ಆಫೀಸ್ ಕೆಲ್ಸಕ್ಕೆ ಸಂಬಂಧಿಸಿದಂತೆ ನಾನಾ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗ್ತಿರುತ್ತದೆ. ಈಗ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ಇದ್ರಲ್ಲಿ ಲಂಚ್ ಟೈಮಿಂಗ್ಸ್ ಹಾಗೂ ಶಿಕ್ಷೆ ಗಮನ ಸೆಳೆದಿದೆ.

ಆಫೀಸ್ ಅಂದ್ಮೇಲೆ ಟೀ ಬ್ರೇಕ್, ಲಂಚ್ ಬ್ರೇಕ್ ನೀಡ್ಲೇಬೇಕು. ಊಟ ಮಾಡ್ದೆ ಕೆಲ್ಸ ಮಾಡಿ ಅಂತ ಉದ್ಯೋಗಿಗಳ ಮೇಲೆ ಒತ್ತಡ ಹೇರೋಕೆ ಸಾಧ್ಯವಿಲ್ಲ. ಪ್ರತಿ ಆಫೀಸ್ ನಲ್ಲೂ ಇದಕ್ಕೊಂದು ಟೈಂ ಸೆಟ್ ಆಗಿರುತ್ತೆ. ಅರ್ಧಗಂಟೆ ಲಂಚ್ ಬ್ರೇಕ್ ಅಂತ ಹೋದವರು ಮುಕ್ಕಾಲು ಗಂಟೆ, ಒಂದು ಗಂಟೆಗೆ ವಾಪಸ್ ಬರೋದಿದೆ. ಹಾಗೆ ಕೆಲ್ಸ ಮುಗಿದ್ರೂ ಒಂದು ಗಂಟೆ ಹೆಚ್ಚುವರಿ ಕೆಲ್ಸ ಮಾಡಿ ಹೋಗುವ ಉದ್ಯೋಗಿಗಳಿದ್ದಾರೆ. ಈ ಕೆಲ್ಸದ ಟೈಂಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ನಿಮಿಷ ಒಂದು ಗಂಟೆಗೆ ಸಮ

ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋದ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಲಂಚ್ ಟೈಂ ಬಗ್ಗೆ ಸೂಚನೆ ಇದೆ. ಯಾವುದೇ ಉದ್ಯೋಗಿ ಲಂಚ್ ಟೈಮ್ ಮುಗಿದು ಒಂದು ನಿಮಿಷ ತಡವಾಗಿ ಬಂದ್ರೂ ಆತ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕು. 1.30ಕ್ಕೆ ಲಂಚ್ ಟೈಂ ಮುಗಿದಿದ್ದು, 1.31ಕ್ಕೆ ಆತ ಕೆಲ್ಸಕ್ಕೆ ವಾಪಸ್ ಆದ್ರೆ ಸಂಜೆ 6 ಗಂಟೆಯಿಂದ ಏಳು ಗಂಟೆವರೆಗೆ ಹೆಚ್ಚುವರಿ ಕೆಲ್ಸ ಮಾಡ್ಬೇಕು ಅಂತ ನೊಟೀಸ್ ನಲ್ಲಿ ಹೇಳಲಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಉದ್ಯೋಗ ಅವಕಾಶ, ಪರೀಕ್ಷೆಯಿಲ್ಲದೆ

ನಿಮ್ಮ ಊಟದ ವಿರಾಮ 30 ನಿಮಿಷಗಳನ್ನು ಮೀರಿದರೆ, ಸಂಜೆ 6 ಗಂಟೆಯ ನಂತರ ನೀವು ಕಂಪನಿಗೆ 60 ನಿಮಿಷ ವೇತನವಿಲ್ಲದ ಸಮಯ ನೀಡಬೇಕು. ಉದಾಹರಣೆಗೆ, 31 ನಿಮಿಷಗಳ ಊಟ ಎಂದರೆ ನೀವು ಸಂಜೆ 7 ಗಂಟೆಗೆ ಕಚೇರಿಯಿಂದ ಹೊರಡುತ್ತೀರಿ. ವೇಗವಾಗಿ ತಿನ್ನಿರಿ ಅಂತ ನೊಟೀಸ್ ಬೋರ್ಡ್ ಹಾಕಲಾಗಿದೆ. ನೊಟೀಸ್ ಬೋರ್ಡ್ ಫೋಟೋ ಪೋಸ್ಟ್ ಮಾಡಿದ ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, ನಿಮ್ಮ ಆಡಳಿತಮಂಡಳಿ ಇಂಥ ಪೋಸ್ಟ್ ಹಾಕಿದಾಗ, ನಿಮ್ಮ ಉತ್ತಮ ಉದ್ಯೋಗಿ ಕೆಲ್ಸ ಬಿಟ್ಟರೆ ಅದಕ್ಕೆ ಅಚ್ಚರಿಪಡುವ ಅಗತ್ಯವಿಲ್ಲ ಅಂತ ಶೀರ್ಷಿಕೆ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರು ಈ ಕ್ರಮವನ್ನು ಖಂಡಿಸಿದ್ದಾರೆ. ಒಂದು ನಿಮಿಷಕ್ಕೆ ಒಂದು ಗಂಟೆ ಕೆಲ್ಸ ಮಾಡಿಸಿಕೊಳ್ಳೋದು ತಪ್ಪು ಎಂದಿದ್ದಾರೆ. ಉದ್ಯೋಗಿ ಕೆಲ್ಸ ಮುಗಿದ ನಂತ್ರ ಒಂದು ಗಂಟೆ ಕೂಡ ಕೆಲ್ಸ ಮಾಡ್ಬಾರದು. ಒಂದು ವೇಳೆ ಕೆಲ್ಸ ಮಾಡಿದ್ರೆ ಅದಕ್ಕೆ ಹಣ ಪಡೆಯಬೇಕು ಅನ್ನೋದು ಕೆಲವರ ವಾದ. ಮತ್ತೆ ಕೆಲವರು ಆಫೀಸ್ ಗೆ ಬಂದು ಕೆಲ್ಸ ಮಾಡೋದೇ ಕಷ್ಟವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

AI impact on Indian job market ಭಾರತದಲ್ಲಿ ಶೇ. 37ರಷ್ಟು ಆರಂಭಿಕ

ಕೆಲ ಬಳಕೆದಾರರಿಗೆ ಈ ಪೋಸ್ಟ್ ಮೇಲೆ ಅನುಮಾನವಿದೆ. ಈ ನೊಟೀಸ್ ನಲ್ಲಿ ಯಾವುದೇ ಕಂಪನಿ ಹೆಸರಿಲ್ಲ. ಹಾಗಾಗಿ ಈ ನೊಟೀಸ್ ಸುಳ್ಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ, ಆಫೀಸ್ ಇಂಥ ರೂಲ್ಸ್ ತಂದ್ರೆ ಯಾರು ಸಹಿಸ್ತಾರೆ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ.