ಸ್ವರ್ಗದಲ್ಲೇ ನಿಶ್ಚಯವಾದ ವಿವಾಹ..! 3 ಅಡಿ ಎತ್ತರದ ವಧುವನ್ನು ವರಿಸಿದ 3 ಅಡಿ ಎತ್ತರದ ವರ

ಖುಷ್ಬೂ ಇಮ್ರಾನ್‌ಗಿಂತ ಕೇವಲ 0.4 ಇಂಚು ಕಡಿಮೆ ಎತ್ತರವಾಗಿದ್ದು, ಇದೀಗ ಈ ಜೋಡಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. 

3 foot groom weds 3 foot bride in uttar pradeshs aligarh ash

ಆಲಿಗಢ (ಫೆಬ್ರವರಿ 16, 2023): ಉತ್ತರ ಪ್ರದೇಶದ ಅಲಿಗಢದಲ್ಲಿ ಇಮ್ರಾನ್ ಮತ್ತು ಖುಷ್ಬೂ ಮದುವೆ ಚರ್ಚೆಯಲ್ಲಿದೆ. ಹಾಗಂತ ಇದು ರಾಜ ಮನೆತನದ ವಿವಾಹವಲ್ಲ. ಆದರೆ, ಅವರ ಎತ್ತರದ ಕಾರಣದಿಂದ ಚರ್ಚೆಯಾಗುತ್ತಿದೆ. ಇಮ್ರಾನ್‌ ಕಡಿಮೆ ಎತ್ತರ ಇದ್ದ ಕಾರಣದಿಂದ ಆತನ ಮದುವೆಗೆ ಅಡ್ಡಿಯಾಗುತ್ತಿತ್ತು. ಮನೆಯವರು ಸಹ ಆತ ಬೇಗ ಮದುವೆಯಾಗಿ ಸೆಟಲ್‌ ಆಗ್ಬೇಕು ಎಂಬ ಚಿಂತೆಯಲ್ಲಿದ್ದರು. ಆದರೆ, ಆತನ ಎತ್ತರಕ್ಕೆ ತಕ್ಕಂತ ವಧು ಸಿಕ್ಕಿರಲಿಲ್ಲ. ಆದರೆ, ಈ ಹುಡುಕಾಟ ಕೊನೆಗೂ ಅಂತ್ಯವಾಗಿದ್ದು, ಆತನ ಮದುವೆಯೂ ಆಯಿತು.

ಇಮ್ರಾನ್‌ - ಖುಷ್ಬೂ ವಿವಾಹ ಫೆಬ್ರವರಿ 12, 2023 ರಂದು ಉತ್ತರ ಪ್ರದೇಶದ ಆಲಿಗಢದಲ್ಲಿ ನಡೆದಿದೆ. ಖುಷ್ಬೂ ಇಮ್ರಾನ್‌ಗಿಂತ ಕೇವಲ 0.4 ಇಂಚು ಕಡಿಮೆ ಎತ್ತರವಾಗಿದ್ದಾರೆ. ಇದೀಗ ಈ ಜೋಡಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. 

ಇದನ್ನು ಓದಿ: ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ಅಂದ ಹಾಗೆ, ಉತ್ತರ ಪ್ರದೇಶದ ಅಲಿಘರ್‌ನ ಜೀವನ್‌ಗಢ್ ಗಲ್ಲಿಯ ನಂ. 8 ರ ನಿವಾಸಿ ಇಮ್ರಾನ್ ಕಿರಿಯ ಮಗ. ಇವರಿಗೆ 6 ಜನ ಅಣ್ಣ- ಅಕ್ಕಂದಿರಿದ್ದು, ಇವರೆಲ್ಲರೂ ಮದುವೆಯಾಗಿದ್ದಾರೆ. ಇಮ್ರಾನ್ ತನ್ನ ತಾಯಿ ಬಿರ್ಜಿಸ್ ಜೊತೆ ವಾಸಿಸುತ್ತಿದ್ದು, ಜತೆಗೆ ದೋಧ್‌ಪುರದ ಹೋಟೆಲ್‌ನಲ್ಲಿ ಕೆಲಸ ಮಾಡುವ ಮೂಲಕ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದ. ಇತ್ತೀಚೆಗಷ್ಟೇ ಇಮ್ರಾನ್‌ ತಾಯಿ ಬಿರ್ಜಿಸ್‌ ಅವರ ಕಣ್ಣುಗಳಿಗೆ ಆಪರೇಷನ್ ಸಹ ಮಾಡಿಸಿದ್ದಾನೆ. 

