ಇವನಿನ್ನೂ ಕಾಲೇಜು ವಿದ್ಯಾರ್ಥಿ, ಆಂಟಿಯರೆಡೆಗೇ ಹೆಚ್ಚು ಆಕರ್ಷಣೆಯಂತೆ!
ಕೆಲವು ಹುಡುಗರಿಗೆ (Boys) ಹಾಗೇಯೇ, ಅಮ್ಮನ ವಯಸ್ಸಿನ ಆಂಟಿಯರ ಮೇಲೆ ಎಲ್ಲಿಲ್ಲದ ವ್ಯಾಮೋಹ. ಇವರ ಫ್ರೆಂಡ್ಸ್ (Friends) ಎಲ್ಲರೂ ತಮ್ಮ ಜೂನಿಯರ್ ಅಥವಾ ಕ್ಲಾಸ್‌ಮೇಟ್ಸ್ ಪ್ರೀತಿ (Love)ಯಲ್ಲಿ ಬಿದ್ದರೆ, ಇವರು ಮಾತ್ರ ಬೇರೆ ಏನೋ ಯೋಚಿಸುತ್ತಾರೆ. ಅಷ್ಟಕ್ಕೂ ಯಾಕೆ ಹೀಗೆ? ಇದೊಂದು ಸಮಸ್ಯೆಯೇ? ಪರಿಹಾರವೇನು?
ವಯಸ್ಸಿನ್ನೂ 21. ಈಗ ತಾನೇ ಡಿಗ್ರಿ ಕಾಲೇಜು ಮೆಟ್ಟಿಲು ಹತ್ತಿದ್ದಾನೆ. ಈತನ ಅನೇಕ ಫ್ರೆಂಡ್ಸ್‌ಗೆ ಜೂನಿಯರ್ಸ್ (Juniors) ಜೊತೆ ಅಫೇರ್ (Affair) ಇದೆ. ಅಥವಾ ಅವರದ್ದೇ ವಯಸ್ಸಿನ ಜೊತೆ ಬಿಂದಾಸ್ ಓಡಾಡಿಕೊಂಡು, ಜೀವನದಲ್ಲಿ ನಮ್ಮನ್ನು ಬಿಟ್ಟರೆ ಯಾರಿಲ್ಲ ಅನ್ನೋ ರೀತಿ ಸುತ್ತಾಡುತ್ತಾರೆ. ಆದರೆ, ಈತನಿಗೋ ಯಾರ ಮೇಲೂ ಆಕರ್ಷಣೆಯಾಗುತ್ತಿಲ್ಲ. ಹಾಗಂಥ ಸಲಿಂಗಿ (Homosexual) ಅಂದುಕೊಳ್ಳಬೇಡಿ. ಈತನಿಗೆ ಇವನ ವಯಸ್ಸಿನಗೆ ಸರಿ ಹೋಗೋ ಕಾಲೇಜು ಹುಡುಗಿಯರಲ್ಲಿ ಯಾವ ಭಾವನೆಯೂ ಬರುವುದಿಲ್ಲವಂತೆ. ಆಕರ್ಷಣೆಯಂತೂ ನೋ ವೇ. ಇವನಿಗೂ ಎಲ್ಲರಂತೆ ಲೈಂಗಿಕಾಸಕ್ತಿ ಇದೆ. ನಾರ್ಮಲ್ ಆಗಿರುವಂತೆ ವಯೋ ಸಹಜ ಗುಣಗಳಿವೆ. ಆದರೆ ಇವನಿಗೆ ಹುಡುಗಿಯರಿಗಿಂತ ಆಂಟಿಯರೇ ಹೆಚ್ಚು ಇಷ್ಟವಂತೆ. ಅವರನ್ನು ಕಂಡರೆ ವಿಪರೀತ ಸೆಳೆತವಂತೆ.
ಇಂಥ ಸಮಸ್ಯೆಗಳು ಅನೇಕರಲ್ಲಿ ಇರುತ್ತೆ. ಅಷ್ಟಕ್ಕೂ ಯಾರಿಗೆ, ಏನಕ್ಕೆ ಇಂಥ ಬಯಕೆಗಳು ಬರುತ್ತ ಅಂತ ಹೇಳುವುದು ಕಷ್ಟ. ಆದರೆ, ಓವರ್‌ಕಮ್ ಮಾಡಿಕೊಳ್ಳಲು ಮನಃಶಾಸ್ತ್ರಜ್ಞರು (Psychologists) ಸಹಕರಿಸುತ್ತಾರೆ. ಇಂಥ ವಿಚಿತ್ರ ಭಾವನೆಯಿಂದ ಅನೇಕರು ಎಲ್ಲಿಲ್ಲದ ಸಂಕಟ ಅನುಭವಿಸುತ್ತಿರುತ್ತಾರೆ. ಇವರ ಅಮ್ಮನ ವಯಸ್ಸಿನ ಸ್ವಲ್ಪ ಚಿಕ್ಕವರಾದ ಆಂಟಿಯರು ಹತ್ತಿರದಿಂದ ಹಾದು ಹೋದರೂ, ಏನೋ ಕರೆಂಟ್ ಹಾದು ಹೋದಂತಾಗುತ್ತದೆ ಇವರಿಗೆ. ಮೈ ಮುಟ್ಟಿ ಮಾತನಾಡಿದರಂತೂ ಮುಗೀತು. ಬೆವೆತೇ ಹೋಗುತ್ತಾರೆ. ರಾತ್ರಿ ಕನಸಲ್ಲೂ ಆಂಟಿಯರದ್ದೇ ಕಾರುಬಾರು. ಇದು ಸಮಸ್ಯೆಯೋ ಅಥವಾ ನಾರ್ಮಲ್ ವಿಷಯವೋ ಅನ್ನೋದೂ ಅನೇಕರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಅಲ್ಲಿ ಇಲ್ಲ ಗೂಗಲ್ (Google) ಮಾಡಿ, ಅಯ್ಯೋ ಅದಕ್ಕೆಲ್ಲಾ ಯೋಚಿಸೋದು ಬೇಡ. ಕಾಮನ್ ಅಂತ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ಈ ಹುಡುಗನಿಗೆ ಅಸಹಜ ಎನಿಸುತ್ತಿದೆಯಂತೆ!
Real Story : ನಿಶ್ಚಿತಾರ್ಥದ ನಂತರ `ನೀ ದಪ್ಪಗಿದ್ದೀಯಾ’ ಎನ್ನುತ್ತಿದ್ದಾನೆ ಭಾವಿ ಪತಿ
ಸೆಕ್ಸ್ ಬಗ್ಗೆ ಮಡಿವಂತಿಕೆ ಇರುವ ಭಾರತದಲ್ಲಿ (India) ಇಂಥ ವಿಷಯಗಳಿಂದ ಅದೆಷ್ಟೋ ಮಂದಿ ವಿಶ್ವಾಸವನ್ನೇ ಕಳೆದುಕೊಂಡಿರುತ್ತಾರೆ. ತಮಗೆ ಬರುವ ಅಸಹಜ ಯೋಚನಯಿಂದ ಹೊರ ಬರಲಾರದೇ ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ. ಇನ್ನೊಬ್ಬರ ಬಳಿ ಹೇಳಿಕೊಂಡರೆ, ಎಲ್ಲಿ ಮಾನಸಿಕ ಆಘಾತ ಹೆಚ್ಚುತ್ತೋ ಎಂದು ಮತ್ತಷ್ಟು ಆತಂಕಗೊಳ್ಳುತ್ತಾರೆ. ಸಮಸ್ಯೆಯಲ್ಲದ ಇಂಥ ಸಮಸ್ಯೆಗಳೇ ಹಲವರ ಮಾನಸಿಕ ರೋಗಕ್ಕೆ (Psychological Problem) ಕಾರಣವಾಗುತ್ತದೆ. ಬಹಳ ಸುಲಭವಾಗಿ ಬಗೆ ಹರಿಸಿಕೊಳ್ಳುವಂಥ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತದೆ.
