ಭಾರತ ಮೂಲದ ಕಪಾಟಿನಲ್ಲಿತ್ತು ಶತಮಾನಗಳ ಹಳೆಯ ಲಿಂಬೆಹಣ್ಣು! 285 ವರ್ಷಗಳ ಹಳೆಯ ಹಣ್ಣು ಇದು
ಲಿಂಬೆಹಣ್ಣು ನೂರಾರು ವರ್ಷಗಳ ಕಾಲ ಇರುವುದುಂಟೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಉತ್ತರ ದೊರೆತಿದೆ. ಬರೋಬ್ಬರಿ 285 ವರ್ಷಗಳ ಹಿಂದಿನ ಲಿಂಬೆಹಣ್ಣೊಂದು ಬ್ರಿಟನ್ನಿನಲ್ಲಿ ದೊರೆತಿದೆ. ಇದು ಭಾರತ ಮೂಲದ ಕಪಾಟು ಎನ್ನುವುದು ವಿಶೇಷ. ಪ್ರೀತಿಪಾತ್ರರೊಬ್ಬರಿಗೆ ಈ ಉಡುಗೊರೆ ನೀಡಲಾಗಿತ್ತು ಎಂದು ಊಹಿಸಲಾಗಿದೆ.
ಒಂದು ಲಿಂಬೆಹಣ್ಣು ಅಬ್ಬಬ್ಬಾ ಎಂದರೆ ಎಷ್ಟು ಕಾಲ ಬಾಳಬಹುದು? ಹೆಚ್ಚೆಂದರೆ ಒಂದು ತಿಂಗಳು? ಎರಡು ತಿಂಗಳು? ಹೋಗಲಿ, ಆರು ತಿಂಗಳು? ಇದ್ದಲ್ಲೇ ಕೊಳೆತು ಹೋಗದಿದ್ದರೆ ಅಲ್ಲಿಯೇ ಒಣಗಿರುವ ಲಿಂಬೆ ಹಣ್ಣಾದರೂ ಇನ್ನೂ ಹೆಚ್ಚಿನ ಸಮಯ ಇರುವುದು ಅನುಮಾನಾಸ್ಪದ. ಆದರೆ, ಯುಕೆದಲ್ಲಿ ಒಂದು ವಿಚಿತ್ರ ಘಟನೆಯಿದೆ. ಅದೆಂದರೆ, ಒಂದು ಲಿಂಬೆಹಣ್ಣು ಬರೋಬ್ಬರಿ 285 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಈ ಲಿಂಬೆಹಣ್ಣು ಇದೀಗ 1.48 ಲಕ್ಷ ರೂಪಾಯಿಗೆ ಹರಾಜೂ ಆಗಿದೆ. ಇಷ್ಟೆಲ್ಲ ವರ್ಷಗಳ ಕಾಲ ಲಿಂಬೆಹಣ್ಣು ಕೊಳೆಯದೇ ಇರುವುದು ಸಾಧ್ಯವಿಲ್ಲ ಎನ್ನುತ್ತೀರಾ? ಆದರೆ, ಇದು ನಿಜ. 19ನೇ ಸೆಂಚುರಿಗೆ ಸೇರಿದ್ದ ಮನುಷ್ಯನ ಬೀರುವಿನಲ್ಲಿ ಇದು ಪತ್ತೆಯಾಗಿದೆ.
ಬ್ರಿಟನ್ನಿನ (Britain) ಕುಟುಂಬದ (Family) ಹಿರಿಯ (Elder) ಮನುಷ್ಯರೊಬ್ಬರಿಗೆ ಸೇರಿದ್ದ ಕಪಾಟಿನಲ್ಲಿ ಈ ಲಿಂಬೆಹಣ್ಣು ಪತ್ತೆಯಾಗಿದೆ. ಈಗ ಯುಕೆಯ ಬ್ರೆಟ್ಟೆಲ್ಸ್ ಹರಾಜು (Auction) ಸಂಸ್ಥೆಯಲ್ಲಿ ಶ್ರೊಫೈರ್ ನಲ್ಲಿ 1416 ಯುರೋಗೆ ಹರಾಜಾಗಿದೆ. ಈ ಕುಟುಂಬದ ಹಿರಿಯ ಅಂಕಲ್ ಒಬ್ಬರಿಗೆ ಇದು ಸೇರಿತ್ತು. ಅವರ ಹಲವು ಖಾನೆಗಳಿದ್ದ ಅಲಮಾರುವನ್ನು (Cabinet) ಮಾರಾಟ ಮಾಡಲೆಂದು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಈ ಸಮಯದಲ್ಲಿ ಎಲ್ಲವನ್ನೂ ತೆಗೆದು ಡಾಕ್ಯುಮೆಂಟ್ (Document) ಮಾಡುತ್ತಿದ್ದರು. ಡ್ರಾವರ್ ಹಿಂಭಾಗದಲ್ಲಿ ಒಣಗಿದ್ದ ಲಿಂಬೆಹಣ್ಣು ಪತ್ತೆಯಾಗಿತ್ತು. ಅದರ ಮೇಲಿದ್ದ ದಿನಾಂಕ ನೋಡಿ ಬೆರಗಾಗುವಂತೆ ಆಗಿತ್ತು.
