ಕೆಳಗೆ ಎಲ್ಲರೂ ವಾಸ ಮಾಡುತ್ತಿದ್ದು ದಿನದ ಕೆಲಸಗಳಿಂದ ಹಿಡಿದು ಜೀವನ ನಿರ್ವಹಣೆವರೆಗೆ ಎಲ್ಲವನ್ನೂ  ಹಂಚಿಕೊಂಡು ಮಾಡುತ್ತಾರೆ ಈ ಕುಟುಂಬದ ಸದಸ್ಯರು.

713

ಈ ಕುಟುಂಬದ ಎಲ್ಲರಿಗಾಗಿ 100  ಕೆಜಿ ಅಕ್ಕಿಯನ್ನು ದಿನವೂ ಬೇಯಿಸಲಾಗುತ್ತದೆಯಂತೆ. ಜೊತೆಗೆ 200 ಕೆಜಿ ಅಲೂಗಡ್ಡೆ, 39 ಕೆಜಿ ಕೋಳಿ ಮಾಂಸವನ್ನು ದಿನವೂ ಆಹಾರಕ್ಕಾಗಿ ಬಳಸಲಾಗುತ್ತದೆ. 

813

ಕಾಲೇಜು ಹಾಸ್ಟೆಲ್‌ನಂತೆ ಬೆಡ್‌ರೂಮ್‌ ಕೋಣೆಗಳಿದ್ದು, ಹೆಂಡತಿ ಮಕ್ಕಳು ಈ ಡೋರ್ಮ್ಸ್‌ನಲ್ಲಿ ಮಲಗಿದರೆ ಛನಾಗೆ ಮಾತ್ರ ಪ್ರತ್ಯೇಕವಾದ ಕೋಣೆ ಇದೆ. ಈ ಛನಾ ಸ್ವಂತದ್ದಾದ ಶಾಲೆಯೊಂನ್ನು ಹೊಂದಿದ್ದು ಅಲ್ಲಿಯೇ ಈತನ ಮಕ್ಕಳು ಶಿಕ್ಷಣ ಪಡೆಯುತ್ತಾರೆ. 

913

ಅಲ್ಲದೇ ಎಲ್ಲ ಪತ್ನಿಯರು ಛನಾ ಅವರನ್ನು ಸಮಾನವಾಗಿ ಪ್ರೀತಿ ಮಾಡುತ್ತಾರಂತೆ, ನಮ್ಮ ನಡುವೆ ಯಾವುದೇ ದ್ವೇಷವಿಲ್ಲ ಎನ್ನುತ್ತಾರೆ. ಛನಾ ಅವರ 38 ಪತ್ನಿಯರು.  ಇಷ್ಟೊಂದು ಜನರಿದ್ದರು ಈ ಕುಟುಂಬದಲ್ಲಿ ಕಿತ್ತಾಟಗಳಿಲ್ಲ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಪರಸ್ಪರ ಪ್ರೀತಿ ಸಹಕಾರದಿಂದ ಜೀವನ ಮಾಡುತ್ತಿದೆ ಈ ಕುಟುಂಬ. 

1013

2018ರಲ್ಲಿ ಛನಾ ಅವರನ್ನು ಮಾಧ್ಯಮಗಳು ಮಾತನಾಡಿಸಿದಾಗ ನಾವು ಬಹಳ ಒಗ್ಗಟ್ಟಿನಿಂದ ಇದ್ದೇವೆ. ಇದೇ ಕಾರಣಕ್ಕೆ ಇಷ್ಟೊಂದು ದೊಡ್ಡ ಕುಟುಂಬ ಬೆಳೆಯಲು ಸಾಧ್ಯವಾಯ್ತು ದೇವರ ಆಶೀರ್ವಾದದಿಂದ ಇಷ್ಟೊಂದು ದೊಡ್ಡ ಕುಟುಂಬವನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದರು.

1113

ಈ ಕುಟುಂಬದಲ್ಲಿರುವ ಪುರುಷರು ಕೃಷಿ, ಹೈನುಗಾರಿಕೆ (ಹಂದಿ, ಹಸು ಕೋಳಿಗಳ ಸಾಕಾಣೆ), ಪೀಠೋಪಕರಣಗಳ ತಯಾರಿ ಮುಂತಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ನೆರವಾಗುತ್ತಾರೆ. 

1213

ಛನಾ ಅವರ ಮೊದಲ ಪತ್ನಿ ಈ ಮನೆಯೊಳಗಿನ ಎಲ್ಲಾ ಕೆಲಸಗಳ ಮೇಲುಸ್ತುವಾರಿ ವಹಿಸಿಕೊಳ್ಳುತ್ತಾರೆ. ಕುಟುಂಬದಲ್ಲಿರುವ ಛನಾ ಅವರ ಇತರ ಕಿರಿಯ ಪತ್ನಿಯರು ತಮ್ಮನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ ಎನ್ನುತ್ತಾರೆ ಛನಾ ಮೊದಲ ಪತ್ನಿ

1313

ಮಹಿಳೆಯರು ಅಡುಗೆ ಹಾಗೂ ಸ್ವಚ್ಛತಾ ಕೆಲಸ ಹಾಗೂ ಮಕ್ಕಳ ಪಾಲನೆಯ ಕೆಲಸದಲ್ಲಿ ತೊಡಗಿದ್ದಾರೆ. 2021ರಲ್ಲಿ ತಮ್ಮ 76ನೇ ವರ್ಷದಲ್ಲಿ ಜಿಯೋನಾ ಛನಾ ಅವರು ತೀರಿಕೊಂಡಿದ್ದು, ಅವರ ಗೌರವಾರ್ಥವಾಗಿ ಇಡೀ ಕುಟುಂಬ ಇಂದಿಗೂ ಜೊತೆಯಾಗಿ ಜೀವನ ಮಾಡುತ್ತಿದ್ದಾರೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved