MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮತ್ತೊಮ್ಮೆ 'ಫ್ಲರ್ಟ್' ಮಾಡಲು ಪ್ಲಾನ್ ಮಾಡಿರೋ ಹ್ಯಾಂಡ್‌ಸಮ್ ಹುಡುಗ ಚಂದನ್ ಕುಮಾರ್!

ಮತ್ತೊಮ್ಮೆ 'ಫ್ಲರ್ಟ್' ಮಾಡಲು ಪ್ಲಾನ್ ಮಾಡಿರೋ ಹ್ಯಾಂಡ್‌ಸಮ್ ಹುಡುಗ ಚಂದನ್ ಕುಮಾರ್!

'ಸ್ಪುರದ್ರೂಪಿ' ನಟ ಚಂದನ್ ಕುಮಾರ್ ನಟನಾಗಿ ಮಾತ್ರವಲ್ಲದೆ ಒಬ್ಬ ಸಮರ್ಥ ನಿರ್ದೇಶಕನಾಗಿಯೂ ಅಬ್ಬರಿಸಲು ಸಜ್ಜಾಗಿದ್ದಾರೆ. ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದ ಚಿತ್ರ ‘ಫ್ಲರ್ಟ್’ (Flirt) ಚಿತ್ರ ಪ್ರೇಕ್ಷಕರು , ವಿಮರ್ಶಕರಿಂದ ಉತ್ತಮ ಮೆಚ್ಚುಗೆ  ಪಡೆದಿತ್ತು. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ!

2 Min read
Author : Shriram Bhat
Published : Jun 23 2026, 12:28 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಸ್ಯಾಂಡಲ್‌ವುಡ್ ಚಾಕೊಲೇಟ್ ಹೀರೊ ಚಂದನ್ ಕುಮಾರ್ ಅವರ 'ಫ್ಲರ್ಟ್' ಚಿತ್ರದ ಸೆಕೆಂಡ್ ಇನ್ನಿಂಗ್ಸ್ ಶುರು!

ಸ್ಯಾಂಡಲ್‌ವುಡ್‌ನ ಅಂಗಳದಲ್ಲಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಸಾವಿರಾರು ಅಭಿಮಾನಿಗಳ ಹೃದಯ ಗೆದ್ದಿರುವ 'ಸ್ಪುರದ್ರೂಪಿ' ನಟ ಚಂದನ್ ಕುಮಾರ್ (Chandan Kumar), ಈಗ ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ಸಮರ್ಥ ನಿರ್ದೇಶಕನಾಗಿಯೂ ಅಬ್ಬರಿಸಲು ಸಜ್ಜಾಗಿದ್ದಾರೆ. ಅವರು ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದ ಚಿತ್ರ ‘ಫ್ಲರ್ಟ್’ (Flirt). ಇತ್ತೀಚೆಗಷ್ಟೇ ತೆರೆಕಂಡಿದ್ದ ಈ ಚಿತ್ರ ಪ್ರೇಕ್ಷಕರಿಂದ ಸಖತ್ ಮೆಚ್ಚುಗೆ ಹಾಗೂ ವಿಮರ್ಶಕರಿಂದ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಸಾಲು ಸಾಲು ಚಿತ್ರಗಳು ಸಾಲಾಗಿ ನಿಂತಿದ್ದವು. ತಮ್ಮ ಶ್ರಮದ ಫಲವಾದ ಈ 'ಫ್ಲರ್ಟ್' ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಲುಪಬೇಕು, ಇದು ಕೇವಲ ಒಂದು ಚಿತ್ರಮಂದಿರಕ್ಕೆ ಸೀಮಿತವಾಗಬಾರದು ಎಂಬ ದೊಡ್ಡ ಉದ್ದೇಶದಿಂದ ಚಂದನ್ ಒಂದು ಸಾಹಸಮಯ ನಿರ್ಧಾರ ಕೈಗೊಂಡರು. ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಓಡುತ್ತಿದ್ದರೂ, ಅದನ್ನು ಹಿಂಪಡೆದರು! ಯಾಕೆ ಗೊತ್ತಾ? ಪ್ರೇಕ್ಷಕರಿಗೆ ಮತ್ತಷ್ಟು 'ಶಾರ್ಪ್' ಮತ್ತು 'ಎಂಟರ್ಟೈನಿಂಗ್' ಅನುಭವ ನೀಡಲು ಚಿತ್ರವನ್ನು ಟ್ರಿಮ್ ಮಾಡಿ, ಹೊಸ ಕಳೆ ನೀಡಿ ಈಗ ರೀ-ರಿಲೀಸ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Related Articles

