Asianet Suvarna News Asianet Suvarna News

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡದಂತೆ ನೋಡಿಕೊಳ್ಳಿ

ಮಕ್ಕಳು ಹಾಳಾಗ್ತಿವೆ ಎನ್ನುವ ಕಾರಣಕ್ಕೆ ಶಾಲೆ ಬದಲಿಸಿದ್ರೆ ಪ್ರಯೋಜನವಿಲ್ಲ. ಮೊದಲು ಮಕ್ಕಳು ಎಲ್ಲಿ ದಾರಿ ತಪ್ಪುತ್ತಿದ್ದಾರೆ ಎನ್ನುವುದನ್ನು ನೋಡ್ಬೇಕು. ಅನೇಕ ಬಾರಿ ಮಕ್ಕಳ ದುಷ್ಚಟ, ಕೆಟ್ಟ ಶಬ್ಧಗಳ ಬಳಕೆ,ಜಗಳಕ್ಕೆ ಪಾಲಕರೇ ನೇರ ಕಾರಣವಾಗಿರುತ್ತಾರೆ. 
 

6 Things Parents Should Never Do In Front Of Child
Author
Bangalore, First Published Jun 3, 2022, 5:32 PM IST

ಮಕ್ಕಳು (Children) ಯಾವ ಶಾಲೆ (School) ಗೆ ಹೋಗ್ಬೇಕು? ಯಾವ ಟ್ಯೂಷನ್ ಗೆ ಹೋಗ್ಬೇಕು? ಮಕ್ಕಳ ಸ್ನೇಹಿತರು ಹೇಗಿರಬೇಕು? ಮಕ್ಕಳ ಸುತ್ತಮುತ್ತಲಿರುವ ಜನರು ಹೇಗಿರಬೇಕು ? ಹೀಗೆ ಮಕ್ಕಳನ್ನು ಬೆಳೆಸುವ ವೇಳೆ  ಪಾಲಕರು (Parents ) ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳು ಒಳ್ಳೆ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕೈಲಾದಷ್ಟು ಪ್ರಯತ್ನವನ್ನು ಮಾಡ್ತಾರೆ. ಆದರೆ ಬರೀ ಶಾಲೆ, ಸ್ನೇಹಿತರು, ಪರಿಸರ ಮಾತ್ರ ಮಕ್ಕಳಿಗೆ ಒಳ್ಳೆ ಅಭ್ಯಾಸ ಕಲಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮಕ್ಕಳು ಪಾಲಕರನ್ನು ನೋಡಿ ಅತಿ ಹೆಚ್ಚಿನ ವಿಷ್ಯವನ್ನು ಕಲಿಯುತ್ತಾರೆ. ಇದೇ ಕಾರಣಕ್ಕೆ ಕೆಲ ಪಾಲಕರು ಮಕ್ಕಳಿಗೆ ಸದಾ ಬುದ್ದಿವಾದ ಹೇಳ್ತಿರುತ್ತಾರೆ. ಆದ್ರೆ ಮಕ್ಕಳು ನೀವು ಹೇಳಿದ್ದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಮಕ್ಕಳಿಗೆ ಕಾಪಿ ಕ್ಯಾಟ್ ಆಗಿರ್ತಾರೆ. ಹಾಗಾಗಿ ಪೋಷಕರು ತುಂಬಾ ಜಾಗರೂಕರಾಗಿರಬೇಕು. ಮಕ್ಕಳ ಮುಂದೆ ಏನು ಮಾಡ್ತಿದ್ದೇವೆ?  ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಿರಬೇಕು.  ಪೋಷಕರು ತಮ್ಮ ಮಗುವಿನ ಮುಂದೆ ಹೇಗಿರಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಮಕ್ಕಳ ಮುಂದೆ ಬೇಡ ಈ ವರ್ತನೆ : 

ಜಗಳ (Quarrel) : ಸಮಸ್ಯೆಯಾದಾಗ ಅಥವಾ ನಿರಾಶೆಯಾದಾಗ ಕೋಪ ಬರುವುದು ಸಹಜ. ಕೋಪದಲ್ಲಿ ಜಗಳವಾಡುತ್ತೇವೆ. ಜಗಳದ ವೇಳೆ ಮಾತು ದಾರಿ ತಪ್ಪುತ್ತದೆ. ಜಗಳದಿಂದ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಆದ್ರೆ ನಿಮ್ಮ ಜಗಳ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಕೂಡ ಸಣ್ಣ ವಿಚಾರಕ್ಕೆ ಗಲಾಟೆ ಮಾಡಲು ಕಲಿಯುತ್ತಾರೆ. ಜಗಳದ ವೇಳೆ ನೀವು ಬಳಸಿದ ಶಬ್ಧ ಬಳಕೆ ಮಾಡ್ತಾರೆ. ಪಾಲಕರು ಮಾಡುವ ಗಲಾಟೆ ಮಕ್ಕಳ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.

ವಿಚಿತ್ರ ಹೆಸರಿನ ಉಚ್ಚಾರ : ಕೆಲವೊಮ್ಮೆ ಯಾರನ್ನಾದರೂ ತಮಾಷೆ ಮಾಡಲು ನಾವು ಅವರಿಗೆ ಬೇರೆ ಹೆಸರನ್ನು ಇಡುತ್ತೇವೆ. ನೀವು ಮಕ್ಕಳ ಮುಂದೆ ಅಂತಹ ಹೆಸರುಗಳನ್ನು ಬಳಸಬಾರದು. ಇತ್ತೀಚಿನ ದಿನಗಳಲ್ಲಿ, ಅನೇಕ ಪೋಷಕರು ತಮ್ಮ ಮಕ್ಕಳು ಹೆಚ್ಚು ಸ್ಮಾರ್ಟ್ ಆಗಿದ್ದಾರೆ ಮತ್ತು ಬೆನ್  ಹಿಂದೆ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದು ದೂರುತ್ತಾರೆ. ಇದರ ಕ್ರೆಡಿಟ್ ಪಾಲಕರಿಗೆ ಹೋಗುತ್ತದೆ ಎಂಬುದು ನೆನಪಿರಲಿ. 

ವರ್ಷವಾದರೂ ಹೆಂಡ್ತಿ ಮುಖ ನೋಡಿಲ್ಲ ಎಂತಿದ್ದಾನೆ ಪತಿರಾಯ, ಅಂದರೇನರ್ಥ?

ಅಪಶಬ್ಧಗಳ ಬಳಕೆ (Using Bad Worlds) : ಜಗಳವಾಡುವಾಗ ಮಾತ್ರವಲ್ಲ ಅನೇಕರು ನಿತ್ಯದ ಕೆಲಸದ ವೇಳೆಯೂ ಅಪಶಬ್ಧಗಳನ್ನು ಬಳಸ್ತಾರೆ. ಮಕ್ಕಳ ಮುಂದೆ ಪದೇ ಪದೇ ಆ ಶಬ್ಧವನ್ನು ಬಳಸಿದಾಗ ಅದು ಮಕ್ಕಳಿಗೆ ರೂಢಿಯಾಗುತ್ತದೆ. ಮಕ್ಕಳು ಎಲ್ಲೆಂದರೆಲ್ಲಿ ಈ ಪದವನ್ನು ಬಳಸುತ್ತಾರೆ.

ಮದ್ಯಪಾನ (Boozing) : ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಮದ್ಯಪಾನ ಮಾಡಬಾರದು. ಅಧ್ಯಯನವೊಂದರ ಪ್ರಕಾರ, ಪಾಲಕರು ಮದ್ಯಪಾನ ಮಾಡುವುದನ್ನು ನೋಡುವ ಮಕ್ಕಳು ಅತಿ ಬೇಗ ಮದ್ಯಪಾನ ಕಲಿಯುತ್ತಾರೆ. ಸಾಮಾನ್ಯ ಮಕ್ಕಳಿಗಿಂತ ಮಕ್ಕಳ ಎದುರಲ್ಲೇ ಮದ್ಯಪಾನ ಮಾಡುವ ಪಾಲಕರ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಆಲ್ಕೋಹಾಲ್ ಚಟಕ್ಕೆ ದಾಸರಾಗ್ತಾರೆ.   

Extra Marital Affair: ಬಾಡಿಗೆದಾರನ ಜೊತೆ ಸೊಸೆ ಸರಸಕ್ಕೆ ಸಾಕ್ಷಿಯಾದ ಅತ್ತೆ

ಗ್ಯಾಜೆಟ್ ಹುಚ್ಚು (Gadget Love) : ಟಿವಿ ನೋಡ್ಬೇಡಿ, ಮೊಬೈಲ್ ನೋಡ್ಬೇಡಿ ಎಂದು ಮಕ್ಕಳಿಗೆ ಪಾಲಕರು ಉಪದೇಶ ನೀಡ್ತಾರೆ. ಆದ್ರೆ ಪಾಲಕರು ಮಾತ್ರ ಗ್ಯಾಜೆಟ್ ಬಿಡೋದಿಲ್ಲ. ಆಗ ಮಕ್ಕಳು ಕೂಡ ಅದನ್ನು ಬಿಡಲು ಒಪ್ಪುವುದಿಲ್ಲ. ತುಂಬಾ ಸಮಯ ಪರದೆ ನೋಡಿದ್ರೆ  ದೀರ್ಘಕಾಲದ ತಲೆನೋವು, ನಿದ್ರಾಹೀನತೆ ಮತ್ತು ಒತ್ತಡದಂತಹ ಸಮಸ್ಯೆ  ಉಂಟಾಗುತ್ತದೆ. ಹಾಗಾಗಿ ಮಕ್ಕಳ ಮುಂದೆ ಮೊಬೈಲ್, ಟಿವಿ ವೀಕ್ಷಣೆಯನ್ನು ಪಾಲಕರಾದವರು ಮಾಡ್ಬೇಡಿ. 

ಒಳ್ಳೆಯ ಅಭ್ಯಾಸಗಳು : ಮಕ್ಕಳಿಗೆ ಒಳ್ಳೆ ಅಭ್ಯಾಸ, ಹವ್ಯಾಸ ಕಲಿಸಬೇಕೆಂಬ ಆಸೆ ಪಾಲಕರಿಗಿರುತ್ತದೆ. ಆದ್ರೆ ಅಮ್ಮ ಸದಾ ಅಡುಗೆ ಮನೆಯಲ್ಲಿದ್ದರೆ, ಕಚೇರಿಯಿಂದ ಬರುವ ತಂದೆ, ಟಿವಿ ಮುಂದೆ ಕುಳಿತಿರುತ್ತಾನೆ. ಆಗ ಮಕ್ಕಳು ಒಳ್ಳೆ ಅಭ್ಯಾಸ ಕಲಿಯಲು ಹೇಗೆ ಸಾಧ್ಯ.

6 Things Parents Should Never Do In Front Of Child


 

Follow Us:
Download App:
  • android
  • ios