Extra Marital Affair: ಬಾಡಿಗೆದಾರನ ಜೊತೆ ಸೊಸೆ ಸರಸಕ್ಕೆ ಸಾಕ್ಷಿಯಾದ ಅತ್ತೆ
ಜನರು ತಮ್ಮ ದೈಹಿಕ ಸುಖಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಅದೇ ಕಾರಣಕ್ಕೆ ಅನೇಕ ತಪ್ಪುಗಳನ್ನು ಮಾಡ್ತಾರೆ. ಎರಡು ದೋಣಿ ಮೇಲೆ ಕಾಲಿಟ್ಟು ನಂತ್ರ ನೀರಿನಲ್ಲಿ ಬೀಳ್ತಾರೆ. ಈ ಮಹಿಳೆ ಕಥೆಯೂ ಈಗ ಅಲ್ಲಿಗೆ ಬಂದು ನಿಲ್ಲುತ್ತಿದೆ.
ದಾಂಪತ್ಯ (Marriage) ದಲ್ಲಿ ಅನೇಕ ಸಮಸ್ಯೆ (Problem) ಗಳು, ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುವುದು ಸಜಹ. ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆಗಳು ಬದಲಾಗ್ತಿವೆ. ತಮ್ಮ ಸುಖಕ್ಕಾಗಿ ದಾಂಪತ್ಯ ದ್ರೋಹಕ್ಕೂ ಅವರು ಸಿದ್ಧವಿರ್ತಾರೆ. ಸಾಮಾಜಿಕ ಜಾಲತಾಣ (Social Media) ದಲ್ಲಿ ಮಹಿಳೆ (Woman) ಯೊಬ್ಬಳು ತನ್ನ ಸಮಸ್ಯೆ ಹಂಚಿಕೊಂಡಿದ್ದಾಳೆ. ಪತಿಯನ್ನು ಪ್ರೀತಿ (Love) ಸದ ಮಹಿಳೆ ಬಾಡಿಗೆ (Rent) ದಾರನ ಜೊತೆ ಸಂಬಂಧ ಹೊಂದಿದ್ದಾಳೆ. ವಿಷ್ಯ ಇಷ್ಟೇ ಅಲ್ಲ, ಆಕೆ ಬಾಡಿಗೆದಾರನ ಜೊತೆ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ವೇಳೆಯೇ ಆಕೆ ಅತ್ತೆ ಕಣ್ಣಿಗೆ ಇದು ಬಿದ್ದಿದೆ. ಮುಂದೆ ಏನ್ಮಾಡ್ಬೇಕು ಎಂಬ ಗೊಂದಲ ಆಕೆಯನ್ನು ಕಾಡ್ತಿದೆ. ಇದಕ್ಕೆ ತಜ್ಞರು ಸಲಹೆ ನೀಡಿದ್ದಾರೆ.
ಮದುವೆಯಾಗಿ ಕೆಲವೇ ಕೆಲವು ವರ್ಷ ಕಳೆದಿದೆಯಂತೆ. ಆದ್ರೆ ಆಕೆ ಪತಿಯನ್ನು ಪ್ರೀತಿಸ್ತಿಲ್ಲವಂತೆ. ಪ್ರೀತಿ ಬಿಟ್ಟು ನನಗೆ ಎಲ್ಲವೂ ಇದೆ ಎನ್ನುತ್ತಾಳೆ ಮಹಿಳೆ. ಪತಿ ಕೂಡ ಈಕೆ ಮೇಲೆ ಪ್ರೀತಿ ತೋರಿಸ್ತಿಲ್ಲವಂತೆ. ಪತ್ನಿ ಮೇಲೆ ಕಾಳಜಿಯೂ ಇಲ್ವಂತೆ. ಬಾಡಿಗೆದಾರನ ಜೊತೆ ಸಂಬಂಧ ಬೆಳೆಸಲು ಇದೂ ಒಂದು ಕಾರಣ ಎನ್ನುತ್ತಾಳೆ ಮಹಿಳೆ.
ಮಹಿಳೆ ತನ್ನ ಪತಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾಳೆ. ಆಕೆಯ ಅತ್ತೆ ಹಾಗೂ ಮಾವ ಬೇರೆ ಮನೆಯಲ್ಲಿದ್ದಾರೆ. ಮೊದಲು ಅವರ ಭೇಟಿಗೆ ಹೋಗ್ತಿದ್ದ ಮಹಿಳೆ ಈಗ ನಿಲ್ಲಿಸಿದ್ದಾಳೆ. ಪತಿ ಮಾತ್ರ ವಾರಾಂತ್ಯದಲ್ಲಿ ತಂದೆ – ತಾಯಿ ನೋಡಲು ಹೋಗ್ತಾನಂತೆ. ಈ ಬಗ್ಗೆ ಅತ್ತೆ ಅನೇಕ ಬಾರಿ ಸೊಸೆಗೆ ಪ್ರಶ್ನೆ ಮಾಡಿದ್ದಳಂತೆ. ಪ್ರತಿ ಬಾರಿ ತಪ್ಪಿಸಿಕೊಳ್ತಿದ್ದ ಸೊಸೆ ನೋಡಲು ಅತ್ತೆ ಏಕಾಏಕಿ ಬಂದಿದ್ದಾಳೆ. ಈ ವೇಳೆ ಬಾಡಿಗೆದಾರನ ಜೊತೆಗಿದ್ದ ಸೊಸೆ ಕಣ್ಣಿಗೆ ಬಿದ್ದಿದ್ದಾಳೆ.
SOLOGRAMY MARRIAGE: ತನ್ನನ್ನು ತಾನು ಮದುವೆಯಾಗ್ತಿರೋ ಹುಡುಗಿ ಹನಿಮೂನ್ ಎಲ್ಲಿ?
ಆದ್ರೆ ಈ ವಿಷ್ಯವನ್ನು ಅತ್ತೆ ಇನ್ನೂ ಬಾಯ್ಬಿಟ್ಟಿಲ್ಲವಂತೆ. ಸೊಸೆಗೆ ಒಂದು ಮಾತೂ ಹೇಳದ ಅತ್ತೆ ವರ್ತನೆ ಭಯವಾಗ್ತಿದೆ ಎನ್ನುತ್ತಾಳೆ ಮಹಿಳೆ. ಹಾಗಂತ ಈ ಮದುವೆ ಮುರಿದುಕೊಳ್ಳಲು ನನಗೆ ಇಷ್ಟವಿಲ್ಲ. ಗಂಡ ಬಯಸಿದ್ರೂ ಕೊಡಲು ಸಾಧ್ಯವಾಗದ ಅದನ್ನು ನಾನು ಬಾಡಿಗೆದಾರನಿಂದ ಪಡೆದೆ ಎನ್ನುತ್ತಾಳೆ ಮಹಿಳೆ.
ತಜ್ಞರ ಸಲಹೆ : ಮಹಿಳೆ ಸಮಸ್ಯೆಯನ್ನು ಆಲಿಸಿದ ತಜ್ಞರು ಕೆಲವು ವಿಷ್ಯಗಳನ್ನು ಹೇಳಿದ್ದಾರೆ. ಮೊದಲು ನಿನಗೆ ಏನು ಬೇಕು ಎಂಬುದನ್ನು ನಿರ್ಧರಿಸು ಎಂದು ತಜ್ಞರು ಹೇಳಿದ್ದಾರೆ. ಯಾವುದೇ ವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲ. ಗಂಡನನ್ನು ಬಿಡಲು ಸಾಧ್ಯವಿಲ್ಲ ಆದ್ರೆ ಬಾಡಿಗೆದಾರನನ್ನು ಬಿಡೋದಿಲ್ಲ ಅಂದ್ರೆ ಕಷ್ಟವಾಗುತ್ತದೆ ಎನ್ನುವ ತಜ್ಞರು ಈ ಬಗ್ಗೆ ಅತ್ತೆ ಜೊತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ.
ಅತ್ತೆ ಪ್ರಪಂಚ ನೋಡಿದವರು. ನಿಮ್ಮಿಬ್ಬರ ದಾಂಪತ್ಯ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ಅವರು ಆ ವಿಷ್ಯವನ್ನು ಹೇಳದೆ ಇರಬಹುದು. ಇಲ್ಲವೆ ಅವರಿಗೆ ಇದು ಮುಜುಗರ ತರಿಸಿರಬಹುದು. ಹಾಗಾಗಿ ಮೊದಲು ಅವರ ಬಳಿ ಮಾತನಾಡಿ ಎನ್ನುತ್ತಾರೆ ತಜ್ಞರು. ಅತ್ತೆ ಏನು ನೋಡಿದ್ದಾರೆ? ದಾಂಪತ್ಯದಲ್ಲಿ ಏನಾಗ್ತಿದೆ ಎಂಬುದನ್ನು ಅವರಿಗೆ ವಿವರಿಸಿ ಹೇಳ್ಬೇಕು. ಪತಿ ಜೊತೆಯೇ ಇರಬೇಕೆಂದ್ರೆ ಕೆಲ ಆಸೆಗಳನ್ನು ಕಿವುಚಿ ಹಾಕ್ಬೇಕು. ಪತಿಯ ಹತ್ತಿರ ಕುಳಿತು ಮಾತನಾಡ್ಬೇಕು ಎನ್ನುತ್ತಾರೆ ತಜ್ಞರು. ಪತಿ ಮನಸ್ಸು ಒಲಿಸಿಕೊಳ್ಳಲು ಅಥವಾ ಮುಂದೇನು ಮಾಡ್ಬೇಕು ಎಂಬುದನ್ನು ನಿರ್ಧರಿಸಲು ಅತ್ತೆ ಸಹಾಯ ಪಡೆಯಬಹುದು ಎನ್ನುತ್ತಾರೆ ತಜ್ಞರು. ಬಾಡಿಗೆದಾರನನ್ನು ಬಿಡಲು ಸಾಧ್ಯವೇ ಇಲ್ಲ ಎಂದಾದ್ರೆ ಪತಿಯನ್ನು ದೂರ ಮಾಡುವುದು ಒಳ್ಳೆಯದು. ಒಂದೇ ಬಾರಿ ಎರಡು ದೋಣಿ ಮೇಲೆ ಕಾಲಿಡುವುದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ಪತಿ – ಪತ್ನಿ ಸಂಬಂಧಕ್ಕೆ ಮತ್ತೊಂಷು ಅವಕಾಶ ನೀಡಲು ಬಯಸಿದ್ದರೆ ಮೊದಲು ಪ್ರಾಮಾಣಿಕರಾಗಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
Mature relationship: ಒಬ್ಬರಿಗೊಬ್ಬರು ಪ್ರೀತಿಸಿದರೆ ಸಾಲದು, ಗೌರವಿಸಬೇಕು!