Related image1
Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?
Related image2
CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!
37
Image Credit : Instagram

ಕಿಚ್ಚನ ಸಪೋರ್ಟ್, ಚಂದನ್ ಎಫರ್ಟ್!

ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ಬಾದ್‌ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬೆಂಬಲ ದೊಡ್ಡ ಆನೆಯ ಬಲದಂತಿದೆ. ಚಂದನ್ ಅವರನ್ನು 'ನಮ್ಮನೆ ಹುಡುಗ' ಎಂದೇ ಪ್ರೀತಿಸುವ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಲ್ಲದೆ, ಫ್ರೆಂಡ್‌ಶಿಪ್ ಕುರಿತಾದ ‘ನೀ ನನ್ನ ಜೀವ...’ ಎಂಬ ಅದ್ಭುತ ಹಾಡನ್ನು ಹಾಡಿದ್ದಾರೆ. ಈ ಹಾಡು ಈಗಾಗಲೆ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಕಿಚ್ಚನ ಕಂಠಸಿರಿ ಮತ್ತು ಚಂದನ್ ಅವರ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜೊತೆಗೆ, ಈ ಚಿತ್ರದ ಹಾಡುಗಳನ್ನು ಕೇಳಿದ ಲಹರಿ ವೇಲು ಅವರು ತುಂಬಾ ಇಷ್ಟಪಟ್ಟು ಆಡಿಯೋ‌ ರೈಟ್ಸ್ ಪಡೆದುಕೊಂಡಿದ್ದಾರೆ.

47
Image Credit : Instagram

ಫ್ಲರ್ಟ್ ಅಂದ್ರೆ ಬರೀ ಚುಡಾಯಿಸೋದಲ್ಲ!

ಚಿತ್ರದ ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ತರ್ಲೆ-ತಮಾಷೆಯ ಸಿನಿಮಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಚಂದನ್ ಕುಮಾರ್ ಅವರ ಪ್ರಕಾರ, "ಫ್ಲರ್ಟ್ ಎಂದರೆ ಕೇವಲ ಹುಡುಗಿಯರನ್ನು ಚುಡಾಯಿಸುವುದಲ್ಲ, ಅದರ ಹಿಂದೆ ಗಾಢವಾದ ಪ್ರೀತಿಯೂ ಅಡಗಿರುತ್ತದೆ. ಪ್ರತಿ 'ಡವ್' (Dove) ಹಿಂದೆ ಒಂದು ಸತ್ಯವಾದ ಲವ್ ಇರುತ್ತದೆ." ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ (Rom-Com) ಸಿನಿಮಾ ಆದರೂ, ಇದರಲ್ಲಿ ಸೈಕೋ ಕ್ಯಾರೆಕ್ಟರ್‌ಗಳ ಟ್ವಿಸ್ಟ್ ಹಾಗೂ ಎಮೋಷನಲ್ ಜರ್ನಿ ಕೂಡ ಇದೆ.

57
Image Credit : Instagram

ಬಲಿಷ್ಠ ತಾರಾಗಣ ಮತ್ತು ತಾಂತ್ರಿಕ ತಂಡ:

ಚಿತ್ರದಲ್ಲಿ ಚಂದನ್ ಅವರಿಗೆ ಜೋಡಿಯಾಗಿ ನಿಮಿಕಾ ರತ್ನಾಕರ್ ಮತ್ತು ಅಕ್ಷತಾ ಬೋಪಣ್ಣ ಮಿಂಚಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ಚಿತ್ರರಂಗದ ದಿಗ್ಗಜರ ದಂಡೇ ಇದೆ. ಹಿರಿಯ ನಟ ಅವಿನಾಶ್ ಜಡ್ಜ್ ಪಾತ್ರದಲ್ಲಿ ಗತ್ತು ತೋರಿಸಿದರೆ, ಶೃತಿ ಮತ್ತು ಸಾಧು ಕೋಕಿಲ ಅವರು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ಗಿರೀಶ್ ಶಿವಣ್ಣ ಅವರ ಕಾಮಿಡಿ ಟೈಮಿಂಗ್ ಮತ್ತು ವಿನಯ್ ಗೌಡ ಅವರ ನಟನೆ ಚಿತ್ರದ ಪ್ಲಸ್ ಪಾಯಿಂಟ್.

67
Image Credit : Instagram

ಸಂಗೀತದ ವಿಷಯಕ್ಕೆ ಬಂದರೆ, ಜಸ್ಸಿ ಗಿಫ್ಟ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಿವಿಗೆ ಇಂಪಾಗಿದ್ದರೆ, ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸುದೀಪ್ ಅವರ ಹಾಡು ಹೈಲೈಟ್ ಆಗಿದೆ. ಹೆಚ್.ಸಿ. ವೇಣು ಅವರ ಅದ್ಭುತ ಛಾಯಾಗ್ರಹಣ ಚಿತ್ರವನ್ನು ಕಲರ್‌ಫುಲ್ ಆಗಿ ಕಾಣುವಂತೆ ಮಾಡಿದೆ.

77
Image Credit : Instagram

ಒಟ್ಟಾರೆಯಾಗಿ, ಚಂದನ್ ಕುಮಾರ್ ಅವರ ಈ 'ಎವರೆಸ್ಟ್ ಪಿಕ್ಚರ್ಸ್' ನಿರ್ಮಾಣದ ಸಿನಿಮಾ ಒಂದು ಕಂಪ್ಲೀಟ್ ಪ್ಯಾಕೇಜ್. ಹೊಸ ರೂಪದಲ್ಲಿ, ಹೊಸ ಹುರುಪಿನಲ್ಲಿ ರೀ-ರಿಲೀಸ್ ಆಗುತ್ತಿರುವ 'ಫ್ಲರ್ಟ್' ಚಿತ್ರವನ್ನು ಕನ್ನಡಿಗರು ಹೇಗೆ ಬರಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಪ್ರೀತಿಯ ಸೆಲೆ ಹರಿಯಲು ಸಿದ್ಧವಾಗಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಒಂಟಿಯಾಗಿ ಇರ್ಬೇಡ, ಮತ್ತೊಂದ್‌ ಮದುವೆಯಾಗು.. ಅಮ್ಮನ ಆಸೆಯಂತೆ 'ಕಾನ್ಸ್‌ಟೇಬಲ್‌ ಸರೋಜ' ಮದುವೆಯಾದ ತ್ರಿಪುರ ಮಾಜಿ ಸಿಎಂ
Recommended image2
ನಿರ್ಮಾಪಕರಿಗೆ ಶಿಕ್ಷಣ ಅಗತ್ಯ: Actor Sathish Ninasam ಮಾತಿಗೆ ಕೆನಲಿ ಕೆಂಡವಾದ ನಿರ್ಮಾಪಕರು!
Recommended image3
Muhurta: ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡ್ತಾರೆ... ಕೆಎ-18ನಲ್ಲಿ ಆ ರಹಸ್ಯ ಬಿಚ್ಚಿಟ್ಟ ತನಿಷಾ ಕುಪ್ಪಂಡ!
Related Stories
Recommended image1
Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?
Recommended image2
CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved