ಸ್ನೇಹಿತೆಯ ಮಗ, 16 ವರ್ಷದ ಬಾಲಕನನ್ನು ಮದ್ವೆಯಾದ 41 ವರ್ಷದ ಆಂಟಿ!
ಪ್ರೀತಿಗೆ ಜಾತಿ-ಧರ್ಮ, ವಯಸ್ಸು, ರಾಜ್ಯ-ದೇಶ ಯಾವುದೂ ಸಹ ಅಡ್ಡಿಯಾಗೋಲ್ಲ ಎಂದು ಹೇಳ್ತಾರೆ. ಆದ್ರೆ ತದ್ವಿರುದ್ಧವಾದ ವಯಸ್ಸಿನವರು ಹೇಗಿರುತ್ತದೆ. ಇಂಥಹದ್ದೊಂದು ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. 41 ವರ್ಷದ ಆಂಟಿಯನ್ನು 16 ವರ್ಷದ ಬಾಲಕ ಮದ್ವೆಯಾಗಿದ್ದಾನೆ.
ಮದುವೆಯೆಂಬುದು ಗಂಡು-ಹೆಣ್ಣಿನ ನಡುವಿನ ಸುಂದರವಾದ ಸಂಬಂಧ. ಹಿಂದಿನಿದಲೂ ನಮ್ಮ ಸಮಾಜದಲ್ಲಿ ಗಂಡು ವಯಸ್ಸಿನಲ್ಲಿ ತನಗಿಂತ ಕಿರಿಯವಳಾದ ಹೆಣ್ಣನ್ನು ಮದುವೆಯಾಗುವ ಅಭ್ಯಾಸ ರೂಢಿಯಲ್ಲಿದೆ. ಆದರೆ ಇತ್ತೀಚಿಗೆ ಕೆಲ ವರ್ಷಗಳಲ್ಲಿ ವಯಸ್ಸಿನ ಅಂತರದ ನಡುವಿನ ವ್ಯತ್ಯಾಸವನ್ನು ಗಮನಿಸದೆ ಮದುವೆಯಾಗುತ್ತಾರೆ. ಹುಡುಗರು, ವಯಸ್ಸಿನಲ್ಲಿ ತುಂಬಾ ದೊಡ್ಡವರಾದ ಹುಡುಗಿಯನ್ನು ಅಥವಾ ತುಂಬಾ ಚಿಕ್ಕವಳನ್ನೂ ಮದುವೆಯಾಗುವುದಿದೆ. ಮದುವೆಯೆಂಬುದು ಇಬ್ಬರು ವ್ಯಕ್ತಿಗಳ ನಡುವಿನ ಮನಸ್ಥಿತಿಯನ್ನು ಆಧರಿಸಿದೆ, ವಯಸ್ಸನಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ವಯಸ್ಸಿನ ತುಂಬಾ ವ್ಯತ್ಯಸ್ಥವಾಗಿದ್ದಾಗ ವಿಚಿತ್ರವೆನಿಸುವುದು ಸಹಜ. ಇಂಡೋನೇಷ್ಯಾದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ.
41 ವರ್ಷದ ಇಂಡೋನೇಷಿಯನ್ ಮಹಿಳೆ (Woman) ತನ್ನ ಸ್ನೇಹಿತನ ಮಗನಾದ 16 ವರ್ಷದ ಹದಿಹರೆಯದ ಹುಡುಗನನ್ನು (Teenager) ಮದುವೆಯಾಗಿದ್ದಾಳೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಫೋಟೋದಲ್ಲಿ ವಧು ವರರಿಬ್ಬರೂ ಮದುವೆಯ (Marriage) ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಾರೆ. ಚಿತ್ರದಲ್ಲಿ, ಅವರು ಮದುವೆಯ ಉಂಗುರವನ್ನು ಧರಿಸಿರುವುದನ್ನು ಸಹ ನೋಡಬಹುದು. ಜುಲೈ 30 ರಂದು ಅವರು ಪಶ್ಚಿಮ ಕಲಿಮಂಟನ್ ಪ್ರಾಂತ್ಯದ ಸ್ಥಳದಲ್ಲಿ ಈ ಜೋಡಿ ವಿವಾಹವಾದರು ಎಂದು ತಿಳಿದುಬಂದಿದೆ.
ಇವನಿನ್ನೂ ಕಾಲೇಜು ವಿದ್ಯಾರ್ಥಿ, ಆಂಟಿಯರೆಡೆಗೇ ಹೆಚ್ಚು ಆಕರ್ಷಣೆಯಂತೆ!
25 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿ
ಮರಿಯಾನಾ ಮತ್ತು ಕೆವಿನ್, 25 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು (Couple) ಜುಲೈ 30 ರಂದು ಇಂಡೋನೇಷ್ಯಾದ ಪಶ್ಚಿಮ ಕಾಲಿಮಂಟನ್ ಪ್ರಾಂತ್ಯದಲ್ಲಿ ವಿವಾಹವಾದರು. ಮರಿಯಾನಾ ಸೊಗಸಾದ ವಧುವಿನ ಗೌನ್‌ನಲ್ಲಿ ಪೋಸ್ ನೀಡಿದರು. ಕೆವಿನ್ ಡ್ಯಾಶಿಂಗ್ ಸೂಟ್ ಧರಿಸಿದರು. ವಯಸ್ಸಿನ ಅಂತರದ (Age gap) ಕಾರಣದಿಂದ ಇವರ ಮದುವೆಯ ಫೋಟೋಗಳು ಶೀಘ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು (User), ಇಬ್ಬರನ್ನು ನೋಡಿದರೆ ತಾಯಿ ಮತ್ತು ಮಗನನ್ನು ನೋಡಿದ ಹಾಗೆ ಕಾಣಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ಸ್ನೇಹಿತೆಯ ಮಗನನ್ನೇ ವರಿಸಿದ 41 ವರ್ಷದ ಮಹಿಳೆ!