ಇಮ್ರಾನ್‌ಗೆ ತಾಯಿಯೇ ವಧುವನ್ನು ಹುಡುಕಿಕೊಟ್ಟಳು
 ಮಗ ಇಮ್ರಾನ್ ಮದುವೆಯ ಬಗ್ಗೆ ತಾಯಿ ಬಿರ್ಜಿಸ್ ಚಿಂತಿತರಾಗಿದ್ದರು. ಸಾಯುವ ಮುನ್ನ ಇಮ್ರಾನ್‌ನ ಮನೆ ಸೆಟಲ್‌ ಆಗಬೇಕು ಎಂದು ಆಕೆ ಯೋಚಿಸುತ್ತಿದ್ದರು. ಇದರಿಂದ ದಿನಕ್ಕೆ 2 ಹೊತ್ತಿಗಾದರೂ ಅಡುಗೆ ಮಾಡಲು ಹೆಂಡತಿ ಸಿಗುತ್ತಾಳೆ ಎಂದು ತಾಯಿ ಯೋಚಿಸುತ್ತಿದ್ದರು. ಈ ಹಹಿನ್ನೆಲೆ ತನ್ನ ಕೊನೆಯ ಮಗ ಇಮ್ರಾನ್‌ನನ್ನು ಮದುವೆಯಾಗುವಂತೆ ತಾಯಿ ಹಲವರಿಗೆ ಮನವಿ ಮಾಡಿದ್ದರು. ಆದರೆ, ಅದು ಸಾದ್ಯವಾಗಿರಲಿಲ್ಲ.

ಇದನ್ನೂ ಓದಿ: Transgender Marriage: ಕೇರಳದಲ್ಲಿ ಪ್ರೇಮಿಗಳ ದಿನದಂದೇ ತೃತೀಯ ಲಿಂಗಿ ಜೋಡಿಯ ಮದುವೆ

ಆದರೆ ಅದೃಷ್ಟವೆಂಬಂತೆ, ಇದೇ ವೇಳೆ ಪಟ್ವಾರಿ ನಾಗ್ಲಾ ಭಗವಾನ್ ಗಡಿಯಲ್ಲಿ ಖುಷ್ಬೂ ವಾಸವಾಗಿರುವ ವಿಚಾರ ತಿಳಿಯಿತು. ಖುಷ್ಬೂ ಅವರನ್ನು ನೋಡಲು ಇಮ್ರಾನ್‌ ತಾಯಿ ಬಿರ್ಜಿಸ್‌ ಹೋಗಿದ್ದರು. ಖುಷ್ಬೂವನ್ನು ನೋಡಿದ ತಕ್ಷಣ ಇಮ್ರಾನ್‌ ತಾಯಿ ಮದುವೆಗೆ ಒಪ್ಪಿಕೊಂಡು, ಬೇಗನೇ ಮದುವೆ ಮಾಡಬೇಕೆಂದು ಹೇಳಿಕೊಂಡಿದ್ದುರ. ಅದೇರೀತಿ, ವಧು ಖುಷ್ಬು ಕುಟುಂಬಸ್ಥರು ಕೂಡ ಆಕೆಯ ಮದುವೆಯ ಬಗ್ಗೆ ಚಿಂತಿತರಾಗಿದ್ದರು ಎಂದು ತಿಳಿದುಬಂದಿದ್ದು, ಅವರು ಸಹ ಖುಷಿಯಿಂದ ಇಮ್ರಾನ್‌ ಜತೆ ಮದುವೆ ಮಾಡಲು ಒಪ್ಪಿದ್ದಾರೆ. 

ಭಾನುವಾರ ನಡೆದ ಅದ್ಧೂರಿ ಮದುವೆ 
ಕಳೆದ ಭಾನುವಾರ, 3 ಅಡಿ ಎತ್ತರದ ಇಮ್ರಾನ್ 3 ಅಡಿ ಎತ್ತರದ ಖುಷ್ಬೂ ಜತೆಗೆ ವಿವಾಹವಾದರು. ಇದಾದ ಬಳಿಕ ಇಮ್ರಾನ್‌ ತನ್ನ ಹೆಂಡತಿ ಜತೆ ಅಮ್ಮನ ಜತೆ ಆಶೀರ್ವಾದ ಪಡೆದರು ಎಂದು ನೆರೆಹೊರೆಯಲ್ಲಿ ವಾಸಿಸುವ ಆಮೀರ್ ರಶೀದ್ ಹೇಳಿದ್ದಾರೆ. ಇದಕ್ಕೆ ಅಲ್ವಾ ಹೇಳೋದು ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅನ್ನೋದು. ದೇವರು ಅಅಥವಾ ಮೇಲಿನವರು ಮೊದಲೇ ಜೋಡಿಯನ್ನು ಗಂಟು ಹಾಕಿ ಕಳಿಸಿರುತ್ತಾರೆ ಅನ್ನೋದಕ್ಕೆ ಇತ್ತೀಚಿನ ಉದಾಹರಣೆಗಳೆಂದರೆ ಖುಷ್ಬೂ ಮತ್ತು ಇಮ್ರಾನ್.

ಇದನ್ನೂ ಓದಿ: ರಾಂಜನಾ ಚಿತ್ರದ ಹಾಡಿಗೆ ಸೂಪರ್‌ ಸ್ಟೆಪ್ಸ್‌, ಮಗನ ಮುಂದೆ ಹಾರ್ದಿಕ್‌ ಮತ್ತೊಂದ್‌ ಮದುವೆ!

Latest Videos
Follow Us:
Download App:
  • android
  • ios