ಮಗನ ಕಾರಣಕ್ಕೆ ಅರೆ ಕ್ಷಣದಲ್ಲಿ ಲಕ್ಷಾಧಿಪತಿಯಾದ ತಂದೆ! ಹಣ ಖರ್ಚು ಮಾಡೋದನ್ನು ಇವನಿಂದ ಕಲಿಬೇಕು
ಕೊಳೆಯದೇ ಹೇಗಿದೆ?: ಯಾವುದೇ ಕೀಟಗಳಿಗೆ ತುತ್ತಾಗದೇ, ಕೊಳೆತುಹೋಗದೆ ಇರುವ ಲಿಂಬೆಹಣ್ಣು (Lemon) ಅಚ್ಚರಿ ಹುಟ್ಟಿಸಿದೆ. ಈ ಲಿಂಬೆಹಣ್ಣಿನ ಮೇಲೆ ಸಣ್ಣದೊಂದು ಸಂದೇಶವೂ ಇದೆ. “ಮಿಸ್ ಇ ಬಾಕ್ಸ್ ಟರ್ ಅವರಿಗೆ ಮಿಸ್ಟರ್ ಪಿ.ಲು.ಫ್ರಾಂಚಿನಿ ಅವರಿಂದ ಉಡುಗೊರೆ (Gift). ನವೆಂಬರ್ 4, 1739’ ಎಂದು ಬರೆದುಕೊಂಡಿದೆ. ಈ ದಿನಾಂಕ ನೋಡಿ ಎಲ್ಲರೂ ಬೆರಗಾಗಿದ್ದರು. ಈ ಲಿಂಬೆಹಣ್ಣು ಹಾಳಾಗದೇ ಹೇಗೆ ಉಳಿದುಕೊಂಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕಿನ್ನೂ ಉತ್ತರ ದೊರೆತಿಲ್ಲ.
ಭಾರತದ ಕಪಾಟು: ಇಲ್ಲಿ ಇನ್ನೂ ಒಂದು ಸಖೇದಾಶ್ಚರ್ಯಗೊಳ್ಳುವ ಸಂಗತಿ ಇದೆ. ಅದೆಂದರೆ, ಈ ಅಲಮಾರು ಅಥವಾ ಬೀರು ಭಾರತದಿಂದ (India) ಬ್ರಿಟನ್ ಗೆ ರವಾನೆಯಾಗಿದೆ. ಭಾರತದಲ್ಲಿ ಬ್ರಿಟಿಷರ ಆಡಳಿತ ಇದ್ದ ಸಮಯ (Time) ಅದಾಗಿತ್ತು. ಬ್ರಿಟನ್ನಿನ ಸ್ಥಳೀಯ ಪತ್ರಿಕೆಯ ಪ್ರಕಾರ, ಈ ಅಲಮಾರು ರೋಮ್ಯಾಂಟಿಕ್ ಉಡುಗೊರೆಯಾಗಿದೆ. ವಸಾಹತುಶಾಹಿ (Colonial) ಭಾರತದಲ್ಲಿದ್ದ ಅಲಮಾರುವನ್ನು ಬಳಿಕ ಬ್ರಿಟನ್ನಿಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಕಪಾಟನ್ನು ಹರಾಜು ಹಾಕುವ ಸಮಯದಲ್ಲಿ ಲಿಂಬೆಹಣ್ಣನ್ನೂ ಸೇರಿಸಿ ಹರಾಜು ಹಾಕುವುದು ಹರಾಜು ಸಂಸ್ಥೆ ಡೇವಿಡ್ ಬ್ರೆಟ್ಟೆಲ್ ನಿರ್ಧಾರವಾಗಿತ್ತು. "ಕಪಾಟಿನ ಮಾರಾಟದಲ್ಲಿ ಚೂರು ಫನ್ (Fun) ಸೇರಿಸುವುದು ನಮ್ಮ ಉದ್ದೇಶವಾಗಿತ್ತು. ಲಿಂಬೆಹಣ್ಣು ಸುಮಾರು 40ರಿಂದ 60 ಯುರೋಕ್ಕೆ ಹರಾಜಾಗುವ ನಿರೀಕ್ಷೆಯಿತ್ತು. ಆದರೆ, ಈ ನಿರೀಕ್ಷೆ ಮೀರಿ ಈ ಲಿಂಬೆಹಣ್ಣು ಹಣ ಗಳಿಸಿದೆ' ಎಂದು ಹೇಳಿದೆ.
ಶಾಲೆಗೆ ಗೈರಾದ ಮಗು, ಮನೆಗೆ ಬಂದ ಪ್ರಾಂಶುಪಾಲರಿಂದ ಅಮ್ಮನಿಗೆ ಕ್ಲಾಸ್.!
ಅಸಲಿಗೆ ಈ ಕಪಾಟು ಕೇವಲ 32 ಯೂರೋಕ್ಕೆ ಮಾರಾಟವಾಗಿದೆ. ಇದೊಂದು ಅತ್ಯಂತ ಹಳೆಯ ಕಪಾಟಾಗಿತ್ತು. ಈ ವಿಚಿತ್ರ ಹರಾಜಿಗೆ ಇಡೀ ಹರಾಜು ಉದ್ಯಮ ಅಚ್ಚರಿಗೊಂಡಿದೆ. ಉದ್ಯಮ ವಲಯ ರೋಮಾಂಚನಗೊಂಡಿದೆ. ಇಷ್ಟು ಕಾಲದಿಂದಲೂ ಅಲಮಾರುವಿನಲ್ಲಿ ಭದ್ರವಾಗಿ ಕುಳಿತಿದ್ದ ಲಿಂಬೆಹಣ್ಣಿನ ಕತೆಯೀಗ ಸಾಕಷ್ಟು ವೈರಲ್ ಆಗಿದೆ.