ಅಚ್ಚರಿಯ ವಿಷಯವೆಂದರೆ 41 ವರ್ಷದ ಮರಿಯಾನಾ ತಮ್ಮ ಸ್ನೇಹಿತೆಯ (Friend) ಮಗನನ್ನೇ ಮದುವೆಯಾಗಿದ್ದಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳು ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಲು ಬಯಸುವುದಿಲ್ಲ. ಆದರೆ, ಕೆವಿನ್‌ನ ತಾಯಿ ದಂಪತಿಗೆ ಆರ್ಶೀವಾದ ಮಾಡಿದ್ದಾರೆ. ಮರಿಯಾನಾರನ್ನು ಸೊಸೆಯೆಂದು ಸ್ವೀಕರಿಸಿದ್ದಾರೆ. ಅದಕ್ಕೆ ಕಾರಣ ಕೆವಿನ್ ತಾಯಿ ಲಿಸಾ ಮರಿಯಾನಳ ಆಪ್ತ ಗೆಳತಿ. ಎಂಬುದಾಗಿದೆ.
ಕಾಮಿ ಆಂಟಿ ವೈಯಾರದ ಬಲೆಗೆ ಬಿದ್ದ ಬಾಲಕ, ಆಗಿದ್ದು ಮಾತ್ರ ದುರಂತ !
ಈ ಹಿಂದೆ ಎಂಗೇಜ್‌ಮೆಂಟ್ ಕ್ಯಾನ್ಸಲ್ ಆಗಿ ಖಿನ್ನತೆಯಲ್ಲಿದ್ದ ಮರಿಯಾನ
ಕಿರಾಣಿ ಅಂಗಡಿಯ ಮಾಲೀಕೆಯಾಗಿರುವ ಮರಿಯಾನಾಗೆ ಈ ಹಿಂದೆ ವ್ಯಕ್ತಿಯೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು (Engagement). ಆದರೆ ನಾನಾ ಕಾರಣಗಳಿಂದ ಆ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಆ ನಂತರ ಮರಿಯಾನಾ ಖಿನ್ನತೆಗೆ (Anxiety) ಒಳಗಾಗಿದ್ದರು. ಇದನ್ನು ನೋಡಿ ಲಿಸಾ ಸಹ ಬೇಸರ ಪಟ್ಟುಕೊಂಡಿದ್ದರು. ಲಿಸಾ ತನ್ನ ಭಾವನಾತ್ಮಕ ಬೆಂಬಲವನ್ನು ನೀಡಿದರೆ, ಮರಿಯಾನಾಳನ್ನು ಕೇವಲ 12 ವರ್ಷದವಳಿದ್ದಾಗ ಭೇಟಿಯಾದ ಕೆವಿನ್ ಅವಳನ್ನು ಚಿಕ್ಕಮ್ಮ ಎಂದು ಕರೆದನು. ಹೀಗೆ ವರ್ಷಗಳ ನಂತರ ಮರಿಯಾನಾ, ಲಿಸಾಳ ಬಳಿ ನಿನ್ನ ಮಗನಿಗೆ ನನ್ನೊಂದಿಗೆ ಸಂಬಂಧವನ್ನು (Relationship) ಬೆಳೆಸಿಕೊಳ್ಳಲು ಅವಕಾಶ ನೀಡುತ್ತೀಯಾ ಎಂದು ಕೇಳಿದಾಗ ಮದುವೆಯ ಪ್ರಸ್ತಾಪ ಬಂತು
ಲಿಸಾ ತನ್ನ ಮಗನನ್ನು ಅದರ ಬಗ್ಗೆ ಕೇಳಿದಾಗ, ಅವನು ಸ್ವಲ್ಪ ಸಮಯದವರೆಗೆ ದಿಗ್ಭ್ರಮೆಗೊಂಡನು. ಆದರೆ ಕೊನೆಗೆ ಅಂತಿಮವಾಗಿ ಒಪ್ಪಿಕೊಂಡನು. ಆ ನಂತರ ಈ ಜೋಡಿ ಖುಷಿಯಿಂದ ಮದುವೆಯಾದರು. ಮರಿಯಾನಾಳನ್ನು ಹಣಕ್ಕಾಗಿ ಮದುವೆಯಾಗಲು ಲಿಸಾ ಮಗನಿಗೆ ಅವಕಾಶ ನೀಡಿದ್ದಾರೆ ಎಂದು ಜನರು ಅರೋಪಿಸುತ್ತಿದ್ದು, ಲಿಸಾ ಇದನ್ನು ನಿರಾಕರಿಸಿದ್ದಾರೆ. ಲಿಸಾ ತನ್ನ ಹೊಸ ಸೊಸೆಯಿಂದ ಯಾವುದೇ ಆಸ್ತಿ, ಹಣ ಅಥವಾ ಉಡುಗೊರೆಯನ್ನು ತೆಗೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇಲ್ಲಿ, ಹದಿಹರೆಯದ ಹುಡುಗ ಆಂಟಿಯನ್ನು ಮದ್ವೆಯಾಗಿರೋ ವಿಚಾರ ಎಲ್ಲರ ಹುಬ್ಬೇರಿಸಿರೋದಂತೂ ನಿಜ.