ಕೆಲವರ ಕೈಗೆ ಹಣ ಬಂದ್ರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ. ಅದನ್ನು ಹೆಂಗ್ ಹೆಂಗೋ ಖರ್ಚು ಮಾಡ್ತಾರೆ. ಶ್ರಮವಿಲ್ಲದೆ ಮಗನ ಕಾರಣಕ್ಕೆ ಬಂದ ಹಣವನ್ನು ಈತ ಅಚ್ಚುಕಟ್ಟಾಗಿ ಖರ್ಚು ಮಾಡ್ತಿದ್ದಾನೆ.  

ಮಕ್ಕಳಾಗ್ತಿದ್ದಂತೆ ಪಾಲಕರ ಗುರಿ ಬದಲಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಶುರುವಾಗುತ್ತದೆ. ಯಾವುದೇ ಕೆಲಸ ಮಾಡಿದ್ರೂ ಅದ್ರ ಹಿಂದೆ ಅಥವಾ ಮುಂದೆ ಮಕ್ಕಳಿರ್ತಾರೆ. ಅನೇಕ ಬಾರಿ ನಾವು ನಮ್ಮ ಹೆಸರು ಮರೆತು ಮಕ್ಕಳ ಹೆಸರಿನಲ್ಲೇ ಆಸ್ತಿ, ಹಣ ಮಾಡಲು ಶುರು ಮಾಡ್ತೇವೆ. ಮಕ್ಕಳ ದೊಡ್ಡವರಾದ್ಮೇಲೆ ಅದೆಷ್ಟೋ ಪಾಲಕರಿಗೆ, ಮಕ್ಕಳ ಮೇಲಿನ ಈ ಅಪಾರ ಪ್ರೀತಿಯೇ ಮುಳುವಾಗಿದೆ. ಮತ್ತೆ ಕೆಲವೊಮ್ಮೆ ಮಕ್ಕಳ ಲಕ್ ನಮ್ಮ ಜೀವನವನ್ನು ಬದಲಿಸಿದ್ದಿದೆ. ಈತನ ಜೀವನ ಕೂಡ ಇದಕ್ಕೆ ಉತ್ತಮ ಉದಾಹರಣೆ. ಮಗನ ಕಾರಣಕ್ಕೆ ಈತನ ಕೈಗೆ ಹಣ ಏನೋ ಬಂದಿದೆ. ಆದ್ರೆ ಎಲ್ಲವನ್ನೂ ತನ್ನಿಷ್ಟದಂತೆ ಖರ್ಚು ಮಾಡುವ ಮನಸ್ಸು ಮಾಡ್ತಿಲ್ಲ ತಂದೆ. ಅದು ಮಗನ ಹಣ ಎಂದು ಭಾವಿಸಿರುವ ತಂದೆ, ಹಣದಲ್ಲಿ ಅಲ್ಪಸ್ವಲ್ಪ ಖರ್ಚು ಮಾತ್ರ ಮಾಡ್ತಿದ್ದಾನೆ. ಅಷ್ಟಕ್ಕೂ ಆತನಿಗೆ ಹಣ ಬಂದಿದ್ದು ಹೇಗೆ, ಅದನ್ನು ಆತ ಹೇಗೆಲ್ಲ ಬಳಸಿದ್ದಾನೆ ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾನೆ. ಆತನ ವಿಡಿಯೋ ವೈರಲ್ ಆಗಿದ್ದು, ಜನರಿಂದ ಸಾಕಷ್ಟು ಪ್ರತಿಕ್ರಿಯೆ ಕೂಡ ಬಂದಿದೆ.

ಬಡವನ ಕೈಗೆ ಹಣ (Money) ಸಿಕ್ಕಿದ್ರೆ ಅಂದು ಹಬ್ಬ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಅನೇಕರಿಗೆ ತಿಳಿದಿರೋದಿಲ್ಲ. ಒಂದೇ ಬಾರಿ ಲಕ್ಷ ಲಕ್ಷ ಹಣ ಕೈಗೆ ಬಂದಾಗ ಅದನ್ನು ಬೇಡದ ವಸ್ತು ಖರೀದಿ ಮಾಡಿ ಖರ್ಚು ಮಾಡ್ತಾರೆ. ಹಣ ಇರುವಾಗ ಧಾಮ್ ಧೂಮ್ ಆಗಿ ಜೀವನ (Life) ನಡೆಸುವವರು ಕೈ ಖಾಲಿಯಾಗ್ತಿದ್ದಂತೆ ಮತ್ತದೆ ಹಳೆ ಸ್ಥಿತಿಗೆ ಮರಳುತ್ತಾರೆ. ಆದ್ರೆ ಈತ ಹಾಗೆ ಮಾಡಿಲ್ಲ.

ಇಶಾ ಅಂಬಾನಿಯ ಬಲಗೈ ಈ ದರ್ಶನ್ ಮೆಹ್ತಾ, ಇವರ ಸಂಬಳ ಎಷ್ಟು ಅಂದ್ರೆ..

ರೆಡ್ಡಿಟ್ (reddit) ನಲ್ಲಿ ತನ್ನ ಕಥೆ ಹೇಳಿದ್ದಾನೆ. ಆರು ವರ್ಷಗಳ ಹಿಂದೆ ಸಿಗರೇಟ್ ಖರೀದಿಸಲು ಗ್ಯಾಸ್ ಸ್ಟೇಷನ್ ಗೆ ಹೋಗಿದ್ದಾನೆ. ಅಲ್ಲಿ ಲಾಟರಿ ಟಿಕೆಟ್ ಖರೀದಿ ಮಾಡ್ತಿರೋದನ್ನು ನೋಡಿದ್ದಾನೆ. ಮಗ ಸ್ಯಾಮ್ ಹೆಸರಿನಲ್ಲಿ ಒಂದು ಲಾಟರಿ ಖರೀದಿ ಮಾಡಿದ್ದಾನೆ. ಇದನ್ನು ಮಗನಿಗೆ ತೋರಿಸಿದ್ದಲ್ಲದೆ ಲಾಟರಿ ಹೊಡೆದ್ರೆ ಆ ಹಣವನ್ನು ಹೇಗೆಲ್ಲ ಬಳಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನು ತಮಾಷೆಯಾಗಿ ತೆಗೆದುಕೊಂಡ ಅವರು, ಆಗಾಗ ಇದ್ರ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಒಂದು ದಿನ ಇವರ ನಿರೀಕ್ಷೆಗೆ ಮೀರಿದ ಘಟನೆ ನಡೆದಿದೆ. ಸ್ಯಾಮ್ ಹೆಸರಿಗೆ ಲಾಟರಿ ಹೊಡೆದಿದೆ. 47,000 ಪೌಂಡ್‌ಗಳ ಅಂದರೆ ಸುಮಾರು 50 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಅವರ ಜೀವನದಲ್ಲಿ ಇಷ್ಟೊಂದು ಹಣ ನೋಡಿರಲಿಲ್ಲ. ಅದನ್ನು ಹೇಗೆ ಖರ್ಚು ಮಾಡೋದು, ಸ್ಯಾಮ್ ಗೆ ಏನು ಹೇಳೋದು ಎಂಬ ಬಗ್ಗೆ ತಂದೆಗೆ ಚಿಂತೆಯಾಗಿತ್ತಂತೆ. ನಂತ್ರ ಎಲ್ಲರ ಸಭೆ ಸೇರಿ ಚರ್ಚೆ ಮಾಡಲಾಯ್ತು. ಹಣವನ್ನು ವ್ಯರ್ಥ ಮಾಡಲು ಇಷ್ಟವಿಲ್ಲ. ಇದು ಸ್ಯಾಮ್ ಕಾಲೇಜ್ ಖರ್ಚಿಗಾಗುತ್ತದೆ ಎಂಬ ನಿರ್ಧಾರಕ್ಕೆ ಎಲ್ಲರೂ ಬಂದ್ರು. ಆದ್ರೆ ಪತ್ನಿಯ ಆಸೆಯಂತೆ ಒಂದು ಟ್ರಿಪ್, ಸ್ಯಾಮ್ ಗೆ ಒಂದಿಷ್ಟು ಗೇಮಿಂಗ್ ಟೈಂ ಖರೀದಿ ಮಾಡಿದ್ದ ಈತ, ಕೆಲ ದಿನಗಳ ಹಿಂದೆ ಸ್ಯಾಮ್ ಗೆ ಕಾರು ನೀಡಿದ್ದಾನೆ. 

ಮಕ್ಕಳನ್ನು ಬೆಳೆಸೋದು ಒಂದು ಕಲೆ… ಆಟದ ಮೂಲಕ ಜಗತ್ತು ಗೆಲ್ಲುವ ಪಾಠ ನೀಡಿ

ಲಾಟರಿಗೆ ಹಣ ನಾನೇ ನೀಡಿದ್ದರೂ, ಸ್ಯಾಮ್ ಹೆಸರಿನಲ್ಲಿ ಲಾಟರಿ ಬಂದಿದೆ. ಹಾಗಾಗಿ ಅದು ಮಗನ ಹಣ. ಅದನ್ನು ಹಾಗೆಯೇ ಖರ್ಚು ಮಾಡಲು ನನಗೆ ಇಷ್ಟವಿಲ್ಲ. ನಮ್ಮ ಬಳಿ ಈಗ್ಲೂ ಸಾಕಷ್ಟು ಹಣವಿದೆ. ಅದನ್ನು ಸೇವ್ ಮಾಡಿದ್ದು, ಅಗತ್ಯಬಿದ್ದಾಗ ಬಳಸಿಕೊಳ್ತೇವೆ ಎಂದು ತಂದೆ ರೆಡ್ಡಿಟ್ ಪೋಸ್ಟ್ ನಲ್ಲಿ ಹೇಳಿದ್ದಾನೆ.