ಶಾಲೆಗೆ ಗೈರಾದ ಮಗು, ಮನೆಗೆ ಬಂದ ಪ್ರಾಂಶುಪಾಲರಿಂದ ಅಮ್ಮನಿಗೆ ಕ್ಲಾಸ್.!
ಮಕ್ಕಳು ಒಂದು ದಿನ ಶಾಲೆಗೆ ಹೋಗ್ದೆ ಹೋದ್ರೂ ಅನೇಕ ವಿಷ್ಯಗಳನ್ನು ಮಿಸ್ ಮಾಡಿಕೊಳ್ತಾರೆ. ಶಿಕ್ಷಕರು ಕಲಿಸಿದಂತೆ ಮನೆಯಲ್ಲಿ ಅಮ್ಮ ಪಾಠ ಮಾಡಲು ಸಾಧ್ಯವಿಲ್ಲ. ಹಾಗಂತ ಮಕ್ಕಳ ಆರೋಗ್ಯ ಸರಿಯಿಲ್ಲ ಎಂದಾಗ್ಲೂ ಅವರನ್ನು ಸ್ಕೂಲಿಗೆ ಕಳಿಸೋದು ನ್ಯಾಯವಲ್ಲ. ಈ ಘಟನೆಯಲ್ಲಿ ಯಾರು ಸರಿ, ಯಾರು ತಪ್ಪು ನೀವೇ ನಿರ್ಧರಿಸಿ.
ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯ. ಅದರಲ್ಲೂ ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಗೆ ಬಹಳ ಮಹತ್ವವಿದೆ. ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಅವರ ಮುಂದಿನ ಭವಿಷ್ಯವೂ ಚೆನ್ನಾಗಿರುತ್ತೆ. ಶಿಕ್ಷಣ ಕಲಿಸುವ ಗುರುಗಳು ಕಟ್ಟುನಿಟ್ಟಾಗಿದ್ದರೆ ಮಕ್ಕಳ ಓದು ಚೆನ್ನಾಗಿ ನಡೆಯುತ್ತದೆ.
ಶಿಕ್ಷಣ (Education) ಕಲಿಯಲು ಮಕ್ಕಳ ಹಾಜರಾತಿ ಬಹಳ ಮುಖ್ಯ. ಆದರೆ ಶಾಲೆಗೆ ಹೋಗುವ ಮಕ್ಕಳು ಕೆಲವೊಮ್ಮೆ ಅನಾರೋಗ್ಯ (Ill) ಕ್ಕೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಪಾಲಕರೇ ಮಕ್ಕಳನ್ನು ಶಾಲೆ (School)ಗೆ ಹೋಗಬೇಡಿ ಎಂದು ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಖಾಯಿಲೆಗಳು ಮಕ್ಕಳು ಶಾಲೆಗೆ ಗೈರುಹಾಜರಾಗುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ಮಕ್ಕಳು ಮನೆಯವರಿಂದ ರಜೆಯ ಅರ್ಜಿಯನ್ನು ತೆಗೆದುಕೊಂಡುಹೋಗುತ್ತಾರೆ. ವಿನಾಕಾರಣ ಮಕ್ಕಳು ಶಾಲೆ ಬರದೇ ಇರುವುದನ್ನು ತಪ್ಪಿಸಲು ಶಿಕ್ಷಕ (Teacher)ರು ಈ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಶಾಲೆಯ ಪ್ರಾಂಶುಪಾಲರು ಕಟ್ಟುನಿಟ್ಟಾಗಿದ್ದರೆ ಶಿಕ್ಷಕರು ಹಾಗೂ ಅವರ ಮೂಲಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯವೂ ಉಜ್ವಲವಾಗಿರುತ್ತದೆ.
ಶಾಲೆಯಲ್ಲಿನ ಇಂತಹ ಕೆಲವು ಕ್ರಮಗಳು ಹಾಗೂ ನಿಯಮಾವಳಿಗಳು ಕೆಲವರಿಗೆ ಹಿಂಸೆ ಎನಿಸಬಹುದು. ಇಷ್ಟೊಂದು ಕಟ್ಟುನಿಟ್ಟಾಗಿರಬಾರದು ಎಂದು ಕೆಲವೊಮ್ಮೆ ಪಾಲಕರು, ಶಿಕ್ಷಕರ ಮೇಲೆ ಪ್ರತಿಭಟನೆ ಮಾಡಿದ ಉದಾಹರಣೆಗಳೂ ಇವೆ. ಹಾಗೇ ಕೆಲವೊಮ್ಮೆ ಶಿಕ್ಷಕರು ಕೂಡ ಮಕ್ಕಳು ಮಾಡಿದ ಚಿಕ್ಕ ತಪ್ಪಿಗೆ ಅಮಾನವೀಯವಾಗಿ ನಡೆದುಕೊಂಡ ಘಟನೆಗಳು ಕೂಡ ಇವೆ. ದಕ್ಷಿಣ ಚೀನಾದ ಹೈನಾನ್ ನ ಶಾಲೆಯಲ್ಲಿ ಕೂಡ ಇಂತಹುದೇ ಒಂದು ಘಟನೆ ನಡೆದಿದೆ.
