ಪ್ರೀತಿಗೆ ಸಾವಿಲ್ಲ ಅಂತಾರೆ ಅದು ಎಷ್ಟರಮಟ್ಟಿಗೆ ನಿಜ ನೋಡಿ. ಹೆಂಡತಿ ಮೃತಪಟ್ಟರೂ ಈ ಪತಿಯ ಪ್ರೀತಿ ಕಡಿಮೆಯಾಗಿಲ್ಲ. ಅವಳ ರೂಪದ ಪ್ರತಿಮೆಯನ್ನು ನಿರ್ಮಿಸಿ ನೈಜವಾದ ಪ್ರೀತಿ ಯಾವತ್ತೂ ಜೀವಂತವಾಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕೋಲ್ಕೊತ್ತಾ: ಚೀನಾದ ವುಹಾನ್‌ನಿಂದ ಆರಂಭಗೊಂಡ ಕಣ್ಣಿಗೆ ಕಾಣದ ವೈರಸ್‌ವೊಂದು ಜಗತ್ತನ್ನೇ ತಲ್ಲಣಗೊಳಿಸಿತ್ತು. ಕೊರೋನಾ ವೈರಸ್ ಹರಡುವಿಕೆಯಿಂದ ಅಸಂಖ್ಯಾತ ಮಂದಿ ಜೀವ ಕಳೆದುಕೊಂಡರು. ಅದೆಷ್ಟೋ ಮಂದಿ ಚಿಕಿತ್ಸೆ (Treatment) ಕೊಡಿಸಲಾಗದೆ, ಆಂಬುಲೆನ್ಸ್ ಸಿಗದೆ, ಆಕ್ಸಿಜನ್ ಇಲ್ಲದೆ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡರು. ಹಾಗೆಯೇ ಕೊರೋನಾ ಸಮಯದಲ್ಲಿ ತೀರಿ ಹೋದ ಪತ್ನಿಯ (Wife) ನೆನಪಿನಲ್ಲಿ ಕೋಲ್ಕೋತ್ತಾದಲ್ಲೊಬ್ಬ ವ್ಯಕ್ತಿ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ
ಕೈಖಾಲಿಯ ತಪಸ್ ಸ್ಯಾಂಡಿಲ್ಯ ಅವರು ತಮ್ಮ ಪತ್ನಿ ಇಂದ್ರಾಣಿಯ ಸಿಲಿಕೋನ್ ಪ್ರತಿಮೆಯನ್ನು (Statue) ನಿರ್ಮಿಸಿದ್ದಾರೆ. ಇಂದ್ರಾಣಿ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಕೋವಿಡ್‌ನಿಂದ ಮೃತಪಟ್ಟರು. ಸ್ಯಾಂಡಿಲ್ಯ ಹೆಂಡತಿಯನ್ನು ಕಳೆದುಕೊಂಡು ನೋವಿನಿಂದ (Pain) ಒದ್ದಾಡಿದರು. ಆ ನಂತರ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಂಡತಿಯ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ತಮ್ಮ ವಿಐಪಿ ರಸ್ತೆಯ ಮನೆಯಲ್ಲಿ ಇಂದ್ರಾಣಿ ಅವರ ನೆಚ್ಚಿನ ಸ್ಥಳದಲ್ಲಿ ಸೋಫಾದಲ್ಲಿ ಈ ಪ್ರತಿಮೆಯನ್ನು ಕೂರಿಸಲಾಗಿದೆ.
ಮನೆಯಲ್ಲೇ ದೈವ ಸ್ವರೂಪಿ ತಾಯಿ ಪ್ರತಿಮೆ ಇಟ್ಟು ಮಕ್ಕಳಿಂದ ನಿತ್ಯ ಪೂಜೆ
ಸತ್ತರೆ ಪ್ರತಿಮೆ ನಿರ್ಮಿಸಬೇಕೆಂದು ಕೇಳಿಕೊಂಡಿದ್ದ ಪತ್ನಿ
ತಪಸ್ ಸ್ಯಾಂಡಿಲ್ಯ ಅವರು ತಮ್ಮ ಪತ್ನಿ ಇಂದ್ರಾಣಿ ಜೊತೆ ಮಾಯಪುರದ ಇಸ್ಕಾನ್ ಟೆಂಪಲ್‌ಗೆ ಹೋಗಿದ್ದಾಗ ಅಲ್ಲಿನ ಭಕ್ತಿ ವೇದಾಂತ ಸ್ವಾಮಿಯ ಪ್ರತಿಮೆ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಮಾತ್ರವಲ್ಲ, ತಾನು ನಿಮಗಿಂತ ಮೊದಲು ಸತ್ತರೆ ನನ್ನ ಪ್ರತಿಮೆಯನ್ನೂ ಇದೇ ರೀತಿ ಸಿದ್ಧಪಡಿಸಬೇಕು ಎಂದು ಕೇಳಿಕೊಂಡಿದ್ದರಂತೆ. ಅದರಂತೆ ಹೆಂಡತಿಯ ಆಸೆ ಈಡೇರಿಸಲು ಪ್ರತಿಮೆ ನಿರ್ಮಿಸಿದ್ದಾನೆ ಅಂತಾರೆ ತಪಸ್ ತಪಸ್ ಸ್ಯಾಂಡಿಲ್ಯ.
ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು
ತಂದೆಯೊಬ್ಬರು ತಮ್ಮ ಪ್ರೀತಿಯ ಮಗಳ (Daughter) ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದರು. ಮಗಳೂ ಅಷ್ಟೆ ತಂದೆ ತನ್ನ ಮದುವೆ (Marriage)ಯಲ್ಲಿ ಹೀಗೆಲ್ಲಾ ಓಡಾಡ್ಬೇಕು, ಮನದುಂಬಿ ನನ್ನನ್ನು ಹರಸ್ಬೇಕು ಎಂದೆಲ್ಲಾ ಕನಸು ಕಂಡಿದ್ದಳು. ಆದ್ರೆ ಜೀವನದಲ್ಲಿ ವಿಧಿಯಾಟ ಬೇರೇನೇ ಇತ್ತು. ಅಕಾಲಿಕವಾಗಿ ತಂದೆ ಮೃತಪಟ್ಟರು. ಮಗಳ ಮದುವೆ ಫಿಕ್ಸ್ ಆಗಿ, ಮುಹೂರ್ತವೂ ಬಂತು. ಆದರೆ ತಂದೆಯಿಲ್ಲ. ಅಪ್ಪನಿಲ್ಲದೆ ಹಸೆಮಣೆ ಏರಲು ಮಗಳಿಗೆ ಇಷ್ಟವಿರಲಿಲ್ಲ. ಈ ಸಂಬಂಧ ಬಿಡಲು ಮನೆಯವರಿಗೂ ಮನಸ್ಸಿರಲಿಲ್ಲ.ಕೊನೆಯದಾಗಿ ಮಗಳ ಕನಸೂ ಈಡರಿದೆ, ಮನೆಯವರ ಬಯಕೆಯೂ ಪೂರೈಕೆಯಾಗಿದೆ. ಅಷ್ಟೇ ಅಲ್ಲ, ಮಗಳ ಮದುವೆ ನೋಡಬೇಕು ಅಂತಿದ್ದ ತಂದೆ ಕನಸೂ ನನಸಾದಂತಾಗಿದೆ. ಹುಡುಗಿ ಮಂಟಪ ಸಮೀಪ ತಂದೆಯ ಮೇಣದ ಪ್ರತಿಮೆ (Wax statue)ಯಿಟ್ಟು, ತಂದೆಯ ಆರ್ಶೀವಾದ ಪಡೆದುಕೊಂಡು ಮದುವೆಯಾಗಿದ್ದಾಳೆ.
ಕಲ್ಲಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಆಟವಾಡ್ತಿರುವ ಮಾರ್ಜಾಲ : ವಿಡಿಯೋ ವೈರಲ್
ತಮಿಳುನಾಡು (Tamilnadu) ರಾಜ್ಯದಲ್ಲಿ ಇಂಥದ್ದೊಂದು ಮನ ಮನ ಮಿಡಿಯುವ ಘಟನೆ ನಡೆದಿದೆ. ತಮಿಳುನಾಡಿನ ತಿರುಕೋವಿಲೂರು ಸಮೀಪದ ಠಾಣಕನಂದಲ್ ಗ್ರಾಮದಲ್ಲಿ ಮಹೇಶ್ವರಿ ಎಂಬುವರು ತಮ್ಮ ಮದುವೆಯನ್ನು ತಂದೆಯ ಮೇಣದ ಪ್ರತಿಮೆ ಮುಂದೆ ಮಾಡಿಕೊಂಡಿದ್ದಾರೆ. ಇವರ ತಂದೆ ಸೆಲ್ವರಾಜ್ ಕಳೆದ ವರ್ಷ ಮಾರ್ಚ್ 3ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಸೆಲ್ವರಾಜ್ಗೆ ತಾನು ಬದುಕಿದ್ದಾಗಲೇ ಮಗಳ ಮದುವೆ ಮಾಡಬೇಕೆಂಬ ಇಚ್ಛೆ ಇತ್ತು. ಇತ್ತ, ತಂದೆಯ ಮೇಲೆ ವಾತ್ಸಲ್ಯ ಹೊಂದಿರುವ ಮಹೇಶ್ವರಿ ತನ್ನ ಮದುವೆಗೆ ತಂದೆ ಇಲ್ಲವೆಂದು ಕೊರಗು ಕಾಡುತ್ತಿತ್ತು. ಹೀಗಾಗಿ ಮೇಣದ ಪ್ರತಿಮೆಯನ್ನು ಮಂಟಪದ ಸಮೀಪ ಇರಿಸಿ, ತಂದೆ ಜೊತೆಗೇ ಇದ್ದಾರೆಂಬ ಖುಷಿಯೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ.
ತಂದೆ ಹಾಗೂ ಮಗಳ ಆಸೆ ಈಡೇರಿಸಲು ಸೆಲ್ವರಾಜ್ ಕುಟುಂಬವು 5 ಲಕ್ಷ ವೆಚ್ಚದಲ್ಲಿ ಅವರ ಮೇಣದ ಪ್ರತಿಮೆಯನ್ನು ಮಾಡಲು ನಿರ್ಧರಿಸಿತು. ಸೆಲ್ವರಾಜ್ ರೇಷ್ಮೆ ವೇಷಭೂಷಣ ಮತ್ತು ಶರ್ಟ್‌ನಲ್ಲಿ ಕುಳಿತಿರುವಂತೆ ಅವರು ಪ್ರತಿಮೆಯನ್ನು ನೈಜವಾಗಿ ಮಾಡಿಸಲಾಯಿತು. ಸೆಲ್ವರಾಜ್ ಮೂರ್ತಿಯನ್ನು ಪುರೋಹಿತರ ಮುಂದೆ ಇಟ್ಟು ವಿವಾಹ ಕಾರ್ಯಕ್ರಮಗಳು ನಡೆಸಲಾಯಿತು.