ಹೀಗೆ ಅಮ್ಮನ ವಯಸ್ಸಿನವರ ಮೇಲೆ ಆಕರ್ಷಣೆಯಾಗುತ್ತದೆ ಅಂದರೆ ಅದಕ್ಕೊಂದು ಕಾರಣವಿರುತ್ತದೆ. ಒಂದೋ ವಯಸ್ಸಿನ ಅಥವಾ ನಿಮಗಿಂತ ಚಿಕ್ಕ ಹುಡುಗಿಯರು ಚೈಲ್ಡಿಶ್ (Childish) ಆಗಿ ವರ್ತಿಸುತ್ತಾರೆಂದೆನಿಸಬಹುದು. ಮದ್ಯ ವಯಸ್ಸಿನ ಹೆಣ್ಣು ಮಕ್ಕಳು ಸಹಜವಾಗಿಯೇ ಪ್ರಬುದ್ಧರಾಗಿ ವರ್ತಿಸುತ್ತಾರೆ. ಸೆಕ್ಸ್‌ನಲ್ಲಿ ಅಪಾರ ಅನುಭವ ಇರುವ ಇವರಿಂದ ಹೆಚ್ಚು ಸುಖ ಸಿಗಬಹುದು ಎಂಬ ಯೋಚನೆಯೂ ಇರಬಹುದು. ಅದರಲ್ಲಿಯೂ ವಿಶೇಷವಾಗಿ ಅಮ್ಮನ ಪ್ರೀತಿಯಿಂದ ವಂಚಿತರಾದ ಮಕ್ಕಳಲ್ಲಿ ಇಂಥದ್ದೊಂದು ಭಾವ ಕಾಡೋದು ಹೆಚ್ಚು. ಹಾಗಂತ ಈ ಯೋಚನೆ ಹಾಗೆ ಬಂದು, ಹೀಗೆ ಹಾದು ಹೋದರೆ ಪರ್ವಾಗಿಲ್ಲ. ಆದರೆ, ಅದೇ ಯೋಚನೆಯಲ್ಲಿ ಮನಸ್ಸನ್ನು ಹಾಳು ಮಾಡ್ಕೊಂಡು, ಭವಿಷ್ಯವೇ ಕತ್ತಲಾಗದಂತೆ ನೋಡಿಕೊಳ್ಳಬೇಕು. ಇಂಥ ಯೋಚನೆಗಳನ್ನು ಓವರ್‌ಕಮ್ ಮಾಡಲು ಆಗದಿದ್ದರೆ, ಮನೋವೈದ್ಯರ ಬಳಿ ಹೋಗಿ. ಅವರು ನಿಮಗೆ ಕೌನ್ಸಿಲಿಂಗ್ ಮಾಡುತ್ತಾರೆ. ಆಗ ನಿಮ್ಮ ಈ ಸಮಸ್ಯೆಗೆ ಹಿನ್ನೆಲೆಯಲ್ಲಿ ಏನಾದರೂ ಕಾರಣವಿದ್ದರ ಪತ್ತೆಯಾಗುತತ್ದೆ. ಒಂದು ವೇಳೆ ನೀವಿದನ್ನು ಪರಿಹರಿಸಿ ಕೊಳ್ಳದೇ ಹೋದಲ್ಲಿ, ಅನೇಕ ಸಮಸ್ಯೆಗಳಿಗೆ ಇದೊಂದು ಚಿಕ್ಕ ಸಮಸ್ಯೆ ದಾರಿ ಮಾಡಿಕೊಡಬಹುದು.
ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್ ಆಯ್ತು, ಆದ್ರೆ ಆಕೆ ನೆನಪಿನಿಂದ ಹೊರಬರೋಕೆ ಆಗ್ತಿಲ್ಲ. ಏನ್ಮಾಡ್ಲಿ ?
ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಸಾವಿರಾರು ಯೋಚನೆಗಳು ಬರುತ್ತವೆ, ಹೋಗುತ್ತವೆ. ಆದರೆ, ಕೆಲವೊಂದು ತಪ್ಪು ದಾರಿ ಹಿಡಿಯುವಂತೆ ಅವರನ್ನು ಪ್ರೇರೇಪಿಸುತ್ತದೆ. ಹಾಗಾಗದಂತೆ ಎಚ್ಚರವಹಿಸಬೇಕು. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡರೆ, ಏಕಾಂತದಲ್ಲಿ ಕಾಲ ಕಳೆಯಲು ಬಯಿಸಿದರೆ ಫ್ರೆಂಡ್ಸ್ ರೀತಿ ಅವರೊಂದಿಗೆ ಮಾತನಾಡಿ. ನಿಮಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲವೆಂದರೆ ಸೂಕ್ತ ಕೌನ್ಸೆಲರ್ ಬಳಿ ಕರೆದುಕೊಂಡು ಹೋದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಇಗ್ನೋರ್ ಮಾಡುವುದೇ ಮದ್ದು, ಆದರೆ, ಮತ್ತೆ ಕೆಲವೊಂದಕ್ಕೆ ಅಗತ್ಯ ಸಲಹೆ ಸಹಕಾರ ಆಗತ್ಯವಿರುತ್ತದೆ. ಅದರಲ್ಲಿ ಇದೂ ಒಂದು. ಅಮ್ಮನಂಥ ವಯಸ್ಸಿನವ ಮಹಿಳೆಯರಲ್ಲಿ ಮಕ್ಕಳು ಪ್ರೀತಿಯಲ್ಲಿದ್ದಾರೆಂದರೆ, ಸರಿ ದಾರಿಗೆ ತರಲು ಯತ್ನಿಸಬೇಕು.
ಡಾ.ಸದಾನಂದ್ ಕೆ.ಸಿ, ಮೈಂಡ್ ಬಾಡಿ ಕೋಲ್ಡ್ ರೇಸರ್ ಸೆಂಟರ್, ಜಯನಗರ