ಮಗುವನ್ನೂ ನಿಮ್ಮಂತೆಯೇ ಮಾಡುತ್ತೀರಾ ಎಂದು ಪಾಲಕರ ಮೇಲೆ ಸಿಟ್ಟಿಗೆದ್ದ ಪ್ರಿನ್ಸಿಪಲ್ : ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಲ್ಲಿನ ಒಂದು ಶಾಲೆಯ ಪ್ರಾಂಶುಪಾಲರು ಶಿಕ್ಷಣದ ಹೆಸರಿನಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಚೈನಾ ಮಾರ್ನಿಂಗ್ ಪೋಸ್ಟ್ ಇದನ್ನು ವರದಿ ಮಾಡಿದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರಿಗೆ ಮಕ್ಕಳ ಮೇಲೆ ಯಾವ ಹಕ್ಕೂ ಇಲ್ಲವಾ ಎನ್ನುವ ಪ್ರಶ್ನೆ ಎದುರಾಗಿದೆ.
ಹೈನಾನ್ ಪ್ರಾಂತ್ಯದಲ್ಲಿರುವ ಶಾಲೆಗೆ ಹೋಗುವ ಒಬ್ಬ ಮಗುವಿಗೆ ವಿಪರೀತ ಹುಷಾರಿರಲಿಲ್ಲ. ಆರೋಗ್ಯ ಸರಿಯಾಗಿಲ್ಲದ ಕಾರಣ ಆ ಮಗು ಒಂದು ದಿನ ಶಾಲೆಯಲ್ಲಿ ಮೂರ್ಛೆ ತಪ್ಪಿ ಬಿದ್ದಿತ್ತು. ಮಗುವಿಗೆ ಹೀಗಾಗಿದ್ದಕ್ಕೆ ಮಾರನೇಯ ದಿನ ಆ ಮಗುವಿನ ಪಾಲಕರು ಮಗುವನ್ನು ಶಾಲೆಗೆ ಕಳುಹಿಸಲಿಲ್ಲ. ಶಾಲೆಯಲ್ಲಿ ಆ ಮಗು ಕಾಣದೇ ಇರುವುದನ್ನು ನೋಡಿದ ಶಾಲೆಯ ಪ್ರಾಂಶುಪಾಲರು ಸಿಟ್ಟಿನಲ್ಲಿ ಆ ಮಗುವಿನ ಮನೆಗೇ ಹೋಗಿದ್ದಾರೆ. ಪ್ರಾಂಶುಪಾಲರು ಮಗುವಿನ ಮನೆಗೆ ಹೋದಾಗ ಆ ಮಗು ತನಗೆ ಏನೂ ಆಗಿಲ್ಲ ಅನ್ನೋ ಹಾಗೆ ಆಡುತ್ತಾ ಇತ್ತು. ಮಗು ಆರೋಗ್ಯ ಸರಿಯಾಗಿಲ್ಲ ಎಂದು ಸುಳ್ಳು ಹೇಳಿ ಶಾಲೆಗೆ ಬರದೇ ಮನೆಯಲ್ಲಿ ಆರಾಮಾಗಿ ಆಡಿಕೊಂಡಿದೆ ಎಂದು ಕೋಪಗೊಂಡ ಪ್ರಿನ್ಸಿಪಲ್ ಮಗುವಿನ ಪಾಲಕರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಂತೆಯೇ ನಿಮ್ಮ ಮಗು ಕೂಡ ವ್ಯವಸಾಯ ಮಾಡಬೇಕೆಂದು ಬಯಸುತ್ತೀರಾ? ಎಂದು ಕೂಗಾಡಿದರು.
ಶನಿವಾರ ನನ್ನ ಕೊನೆಯ ದಿನ, ದಯಾಮರಣಕ್ಕೂ ಮುನ್ನ ಯುವತಿಯ ಅಂತಿಮ ಪೋಸ್ಟ್!
ಸೋಷಿಯಲ್ ಮೀಡಿಯಾದಲ್ಲಿ (Social Media) ಈ ಸುದ್ದಿ ವೈರಲ್ (Viral) ಆಗಿದೆ. ಆ ನಂತರ ಕೆಲವರು ಶಾಲೆಯ ಪ್ರಾಂಶುಪಾಲರಿಗೆ ಶಿಕ್ಷಣದ ಬಗ್ಗೆ ಹಾಗೂ ಮಗುವಿನ ಶಿಕ್ಷಣದ (Education) ಕುರಿತು ಇರುವ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ವಿದ್ಯೆಯ ಹೆಸರಿನಲ್ಲಿ ಪ್ರಾಂಶುಪಾಲರು ಪಾಲಕರ ಬಳಿ ಅಮಾನವೀಯವಾಗಿ (Inhuman), ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.